TOP STORIES:

FOLLOW US

ವಿಶ್ವ ಮಾನ್ಯ” ಪ್ರಶಸ್ತಿ 2024 ಭಾಜನರಾದ ಉದ್ಯಮಿ ಹಾಗು ಸಮಾಜ ಸೇವಕ ಸತೀಶ್ ಕುಮಾರ್ ಅಂಚನ್ ಬಜಾಲ್

ಸೌದಿ ಅರಬಿಯಾ: ಉದ್ಯಮಿ ಹಾಗು ಸಮಾಜ ಸೇವಕ ಸತೀಶ್ ಕುಮಾರ್ ಅಂಚನ್ ಬಜಾಲ್ ವಿಶ್ವ ಮಾನ್ಯ” ಪ್ರಶಸ್ತಿ 2024 ನೀಡಿ  ಗೌರವಿಸಲಾಯಿತು. 17 ನೇ ವಿಶ್ವ ಕನ್ನಡ ಸಮ್ಮೇಳನವು ಫೆಬ್ರವರಿ 8 ರಂದು ಸೌದಿ ಅರೇಬಿಯಾದಲ್ಲಿ  ಸತೀಶ್ ಕುಮಾರ್ ಅಂಚನ್ ಬಜಾಲ್ ನೇತೃತ್ವದಲ್ಲಿ , ಈ ಕಾರ್ಯಕ್ರಮಕ್ಕೆ   ಬೆನ್ನೆಲುಬಾಗಿ ನಿಂತ ಜನಾಬ್ ಝಕರಿಯಾ ಮತ್ತು ಜನಾಬ್ ಶೇಖ್ ಕರ್ನಿರೆ,ರಫೀಕ್ ಸೂರಿಂಜೆ ಮತ್ತು ಅದೆಷ್ಟೋ ಕಾರ್ಯಕರ್ತರು  ಬಹಳ ವಿಜಂಭಣೆಯಿಂದ ನೆರವೇರಿತು. ಅಸಮಾನ್ಯರಾಗಿ ಬೆಳೆದು ನಿಂತ ಮೇರು ವ್ಯಕ್ತಿಯ […]

ಪ್ರೀತಿಯಿಂದ ಕುಡ್ಲದ ಜನತೆ ಮನಗೆದ್ದೆ ಭಾವುಕರಾಗಿ ನುಡಿದ ಎಸಿಪಿ ಮಹೇಶ್‌ಕುಮಾರ್ ಮಂಗಳೂರು ನಾಗರಿಕ ಸಮಿತಿಯಿಂದ ಬೀಳ್ಕೊಡುಗೆ

ಮಂಗಳೂರು: ಮಂಗಳೂರು ಜನರನ್ನು ಕಾನೂನು ಮತ್ತು ಪ್ರೀತಿಯಿಂದ ಮಾತ್ರ ಗೆಲ್ಲಲು ಸಾಧ್ಯ. ಕರಾವಳಿ ಜನತೆಗೆ ಪ್ರೀತಿ ಕೊಟ್ಟರೆ ಅವರು ನೂರುಪಟ್ಟು ಪ್ರೀತಿ ತೋರಿಸುತ್ತಾರೆ. ಭಾವುಕರಾಗಿ ನುಡಿದವರು ಮಂಗಳೂರು ಸೆಂಟ್ರಲ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮಹೇಶ್‌ಕುಮಾರ್. ಕೊಡಗಿಗೆ ವರ್ಗಾವಣೆಗೊಂಡ ಅವರನ್ನು ಮಂಗಳೂರು ನಾಗರಿಕ ಸಮಿತಿ ವತಿಯಿಂದ ಭಾನುವಾರ ಆಯೋಜಿಸಲಾದ ಅದ್ದೂರಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಪೊಲೀಸ್ ಕೆಲಸದ ಜತೆಗೆ ಸಾಮಾಜಿಕ ಚಟುವಟಿಕೆಯಿಂದ ನಾನು ಜೀವನದಲ್ಲಿ ಖುಷಿ ಕಂಡಿದ್ದೇನೆ. ಮಂಗಳೂರು ಸರ್ವಧರ್ಮಗಳ ನೆಲೆಬೀಡು ಆಗಬೇಕು ಎನ್ನುವುದು ನಮ್ಮೆಲ್ಲರ ಕನಸು. […]

