TOP STORIES:

ಛಲ ಬಿಡದೆ ಹೋರಾಡಿ ವಿರೋಧಿಗಳ ಕುತಂತ್ರವನ್ನು ಮನದಟ್ಟು ಮಾಡುವಲ್ಲಿ ಯಶಸ್ವಿಯಾದ ಮಹೇಶ್ ಕೋಟ್ಯಾನ್


lಮಂಗಳೂರು SEZ ಸಂತ್ರಸ್ತರ ನಡುವಿನ ಛಲ ಬಿಡದ ಹೋರಾಟಗಾರ

ಆತ ಆಗ ಹದಿಹರೆಯದ ಹುಡುಗ, ಸಂಘಟನೆಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಜೀವನೋಪಾಯಕ್ಕಾಗಿ ಕುಟುಂಬದ 16 ಎಕರೆ ಜಾಗದಲ್ಲಿ ವಾಣಿಜ್ಯ ಕೃಷಿ ಬೆಳೆಯುವ ಚಿಂತನೆಯಲ್ಲಿ ಇದ್ದವನು. ಈ ಬಗ್ಗೆ ಹಲವಾರು ಅಧ್ಯಯನಗಳನ್ನು ಮಾಡುತ್ತಿದ್ದನು. ಜಾಗದಲ್ಲಿರುವ ದೈವ ದೇವರುಗಳಿಗೆ ಅಷ್ಟೇ ನಿಷ್ಠೆಯಿಂದ ಕ್ರಿಯಾ ಕರ್ಮಗಳನ್ನು ಮಾಡುತ್ತಾ ಬಂದಿದ್ದ.

ಒಮ್ಮೆಲೆ ಸಿಡಿಲು ಬಡಿದಂತೆ ಭೂಸ್ವಾಧೀನದ  ನೋಟಿಸು ಬಂದು ಬಾಗಿಲಿಗೆ ಅಪ್ಪಳಿಸಿತು. ತಾನು ಬಾಲ್ಯದಿಂದ ತೊಡಗಿಸಿ ಕೊಂಡಿರುವ  ಸಂಘಟನೆಯ ಮುಂದಾಳುಗಳ ಜೊತೆ ಸೇರಿ ಭೂ ಸ್ವಾದಿನವನ್ನು ವಿರೋಧಿಸಿದ, ಅತ್ಯಂತ ಕಡಿಮೆ ಬೆಲೆಗೆ, ಮೂರು ಕಾಸಿಗೆ ಅಂದರೆ ಚದರ ಅಡಿಗೆ 9/- ರೂಪಾಯಿಗೆ ಭೂ ಕಳೆದುಕೊಳ್ಳುವುದರ ಜೊತೆಗೆ ತಾನು ನಂಬಿ ಬಂದಿದ್ದ ಕೃಷಿ ಮತ್ತು ದೈವ ದೇವರುಗಳ ಆಲಯವನ್ನು ಕೂಡ ಬಿಟ್ಟುಕೊಡಬೇಕು ಎಂಬ ಗಾಢ ಚಿಂತೆ ಈತನಲಿತ್ತು.

ಆದರೆ ಸರಕಾರದ ಕಾನೂನಿಗೆ ಎಲ್ಲರೂ ತಲೆಬಾಗಿಸಿ ತಮ್ಮ ಜಾಗವನ್ನು ಬಿಟ್ಟು ಕೊಟ್ಟ ಸಂದರ್ಭದಲ್ಲಿ ಈತನಿಗೆ ಬೇರೆ ಯಾವುದೇ ದಾರಿ ಇರಲಿಲ್ಲ. MRPL ನಂತಹ ಸರ್ಕಾರಿ ಕಂಪನಿಯಲ್ಲಿ ಉದ್ಯೋಗ ಸಿಗುತ್ತೆ ಎಂದು ಎಲ್ಲರೂ ಪುಸಲಾಯಿಸಿ ಭೂಸ್ವಾಧೀನಕ್ಕೆ ಅವಕಾಶ ಮಾಡಿಕೊಟ್ಟರು.

