TOP STORIES:

FOLLOW US

ಶ್ರೀಮತಿ ಶಾರದಾ ಅಂಚನ್ ಅವರಿಗೆ “ಪ್ರೊ| ನಳಿನಿ ವಿಶ್ವನಾಥ್ ಕಾರ್ನಾಡ್  ಸಂಸ್ಮರಣಾ ಪ್ರಶಸ್ತಿ”


ಶ್ರೀಮತಿ ಶಾರದಾ ಅಂಚನ್ ಅವರಿಗೆ “ಪ್ರೊ| ನಳಿನಿ ವಿಶ್ವನಾಥ್ ಕಾರ್ನಾಡ್  ಸಂಸ್ಮರಣಾ ಪ್ರಶಸ್ತಿ”

ಗೋರೆಗಾಂವ್ ಕರ್ನಾಟಕ ಸಂಘದ ಮಹಿಳಾ ವಿಭಾಗದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಮಾ. 8ರಂದು ಅಪರಾಹ್ನ 4ರಿಂದ ಸಂಘದ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಗೋರೆಗಾಂವ್‌ನ ಕೇಶವಗೋರೆ ಸ್ಮಾರಕ ಟ್ರಸ್ಟ್‌ನಲ್ಲಿ ನಡೆಯಲಿದೆ. 

ಸುಜಾತಾ ವಿ. ಕೋಟ್ಯಾನ್ ಮತ್ತು ಶೈಲಜಾ ಆರ್. ಅಂಚನ್ ಸಂಸ್ಮರಣೆಯಲ್ಲಿ ಸ್ಥಾಪಿಸಿದ ದತ್ತಿ ನಿಧಿ ಕಾಠ್ಯಕ್ರಮ ಜರಗಲಿದೆ. ಪ್ರೊ| ನಳಿನಿ ವಿಶ್ವನಾಥ್ ಕಾರ್ನಾಡ್ ಅವರ ಸಂಸ್ಮರಣೆಯಲ್ಲಿ ಡಾ| ವಿಶ್ವನಾಥ್ ಕಾರ್ನಾಡ್ ಅವರು ಪ್ರತಿ ವರ್ಷ ಮುಂಬಯಿಯ ಓರ್ವ ಮಹಿಳಾ ಸಾಹಿತಿಗೆ ಪ್ರಶಸ್ತಿ ನೀಡುತಿದ್ದು, ಈ ವರ್ಷದ ಪುರಸ್ಕಾರವು ಲೇಖಕಿ ಶಾರದಾ ಎ. ಅಂಚನ್ ಅವರಿಗೆ ಪ್ರದಾನ ಮಾಡಲಾಗುವುದು.

ಮುಖ್ಯ ಅತಿಥಿಯಾಗಿ ಸಮಾಜ ಸೇವಕಿ, ಮುಂಬಯಿ ಕನ್ನಡ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಜನಿ ವಿನಾಯಕ ಪೈ ಭಾಗವಹಿಸಲಿ ದ್ದಾರೆ. ಮಹಿಳೆ ಯರಲ್ಲಿ ತಲೆಮಾ ದಿನ ಅಂತರ ಎಂಬ ವಿಷಯದಲ್ಲಿ ಶ್ರೀಮತಿ ಕುಮಾರೇಶ್‌ ಆಚಾರ್ಯ ಉಪನ್ಯಾಸ ನೀಡಲಿದ್ದಾರೆ. 

ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸರಿತಾ ಸುರೇಶ್‌ ನಾಯಕ್, ಮಹಿಳಾ ವಿಭಾ ಗದ ಕಾರ್ಯಾಧ್ಯಕ್ಷೆ ಸಾವಿತ್ರಿ ಎಂ. ಶೆಟ್ಟಿ, ಸಂಚಾಲಕಿ ಸವಿತಾ ಭಟ್ ಹಾಗೂ ಚಂದ್ರಾವತಿ ಬಿ. ಶೆಟ್ಟಿ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

ಲೇಖಕಿ, ಸಾಹಿತಿ ಶ್ರೀಮತಿ ಶಾರದಾ ಎ.ಅಂಚನ್  ಅವರ ಕಿರು ಪರಿಚಯ

ಮುಂಬಯಿ  ಲೇಖಕಿ, ಸಾಹಿತಿ ಶ್ರೀಮತಿ ಶಾರದಾ ಎ.ಅಂಚನ್ ಇವರು ಇದುವರೆಗೆ ಸುಮಾರು ಹದಿನೇಳು ಕೃತಿಗಳನ್ನು ಪ್ರಕಟಿಸಿದ್ದು ಇವರ  “ಪಾಡ್ದನ” ತುಳು ಕವನ ಸಂಕಲನಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, “ರಕ್ತವೇ ಜೀವನದಿ “ವೈದ್ಯಕೀಯ ಕೃತಿಗೆ ವಿಶ್ವೇಶ್ವರಯ್ಯ ಇಂಜೀನೀಯರಿಂಗ್  ಪ್ರತಿಷ್ಠಾನದ  ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ,ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ  ದಿ//ಡಾ.ಎಚ್.ನರಸಿಂಹಯ್ಯ ದತ್ತಿ ಪ್ರಶಸ್ತಿ ಹಾಗೆಯೇಇವರ ಇನ್ನೊಂದು   ವೈದ್ಯಕೀಯ ಕೃತಿ “ರಕ್ತಶುದ್ಧಿ- ಆರೋಗ್ಯವೃದ್ಧಿ” ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ  “ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿ ಪ್ರಶಸ್ತಿ ” ಹಾಗೂ “ನಡೆ ನೀ ಮುಂದೆ” ಕವನ ಸಂಕಲನಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘ ಕೊಡಮಾಡುವ “ಶ್ರೀ ಕ್ಷೇತ್ರ ಧರ್ಮಸ್ಥಳ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ”  ಲಭ್ಯವಾಗಿದೆ.   

   ಡಾ.ಕೆ.ಶಿವರಾಮ ಕಾರಂತ  ಕಥಾ ಪುರಸ್ಕಾರ,PROF.H.S.K ಸಾಹಿತ್ಯ ಪ್ರಶಸ್ತಿ,ಚೈತನ್ಯಶ್ರೀ ಪ್ರಶಸ್ತಿ,ಕಾವ್ಯಸಿರಿ ಪ್ರಶಸ್ತಿ,ಬಸವ ಶ್ರೀ ಹಾಗೂ ಕಾವ್ಯಶ್ರೀ ಪ್ರಶಸ್ತಿ, ಕನ್ನಡ ಸಾಹಿತ್ಯ ಸಿರಿ ಪ್ರಶಸ್ತಿ,ಪ್ರೇಮಕವಿ ಪ್ರಶಸ್ತಿ,ಕರ್ನಾಟಕ ಯುವ ರತ್ನ ಪ್ರಶಸ್ತಿ,ತ್ಹೌಳವ  ಸಿರಿ ಪ್ರಶಸ್ತಿ, ಪಂಚಕಥಾ ಪ್ರಶಸ್ತಿ,ಹುಬ್ಬಳ್ಳಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,ವೀರರಾಣಿ  ಕಿತ್ತೂರು ಚೆನ್ನಮ್ಮ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ,ದಸರಾ ಕಾವ್ಯ ಪುರಸ್ಕಾರ,ಗಡಿನಾಡ ಧ್ವನಿ ಕಾವ್ಯಭೂಷಣ ಪ್ರಶಸ್ತಿ.ಎಂ.ಬಿ. ಕುಕ್ಯಾನ್     ರೈಟರ್ ಆಫ್ ದಿ ಇಯರ್  ಪ್ರಶಸ್ತಿ ಹೀಗೆ ಹತ್ತು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಶಾರದಾ ಅಂಚನ್ ಇವರು ಔದ್ಯೋಗಿಕವಾಗಿ ರಕ್ತನಿಧಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ತನ್ನ ಕಾರ್ಯ ಕ್ಷೇತ್ರದಲ್ಲಿ  ಇದುವರೆಗೆ ಸುಮಾರು 1000ಕ್ಕೂ ಹೆಚ್ಚು ರಕ್ತದಾನ ಶಿಭಿರಗಲ್ಲಿ ಭಾಗವಹಿಸಿದ್ದಾರೆ.ಸಂಗೀತದಲ್ಲೂ ಆಸಕ್ತಿ ಇರುವ ಇವರು ಗಾಯಕಿಯಾಗಿಯೂ ಪರಿಚಿತರಾಗಿದ್ದಾರೆ.


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »