ಹೃದಯ ಹೃದಯಗಳಲ್ಲಿ ಬೆಸೆದ ಹೃದಯ ಶ್ರೀಮಂತ ಜಯ ಸುವರ್ಣರ ಜನ್ಮದಿನದ ನೆನಪಿನ ಸಲುವಾಗಿ ನುಡಿನಮನ
![](https://billavaswarriors.com/wp-content/uploads/2024/05/IMG_7064-823x1024.jpeg)
ಹೃದಯ ಹೃದಯಗಳಲ್ಲಿ ಬೆಸೆದ ಹೃದಯ ಶ್ರೀಮಂತ ಜಯ ಸುವರ್ಣರ ಜನ್ಮದಿನದ ನೆನಪಿನ ಸಲುವಾಗಿ ನುಡಿನಮನ ಮುಂಬೈ ವಿಶ್ವವಿದ್ಯಾಲಯದಲ್ಲಿ ಪಿ ಎಚ್. ಡಿ ಕೋರ್ಸ್ ವರ್ಕ್ ನ ಸಲುವಾಗಿ ಜಯ ಸುವರ್ಣರ ಕುರಿತು ಶೋಧ ಪ್ರಬಂಧವನ್ನು ರಚಿಸಲು ಡಾ ಜಿ ಎನ್. ಉಪಾಧ್ಯ ಅವರು ಹೇಳುವವರೆಗೆ ಸುವರ್ಣರನ್ನು ತಿಳಿಯುವ ಪ್ರಯತ್ನವನ್ನು ನಾನೆಂದೂ ಮಾಡಿರಲಿಲ್ಲ. ನನ್ನದು ಸಾಹಿತ್ಯ ಪ್ರಪಂಚ. ಅಪರೂಪಕ್ಕೆ ಸಾಹಿತ್ಯ ಕಾರ್ಯಕ್ರಮಗಳೇನಾದರೂ ಇದ್ದಲ್ಲಿ ಮಾತ್ರ ಬಿಲ್ಲವ ಭವನಕ್ಕೆ ಭೇಟಿ ನೀಡುತ್ತಿದ್ದೆ. ಭವನದಲ್ಲಿ ಯಾವುದೇ ಕಾರ್ಯಕ್ರಮವಿರಲಿ ಜಯ ಸುವರ್ಣರ ಉಪಸ್ಥಿತಿಯಿರುತ್ತಿತ್ತು. […]
ಬೆಳ್ತಂಗಡಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ವಸಂತ ಬಂಗೇರರ ಹೆಸರಿಡಲು ಮನವಿ
![](https://billavaswarriors.com/wp-content/uploads/2024/05/IMG_7037.jpeg)
ಬೆಳ್ತಂಗಡಿ: 5 ಬಾರಿ ಬೆಳ್ತಂಗಡಿ ಕ್ಷೇತ್ರದ ಶಾಸಕರಾಗಿ, ಕಳೆದ 50 ವರ್ಷದಲ್ಲಿ ಕ್ಷೇತ್ರದ ಬಡ ಜನತೆಯ ಧ್ವನಿಯಾಗಿ ಕೆಲಸ ಮಾಡಿ ಇಹಲೋಕ ತ್ಯಜಿಸಿದ ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸ್ಥಾಪನೆಗೆ ಕಾರಣಕರ್ತರು ಹಾಗೂ ಸಂಘದ ವಾಣಿಜ್ಯ ಸಂಕೀರ್ಣದ ರೂವಾರಿ; ಸಂಘದ ಗೌರವಾದ್ಯಕ್ಷರಾಗಿದ್ದ ವಸಂತ ಬಂಗೇರರ ಹೆಸರಿನಲ್ಲಿ ಬೆಳ್ತಂಗಡಿ ಪೇಟೆಯ ಹೆದ್ದಾರಿಯ ಮುಖ್ಯ ವೃತ್ತದಲ್ಲಿ ಬಂಗೇರರ ಕಂಚಿನ ಪುತ್ಥಳಿ ನಿರ್ಮಿಸಲು ಮತ್ತು ಬೆಳ್ತಂಗಡಿಯಲ್ಲಿ ನಿರ್ಮಾಣವಾಗುತ್ತಿರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ವಸಂತ ಬಂಗೇರರ ಹೆಸರು ಇಡುವಂತೆ ಕರ್ನಾಟಕದ ಸನ್ಮಾನ್ಯ […]
ಚಿರನಿದ್ರೆಗೆ ಜಾರಿದ ಮಾಜಿ ಶಾಸಕ ಕೆ. ವಸಂತ ಬಂಗೇರ ಮೇ9 ರಂದು (ನಾಳೆ) ಬೆಳಿಗ್ಗೆ ಹಳೆಕೋಟೆ ನಿವಾಸದಲ್ಲಿ ಸಾರ್ವಜನಿಕ ಅಂತಿಮ ದರ್ಶನ
![](https://billavaswarriors.com/wp-content/uploads/2024/05/IMG_6855-815x1024.jpeg)
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಐದು ಬಾರಿ ಶಾಸಕರಾಗಿ ತಾಲೂಕಿನ ಅಭಿವೃದ್ಧಿಗೆ ತನ್ನದೇ ಆದ ವಿಶೇಷ ಕೊಡುಗೆಯನ್ನು ನೀಡಿದ್ದ ನೇರ ನಡೆನುಡಿಯ, ದಿಟ್ಟ ಹೋರಾಟಗಾರ, ಭ್ರಷ್ಟಾಚಾರಿಗಳಿಗೆ ದುಃಸ್ವಪ್ನರಾಗಿದ್ದ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು ಇಂದು ಸಂಜೆ ಚಿರನಿದ್ರೆಗೆ ಜಾರಿದ್ದು, ಅವರ ಪ್ರಾರ್ಥಿವ ಶರೀರದ ಸಾರ್ವಜನಿಕ ಅಂತಿಮ ದರ್ಶನ ನಾಳೆ ಮೇ 9ರಂದು ಬೆಳಿಗ್ಗೆ ಹಳೆಕೋಟೆಯ ಅವರ ಮನೆಯಲ್ಲಿ ನಡೆಯಲಿದೆ. ಬೆಳ್ತಂಗಡಿ ಕ್ಷೇತ್ರದ ಶಾಸಕರಾಗಿ ಐದು ಅವಧಿಗೆ ಸೇವೆ ಸಲ್ಲಿಸಿ, ತಾಲೂಕಿನ ಅಭಿವೃದ್ಧಿಗೆ ವಿಶೇಷ ಕೊಡುಗೆಯನ್ನು ಬಂಗೇರರು […]
ಬಿಲ್ಲವ ಸಮಾಜದ ಭರವಸೆಯ ಸೂರ್ಯ ಜನ್ಮದಿನದ ಸಲುವಾಗಿ ನುಡಿ ಬರಹ
![](https://billavaswarriors.com/wp-content/uploads/2024/05/IMG_6808.jpeg)