ನಂತರ ಗೊತ್ತಾಯಿತು ನೋಡಿ ರಾಜಕಾರಣಿಗಳ, ಅಧಿಕಾರಿಗಳ ನಿಜ ಬಣ್ಣ. MRPL ನಲ್ಲಿ ಉದ್ಯೋಗ ಎಂಬುದು ಅಪ್ಪಟ ಸುಳ್ಳು ಭರವಸೆಯಾಗಿತ್ತು. ಇದೊಂದು ಭೂಮಿ ಕಸಿದು ಕೊಳ್ಳಲು ಹೂಡಿದ್ದ ಹುನ್ನಾರ ಆಗಿತ್ತು. ಪೂರ್ವಜರ ಜಮೀನು, ಬೆಳೆದು ಬಂದ ಊರು ಕೈ ಜಾರಿ ಹೋಗಿತ್ತು. ದೂರದ ಊರಲ್ಲಿ ಸಿಕ್ಕಿದ ಪರಿಹಾರದಲ್ಲಿ ಒಂದು ಸಣ್ಣ ಮನೆ ನಿರ್ಮಾಣವಾಗಿತ್ತು. ಇನ್ನೇನಿದ್ದರೂ ಭೂ ಸ್ವಾಧೀನ ಅಧಿಕಾರಿಗಳ ಕೈಗೊಂಬೆಯಾಗಿ ಅವರು ಹೇಳಿದಂತೆ ಕೇಳಬೇಕಿತ್ತು. ಆದರೂ ತೀವ್ರತರದ ಹೋರಾಟ ಮಾಡಿ, ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು ಮಹೇಶ್ ಕೋಟ್ಯಾನ್

ತನಗೆ ಮಾತ್ರ ಅಲ್ಲದೆ ತನ್ನ ಜೊತೆ ಜಾಗ ಕಳಕೊಂಡ ಇತರರಿಗೂ ಇದೇ ಕಂಪನಿಯಲ್ಲಿ ರಾಜಕಾರಣಿಗಳ ಜೊತೆ ಅಕ್ಷರಶಃ ಯುದ್ಧವನ್ನೇ  ಮಾಡಿ ಕೆಲಸ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಆದರೆ ಈ ಯಶಸ್ಸು ಹೆಚ್ಚು ಕಾಲ ಬರಲಿಲ್ಲ. ಎಷ್ಟು ಶೀಘ್ರದಲ್ಲಿ ಕಂಪನಿ ಆರಂಭವಾಯಿತತೋ, ಅಷ್ಟೇ ಶೀಘ್ರದಲ್ಲಿ ಕಂಪನಿ ಮುಚ್ಚಿ ಹೋಯಿತು. ಈ ಕಂಪನಿಯನ್ನು ನಂಬಿ ಮಾಡಿಕೊಂಡ ಸಾಲಕ್ಕೆ ಬ್ಯಾಂಕಿನವರು ಮನೆ ಬಾಗಿಲಿಗೆ ಬರಲು ಪ್ರಾರಂಭವಾಯಿತು. ಕೆಲಸನೂ ಇಲ್ಲ ಉತ್ಪಾದನೆಯೂ ಇಲ್ಲ. ಬಾಳು ಮೂರಬಿಟ್ಟೆ ಆಯಿತು.

ಆದರೂ ನಾನು ನಂಬಿದ ಸಿದ್ಧಾಂತದಿಂದ  ಕ್ಷಣ ಮಾತ್ರಕ್ಕೂ ವಿಚಲಿತನಾಗದೆ ಅದೇ ಸಂಘಟನೆ ಮತ್ತು ಪಕ್ಷದ ವ್ಯವಸ್ಥೆಯನ್ನು ಉಪಯೋಗಿಸಿಕೊಂಡು ತನ್ನವರ ವಿರುದ್ಧವೇ ಕಾಳಗಕ್ಕೆ ನಿಂತರು. ಇದು ಅಷ್ಟು ಸುಲಭದ ಕೆಲಸ ಅಲ್ಲ, ವಿರೋಧಿ ಒಬ್ಬನನ್ನು ಯಾವ ರೀತಿಯಾದರೂ ಹೊಡೆಯಬಹುದು. ಆದರೆ ಸೈದ್ಧಾಂತಿಕವಾಗಿ ನಮ್ಮ ಜೊತೆ ಗುರುತಿಸಿಕೊಂಡಿರುವ ವ್ಯವಸ್ಥೆ ಮತ್ತು ಪಕ್ಷವನ್ನು ವಿರೋಧಿಸುವುದು ಅಷ್ಟು ಸುಲಭವಲ್ಲ.

ಹೋರಾಟ ಪ್ರಾರಂಭವಾಯಿತು, ಮೊದಲು ತನ್ನ ಕಂಪನಿಯಿಂದ ಬಾಕಿ ಇರುವ ಸಂಬಳಕ್ಕೋಸ್ಕರ, ಶಿವಮೊಗ್ಗ ಬೆಳಗಾಂ ಬೆಂಗಳೂರು ದೆಹಲಿ ಈ ರೀತಿ ಹತ್ತು ಹಲವಾರು ಸುತ್ತಾಟಗಳನ್ನು ಸಣ್ಣದಾದ ತಂಡ ಕಟ್ಟಿಕೊಂಡು ಪ್ರಾರಂಭಿಸಬೇಕಾಯಿತು.

