TOP STORIES:

FOLLOW US

ವಿವಾಹ ಆರತಕ್ಷತೆಯ ವೇದಿಕೆಯಲ್ಲಿ ಮಾನವೀಯ ಮೌಲ್ಯ ಮೆರೆದ ಅರುಣ್ ಉಳ್ಳಾಲ್


ಅರುಣ್ ಉಳ್ಳಾಲ್ ಫೇಸ್ ಬುಕ್ ವಾಲ್ನ್ ನಲ್ಲಿ

ಬೆಂಜನಪದವಿನ ಯಮುನಕ್ಕನಿಗೆ ವಿವಾಹ ಕಾಣಿಕೆ

ನಮ್ಮ ಗೃಹಪ್ರವೇಶ ಡಿಜೆಮುಕ್ತವಾಗಿ ನಡೆದಾಗ ಅದನ್ನು ಮೆಚ್ಚಿಕೊಂಡರ ಮಧ್ಯೆ ಕೆಲವು ಅಮಲುಪ್ರಿಯರಲ್ಲಿ ‘ಆಹಾ ಒಳ್ಳೆಯ ತಂತ್ರ..ಸಂಸ್ಕೃತಿ ಕುಟುಂಬ ಈ ಮೂಲಕ ಸಾಕಷ್ಟು ಹಣ ಉಳಿಸಿತು’ ಎಂಬ ಅಗ್ಗದ ಮಾತುಗಳು ಕೇಳಿಬಂದಿತ್ತಂತೆ.‌ ಹೌದು, ಹಣ ಉಳಿಸಿದ್ದು ಸತ್ಯ. ಯಾರ್ಯಾಯ ಮನೆಮಕ್ಕಳಿಗೆ ಕುಡಿಸಿ ನಮ್ಮ ಹಣ ಸಾರ್ಥಕತೆ ಪಡೆಯಬೇಕೆ?

ದುಂದುವೆಚ್ಚ ಅಂದು ಮಾತ್ರವಲ್ಲ ಇಂದೂ ಇಲ್ಲವೇ ಇಲ್ಲ. ಆದರೆ ಇದು ಹಣ ಉಳಿಸುವ ಉದ್ದೇಶವಲ್ಲ.‌ ಡಿಜೆ ಅಮಲಿನ ದುಷ್ಪರಿಣಾಮ ತಪ್ಪಿಸುವ ಆರೋಗ್ಯಕರ ಆಲೋಚನೆ. ನಮ್ಮ ಮದುವೆಯಲ್ಲೂ ಮದ್ಯವೂ ಇಲ್ಲ, ಸಿಗರೇಟಿನ ಹೊಗೆಯಿಲ್ಲ, ಡಿಜೆಯ ಅಬ್ಬರವಿಲ್ಲ. ಹೋ ಈ ಬಾರಿಯೂ ಸಾಕಷ್ಟು ಹಣ ಉಳಿಸಿದ ಜಿಪುಣರು ಎನ್ನುವವರಿಗೆ ಒಂದು ಉತ್ತರ.‌ ಅಲ್ಲದೆ ನಮ್ಮ ಕುಟುಂಬದ ಬಹುದಿನಗಳ ಆಕಾಂಕ್ಷೆ.

ವಿವಾಹ ಆರತಕ್ಷತೆಯ ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಂಜನಪದವಿನಲ್ಲಿ ಗಂಡನನ್ನು ಕಳೆದುಕೊಂಡು ಮಕ್ಕಳ ಭಾಗ್ಯವಿಲ್ಲದೆ, ಕುಟುಂಬದ ಯಾವೊಂದು ಸಹಕಾರವಿಲ್ಲದೆ ಮೇಲಾಗಿ ಕಾಯಿಲೆಯ ನೋವಿನಲ್ಲಿ ಆರ್ಥಿಕ ಸಂಕಷ್ಟದಲ್ಲಿ ದಿನೇ ದಿನೇ ಬಳಲುತ್ತಿರುವ ಯಮುನಕ್ಕನಿಗೆ ಡಿಜೆವಿರೋಧದ ‘ಜಿಪುಣತನ’ದಲ್ಲಿ ಉಳಿಸಿಕೊಂಡ ಮೊತ್ತವನ್ನು ನೀಡಿ ಆಶೀರ್ವಾದ ಪಡೆದುಕೊಂಡೆವು. ಮನೆಯಿಲ್ಲದೆ ಬೀದಿಪಾಲಾಗಿದ್ದ ಯಮುನಕ್ಕನಿಗೆ ಅಂದದ ಮನೆ ಕಟ್ಟಿಸಿಕೊಟ್ಟ ಪುಣ್ಯಾತ್ಮ Padmaraj Ramaiah  ಅಣ್ಣ ಮತ್ತು ಅವರ ಗುರುಬೆಳದಿಂಗಳು ಟ್ರಸ್ಟ್‌ನ ಔದಾರ್ಯವನ್ನು ಕೊಂಡಾಡಿ ದಣಿಯದು. ಈ ಪ್ರಯತ್ನಕ್ಕೆ ಕೈಜೋಡಿಸಿದ ಪಡೀಲಿನ ಮಡಿಲು ಸೇವಾ ಟ್ರಸ್ಟ್ (ರಿ.) ಇದರ ಅಧ್ಯಕ್ಷರಾದ ಪ್ರೀತಿಯ ಅಣ್ಣ ಶ್ರೀ ಗಜೇಂದ್ರ ಪೂಜಾರಿ ಮತ್ತು ಸರ್ವಸದಸ್ಯರಿಗೆ ಹೃತ್ಪೂರ್ವಕ ಧನ್ಯವಾದಗಳು.

ಈ ಸಂದರ್ಭದಲ್ಲಿ ಯಮುನಕ್ಕನ ಮುಖದಲ್ಲಿ ಕಂಡ ನಗು, ತುಂಬಿ ಬಂದ ಕಣ್ಣುಗಳು ನಮ್ಮ ದಾಂಪತ್ಯದ ಬಹುದೊಡ್ಡ ಸೌಭಾಗ್ಯ.‌ ಅದು ಅಕ್ಷಯ ಭಗವದನುಗ್ರಹ.


Share:

More Posts

Category

Send Us A Message

Related Posts

ಬಹರೈನ್ ನಲ್ಲಿ ನಡೆದ ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್ ಇದರ ನೂತನ ಅಧ್ಯಕ್ಷರಾಗಿ ರಾಜ್ ಕುಮಾರ್ ಆಯ್ಕೆ


Share       ಮುಂಬಯಿ, (ಆರ್‌ಬಿಐ) ಜ.೧೧ : ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್ ಇದರ ನೂತನ ಸಮಿತಿಯ ಪದಗ್ರಹನ ಹಾಗೂ ಕರ್ನಾಟಕ ಸಂಗಮ ಸಾಂಸ್ಕೃತಿಕ ಕಾರ್ಯಕ್ರಮ ಬಹರೈನ್ ನ ದಿ ಇಂಡಿಯಾನ್ ಕ್ಲಬ್ ಸಭಾಂಗಣದಲ್ಲಿ


Read More »

ಯುವವಾಹಿನಿ(ರಿ) ಕೂಳೂರು ಘಟಕ ಪದಗ್ರಹಣ ಸಮಾರಂಭದಲ್ಲಿ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಬಿಡುಗಡೆ


Share       ಯುವವಾಹಿನಿ(ರಿ) ಕೂಳೂರು ಘಟಕ ಪದಗ್ರಹಣ ಸಮಾರಂಭದಲ್ಲಿ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ  ಆಮಂತ್ರಣ ಬಿಡುಗಡೆ ಗೆಜ್ಜೆಗಿರಿಯ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಯುವವಾಹಿನಿ ಪದಗ್ರಹಣ ಕಾರ್ಯಕ್ರಮದಲ್ಲಿ ಯುವ ವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಲೋಕೇಶ್


Read More »

26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವಕ್ಕೆ ಪಾಲ್ಗೊಳ್ಳಲು ಕೇಂದ್ರ ಸರಕಾರದಿಂದ ಕೇಶವ ಕೋಟ್ಯಾನ್ ಅವರಿಗೆ ಆಹ್ವಾನ


Share       ಎಲ್ಲರ ಸಹಕಾರದಿಂದ ಸಾಧ್ಯವಾದ ಸಾಧನೆ. 80ನೇ ಬಡಗಬೆಟ್ಟು ವ್ಯಾಪ್ತಿಯಲ್ಲಿ ಮನೆ ಮನೆಗೆ ಕುಡಿಯುವ ನೀರು ಪೊರೈಸುವ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಯನ್ನು ಸಮರ್ಥವಾಗಿ ಅನುಷ್ಠಾನ ಮಾಡುವಲ್ಲಿ ಉಡುಪಿ ಜಿಲ್ಲಾ ಪಂಚಾಯತಿ ಅಧಿಕಾರಿಗಳು, ನಮ್ಮಗ್ರಾಮ


Read More »

ಭರತನಾಟ್ಯದಲ್ಲಿ ವಿಧುಷಿ ಎಂಬ ಗೌರವ ಪಡೆದ ವಿಧುಷಿ ಅದಿತಿ ಪೂಜಾರಿ ಅವರಿಗೆ ಅಭಿನಂದನೆಗಳು


Share       ವಿಧುಷಿ ಅದಿತಿ ಪೂಜಾರಿ ಅವರಿಗೆ ಅಭಿನಂದನೆಗಳು  ನಿತ್ಯಾನಂದ ಮತ್ತು ತುಳಸಿಯವರ ಪುತ್ರಿ ಗುರು ವಿಧುಷಿ ಪ್ರತಿಮಾ ಶ್ರೀಧರ್ ಮತ್ತು ಶ್ರೀಧರ ಹೊಳ್ಳ ಅವರ ಮಾರ್ಗದರ್ಶನದಲ್ಲಿ ಭರತಾಂಜಲಿ (ಆರ್) ಕೊಟ್ಟಾರದಲ್ಲಿ ಕಲಿಕೆ ಅದಿತಿ ಅವರು


Read More »

ಅನಿತಾ ಪಿ.ತಾಕೊಡೆಯವರ ಸುವರ್ಣಯುಗ ಕೃತಿಗೆ ಡಾ. ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನ ಮುಂಬಯಿ ವತಿಯಿಂದ “ವಿಕಾಸ ಪುಸ್ತಕ ಬಹುಮಾನ”


Share       ಮುಂಬಯಿ:- ಹಿರಿಯ ಸಾಹಿತಿ, ಲೇಖಕ, ಪ್ರಾಧ್ಯಾಪಕ ಡಾ.ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನವು ಮುಂಬಯಿ ಕನ್ನಡ ಪುಸ್ತಕ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕೊಡಮಾಡುತ್ತಾ ಬಂದ ಪುಸ್ತಕ ಬಹುಮಾನ ಯೋಜನೆಯಂತೆ 2023-24ರ ಸಾಲಿನ ವಿಕಾಸ’ ಪುಸ್ತಕ ಬಹುಮಾನಕ್ಕೆ,


Read More »

ಒಮಾನ್ ಬಿಲ್ಲವಾಸ್ ಕೂಟದ ನೂತನ ಅಧ್ಯಕ್ಷರಾಗಿ ಶ್ರೀಯುತ ಉಮೇಶ್ ಬಂಟ್ವಾಳ್ ಆಯ್ಕೆ


Share       ಬಂಟ್ವಾಳದವರಾಗಿರುವ ಉಮೇಶ್ ಬಂಟ್ವಾಳ್ ಅವರು ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ಪದವಿಯನ್ನು ಪಡೆದಿದ್ದಾರೆ.   ಮಸ್ಕತ್ ನ ಒಮಾನ್ ದೇಶದಲ್ಲಿ ಸುಮಾರು 36 ವರ್ಷದಿಂದ ಅಲ್ ರ‌‌ವಾಸ್ ಹೋಲ್ಡಿಂಗ್ ಬಿಸಿನೆಸ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ


Read More »