TOP STORIES:

ವಿದೇಶದ ಇಸ್ರೇಲ್ ನಲ್ಲಿದ್ದು ತುಳುನಾಡಿನ ಸಂಕಷ್ಟದ ಕುಟುಂಬಕ್ಕೆ ಆರ್ಥಿಕ ಶಕ್ತಿ ತುಂಬಿದ ಮಹನೀಯ ವ್ಯಕ್ತಿ ದಿನಕರ ಪೂಜಾರಿ


ನಾನು ನನ್ನವರು ಎಂಬ ಈ ಕಾಲ ಘಟ್ಟದಲ್ಲಿ ಸಮಾನ ಮನಸ್ಕರ ಜೊತೆ  ಸೇರಿ ದುಡಿದದ್ದರಲ್ಲಿ ಸ್ವಲ್ಪ ಪಾಲನ್ನು ಸಮಾಜಕ್ಕಾಗಿ ವಿನಿಯೋಗಿಸುವ ಮಹೋನ್ನತ ಕಾರ್ಯಗೈಯುತ್ತಿರುವ ವ್ಯಕ್ತಿ ದಿನಕರ ಪೂಜಾರಿ.

ವಿದೇಶದಲ್ಲಿದ್ದು ಸಂಕಷ್ಟದ ಕುಟುಂಬಕ್ಕೆ ಆರ್ಥಿಕ ಶಕ್ತಿ ತುಂಬಿದ ಮಹನೀಯ. ಇದಕ್ಕೆ ಕಾರಣ ತಾನು ಬಾಲ್ಯದಲ್ಲಿ ಅನುಭವಿಸಿದ ಕಷ್ಟದ ಅನುಭವಗಳು. ವಿದ್ಯೆ ಪಡೆಯುವ ಹಂಬಲವಿದ್ದರೂ ಆರ್ಥಿಕತೆಯ ಬೆಂಬಲವಿಲ್ಲದೆ ಪರಿತಪಿಸಿದ ಕ್ಷಣಗಳು ಇಂದಿಗೂ ಅವರಿಗೆ ಕಹಿ ನೆನಪು.

ಸಕ್ಕರೆ ಮನಸಿನ ದಿನಕರ್ ಪೂಜಾರಿ ಇವರು ಕಾರ್ಕಳ ತಾಲೂಕಿನ ನಕ್ಕರೆ ಎನ್ನುವ ಗ್ರಾಮದಲ್ಲಿ ಬಾಬು ಪೂಜಾರಿ ಮತ್ತು ಉಮಾವತಿ ಇವರಿಗೆ ಕೊನೆಯ ಮಗನಾಗಿ ಜನಿಸುತ್ತಾರೆ. ಬಾಲ್ಯದಲ್ಲಿ ಒಂದನೇ ತರಗತಿಯಿಂದ ನಾಲ್ಕನೆಯವರೆಗೆ ಪಾಡ್ಯ  ಸ್ಕೂಲ್ ನಲ್ಲಿ ವ್ಯಾಸಂಗ ಮಾಡಿ, 5ನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ನಕ್ರೆ ಸ್ಕೂಲ್ ನಲ್ಲಿ ವ್ಯಾಸಂಗ ಮಾಡಿದರು. ಬಡತನದ ಬೇಗುದಿಯ ಅನುಭವದಿ ಭವಿಷ್ಯದ ಚಿಂತೆಯ ಜೊತೆಗೆ ಓದಿನ ಆಸಕ್ತಿಯಿಂದ 15ನೇ ವಯಸ್ಸಿಗೆ

ಮುಂಬೈಗೆ ಬಂದು ಮುಂಬೈ ಕೆಬಿಎಸ್ ಕಾಲೇಜ್ ನಲ್ಲಿ ವ್ಯಾಸಾಂಗ ಮುಗಿಸಿ, ಭವಿಷ್ಯ ರೂಪಿಸುವ ದೃಢ ನಿರ್ಧಾರದಿಂದ ಕ್ಯಾಂಟೀನ್ ನಲ್ಲಿ ಕೆಲಸಕ್ಕೆ ಸೇರಿ, ಮುಂದೆ ತನ್ನದೇ ಆದ ಸ್ವಂತ ರೆಸ್ಟೋರೆಂಟ್ ಮತ್ತು ಬಾರುಗಳನ್ನು ನಡೆಸಿಕೊಂಡು ಬರುವಷ್ಟರಮಟ್ಟಿಗೆ ಆತ್ಮವಿಶ್ವಾಸ ಬೆಳೆಸಿಕೊಂಡರು.

2009 ನೇ ಇಸವಿಯಲ್ಲಿ ಉದ್ಯೋಗದ ನಿಮಿತ್ತ ಇಸ್ರೇಲ್ ನಲ್ಲಿ ನೆಲೆಸಿ ಫೈನಾನ್ಸ್ ಉದ್ಯೋಗವನ್ನು ಮಾಡುತ್ತಾರೆ. ಇದೀಗ ಅನಿವಾಸಿ ಭಾರತೀಯರಾಗಿದ್ದು, ಇಸ್ರೇಲ್ ನಲ್ಲಿ ತಮ್ಮದೇ ರೀತಿಯಲ್ಲಿ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಎಲ್ಲಾ ಸಂಘ-ಸಂಸ್ಥೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.

ದಾನ ಧರ್ಮ ಅಂತ ಬಂದರೆ ಸರ್ವಧರ್ಮದವರಿಗೂ ದಾನ ಮಾಡುವುದು ಇವರ ದೊಡ್ಡ ಗುಣವಾಗಿದೆ.

ಸುಮಾರು 5 ವರ್ಷಗಳಿಂದ “ಆಶಾಕಿರಣ ಹೆಲ್ಪಿಂಗ್ ಫಂಡ್ ಇಸ್ರೇಲ್” ಎನ್ನುವ ಸಂಘಟನೆ ಮಾಡಿ, ಇಸ್ರೇಲ್ ನಲ್ಲಿರುವ ಸ್ನೇಹಿತರನ್ನು ಸೇರಿಸಿಕೊಂಡು    ಸಂಘಟನೆಯಿಂದ ಸುಮಾರು 50 ಲಕ್ಷದವರೆಗೆ ಭಾರತದಲ್ಲಿರುವ ಅಸಹಾಯಕ ಕುಟುಂಬಗಳಿಗೆ ನೆರವಾಗುವುದರಲ್ಲಿ ಇವರ ಕೊಡುಗೆ ಅವಿಸ್ಮರಣೀಯ.

ಮುಂದೆ 2023ರಲ್ಲಿ ತನ್ನಂತೆ  ಇರುವ 15 ಜನರ ಸಮಾನ ಮನಸ್ಕರನ್ನು ಸೇರಿಸಿಕೊಂಡು ಇಸ್ರೇಲ್  ನಲ್ಲಿ  “ಓಂ ನಾರಾಯಣಗುರು ಹೆಲ್ಪಿಂಗ್ ಗ್ರೂಪ್ ಇಸ್ರೇಲ್” ಎನ್ನುವ ಸಂಸ್ಥೆಯನ್ನು ಸಂಘಟಿಸಿ ಅದರ ಮೂಲಕ 10 ಲಕ್ಷದಷ್ಟು ಭಾರತದಲ್ಲಿರುವ ಸಂಕಷ್ಟ ಕುಟುಂಬಗಳಿಗೆ ಸಹಾಯ ಮಾಡಿರುತ್ತಾರೆ. ಅದೇ ರೀತಿ  ಇಸ್ರೇಲ್ ನಲ್ಲಿ ನೆಲೆಸಿರುವ ತನ್ನ ಊರಿನ ಜನರಿಗೆ ಯಾವ ಕಷ್ಟದ ಸಮಯದಲ್ಲಾದರೂ  ಮನೆಯವರ ರೀತಿ ಸ್ಪಂದಿಸಿ, ಸಹಾಯ ಮಾಡುವ ಇವರ ಗುಣ ಮಹತ್ವದ್ದಾಗಿದೆ.

ಮಡದಿ ಭಾರತಿ ಮತ್ತು ಧನ್ವಿತ್ ಎನ್ನುವ ಒಬ್ಬ ಮಗನಿದ್ದು, ಚಿಕ್ಕದಾದ ಕುಟುಂಬವನ್ನು ಹೊಂದಿದ್ದಾರೆ. ದಿವಾಕರ್ ಸಾಲಿಯಾನ್ ಮತ್ತು ರತ್ನಾಕರ್ ಸಾಲಿಯಾನ್ ಎಂಬ ಇಬ್ಬರು ಸಹೋದರರು, ಶಶಿಕಲಾ ಎನ್ನುವ ಸಹೋದರಿಯಿದ್ದಾರೆ.

ತನ್ನ ಉದ್ಯೋಗದಂದಿಗೆ ಸಾಮಾಜಿಕ ಕಾಳಜಿಯ ಇವರ ಉದಾತ್ತ ಸೇವೆಗಳು ಹಲವಾರು ಕುಟುಂಬಗಳ ಪಾಲಿಗೆ ವರದಾನವಾಗಿದೆ. ಬರಲಿ ಸಂಪತ್ತು ಇವರಿಗೆ ಇನ್ನಷ್ಟು… ಮಾಡಲಿ ಸೇವೆ ಮತ್ತಷ್ಟು….. ಇದೇ ನಮ್ಮ ಆಶಯ.

