ಪುಣೆ : ಫೆ.19,ಬಿಲ್ಲವ ಸಮಾಜ ಸೇವಾ ಸಂಘ (ರಿ) ಪುಣೆ ಇದರ ಆಶ್ರಯದಲ್ಲಿ ಮುಂಬರುವ ಎಪ್ರಿಲ್ ತಿಂಗಳಲ್ಲಿ ನಡೆಯಲಿರುವವಿಶ್ವ ಬಿಲ್ಲವ ಕ್ರಿಕೆಟ್ಪಂದ್ಯಾಟದ ತಯಾರಿಯ ಬಗ್ಗೆ ಎರಡನೇ ಪೂರ್ವಭಾವಿ ಸಭೆಯು ಇಂದು ಫೆ. 19ನೇ ಬುಧವಾರ ಕಾತ್ರಜ್ ನಹೋಟೆಲ್ ಸೃಷ್ಟಿ ಯಲ್ಲಿ ನಡೆಯಿತು. ಪುಣೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ ಕಡ್ತಲ ಇವರನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾರ್ಯಕ್ರಮದ ಮೊದಲಿಗೆ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಪ್ರಯುಕ್ತ ಪ್ರತಿಮೆಗೆಮಾಲಾರ್ಪಣೆಗೈದು ಗೌರವ ಸಲ್ಲಿಸಲಾಯಿತು ವಿಶ್ವ ಬಿಲ್ಲವ ಕ್ರಿಕೆಟ್ ಪಂದ್ಯಾಟದ ಉಸ್ತುವಾರಿ ಅಧ್ಯಕ್ಷರನ್ನಾಗಿ ಕಾರ್ತಿಕ್ ಜಯ ಪೂಜಾರಿಯವರನ್ನು ನೇಮಿಸಲಾಯಿತು ಹಾಗೂ ಇನ್ನಿತರ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