ಎರಡು ವರ್ಷಗಳ ಹಿಂದೆ ಜಯ ಸುವರ್ಣರ ಕುರಿತು ಮಾಹಿತಿಯನ್ನು ಸಂಗ್ರಹಿಸುವ ಸಲುವಾಗಿ ಅವರ ಮಗ ಸೂರ್ಯಕಾಂತ್ ಸುವರ್ಣರನ್ನು ಸಂದರ್ಶನ ಮಾಡಲು ಗೊರೆಗಾವ್ನಲ್ಲಿರುವ ಜಯ ಸುವರ್ಣರ ಕಚೇರಿಗೆ ಮೊದಲ ಬಾರಿ ಭೇಟಿ ನೀಡಿದ್ದೆ. ಜಯ ಸುವರ್ಣರನ್ನೇ ಹೋಲುತ್ತಿದ್ದ ಸೂರ್ಯಕಾಂತ್ ಮಿತಭಾಷಿಯೆಂದು ತಿಳಿದಾಗ ನಾನು ಕೇಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಗುತ್ತೋ ಇಲ್ಲವೋ ಎನ್ನುವ ಸಂದೇಹ ಮೂಡಿತ್ತು. ಗಂಭೀರವಾದ ಮುಖದಲ್ಲಿ ಸ್ಥಾಯಿಯಾಗಿರುವ ಶಾಂತಭಾವ ಮತ್ತು ಪರಿಶುದ್ಧವಾದ ಮನಸ್ಸನ್ನು ಸಾಕ್ಷೀಕರಿಸುವ ಮೃದು ಮಂದಹಾಸದಿಂದಲೇ ಅಂದು ನನ್ನನ್ನು ಸ್ವಾಗತಿಸಿದರು. ನಾನು ಕೇಳಿದ ಎಲ್ಲಾ […]
ಕಿನ್ನಿಗೋಳಿ: ಬುಡಸಹಿತ ಧರೆಗುರುಳಿದ ಅವಳಿ ವೀರರನ್ನು ತೊಟ್ಟಿಲು ಕಟ್ಟಿ ತೂಗಿದ್ದ ತಾಕೊಡೆ ಮರ ಇನ್ನು ನೆನಪು ಮಾತ್ರ
![](https://billavaswarriors.com/wp-content/uploads/2024/05/IMG_6796.jpeg)
ಕಾಂತಬಾರೆ – ಬೂದಬಾರೆ ಆಡಿ ಬೆಳೆದುದಕ್ಕೆ ಸಾಕ್ಷಿಯಾಗಿದ್ದ ಮರ ಇನ್ನು ನೆನಪು ಮಾತ್ರ ಮೂಲ್ಕಿ ತಾಲೂಕು ಕೊಲ್ಲೂರಿನ ಶ್ರೀ ಕಾಂತಬಾರೆ- ಬೂದ ಬಾರೆ ಜನ್ಮಕ್ಷೇತ್ರ ಕಾಂತಬಾರೆ – ಬೂದಬಾರೆ ಆಡಿ ಬೆಳೆದುದಕ್ಕೆ ಸಾಕ್ಷಿಯಾಗಿದ್ದ ಮರ ಇನ್ನು ನೆನಪು ಮಾತ್ರ ಮೂಲ್ಕಿ ತಾಲೂಕು ಕೊಲ್ಲೂರಿನ ಶ್ರೀ ಕಾಂತಬಾರೆ- ಬೂದ ಬಾರೆ ಜನ್ಮಕ್ಷೇತ್ರ ಕಿನ್ನಿಗೋಳಿ: ಸಹಸ್ರಮಾನದ ಇತಿಹಾಸದ, ಲಕ್ಷಾಂತರ ಮಂದಿ ನಂಬುವ ಧಾರ್ಮಿಕ ಕ್ಷೇತ್ರದ ಪವಿತ್ರ ಮರ ಬುಡಸಹಿತ ಧರೆಗುರುಳಿದ್ದು ಭಕ್ತ ಮನಸ್ಸಿನ ನೋವುಂಟು ಮಾಡಿದೆ. ಜೀವಂತ ಸಾಕ್ಷಿಯಾಗಿ ಬೃಹತ್ತಾಗಿ […]
ಶಾಂತಿ-ಸೌಹಾರ್ದತೆಯ ಸಂದೇಶ ಸಾರುವ ‘ಅಡ್ಡಣ ಪೆಟ್ಟು’: ಬಲು ವಿಶಿಷ್ಠ ಮಂಡೆಕೋಲಿನ ಈ ಅಡ್ಡಣಪೆಟ್ಟು ಆಚರಣೆ..!