(Copyrights owned by: billavaswarriors.com )


Related Posts

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »

ಪೂಜಾರಿ ಎಂದು ಗುರುತಿಸಿಕೊಂಡಿರುವವರು ಜನಗಣತಿಯಲ್ಲಿ ಕಡ್ಡಾಯವಾಗಿ ಬಿಲ್ಲವ ಎಂದು ನಮೂದಿಸಿ ಡಾ. ರಾಜಶೇಖರ್ ಕೋಟ್ಯಾನ್


Share         ಮಂಗಳೂರು ಅಗಸ್ಟ್ 18: ಅನೇಕ ಕಡೆ ದೇವಸ್ಥಾನದಲ್ಲಿ ಪೂಜೆ ಮಾಡುವವರೂ ಪೂಜಾರಿ ಎಂದು ಗುರುತಿಸಿಕೊಂಡಿರುವುದರಿಂದ ಈ ಸಲದ ಜನಗಣತಿಯಲ್ಲಿ ನಾವು ʻಜಾತಿ’ ಎಂಬ ಕಾಲಂನಲ್ಲಿ ಕಡ್ಡಾಯವಾಗಿ ʻಬಿಲ್ಲವ’ ಎಂದೇ ನಮೂದಿಸಬೇಕು ಎಂದು ಬಿಲ್ಲವ


Read More »

ಬಿಲ್ಲವ ಸಮಾಜದ ಹೆಮ್ಮೆಯ ಕಣ್ಮಣಿ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಶಾಂತಾರಾಮ್ ಕುಂದರ್


Share         ಬಿಲ್ಲವ ಸಮಾಜದ  ಹೆಮ್ಮೆಯ ಕಣ್ಮಣಿ ದಕ್ಷ, ಧೈರ್ಯ ಪ್ರಾಮಾಣಿಕ ಪೊಲೀಸ್ ಅಧಿಕಾರಿ ನಮ್ಮವರಾಧ ಪೊಲೀಸ್ ಇನ್ಸ್ಪೆಕ್ಟರ್ ಶಾಂತಾರಾಮ್ ಕುಂದರ್ ಅವರ ವೃತ್ತಿಜೀವನದುದ್ದಕ್ಕೂ ಸಾರ್ವಜನಿಕ ಸೇವೆಯ ಕಡೆಗೆ ಅವರ ಅಪಾರ ಸಮರ್ಪಣೆ, ಶಿಸ್ತು, ನಿಷ್ಠೆ


Read More »

ಪುತ್ತೂರು ಕೆಯ್ಯೂರಿನ ಪಿಎಸ್‌ಐ ಪ್ರದೀಪ್ ಪೂಜಾರಿಯವರಿಗೆ ಮುಂಬಡ್ತಿ ಲೋಕಾಯುಕ್ತ ಇನ್ಸ್‌ಪೆಕ್ಟ‌ರ್ ಆಗಿ ನಿಯುಕ್ತಿ..


Share         ಬೆಂಗಳೂರು: ರಾಜ್ಯದಲ್ಲಿ ಸಬ್ ಇನ್ ಪೆಕ್ಟರ್ (ಸಿವಿಲ್)ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 16 ಮಂದಿಗೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾಗಿ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದ್ದು ಕೆಯ್ಯರಿನ ಪ್ರದೀಪ್ ಪೂಜಾರಿಯವರನ್ನು ಪೊಲೀಸ್ ಇನ್ಸ್‌ಪೆಕ್ಟ‌ರ್ ಆಗಿ ಭಡ್ತಿಗೊಳಿಸಿ ಕರ್ನಾಟಕ


Read More »

ವೆನ್ಲಾಕ್‌ನ ಖ್ಯಾತ ಮೂತ್ರರೋಗ ತಜ್ಞ ಡಾ.ಸದಾನಂದ ಪೂಜಾರಿಗೆ ಪ್ರತಿಷ್ಠಿತ ಹೆಲ್ತ್‌ಕೇರ್‌ ಎಕ್ಸಲೆನ್ಸ್‌ ಅವಾರ್ಡ್‌


Share         ಮಂಗಳೂರು: ಕನ್ನಡದ ಜನಪ್ರಿಯ ವಾಹಿನಿ ‘ಏಷ್ಯಾನೆಟ್‌ ಸುವರ್ಣ ನ್ಯೂಸ್’ ಹಾಗೂ ಕನ್ನಡದ ಖ್ಯಾತ ದಿನಪತ್ರಿಕೆ ‘ಕನ್ನಡ ಪ್ರಭ’ ಜಂಟಿಯಾಗಿ ನೀಡುವ ಪ್ರತಿಷ್ಠಿತ ‘ಹೆಲ್ತ್‌ಕೇರ್ ಎಕ್ಸಲೆನ್ಸ್ 2025’ ಅವಾರ್ಡ್‌ಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯ ಖ್ಯಾತ


Read More »