TOP STORIES:

ಬಿಕ್ಕಳಿಕೆ ಬಂದಾಗ ಈ ಸರಳ ಟೆಕ್ನಿಕ್ ಟ್ರೈ ಮಾಡಿ ನೋಡಿ, ತಕ್ಷಣ ಕಡಿಮೆಯಾಗುತ್ತೆ


ಬಿಕ್ಕಳಿಕೆ ಯಾರಿಗೆ ಬರಲ್ಲ ಹೇಳಿ? ಅದರಲ್ಲಿಯೂ ಈ ಬಿಕ್ಕಳಿಕೆ ಯಾರನ್ನೂ ಹೇಳಿ, ಕೇಳಿ ಬರುವಂತದ್ದಲ್ಲ. ಆದರೆ ಅವು ಬಂದಾಗ ಎಲ್ಲರ ಮುಂದೆ ಮುಜುಗರ ಆಗುವುದು ಮಾತ್ರ ತಪ್ಪುವುದಿಲ್ಲ. ಏಕೆಂದರೆ ಇದು ಯಾವಾಗ ಬೇಕಾದರೂ ಬರಬಹುದು, ಜೊತೆಗೆ ಇದು ಬಂದಾಗ ಸುತ್ತಮುತ್ತಲಿರುವವರು ನಮ್ಮನ್ನು ನೋಡುವುದರಿಂದ ಸಹಜವಾಗಿ ಏನು ಮಾಡಬೇಕು ಎಂಬುದೇ ತಿಳಿಯುವುದಿಲ್ಲ. ಕೆಲವರು ಬಿಕ್ಕಳಿಕೆ ಬಂದಾಗ ತಕ್ಷಣ ನೀರು ಕುಡಿಯುತ್ತಾರೆ, ಇನ್ನು ಕೆಲವರು ಸಕ್ಕರೆಯನ್ನು ಬಾಯಿಗೆ ಹಾಕಿಕೊಳ್ಳುತ್ತಾರೆ. ಹಗಲಿನಲ್ಲಿ ಈ ರೀತಿ ಬಿಕ್ಕಳಿಕೆ ಬಂದರೆ ಪರವಾಗಿಲ್ಲ. ಆದರೆ ರಾತ್ರಿ ಸಮಯದಲ್ಲಿ ಈ ರೀತಿಯಾದಾಗ ಏನು ಮಾಡಬೇಕು? ಅದಕ್ಕೂ ಮೊದಲು ಈ ರೀತಿ ಬಿಕ್ಕಳಿಕೆ ಏಕೆ ಬರುತ್ತದೆ (Hiccups Causes)? ಅದಕ್ಕೆ ಕಾರಣವೇನು? ಇದನ್ನು ಕಡಿಮೆ ಮಾಡಲು ಯಾವ ರೀತಿ ಸಲಹೆಗಳನ್ನು ಪಾಲಿಸಬೇಕು ಎಂಬುದನ್ನು ತಿಳಿದುಕೊಳ್ಳಿ. ಬಿಕ್ಕಳಿಕೆ ತುಂಬಾ ಸಾಮಾನ್ಯ. ದೇಹದಲ್ಲಿನ ಡಯಾಫ್ರಾಮ್ ಸ್ನಾಯುವಿನ ಸಮಸ್ಯೆಗಳಿಂದ ಅವು ಸಂಭವಿಸುತ್ತವೆ. ಇದು ನಮ್ಮ ಉಸಿರಾಟಕ್ಕೆ ಸಂಬಂಧಿಸಿದ್ದು. ಈ ಸ್ನಾಯು ಇದ್ದಕ್ಕಿದ್ದಂತೆ ಸಂಕುಚಿತಗೊಂಡಾಗ ಬಿಕ್ಕಳಿಕೆ ಉಂಟಾಗುತ್ತದೆ. ಆದರೆ ಬಿಕ್ಕಳಿಕೆ ಬರುವುದಕ್ಕೆ ಇದೊಂದೇ ಕಾರಣವಲ್ಲ. ಬಿಕ್ಕಳಿಕೆಗೆ ಕಂಡುಬರುವುದಕ್ಕೆ ಹಲವು ಕಾರಣಗಳಿವೆ. ಆಹಾರವನ್ನು ಬೇಗನೆ ತಿನ್ನುವುದು ಅಥವಾ ವೇಗವಾಗಿ ನೀರನ್ನು ಕುಡಿಯುವುದರಿಂದ ಹೊಟ್ಟೆಗೆ ಸಾಕಷ್ಟು ಗಾಳಿ ಪ್ರವೇಶಿಸಬಹುದು. ಸೋಡಾ ಮತ್ತು ಬಿಯರ್‌ನಂತಹ ಹೆಚ್ಚು ಕಾರ್ಬೊನೇಟೆಡ್ ಪಾನೀಯಗಳನ್ನು ಕುಡಿಯುವುದರಿಂದಲೂ ಬಿಕ್ಕಳಿಕೆ ಬರಬಹುದು. ಜೊತೆಗೆ ಹೆಚ್ಚು ಹಸಿವಾಗಿದ್ದಾಗ ಒಮ್ಮೆಲೇ ತಿನ್ನುವುದರಿಂದಲೂ ಬಿಕ್ಕಳಿಕೆ ಬರಬಹುದು. ಹೆಚ್ಚುವರಿಯಾಗಿ, ಮಸಾಲೆಯುಕ್ತ ಆಹಾರವನ್ನು ಸೇವಿಸುವುದು, ಧೂಮಪಾನ ಮಾಡುವುದು ಮತ್ತು ಒತ್ತಡ ಅಥವಾ ಆತಂಕದಿಂದ ಬಳಲುವುದು ಸಹ ಬಿಕ್ಕಳಿಗೆ ಕಾರಣವಾಗಬಹುದು.ಬಿಕ್ಕಳಿಕೆ ಕಡಿಮೆ ಮಾಡಲು ಗಂಟಲಿನಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳಿ. ಈ ರೀತಿ ಮಾಡುವುದರಿಂದ ಬಿಕ್ಕಳಿಕೆ ಕಡಿಮೆಯಾಗುತ್ತದೆ.