ಪ್ರೀತಿಯಿಂದ ಕುಡ್ಲದ ಜನತೆ ಮನಗೆದ್ದೆ ಎಸಿಪಿ ಮಹೇಶ್‌ಕುಮಾರ್ ಇವರಿಗೆ ಮಂಗಳೂರು ನಾಗರಿಕ ಸಮಿತಿಯಿಂದ ಬೀಳ್ಕೊಡುಗೆ

ಪ್ರೀತಿಯಿಂದ ಕುಡ್ಲದ ಜನತೆ ಮನಗೆದ್ದೆ ಭಾವುಕರಾಗಿ ನುಡಿದ ಎಸಿಪಿ ಮಹೇಶ್‌ಕುಮಾರ್  ಮಂಗಳೂರು ನಾಗರಿಕ ಸಮಿತಿಯಿಂದ ಬೀಳ್ಕೊಡುಗೆ ಮಂಗಳೂರು: ಮಂಗಳೂರು ಜನರನ್ನು ಕಾನೂನು ಮತ್ತು ಪ್ರೀತಿಯಿಂದ ಮಾತ್ರ ಗೆಲ್ಲಲು ಸಾಧ್ಯ. ಕರಾವಳಿ ಜನತೆಗೆ ಪ್ರೀತಿ ಕೊಟ್ಟರೆ ಅವರು ನೂರುಪಟ್ಟು ಪ್ರೀತಿ ತೋರಿಸುತ್ತಾರೆ… ಹೀಗೆ ಭಾವುಕರಾಗಿ ನುಡಿದವರು ಮಂಗಳೂರು ಸೆಂಟ್ರಲ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮಹೇಶ್‌ಕುಮಾರ್. ಕೊಡಗಿಗೆ ವರ್ಗಾವಣೆಗೊಂಡ ಅವರನ್ನು ಮಂಗಳೂರು ನಾಗರಿಕ ಸಮಿತಿ ವತಿಯಿಂದ ಭಾನುವಾರ ಆಯೋಜಿಸಲಾದ ಅದ್ದೂರಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಪೊಲೀಸ್ ಕೆಲಸದ ಜತೆಗೆ […]

ಬಿರುವೆರ್ ಕುಡ್ಲದ ಫುಡ್‍ಫೆಸ್ಟ್ ಲಾಭಾಂಶದ 2.50ಲ.ರೂ ಚಿಕಿತ್ಸೆಗೆ ಹಸ್ತಾಂತರ

ಬಿರುವೆರ್ ಕುಡ್ಲದ ಫುಡ್‍ಫೆಸ್ಟ್ ಲಾಭಾಂಶದ 2.50ಲ.ರೂ ಚಿಕಿತ್ಸೆಗೆ ಹಸ್ತಾಂತರ ಸಂಸದ ನಳಿನ್ ಕುಮಾರ್ ಕಟೀಲ್ ಶ್ಲಾಘನೆ ಕುದ್ರೋಳಿ,ಜ.31: ಉದಯ ಪೂಜಾರಿ ಬಳ್ಳಾಲ್ ಬಾಗ್ ನೇತೃತ್ವದಲ್ಲಿ ಫ್ರೆಂಡ್ಸ್ ಬಳ್ಳಾಲ್‍ಬಾಗ್ ,ಬಿರುವೆರ್ ಕುಡ್ಲದ ಯುವಕರ ಸಮೂಹ ಮಾಡುತ್ತಿರುವ ಸಮಾಜಮುಖೀ ಕೆಲಸವು ಮನಸ್ಸಿದ್ದರೆ ಮಾರ್ಗ ಎಂಬುದಕ್ಕೆ ಉತ್ತಮ ನಿದರ್ಶನ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಮೆಚ್ಚುಗೆ ವ್ಯಕ್ತಪಡಿಸಿದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬುಧವಾರ  ಫ್ರೆಂಡ್ಸ್ ಬಳ್ಳಾಳ್ ಭಾಗ್ ಬಿರುವೆರ್ ಕುಡ್ಲ ಸಂಸ್ಥೆಯು ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿರುವ ಸ್ಟ್ರೀಟ್ […]

