ಅರುಣ್ ಉಳ್ಳಾಲ್ ಫೇಸ್ ಬುಕ್ ವಾಲ್ನ್ ನಲ್ಲಿ
ಬೆಂಜನಪದವಿನ ಯಮುನಕ್ಕನಿಗೆ ವಿವಾಹ ಕಾಣಿಕೆ
ನಮ್ಮ ಗೃಹಪ್ರವೇಶ ಡಿಜೆಮುಕ್ತವಾಗಿ ನಡೆದಾಗ ಅದನ್ನು ಮೆಚ್ಚಿಕೊಂಡರ ಮಧ್ಯೆ ಕೆಲವು ಅಮಲುಪ್ರಿಯರಲ್ಲಿ ‘ಆಹಾ ಒಳ್ಳೆಯ ತಂತ್ರ..ಸಂಸ್ಕೃತಿ ಕುಟುಂಬ ಈ ಮೂಲಕ ಸಾಕಷ್ಟು ಹಣ ಉಳಿಸಿತು’ ಎಂಬ ಅಗ್ಗದ ಮಾತುಗಳು ಕೇಳಿಬಂದಿತ್ತಂತೆ. ಹೌದು, ಹಣ ಉಳಿಸಿದ್ದು ಸತ್ಯ. ಯಾರ್ಯಾಯ ಮನೆಮಕ್ಕಳಿಗೆ ಕುಡಿಸಿ ನಮ್ಮ ಹಣ ಸಾರ್ಥಕತೆ ಪಡೆಯಬೇಕೆ?
ದುಂದುವೆಚ್ಚ ಅಂದು ಮಾತ್ರವಲ್ಲ ಇಂದೂ ಇಲ್ಲವೇ ಇಲ್ಲ. ಆದರೆ ಇದು ಹಣ ಉಳಿಸುವ ಉದ್ದೇಶವಲ್ಲ. ಡಿಜೆ ಅಮಲಿನ ದುಷ್ಪರಿಣಾಮ ತಪ್ಪಿಸುವ ಆರೋಗ್ಯಕರ ಆಲೋಚನೆ. ನಮ್ಮ ಮದುವೆಯಲ್ಲೂ ಮದ್ಯವೂ ಇಲ್ಲ, ಸಿಗರೇಟಿನ ಹೊಗೆಯಿಲ್ಲ, ಡಿಜೆಯ ಅಬ್ಬರವಿಲ್ಲ. ಹೋ ಈ ಬಾರಿಯೂ ಸಾಕಷ್ಟು ಹಣ ಉಳಿಸಿದ ಜಿಪುಣರು ಎನ್ನುವವರಿಗೆ ಒಂದು ಉತ್ತರ. ಅಲ್ಲದೆ ನಮ್ಮ ಕುಟುಂಬದ ಬಹುದಿನಗಳ ಆಕಾಂಕ್ಷೆ.
ವಿವಾಹ ಆರತಕ್ಷತೆಯ ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಂಜನಪದವಿನಲ್ಲಿ ಗಂಡನನ್ನು ಕಳೆದುಕೊಂಡು ಮಕ್ಕಳ ಭಾಗ್ಯವಿಲ್ಲದೆ, ಕುಟುಂಬದ ಯಾವೊಂದು ಸಹಕಾರವಿಲ್ಲದೆ ಮೇಲಾಗಿ ಕಾಯಿಲೆಯ ನೋವಿನಲ್ಲಿ ಆರ್ಥಿಕ ಸಂಕಷ್ಟದಲ್ಲಿ ದಿನೇ ದಿನೇ ಬಳಲುತ್ತಿರುವ ಯಮುನಕ್ಕನಿಗೆ ಡಿಜೆವಿರೋಧದ ‘ಜಿಪುಣತನ’ದಲ್ಲಿ ಉಳಿಸಿಕೊಂಡ ಮೊತ್ತವನ್ನು ನೀಡಿ ಆಶೀರ್ವಾದ ಪಡೆದುಕೊಂಡೆವು. ಮನೆಯಿಲ್ಲದೆ ಬೀದಿಪಾಲಾಗಿದ್ದ ಯಮುನಕ್ಕನಿಗೆ ಅಂದದ ಮನೆ ಕಟ್ಟಿಸಿಕೊಟ್ಟ ಪುಣ್ಯಾತ್ಮ Padmaraj Ramaiah ಅಣ್ಣ ಮತ್ತು ಅವರ ಗುರುಬೆಳದಿಂಗಳು ಟ್ರಸ್ಟ್‌ನ ಔದಾರ್ಯವನ್ನು ಕೊಂಡಾಡಿ ದಣಿಯದು. ಈ ಪ್ರಯತ್ನಕ್ಕೆ ಕೈಜೋಡಿಸಿದ ಪಡೀಲಿನ ಮಡಿಲು ಸೇವಾ ಟ್ರಸ್ಟ್ (ರಿ.) ಇದರ ಅಧ್ಯಕ್ಷರಾದ ಪ್ರೀತಿಯ ಅಣ್ಣ ಶ್ರೀ ಗಜೇಂದ್ರ ಪೂಜಾರಿ ಮತ್ತು ಸರ್ವಸದಸ್ಯರಿಗೆ ಹೃತ್ಪೂರ್ವಕ ಧನ್ಯವಾದಗಳು.
ಈ ಸಂದರ್ಭದಲ್ಲಿ ಯಮುನಕ್ಕನ ಮುಖದಲ್ಲಿ ಕಂಡ ನಗು, ತುಂಬಿ ಬಂದ ಕಣ್ಣುಗಳು ನಮ್ಮ ದಾಂಪತ್ಯದ ಬಹುದೊಡ್ಡ ಸೌಭಾಗ್ಯ. ಅದು ಅಕ್ಷಯ ಭಗವದನುಗ್ರಹ.