ಮಂಗಳೂರು: ರಾಷ್ಟ್ರಮಟ್ಟದ ಪ್ರಶಸ್ತಿ ಸ್ವೀಕರಿಸಿದ ತುಳುನಾಡಿನ ಹೆಮ್ಮೆಯ ಸಾಹಿತಿ ಪ್ರಮೀಳ ದೀಪಕ್ ಪೆರ್ಮುದೆ.
MRPL ಸಂಸ್ಥೆಯ ಉದ್ಯೋಗಿ ಆಗಿರುವ ಪ್ರಮೀಳ ದೀಪಕ್ ಪೆರ್ಮುದೆ ಇವರಿಗೆ ಸಾರ್ವಜನಿಕ ವಲಯದಲ್ಲಿ ಮಹಿಳೆಯರು ಪರಿಕಲ್ಪನೆಯಡಿ “ Woman In Public Sector “ (WIPS) ಸಂಸ್ಥೆ ನೀಡುವ ರಾಷ್ಟ್ರ ಮಟ್ಟದ ಶ್ರೇಷ್ಠ ಮಹಿಳಾ ಉದ್ಯೋಗಿ ಪ್ರಶಸ್ತಿ ಯನ್ನು ಹೊಸದಿಲ್ಲಿ ವಿಜ್ಞಾನ ಭವನದಲ್ಲಿ ಇಂದು ನೀಡಲಾಯಿತು.
ಈ ಶ್ರೇಷ್ಠ ಮಟ್ಟದ ಪ್ರಶಸ್ತಿ ಸ್ವೀಕರಿಸಿದ MRPL ಸಂಸ್ಥೆಯ ಮೊದಲ ಉದ್ಯೋಗಿಯು ಇವರಾಗಿರುವುದು ಮತ್ತಷ್ಟು ಹೆಮ್ಮೆ ಪಡುವ ಸಂಗತಿಯಾಗಿದೆ…
ಇವರು ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯ ಮಟ್ಟದ ಕಿತ್ತೂರ ರಾಣಿ ಚೆನ್ನಮ್ಮ, ಜ್ಞಾನ ಜ್ಯೋತಿ ನೀಲಾಂಬಿಕೆ, ಕಾವ್ಯ ಶ್ರೀ, ವಿಶ್ವೇಶ್ವರ ಸಾಹಿತ್ಯ ಪ್ರಶಸ್ತಿ, ಬಸವ ರತ್ನ ರಾಷ್ಟ್ರೀಯ ಪ್ರಶಸ್ತಿ, ಅಕ್ಕಮಹಾದೇವಿ ಪ್ರಶಸ್ತಿ ಇಂತಹ ಅನೇಕ ಪ್ರಶಸ್ತಿ ಪುರಸ್ಕಾರ ಸ್ವೀಕರಿಸಿದವರಾಗಿದ್ದಾರೆ.