ದೈವಾರಾಧನೆ, ಬೈದ್ಯಾರಾಧನೆಯ ಬಗೆಗಿನ ಜ್ಞಾನದ ಆಗರ – ನಮ್ಮ ವೆಂಕಣ್ಣ

ಉತ್ತರಂ ಯತ್ ಸಮುದ್ರಸ್ಯ ಹಿಮಾದ್ರೇಶ್ಚೈ ದಕ್ಷಿಣಮ್ | ಎಂಬಂತೆ ದಕ್ಷಿಣ ಸಮುದ್ರದ ಉತ್ತರಕ್ಕೆ ಹಾಗೂ ಹಿಮವತ್ ಪರ್ವತದ ದಕ್ಷಿಣಕ್ಕೆ ಇರುವ ಈ ಸನಾತನ ಭರತದೇಶದ ಬೇರೆಲ್ಲ ಪ್ರಾಂತ್ಯಗಳಿಗಿಂತ ನಮ್ಮ ತುಳುನಾಡು ಸರ್ವ ರೀತಿಯಲ್ಲೂ  ವಿಭಿನ್ನ. ಧಾರ್ಮಿಕ, ಶೈಕ್ಷಣಿಕ, ವಿಜ್ಞಾನ, ವೈದ್ಯಕೀಯ,ಬ್ಯಾಂಕಿಂಗ್, ಉದ್ಯಮ, ಕಲೆ, ಸಾಹಿತ್ಯ, ಸಂಗೀತ,ಸಿನೆಮಾ, ಪ್ರವಾಸೋದ್ಯಮ,  ಹೀಗೆ ಯಾವುದೇ ರಂಗ ನೋಡಿದರೂ ಅಲ್ಲಿ ಈ ಪ್ರಾಂತ್ಯದ ಜನರ ಸಾಧನೆ ವಿಶಿಷ್ಟವಾಗಿ ಕಾಣಿಸುತ್ತದೆ. ಹೀಗೆ ಯಾವುದೇ ಕ್ಷೇತ್ರ ಆಯ್ದುಕೊಂಡರೂ ಎಲ್ಲರಿಗಿಂತ ಭಿನ್ನವಾಗಿ ಎದ್ದು ಕಾಣುವಂತೆ ಈ ನಾಡನ್ನು […]

ಶಾರದಾ ಎ.ಅಂಚನ್ ಇವರ ವೈದ್ಯಕೀಯ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ

ಶಾರದಾ ಎ.ಅಂಚನ್ ಇವರ  ವೈದ್ಯಕೀಯ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇವರು ಕೊಡಮಾಡುವ 2022 ನೇ  ಸಾಲಿನ ದತ್ತಿ ಪ್ರಶಸ್ತಿಗಳ ಪಟ್ಟಿ ಪ್ರಕಟವಾಗಿದ್ದು ಮುಂಬಯಿ ಲೇಖಕಿ,ಸಾಹಿತಿ ಶ್ರೀಮತಿ ಶಾರದಾ ಎ.ಅಂಚನ್ ಕೊಡವೂರು ಇವರ ವೈದ್ಯಕೀಯ ಕೃತಿ “ರಕ್ತಶುದ್ಧಿ- ಆರೋಗ್ಯವೃದ್ಧಿ” ಕೃತಿಗೆ “ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿ ಪ್ರಶಸ್ತಿ “ಲಭ್ಯವಾಗಿದೆ. ಈಗಾಗಲೇ ತನ್ನ”ರಕ್ತವೇ ಜೀವನದಿ”ಕೃತಿ ಗೆ ಕನ್ನಡ ಸಾಹಿತ್ಯ ಪರಿಷತ್ತಿನ  ದಿ//ಡಾ.ಎಚ್.ನರಸಿಂಹಯ್ಯ ದತ್ತಿ ಪ್ರಶಸ್ತಿಯನ್ನು ಪಡೆದಿರುವ ಶಾರದಾ […]

