ಬ್ರಹ್ಮ ಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರಕ್ಕೆ ಅವಕಾಶ ನಿರಾಕರಣೆ ಪದ್ಮರಾಜ್ ಆರ್ ಖಂಡನೆ

ಗಣರಾಜ್ಯೋತ್ಸವ ಪರೇಡ್ ಸಂಧರ್ಭದಲ್ಲಿ ಕೇರಳ ಕಳಿಸಿದ್ದ ಬ್ರಹ್ಮ ಶ್ರೀ ನಾರಾಯಣ ಗುರು ಪ್ರತಿಕೃತಿಯನ್ನು ಕೇಂದ್ರ ಸರಕಾರವುತಿರಸ್ಕರಿಸಿ ಬದಲಾಗಿ ಆದಿಶಂಕರಾಚಾರ್ಯರ ಪ್ರತಿಕೃತಿ ಯನ್ನು ಇಡಬೇಕೆಂದು ಸೂಚಿಸಿರುವುದು ಭಾರತದ ಮಹಾನ್ ಸಂತರನ್ನುಕೂಡ ಜಾತೀಯ ತಾರತಮ್ಯದಿಂದ ನೋಡಿದಂತಾಗುತ್ತದೆ,

ಹಾಗೂ ಭಾರತೀಯ ಸನಾತನ ಪರಂಪರೆಗೆ ನಾವು ಅಗೌರವಮಾಡಿದಂತಾಗುತ್ತದೆ. ಮೇಲು ಕೀಳು, ಸ್ಪರ್ಶ ಅಸ್ಪರ್ಶ ಎನ್ನುವ ಜಾತಿ ಭೇಧ ಹಾಗೂ ಮತ ದ್ವೇಷ ತುಂಬಿದ ಸಾಮಾಜಿಕ ವ್ಯವಸ್ಥೆಯಲ್ಲಿ ಹಿಂದೂ ಧರ್ಮದ ಮೂಲ ತತ್ವಗಳಾದ ಉಪನಿಷತ್ತುಗಳು ಹೇಳಿದ ಸಮಾನತೆಯ ನೈಜ್ಯ ಹಿಂದೂ ಧರ್ಮದ ಜ್ಞಾನದ ಬೆಳಕಾಗಿಬ್ರಹ್ಮ ಶ್ರೀ ನಾರಾಯಣ ಗುರುಗಳು ಒಂದೇ ಜಾತಿ ಒಂದೇಧರ್ಮ ಒಂದೇ ದೇವರು ಎನ್ನುವ ತತ್ವವನ್ನು ಜಗಕ್ಕೆ ಸಾರಿದ ಪರಮಗುರುಗಳು. ಶಂಕರಾಚಾರ್ಯರು ಭೋದಿಸಿದ ಅದ್ವೈತ ವನ್ನು ಸಮಾಜದಲ್ಲಿ ಪ್ರಾಯೋಗಿಕವಾಗಿ ಮಾಡಿ ತೋರಿಸಿದವರು ಬ್ರಹ್ಮ ಶ್ರೀನಾರಾಯಣ ಗುರುಗಳು. ಮಹಾನ್ ಆತ್ಮಜ್ಞಾನಿಗಳ ನಡುವೆ ಅವರು ಹುಟ್ಟಿದ ಜಾತಿಯ ಕಾರಣದಿಂದ ಭೇಧಮಾಡುವುದುಖಂಡಿತ ಸರಿಯಲ್ಲ. ಕೋಟ್ಯಾಂತರ ಬ್ರಹ್ಮ ಶ್ರೀ ನಾರಾಯಣ ಗುರುದೇವರ ಅನುಯಾಯಿಗಳ ಭಕ್ತಿ ಮತ್ತು ಭಾವನೆಗಳಿಗೆ ಸರಕಾರಅಗೌರವ ತೋರಿಸಿರುವುದು ವಿಷಾದನೀಯ ಇದನ್ನು ನಾನು ತೀವ್ರವಾಗಿ ವಿರೋಧಿಸುತ್ತೇನೆ. ಕೇಂದ್ರ ಸರಕಾರವು ಬಗ್ಗೆಪುನರ್ಪರಿಶೀಲನೆ ಮಾಡಿ ಬ್ರಹ್ಮಶ್ರೀ ಗುರುದೇವರ ಪ್ರತಿಮೆ ಗಣರಾಜ್ಯೋತ್ಸವ ಪರೇಡ್ ನಲ್ಲಿ ಇರುವಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ.

ಪದ್ಮರಾಜ್ ಆರ್

ಕೋಶಾಧಿಕಾರಿ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ.

Leave a Reply

Your email address will not be published. Required fields are marked *