ಸಂಸ್ಕೃತಿಯ ಆರಾಧಕ, ಹಿರಿಯ ಸಾಹಿತಿ ಬನ್ನಂಜೆ ಬಾಬು ಅಮೀನ್ ಅವರಿಗೆ ಮೊನ್ನೆ ನಡೆದ ಅಭಿವಂದನಾ ಕಾರ್ಯಕ್ರಮ ಅವರ ಧೀರ್ಘ ಕಾಲದ ಸಾಧನೆಗೆ, ಪ್ರಾಮಾಣಿಕ ಶ್ರಮಕ್ಕೆ ತಕ್ಕುದಾದ ರೀತಿಯಲ್ಲಿ ಘನತೆಯಿಂದ ಅರ್ಥಪೂರ್ಣವಾಗಿ ನಡೆಯಿತು.ನೂರಾರು ಮಂದಿಗೆ ಸತ್ಪ್ರೇರಣೆಯಾಯಿತು.
ಮಣ್ಣಿನ ಮೂಲ ಸಂಸ್ಕೃತಿಯ ಬಗ್ಗೆ ನೈಜ ತುಡಿತವುಳ್ಳವರ ಸಮ್ಮೇಳನದಂತಾಯಿತು.
ಹಾಗೆಯೇ ವ್ಯವಸ್ಥಿತ ಅಧ್ಯಯನ ನಡೆಸಿದ ಶೈಕ್ಷಣಿಕ ಕ್ಷೇತ್ರದ ವಿದ್ವಾಂಸರನ್ನು (Scholar) ಮತ್ತು ನೆಲದ ಸಂಸ್ಕೃತಿಯ ಬಗೆಗಿನ ತುಡಿತದಿಂದ ಅಧ್ಯಯನ ನಡೆಸಿ ಅದನ್ನು ಲೋಕಾಮುಖಕ್ಕೆ ಪರಿಚಯಿಸಿದ ಸಾಹಿತಿ, ಜಾನಪದ ವಿದ್ವಾಂಸರನ್ನು ಮುಖಾಮುಖಿಯಾಗಿಸಿ ಅಮೂಲ್ಯವಾದ ಮಣ್ಣಿನ ಸಂಸ್ಕೃತಿಯನ್ನು ಉಳಿಸಿ,ಬೆಳೆಸುವುದರೊಂದಿಗೆ ಅದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕುರಿತು ಮೌಲ್ಯಯುತವಾದ ಚಿಂತನೆ ನಡೆಸಿದ ಅದರ್ಶಯುತ ಸಂಯೋಜನೆಯ ಶ್ರೇಷ್ಟ ಕಾರ್ಯಕ್ರಮ.