![](https://billavaswarriors.com/wp-content/uploads/2024/05/IMG_6787.jpeg)
ಸುಳ್ಯ: ದೈವವೇ ಬಂದು ಜಗಳ ಬಿಡಿಸಿ ಸೌಹಾರ್ದತೆಯಿಂದ ಬಾಳಿ ಎಂಬ ಗತ ಕಾಲದ ದೈವ ಸಂದೇಶವನ್ನು ಇಂದಿಗೂ ಜನ ಮಾನಸಕ್ಕೆ ಮುಟ್ಟಿಸುವ ವಿಶಿಷ್ಟ ಆಚರಣೆ ಅಡ್ಡಣಪೆಟ್ಟು ಸುಳ್ಯ ತಾಲೂಕಿನ ಮಂಡೆಕೋಲಿನಲ್ಲಿ ಪ್ರತಿ ವರ್ಷವೂ ನಡೆಯುತಿದೆ. ಮಂಡೆಕೋಲು ಗ್ರಾಮದ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ನಡೆಯುವ ಉಳ್ಳಾಕುಲು ಹಾಗೂ ಪರಿವಾರ ದೈವದ ನೇಮದ ಸಂದರ್ಭದ ನಡೆಯುವವಿಶಿಷ್ಟವಾದ ಅಡ್ಡಣ ಪೆಟ್ಟು ಎಂಬ ಹೊಡೆದಾಟದ ಸಂಪ್ರದಾಯ ಜಾತ್ರೋತ್ಸವದ ಪ್ರಮುಖ ಆಕರ್ಷಣೆ. ಶ್ರೀ ವಿಷ್ಣುಮೂರ್ತಿ ದೇವರ ದರ್ಶನ ಬಲಿ, ಬಟ್ಟಲು […]
ಎಪ್ರಿಲ್ ತಿಂಗಳ ಅಕ್ಷಯ ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಕವಿತೆ : ರೈಲು
![](https://billavaswarriors.com/wp-content/uploads/2024/05/IMG_6771.jpeg)
ರೈಲು ಎಲ್ಲರಂತಲ್ಲ ನಾನು… ಬಯಲ ಬೆಳಕಿನಲ್ಲಿ ಕತ್ತಲು ಕೊರೆಯುವಲ್ಲಿ ಓಡಬೇಕು; ಓಡುತ್ತಲೇ ಇರಬೇಕು ಅಬ್ಬರದಿ ಬಂದೆರಗುವ ಜನಸಾಗರಕೆ ತೀರವಾಗಬೇಕು ಶಾಂತವಾಗಿ ನಿರ್ವಾಹವಾಗಿ ಜೀವಜೀವಗಳ ನಿಜಬಂಧುವಾಗಿ ತುಂಬಿಕೊಂಡಂತೆ ಖಾಲಿಯಾಗುತ್ತಲೇ ಇರಬೇಕು ಜೀವನದ ಇತಿಮಿತಿಯಲಿ ಗತಿ ತಿರುಗಿದಂತೆ ಹಳಿಗಳೂ ಬದಲಾಗುತ್ತವೆ, ಎಲ್ಲೋ ಕವಲೊಡೆದು ಇನ್ನೆಲ್ಲೋ ಕೂಡುತ್ತವೆ ಉದ್ವೇಗ ಉನ್ಮಾದಗಳ ಬದಿಗೊತ್ತಿ ನಯನಾಜೂಕಿನಲಿ ನಡೆಯಬೇಕು ಕೆಂಪು ನಿಶಾನೆಯೆದುರು ಸಮಾಧಾನಿಯಾಗಿರಬೇಕು ಎಲ್ಲರಂತಲ್ಲ ನಾನು ಕನಸಿಗೆ ಕಚಗುಳಿಯಿಟ್ಟು ನೂಕುವ ರಾಯಭಾರಿಯಾಗಬೇಕು ಚಿಣ್ಣರ ಕೇಕೆ, ಹರೆಯದ ಬಯಕೆ, ಇಳಿವಯಸ್ಸಿನ ಬೇಗೆಗೆ ನಿತ್ಯವೂ ಹೊಸ ಆಹ್ಲಾದವನೀಯುತ […]
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಚುನಾವಣಾ ಪ್ರಚಾರಕ್ಕಾಗಿ ಶ್ರೀ ನಾರಾಯಣ ಗುರು ಹಾಗೂ ಕೋಟಿ-ಚೆನ್ನಯರ ದುರ್ಬಳಕೆ
![](https://billavaswarriors.com/wp-content/uploads/2024/04/IMG_20240414_150344-1024x576.jpg)
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಸಮಾಜ ಸುಧಾರಕ ಶ್ರೀ ನಾರಾಯಣ ಗುರು ಹಾಗೂ ತುಳುನಾಡಿನ ಅವಳಿ ಯೋಧರಾದ ಕೋಟಿ-ಚೆನ್ನಯರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ, ಪುಷ್ಪ ನಮನ ನಾಟಕ ಬಿಲ್ಲವ ಸಮುದಾಯವನ್ನು ಮೂರ್ಖರನ್ನಾಗಿಸುವ ಯತ್ನವಾಗಿದ್ದು, ಇದನ್ನು ತೀವ್ರವಾಗಿ ಖಂಡಿಸಬೇಕು. ಶ್ರೀ ನಾರಾಯಣ ಗುರು ಹಾಗೂ ಅವಳಿ ವೀರರಾದ ಕೋಟಿ-ಚೆನ್ನಯರನ್ನು ಅವಮಾನಿಸಿದ ಬಿಜೆಪಿ ಈಗ ಬಿಲ್ಲವ ಮತಗಳ ಮೇಲೆ ಕಣ್ಣಿಟ್ಟು ಹೊಸ ನಾಟಕವಾಡುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರವು ಗಣರಾಜ್ಯೋತ್ಸವ ಪರೇಡ್ಗೆ ನಾರಾಯಣ ಗುರುಗಳ […]
ಬಿಲ್ಲವ ಸಮಾಜದ ಜನರ ಭಾವನೆ ಜತೆ ಚೆಲ್ಲಾಟ ಬೇಡ:ಸತ್ಯಜಿತ್ ಸುರತ್ಕಲ್
![](https://billavaswarriors.com/wp-content/uploads/2024/04/IMG_6421.jpeg)
ಸಮುದಾಯ ಭಾವನೆ ಜತೆ ಚೆಲ್ಲಾಟ ಬೇಡ:ಸತ್ಯಜಿತ್ ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರು, ಕೋಟಿ ಚೆನ್ನಯರ ಹೆಸರಿನಲ್ಲಿ ಬಿಲ್ಲವ ಸಮಾಜದ ಜನರ ಭಾವನೆಗಳ ಜತೆಗೆ ಚೆಲ್ಲಾಟವಾಡುವ ಪ್ರಯತ್ನ ಮುಂದುವರಿಸಿದರೆ, ಈ ಬಾರಿ ಅದಕ್ಕೆ ತಕ್ಕ ಉತ್ತರವನ್ನು ಸಮಾಜದ ಜನತೆ ನೀಡಲಿದ್ದಾರೆ ಎಂದು ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಲ್ಲವ ಸಮಾಜ ನಂಬಿಕಸ್ತ ಹಾಗೂ ಮುಗ್ಧ ಸಮಾಜ. ಭಾವನಾತ್ಮಕವಾಗಿ ಅವರ ಜತೆ ಚೆಲ್ಲಾಟವಾಡಬಹುದು ಎಂಬುದು ಸ್ಥಳೀಯ ಬಿಜೆಪಿ […]
ಸಾರ್ವಜನಿಕರೇ ಗಮನಿಸಿ : ‘ಮತದಾರರ ಪಟ್ಟಿ’ಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಲು ಇಲ್ಲಿದೆ ಸುಲಭ ವಿಧಾನ
![](https://billavaswarriors.com/wp-content/uploads/2024/04/IMG_6257.jpeg)
ಭಾರತದಂತಹ ಪ್ರಜಾಪ್ರಭುತ್ವದಲ್ಲಿ ಮತದಾನ ಕೇವಲ ಹಕ್ಕು ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಇದು ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅಧಿಕಾರವಾಗಿದೆ. ನೀವು ಭಾರತದಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದರೆ ಮತ್ತು ಇನ್ನೂ ನೋಂದಾಯಿಸದಿದ್ದರೆ, ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಹಾದಿಯಲ್ಲಿ ನಿಮ್ಮನ್ನು ಪ್ರಾರಂಭಿಸಲು ಸರಳ ಮಾರ್ಗದರ್ಶಿ ಇಲ್ಲಿದೆ. ಆನ್ಲೈನ್ ಮತ್ತು ಆಫ್ಲೈನ್ ಎರಡರಲ್ಲೂ ಭಾರತದಲ್ಲಿ ಮತ ಚಲಾಯಿಸಲು ನೋಂದಾಯಿಸುವುದು ಹೇಗೆ ಎಂಬುದರ ಸರಳ ವಿವರಣೆ ಇಲ್ಲಿದೆ: ಆನ್ ಲೈನ್ ನೋಂದಣಿ ಪ್ರಕ್ರಿಯೆ: ರಾಷ್ಟ್ರೀಯ ಮತದಾರರ […]