ತಣ್ಣೀರು ಕುಡಿಯುವುದರಿಂದ ಬಿಕ್ಕಳಿಕೆ ಕಡಿಮೆಯಾಗುತ್ತದೆ.

ಬಿಕ್ಕಳಿಕೆಯನ್ನು ತ್ವರಿತವಾಗಿ ನಿವಾರಿಸಲು, ಬಾಯಿಗೆ ಸ್ವಲ್ಪ ಸಕ್ಕರೆ ಹಾಕಿ ಅದನ್ನು ನಿಧಾನವಾಗಿ ಅಗಿಯಿರಿ.

ಅನ್ನ ತಿನ್ನುವುದರಿಂದ ಬಿಕ್ಕಳಿಕೆ ಕಡಿಮೆಯಾಗುತ್ತದೆ.

ಮುಖವನ್ನು ತಣ್ಣೀರಿನಿಂದ ತೊಳೆಯುವುದು, ಹಾಗೆಯೇ ಕೆಲವು ಸೆಕೆಂಡುಗಳ ಕಾಲ ನಿಮ್ಮ ಉಸಿರನ್ನು ಹಿಡಿದಿಟ್ಟುಕೊಳ್ಳುವುದು ಸಹ ಬಿಕ್ಕಳಿಕೆಯನ್ನು ನಿಯಂತ್ರಿಸಬಹುದು.

ಬಾಯಿಯಲ್ಲಿ ಐಸ್ ಕ್ಯೂಬ್ ಅನ್ನು ಇಟ್ಟು ನಿಧಾನವಾಗಿ ಅಗಿಯುವುದರಿಂದ ಬಿಕ್ಕಳಿಕೆಯಿಂದ ಪರಿಹಾರ ಸಿಗುತ್ತದೆ.

ಬೆಳ್ಳುಳ್ಳಿಯ ಎಸಳು ತಿನ್ನುವುದು ಅಥವಾ ಒಂದು ಚಮಚ ನಿಂಬೆ ರಸವನ್ನು ಸೇವನೆ ಮಾಡುವುದರಿಂದಲೂ ಸಹ ಬಿಕ್ಕಳಿಕೆಯನ್ನು ಕಡಿಮೆ ಮಾಡಬಹುದು.


Related Posts

ಸ್ವಾಮಿಗಳ ಚಿತ್ರ ಮತ್ತು ಪ್ರತಿಮೆಯ ಮುಂದೆ ರಾಜ್ಯಪಾಲರೊಂದಿಗೆ ಇರುವ ಚಿತ್ರ


Share         ಶಿವಗಿರಿ: ರಾಜ್ಯಪಾಲ ಆರ್.ವಿ. ಅರ್ಲೆಕ್ಕರ್ ಅವರು ರಾಜಭವನದ ಅತಿಥಿ ಕೊಠಡಿಯಲ್ಲಿ ಶ್ರೀ ನಾರಾಯಣ ಗುರುಗಳ ಚಿತ್ರ ಮತ್ತು ಕಂಚಿನ ಪ್ರತಿಮೆಯನ್ನು ಸ್ವಾಮಿಗಳಿಗೆ ತೋರಿಸಿದರು. ಅತಿಥಿ ಕೊಠಡಿಯನ್ನು ಪ್ರವೇಶಿಸುವಾಗ ಮೊದಲು ನೋಡುವುದು ಗುರುಗಳ ಚಿತ್ರ.


Read More »

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಬಿಡುಗಡೆ


Share         ಅ.26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಹಿತ್ಯ ಚರ್ಚೆ ಮುಂಬಯಿ, ಅ.23-  ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ


Read More »

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ


Share         ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ “A study on N-Covering


Read More »

ಬ್ರಿಟನ್ ಬಿಲ್ಲವ ಬಳಗ ಯುಕೆ ದೇಶದಲ್ಲಿ ಉತ್ಸಾಹದಿಂದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದೆ.


Share         ಬ್ರಿಟನ್ ಬಿಲ್ಲವ ಬಳಗ ಯುಕೆಯ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 13 ರ ಶನಿವಾರದಂದು ಕೋವೆಂಟ್ರಿ ಹಾಲಿಡೇ ಇನ್ ಎಕ್ಸ್‌ಪ್ರೆಸ್ ಹೋಟೆಲ್‌ನಲ್ಲಿ ಸಂಘದ ಆಯ್ಕೆಯಾದ ಅಧ್ಯಕ್ಷ ಡಾ. ಪಿ.ಕೆ. ಮನೋಜ್ ಪೂಜಾರಿ ಅವರ ನೇತೃತ್ವದಲ್ಲಿ


Read More »

ಬಾರ್ಕೂರು ನಾಗರ ಮಠದ ಕ್ರೀಡಾ ಬಹು ಮುಖ ಪ್ರತಿಭೆಯ ಧನ್ವಿತಪೂಜಾರಿ ಧನ್ವಿತಪೂಜಾರಿ ಅವರಿಗೆ ಮೂರು ಪ್ರಶಸ್ತಿಗಳ ಗರಿ


Share         ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಕಿರಿ, ಮಂಜೇಶ್ವರ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ  ದಿನಾಂಕ 30-08-2025 ರಂದು


Read More »

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »