ಬಿಲ್ಲವಾಸ್ ಕತಾರ್ ನ ನೇತೃತ್ವದಲ್ಲಿ ದಿನಾಂಕ ೮.೨.೨೦೨೫ ರಂದು ಎಂ. ಆರ್. ಎ, ಸಲ್ವ ರೋಡ್, ಕತಾರ್, ಔತಣಕೂಟ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಬಿಲ್ಲವಾಸ್ ಕತಾರ್ ನ ಅಧ್ಯಕ್ಷರಾದ ಶ್ರೀ ಸಂದೀಪ್ ಸಾಲಿಯಾನ್ ಅವರನ್ನು ವಿನಯಪೂರ್ವಕವಾಗಿ ಬೀಳ್ಕೊಡಲಾಯಿತು.
ಈ ಬೀಳ್ಕೊಡುಗೆ ಸಮಾರಂಭದ ಆರಂಭವನ್ನು ಬಿಲ್ಲವಾಸ್ ಕತಾರ್ ನ ಸಾಂಸ್ಕ್ರತಿಕ ಕಾರ್ಯದರ್ಶಿ ಪೂಜಾ ಜಿತಿನ್ ಮಾಡಿದರು. ಸ್ವಾಗತ ಭಾಷಣವನ್ನು ಸಂಘದ ಉಪಾಧ್ಯಕ್ಷೆ ಶ್ರೀಮತಿ ಅಪರ್ಣ ಶರತ್ ಅವರು ಮಾಡಿದರು.
ಸರಳ ಸಜ್ಜನಿಕೆಯ, ನಿರಾಡಂಬರ, ಮೃದು ಸ್ವಭಾವದ ಶ್ರೀ ಸಂದೀಪ್ ಸಾಲಿಯಾನ್ ಅವರ ಕತಾರ್ ನ ಜೀವನ ಚರಿತ್ರೆಯನ್ನು ಬಿಲ್ಲವಾಸ್ ಕತಾರ್ ನ ಸಾಂಸ್ಕ್ರತಿಕ ಸಮಿತಿಯ ಸದಸ್ಯರು ಕಿರು ನಾಟಕದ ರೂಪದಲ್ಲಿ ವಹಿಸಿ ಕೊಟ್ಟು ಎಲ್ಲರ ಮನ ಸೂರೆಗೊಂಡರು.
ಬೀಳ್ಕೊಡುಗೆಯ ಸಂದರ್ಭದಲ್ಲಿ ಹಾಜರಿದ್ದ ಐ. ಸಿ. ಸಿ. ಕತಾರ್ ನ ಉಪಾಧ್ಯಕ್ಷರಾದ ಶ್ರೀಸುಬ್ರಹ್ಮಣ್ಯ
ಹೆಬ್ಬಾಗಿಲು, ಬಿಲ್ಲವಾಸ್ ಕತಾರ್ ನ ಮಾಜಿ ಅಧ್ಯಕ್ಷರಾದ ಶ್ರೀ ರಘುನಾಥ್ ಅಂಚನ್, ಸಲಹಾ ಮಂಡಳಿ, ಕಾರ್ಯಕಾರಿ ಮಂಡಳಿ ಮತ್ತು ಸದಸ್ಯರು ಶ್ರೀ ಸಂದೀಪ್ ಸಾಲಿಯಾನ್ ರವರ ಗುಣಗಾನ ಮಾಡಿ, ಬಿಲ್ಲವ ರಥವನ್ನು ಉತ್ತಮ ಪಥದಲ್ಲಿ ಮುನ್ನಡೆಸಿದ ಯಶಸ್ವೀ ನಾಯಕ ಎಂದು ಹೊಗಳಿದರು. ಬಿಲ್ಲವಾಸ್ ಕತಾರ್ ನ ಮಾಜಿ ಉಪಾಧ್ಯಕ್ಷ ಶ್ರೀ ಅಮಿತ್ ಅವರ ವಿಶೇಷ ಉಪಸ್ಥಿತಿ ಕಾರ್ಯಕ್ರ್ರಮಕ್ಕೊಂದು ಮೆರಗು ಕೊಟ್ಟಿತ್ತು.
ಬೀಳ್ಕೊಡುಗೆಗೆ ಉತ್ತರಿಸುತ್ತಾ ಶ್ರೀ ಸಾಲಿಯಾನ್ ರವರು ಉದ್ಯೋಗದ ನಿಮಿತ್ತ ಹತ್ತಿರದ ಕೊಲ್ಲಿ ರಾಷ್ಟ್ರಕ್ಕೆ ವರ್ಗಾವಣೆ ಹೊಂದಬೇಕಾದ ಅನಿವಾರ್ಯತೆಯನ್ನು ವ್ಯಕ್ತ ಪಡಿಸಿ ತನಗೆ ಸಹಕರಿಸಿದ ಎಲ್ಲಾ ಮಹನೀಯರನ್ನು ಹೃತ್ಪೂರ್ವಕವಾಗಿ ನೆನಪಿನಂಗಳದಿಂದಿಳಿಸಿ ಅಭಿನಂದಿಸಿದರು.