MLA MP ಗಳು ಸ್ಥಳೀಯ ನಾಯಕರುಗಳ ಜೊತೆಗೆ ಮನಸ್ತಾಪ ಉಂಟಾಗುವ ರೀತಿಯಲ್ಲಿ ವ್ಯವರಿಸಬೇಕಾಯಿತು.

ಕೊನೆಗೆ ಎಲ್ಲರ ಸಹಕಾರದೊಂದಿಗೆ ತಮಗೆ ಬರಬೇಕಾದ ಸಂಬಳ ಮತ್ತು ಇತರ ಭತ್ಯೆಗಳನ್ನು ಪೂರ್ಣ ಪ್ರಮಾಣದಲ್ಲಿ ಪಡೆಯುವಲ್ಲಿ ಯಶಸ್ವಿಯಾದರು.

ಗೆಲುವಿಗೆ ಸಾವಿರಾರು ಮಂದಿ ತಂದೆಯರು ಎಂಬಂತೆ, ತನ್ನ ಜೊತೆ ದುಡಿದ ಕೆಲವರು ರಾಜಕೀಯ ಪ್ರೇರಿತರಾಗಿ ಇವರ ಹೋರಾಟವನ್ನು ಗುರುತಿಸಲೂ ಹಿಂದೇಟು ಹಾಕಿದರು. ಅದು ಆಟೋಮ್ಯಾಟಿಕ್ ಆಗಿ ಆದದ್ದು, ನಿಮ್ಮದೇನೂ ಶ್ರಮ ಇಲ್ಲ ಎಂದು ಹೇಳಿ ಕನಿಷ್ಠ ಇವರ ಪ್ರಯತ್ನವನ್ನು ಗುರುತಿಸುವ ಔದ್ದಾರ್ಯವನ್ನು ತೋರಿಸಲಿಲ್ಲ. ಇರಲಿ ಅವರ ಜೊತೆಗೆ ನನಗೂ ಸಂಬಳ ಬಂದಿದೆ ಎಂಬ ಕಾರಣಕ್ಕಾಗಿ ಎಲ್ಲವನ್ನು ಸಹಿಸಿಕೊಂಡು ಸುಮ್ಮನಿದ್ದರು. ಆದರೇ ಬಹು ದೊಡ್ಡ ತಂಡ ಒಂದು ಇವರ ಜೊತೆಗೆ ಗಟ್ಟಿಯಾಗಿ ನಿಂತಿತ್ತು.

ಇಲ್ಲಿಗೆ ಯುದ್ಧ ಗೆದ್ದ ಒಂದು ಅನುಭವ ಮುಗಿದಿದ್ದರೆ, ತನ್ನ ಹಿಂದಿನ ಕಂಪನಿಯನ್ನು ಬಿಡ್ ಮೂಲಕ ಪಡೆದುಕೊಂಡ ಹೊಸ ಆಡಳಿತ ಇವರನ್ನು ಉದ್ಯೋಗದಲ್ಲಿ ಮುಂದುವರೆಸಲು ಸರಾಸಗಟಾಗಿ ತಿರಸ್ಕರಿಸಿತು.

ಮತ್ತೊಮ್ಮೆ ಹೋರಾಟದ ಅಧ್ಯಾಯವನ್ನು ಪ್ರಾರಂಭ ಮಾಡುವ ಅನಿವಾರ್ಯತೆ ಶುರುವಾಯಿತು. ಈಗಾಗಲೇ ಒಂದು ಹಂತದಲ್ಲಿ ಇವರಿಗೆ ಸಹಾಯ ಮಾಡಿದ ಮುಖಂಡರು ಇನ್ನೊಮ್ಮೆ ಇವರ ಕೇಸು ತೆಗೆದುಕೊಳ್ಳಲು ತಿರಸ್ಕರಿಸಿದರು. ನಿಮಗೆ ನಮ್ಮಿಂದಾಗುವಷ್ಟು ಮಾಡಿಯಾಗಿದೆ ಇನ್ನು ಮುಂದೆ ಸಾಧ್ಯನೇ ಇಲ್ಲ ಎಂದು ನೇರವಾಗಿ ಹೇಳಿದರು.

ಈತನ ಸೈದ್ಧಾಂತಿಕ ಬದ್ಧತೆಯ ಬಗ್ಗೆ ಅರಿವಿದ್ದ ವಿರೋಧ ಪಕ್ಷದ ಕೆಲವರು, ಈ ಸಂದರ್ಭವನ್ನು ರಾಜಕೀಯ ಬೇಳೆ ಬೇಯಿಸಲು ಉಪಯೋಗಿಸಿಕೊಂಡರು. ಇವರ ತಂಡವನ್ನು ಇಬ್ಭಾಗ ಮಾಡಿದರು, 2024ರ ಚುನಾವಣೆಯ ಸಂದರ್ಭದಲ್ಲಿ ಶಾಸಕ ಸಂಸದರಿಗೆ ಮುಜುಗರ ತರಬೇಕು ಎನ್ನುವ ದುರುದ್ದೇಶದಿಂದ ರಾಜಕೀಯ ಪ್ರೇರಿತವಾಗಿ ಪ್ರತಿಭಟನೆಗೆ ಕೂತುಕೊಂಡರು, ಧಿಕ್ಕಾರದ ಘೋಷಣೆಗಳನ್ನು ಕೂಗಲಾಯಿತು, ಪ್ರತಿಭಟಣೆಯನ್ನೆ ದಂಧೆ ಮಾಡುತ್ತಿರುವರ ಜೊತೆ ಇವರ ಸ್ನೇಹಿತರೇ ಕೈಜೋಡಿಸಿದರು. ಮೋದಿಜಿ ಅವರ ಚುನಾವಣೆಯ ಬಹಿಷ್ಕಾರಕ್ಕೂ ಕರೆಕೊಟ್ಟಾಯಿತು, ಬಹಿಷ್ಕಾರ ಯಾಕೆಂದರೆ ಇವರಿಗೆ, ಮಹೇಶ್ ಕೋಟ್ಯಾನ್ ರ ಸ್ನೇಹಿತರ ಮತವನ್ನು ತಮ್ಮ ಪಕ್ಷಕ್ಕೆ ಪರಿವರ್ತಿಸುವುದು ಕಷ್ಟ ಎಂದು ಅರಿವಾಗಿತ್ತು. ಸಂತ್ರಸ್ಥರ ತಂಡವನ್ನು ನುಚ್ಚುನೂರು ಮಾಡುವುದರಲ್ಲಿ ದುಷ್ಟರ ಗುಂಪೊಂದು ಯಶಸ್ಸು ಕಂಡಿತು.

ಆದರೆ ಕುಗ್ಗದೆ ಜಗ್ಗದೆ, ತನ್ನ ಸಿದ್ದಾಂತ ಮತ್ತು ತನ್ನ ನಾಯಕರ ಮೇಲೆ ಅಚಲ ವಿಶ್ವಾಸ ಇಟ್ಟು ಈ ಕೆಲಸವನ್ನು ವಾಪಸ್ ಪಡೆದುಕೊಳ್ಳುತ್ತೇವೆ ಎಂಬ ದೃಢ ನಿರ್ಧಾರದಿಂದ ಮತ್ತೊಮ್ಮೆ ಹೋರಾಟಕ್ಕಿಳಿದು,

ಈ ಮಧ್ಯೆ ತನ್ನ ಮುಖಂಡರಿಗೆ ವಿರೋಧಿಗಳ ಕುತಂತ್ರವನ್ನು ಮನದಟ್ಟು ಮಾಡುವಲ್ಲಿ ಯಶಸ್ವಿಯಾದ ಮಹೇಶ್ ಕೋಟ್ಯಾನ್ ಸಂಸದ ಶಾಸಕರ ಜೊತೆ ಸೇರಿ GAIL ಕಂಪೆನಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕೆಲಸವನ್ನು ದೊರಕಿಸಿ ಕೊಳ್ಳುವುದರಲ್ಲಿ ಯಶಸ್ವಿಯಾದರು.

ಆದರೆ ಈ ಪರಿಹಾರಕ್ಕೆ ಸಹೋದ್ಯೋಗಿಗಳು ಯಾರೂ ಒಪ್ಪಲಿಲ್ಲ. ತಾತ್ಕಾಲಿಕ ನೆಲೆಯಲ್ಲಿ ಯಾರೂ ಕೆಲಸಕ್ಕೆ ಹಾಜರಾಗಲಿಲ್ಲ. ರಾಜಕೀಯ ಕೆಸರೆರೆಚಾಟ ಜೋರಾಗಿ ಆಯಿತು. ಚುನಾವಣೆ ಮುಗಿಯಿತು.