ರಾಮಮಂದಿರದ ಮಂತ್ರಾಕ್ಷತೆ ಸಿಕ್ಕಿದ ಬಳಿಕ ಅದನ್ನು ಏನು ಮಾಡಬೇಕು?

ಮಂತ್ರಾಕ್ಷತೆ ಸಿಕ್ಕಿದ ಬಳಿಕ ಅದನ್ನು ಏನು ಮಾಡಬೇಕು? ನಮಗೆಲ್ಲಾ ತಿಳಿದಿರುವ ಹಾಗೆ ಅಯೋಧ್ಯೆಯ ರಾಮಮಂದಿರದ ಮಂತ್ರಾಕ್ಷತೆ ದೇಶದ ಪ್ರತಿಯೊಂದು ಹಿಂದೂವಿನ ಮನೆ ತಲುಪಿದೆ ಇನ್ನು ಕೆಲವು ಮನೆಗೆ ತಲುಪಬೇಕಿದೆ. ಮಂತ್ರಾಕ್ಷತೆ ಸಿಕ್ಕಿದ ಬಳಿಕ ಅದನ್ನು ನಾವು ಈಗಲೇ ಉಪಯೋಗ ಮಾಡುವಂತಿಲ್ಲ. ಜನವರಿ 22ನೇ ತಾರಿಕಿನ ವರೆಗೆ ತಮ್ಮತಮ್ಮ ದೇವರ ಸ್ಟಾಂಡ್ ಲ್ಲಿ ಅಥವಾ ದೇವರಕೋಣೆಯಲ್ಲಿ ಇಡಬೇಕು. ದಿನನಿತ್ಯ ದೇವರಿಗೆ ಪೂಜೆ ಮಾಡುವಾಗ ಆ ಮಂತ್ರಾಕ್ಷತೆಗೂ ಪೂಜೆ ಸಲ್ಲಿಸಬೇಕು. ಇದೇ ಜನವರಿ 22 ಸೋಮವಾರ ಮಧ್ಯಾಹ್ನ 12 ಘಂಟೆ […]

ಮಂಗಳೂರು ಬಜ್ಪೆ ಊರಿನಲ್ಲೊಬ್ಬ ಆಪತ್ಬಾಂಧವ… ದಿನೇಶಣ್ಣ ಬಜಪೆ.

#ಬಜ್ಪೆ_ರಿಕ್ಷ_ದಿನೇಶಣ್ಣೆ…. 😍 ಮಂಗಳೂರು ಬಜ್ಪೆ  ಊರಿನಲ್ಲೊಬ್ಬ ಆಪತ್ಬಾಂಧವ…. ನಮ್ಮ ಆಟೋ ದಿನೇಶಣ್ಣ ಬಜಪೆ. ಎಲ್ಲೋ ಒಬ್ಬ ಆಟೋ ಚಾಲಕ ಮೀಟರ್  ಡಬಲ್ ಕೇಳಿದರೆ ನಾವು ಅವನಿಗೆ ಬಾಯಿ ತುಂಬಾ ಬೈದು ಮತ್ತೆ ಎಲ್ಲಾ ಆಟೋ ಚಾಲಕರ ಮೇಲೆ ಮುನಿಸಿಕೊಳ್ಳುತ್ತೇವೆ. ಆದರೆ ಅದೆಷ್ಟೋ ಆಟೋ ಚಾಲಕರು ತಮ್ಮ ದುಡಿಮೆಯ ಜೊತೆಗೆ ಸಮಾಜದ ಪ್ರತಿ ಒಂದು ವರ್ಗದ ಜಾತಿ ಧರ್ಮ ಭೇದ ಮರೆತು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತನ್ನ ಸೇವೆಯನ್ನು ನೀಡಿ ತನ್ನ ಜೀವನವನ್ನು ಸಮಾಜಕ್ಕೆ ಮುಡಿಪಾಗಿಟ್ಟ ಎಷ್ಟು […]

ರಶ್ಮಿ ಸನಿಲ್ ನಿರ್ಮಾಣದ ಕೊರಗಜ್ಜನ ಭಕ್ತಿ ಗೀತೆ ಬಿಡುಗಡೆ 

ಮಂಗಳೂರು :  ಜನವರಿ ೧ ರಂದು ನಂತೂರಿನ ಶ್ರೀ ಕೊರಗ ತನಿಯ ದೈವ ಸಾನಿಧ್ಯದಲ್ಲಿ ಬಿಡುಗಡೆಯಾಯಿತು.  ರಶ್ಮಿ ಸನಿಲ್ ನಿರ್ಮಾಣ, ಸಾಹಿತ್ಯ ಹಾಗೂ ಹಿನ್ನೆಲೆ ಧ್ವನಿಯಾಗಿರುವ ವರ್ಷಾ ಶೆಟ್ಟಿ ಹಾಡಿರುವ. ಕಿರಣ್ ಕೊಯಿಲ ಅವರ ಸಂಕಲನದಲ್ಲಿ ಮೂಡಿ ಬಂದಿರುವ ಕೊರಗಜ್ಜನ ಭಕ್ತಿ ಗೀತೆ ಕಾಪುಲೆ ಕೊರಗಜ್ಜ ರಾಜ್ ಕ್ರಿಯೇಷನ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.    

ಜಯವುಲ್ಲ ಬೆಮ್ಮೆರ್

Author Venkatesh Karkera ಬೈದರ್ಕಳ ಪಾಡ್ದನವನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಬುದ್ಯಂತನನ್ನು ಕೊಲ್ಲುವ ಪ್ರಕರಣದಲ್ಲಿ “ಬುದ್ಯಂತನ್ ಜಯಿಪುನು” (ಬುದ್ಯಂತನನ್ನು ಜಯಿಸುವುದು) ಎಂಬ ಪದಪ್ರಯೋಗ ಕಂಡುಬರುತ್ತದೆ. ಆದರೆ ಮುಂದಕ್ಕೆ ಅದೇ ಬೈದರ್ಕಳು ಚಂದುಗಿಡಿಯನ್ನು ಕೊಲ್ಲುವಾಗ ಚಂದುಗಿಡಿಯನ್ನು ಕೊಂದಿದ್ದು ಎನ್ನಲಾಗುತ್ತದೆಯೇ ಹೊರತು ಜಯಿಸಿದ್ದು ಎನ್ನಲಾಗುವುದಿಲ್ಲ. ಬುದ್ಯಂತ ಪಡುಮಲೆಯ ಮಹಾಮಂತ್ರಿಯಾದರೆ ಚಂದುಗಿಡಿ ಪಂಜದ ಮಹಾಮಂತ್ರಿಯಾಗಿದ್ದ. ಇಬ್ಬರೂ ಸಮಾನ ಸ್ಥಾನಮಾನ ಹೊಂದಿದ್ದರೂ ಇಬ್ಬರ ವಧೆಯನ್ನು ಬೇರೆಬೇರೆ ಹೆಸರಿಂದ ಕರೆಯಲಾಗಿದೆ. ಅದರಲ್ಲೂ ವಿಶೇಷವೆಂದರೆ ಚಂದುಗಿಡಿಯನ್ನು ಕೊಂದಿದ್ದು ಯುದ್ದರಂಗದಲ್ಲಿ, ಅಲ್ಲಾದರೆ ಸಾಮಾನ್ಯ ಭಾಷಾ ಬಳಕೆಯಂತೆ ಕೊಲ್ಲುವುದು ಎನ್ನುವ […]