ಜಿಲ್ಲೆಗೆ ಹೊಸ ಸಂಸದನ ಆಗಮನವಾಯಿತು.

ಹೊಸದಾಗಿ ನೇಮಕಗೊಂಡ ಸೃಜನಶೀಲ ವ್ಯಕ್ತಿ ಸಂಸದ ಬ್ರಿಜೇಷ್ ಚೌಟರ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡು ಕೆಲಸ ಪಡೆದು ಕೊಳ್ಳುವ ಹೋರಾಟ ಮುಂದುವರಿಸಿದರು.

ಈ ಮಧ್ಯೆ ತಮ್ಮ ಕುತಂತ್ರಗಳು ಯಾವುದು ಫಲಿಸದ ಸಂದರ್ಭದಲ್ಲಿ ಒತ್ತಡದಲ್ಲಿದ್ದ ಉದ್ಯೋಗಿಗಳನ್ನು ವಿಶ್ವಾಸಕ್ಕೆ ಪಡಕೊಂಡ ಒಂದು ಗುಂಪು ಅವರನ್ನು ತಾತ್ಕಾಲಿಕ ನೆಲೆಯಲ್ಲಿ ಉದ್ಯೋಗಕ್ಕೆ ಸೇರ್ಪಡೆಯಾಗುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು. ಇದು ಮಹೇಶ್ ಕೋಟ್ಯಾನ್ ಸ್ವಾಭಿಮಾನಕ್ಕೆ ಧಕ್ಕೆ ಉಂಟು ಮಾಡಿತು. ನಮ್ಮ ಶಾಸಕ ಸಂಸದರು ಹೇಳಿದಾಗ ಒಪ್ಪದ  ಸಹೋದ್ಯೋಗಿಗಳು  ಕುತಂತ್ರದ ಭಾಗವಾಗಿ ತಾವು ಕಳೆದುಕೊಂಡ ಜಮೀನಿನಲ್ಲಿ ನಿರ್ಮಾಣವಾದ ಕಂಪನಿಯಲ್ಲಿ ಯಾರೋ ಒಬ್ಬ ಏಜೆಂಟನ ಕೈ ಕೆಳಗಡೆ ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡುವುದಾದರೂ ಹೇಗೆ? ಇದಕ್ಕೆ ಸುತರಾಮ್ ಒಪ್ಪದ ಅವರು ಮತ್ತು ಅವರ ತಂಡ ತಾತ್ಕಾಲಿಕ ನೆಲೆಯಲ್ಲಿ ಕೆಲಸಕ್ಕೂ ಸೇರಲಿಲ್ಲ.

ಈಗ ಇದೆಲ್ಲಾ ಇತಿಹಾಸ. ಕ್ಯಾಪ್ಟನ್ ಬ್ರಿಜೇಶ್ ಚೌಟರ ಅವಿರತ ಶ್ರಮದ ಫಲವಾಗಿ ಇವತ್ತು ಇವರೆಲ್ಲರೂ ಜಿಎಂಪಿಲ್ ನ ಅಧಿಕೃತ ನೌಕರರು. ಯುದ್ಧ ಗೆದ್ದ ಸಂಭ್ರಮದಲ್ಲಿ, ಎಲ್ಲಿಯೂ ಇವರ ಫೋಟೋ ಕಾಣಿಸಲಿಲ್ಲ, ಹೆಸರು ಬರಲಿಲ್ಲ. ಹೇಳಿಕೆ ನೀಡಲಿಲ್ಲ. ಜೈಕಾರ ಘೋಷಣೆ ಅಂತೂ ಇಲ್ಲವೇ ಇಲ್ಲ. ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ತನ್ನ ಪಾಡಿಗೆ ರೈಲು ಹತ್ತಿ ಶಬರಿಮಲೆಗೆ ಹೊರಟು ಹೋದರು. ಹೌದು ಸುಮಾರು ಎರಡು ವರ್ಷಗಳಿಂದ ವೃತಸ್ತರಾಗಿರುವ ಇವರು ನೇರ ಶಬರಿಮಲೆಗೆ ಹೊರಟು ಹೋದರು ನಮ್ಮ ಯುವ ನಾಯಕರು.

ಇಂತಹ ನೂರಾರು ಮಹೇಶ್ ಕೋಟ್ಯಾನ್ ಗಳಿಗೆ ಜನ್ಮ ನೀಡಲಿ ಈ ಪವಿತ್ರ ತುಳು ಭೂಮಿ.


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »