TOP STORIES:

ಪಂಜುರ್ಲಿ- ವರಾಹ: ಇಸರ ದೇವರ ಕೃಷಿ ಕಾಯಕ


Author Venkatesh Karkera
ಹಿಂದಿನಿಂದ ಕೇಳುತ್ತಾ ಬಂದಿದ್ದ ದೈವದ ಕಥೆಯೊಂದು ಬಹಳ ಸಮಯದಿಂದ ಬಹುವಾಗಿ ಕಾಡುತ್ತಿತ್ತು. ಎಲ್ಲಾ ಮತ- ಪಂಥಗಳಲ್ಲಿ ದೇವರು ಎಂದರೆ ಅತಿಮಾನುಷ ಶಕ್ತಿ, ಸರ್ವಸಮರ್ಥ, ಸರ್ವಜ್ಞ, ಸರ್ವವ್ಯಾಪಿ ಎಂಬೆಲ್ಲ ಕಲ್ಪನೆಗಳಿವೆ. ಆದರೆ ನಮ್ಮ ತುಳು ಜನಪದ ವಿದ್ವಾಂಸರು ಮಾತ್ರ ತುಳುವರ ಇಸರ ದೇವರನ್ನು ಬರೀ ಒಬ್ಬ ಕೃಷಿಕನ ಮಟ್ಟಕ್ಕೆ ಇಳಿಸಿಬಿಟ್ಟಿದ್ದರು. ನಮ್ಮ ಹಿರಿಯರು ತಾವೂ ಕೃಷಿಕರಾಗಿದ್ದ ಕಾರಣದಿಂದ ತಮ್ಮ ದೇವರನ್ನೂ ತಮ್ಮಂತೆಯೇ ಕೃಷಿಕನಾಗಿ ಕಂಡಿದ್ದಾರೆ ಯಾ ಬಿಂಬಿಸಿದ್ದಾರೆ ಎನ್ನುವ ಈ ವಿದ್ವಾಂಸರ ಮಾತು ಕೇಳಿದಾಗೆಲ್ಲಾ ಚಿಕ್ಕಂದಿನಲ್ಲಿ ಓದಿದ್ದ ‘ನಮ್ಮ ಕಲ್ಪನೆಯನ್ನು ಮೀರಲಾಗದ ದೇವರು’ ಎಂಬ ಲೇಖನ ನೆನಪಾಗುತ್ತಿತ್ತು. ಆದರೆ ಯಾಕೋ ಮನಸ್ಸು ಮಾತ್ರ ಇದನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಿತ್ತು. ದೇವರು ಕೃಷಿಕನಾಗಿದ್ದಲ್ಲಿ ಆತ ಯಾವ ಕೃಷಿ ಮಾಡುತ್ತಿದ್ದ? ಎಲ್ಲಿ ಮಾಡುತ್ತಿದ್ದ? ಯಾಕಾಗಿ ಮಾಡುತ್ತಿದ್ದ? ಮನುಷ್ಯಮಾತ್ರರಂತೆ ತಾನೇ ಬೆಳೆ ಬೆಳೆದು ಉಣ್ಣುವ ದೇವರಿಗೆ ಮನುಷ್ಯರಂತೆ ಮರಣವೂ ಇದೆಯೇ? ಎನ್ನುವ ಪ್ರಶ್ನೆಗಳೇ ಕಾಡುತ್ತಿದ್ದವು.
ಇಸರ ದೇವರು ಕೃಷಿಕನಾಗಿ ಕಂಡುಬರುವ ಪಂಜುರ್ಲಿ ದೈವದ ಕಥಾನಕ ಹೆಚ್ಚೂಕಡಿಮೆ (ಪಾಠಾಂತರಗಳಿರುವ ಕಾರಣ) ಈ ರೀತಿ ಸಾಗುತ್ತದೆ. ಇಸರ ದೇವರು ಒಂದು ದಿನ ಬೇಟೆಗೆ ಹೊರಡುವಾಗ ಪತ್ನಿ ಪಾರ್ವತಿಯನ್ನು ಜೊತೆಗೆ ಕರೆದೊಯ್ಯುವ ಅನಿವಾರ್ಯತೆ ಎದುರಾಗುತ್ತದೆ. ಬೇಟೆಯಾಡಿದ ಹಂದಿಗಳ ಮರಿ ಅನಾಥವಾಗುವುದನ್ನು ಕಂಡ ಪಾರ್ವತಿ ಆ ಬಿಳಿಬಣ್ಣದ ಹಂದಿಮರಿಯನ್ನು ( ಇಲ್ಲೂ ಶ್ವೇತವರಾಹನ ಕಲ್ಪನೆಯೇ ಇರುವುದು) ಮನೆಗೆ ತಂದು ಸಾಕುತ್ತಾರೆ. ಪಾರ್ವತಿಯ ಪ್ರೀತಿಪಾತ್ರನಾಗಿ ಬೆಳೆದ ಬಿಳಿಯ ಗಂಡು ಹಂದಿ‌ಮರಿ ಒಂದು ದಿನ ಕಟ್ಟಿದ ಸಂಕಲೆಯನ್ನು ಕಡಿದುಹಾಕಿ ಇಸರ ದೇವರ ಬೆನ್ನಿ (ಕೃಷಿ)ಯನ್ನು ಹಾಳುಮಾಡುತ್ತದೆ. ಕೋಪಗೊಂಡ ಇಸರ ದೇವರು ಹಂದಿಮರಿಯ ತಲೆ ಕಡಿಯುತ್ತಾರೆ. ಮುಂದಕ್ಕೆ ಹೆಂಡತಿಯ ಕಣ್ಣೀರಿಗೆ ಕರಗಿ ಹಂದಿಯನ್ನು ಮತ್ತೆ ಬದುಕಿಸಿ ದೈವವಾಗಿ ಭೂಲೋಕದಲ್ಲಿ ಧರ್ಮಸಂಸ್ಥಾಪನೆ ಮಾಡುವಂತೆ ನಿಯಮಿಸಿ ಕಳಿಸುತ್ತಾರೆ. ಈ ಕಥೆಯೂ ಪುರಾಣಗಳ ಗಣಪತಿಯ ಕಥೆಯನ್ನೇ ಹೋಲುತ್ತದೆ. ಅಲ್ಲಿ ಮೂಡುವಂತಹ ಪ್ರಶ್ನೆಗಳೇ ಇಲ್ಲೂ ಮೂಡುತ್ತವೆ. ಆದರೆ ಉತ್ತರ ಬಹುಶ ಇಲ್ಲಿ ಹೆಚ್ಚು ಸ್ಪಷ್ಟವಾಗಿ ಸಿಗಬಹುದೇನೋ, ಕಾದು ನೋಡೋಣ.
ಮೊದಲನೆಯದಾಗಿ ದೇವರಿಗೆ ಕೃಷಿ ಮಾಡುವ ಅಗತ್ಯವೇನು? ಹಾಗೂ ಒಂದುವೇಳೆ ಹವ್ಯಾಸಿಯಾಗಿ ಮಾಡಿದ್ದು ಅಂತಾದರೂ ಅದಕ್ಕಾಗಿ ಹಂದಿಮರಿಯನ್ನು ಕೊಲ್ಲಬೇಕಿತ್ತೇ? ಕೊಂದ ಹಂದಿಮರಿಯನ್ನು ಬದುಕಿಸಲು ಶಕ್ತನಾದ ದೇವರಿಗೆ ಹಂದಿಮರಿಯನ್ನು ಕೊಲ್ಲುವ ಬದಲಾಗಿ ಹಾಳಾದ ತನ್ನ ಕೃಷಿಯನ್ನೇ ಸರಿಮಾಡಬಹುದಿತ್ತಲ್ಲ? ಪ್ರಶ್ನೆಗಳನ್ನು ನೋಡಿ ಕೆಲವರಿಗೆ ಈಗಾಗಲೇ ಮೈಯೆಲ್ಲಾ ಉರಿಯುತ್ತಿರಬಹುದೇನೋ. ಸ್ವಲ್ಪ ಸೈರಿಸಿಕೊಳ್ಳಿ. ಉತ್ತರ ಕಂಡಾಗ ಸಮಾಧಾನವಾಗಬಹುದು.  ©https://prajnaanambrahmah.wordpress.com
ಮೊದಲಾಗಿ ನಾವು ನೋಡಬೇಕಾದುದು ಬೆನ್ನಿ ಎಂದರೇನು ಎಂಬುದನ್ನು. ಇತ್ತೀಚೆಗೆ ತುಳು ಮಾಧ್ಯಮಗಳಲ್ಲಿ ಇಂತವರು ಧಾರ್ಮಿಕ/ ಜಾನಪದ ಕ್ಷೇತ್ರದಲ್ಲಿ “ಬೆನ್ನಿ ಬೆಂತಿನಾರ್” (ಕೃಷಿ ಮಾಡಿದವರು) ಎನ್ನುವುದನ್ನು ತಾವು ಕೇಳಿರಬಹುದು. ಅದರರ್ಥ ಅವರೆಲ್ಲಾ ಕೃಷಿಕರು, ತಮ್ಮ ಕ್ಷೇತ್ರವನ್ನು ಉತ್ತು, ಬಿತ್ತಿ ಫಸಲು ತೆಗೆದವರು ಎಂದೇ? ಅಲ್ಲ ತಾನೇ? ಬೆನ್ನಿ ಅಂದರೆ ಕೃಷಿಯೇ? ಅಲ್ಲ, ಬೆನ್ನಿ ಎಂದರೆ (ಕಠಿಣ ಯಾ ಪರಿಶ್ರಮದಿಂದ ಕೂಡಿದ) ಕೆಲಸ ಎಂದರ್ಥ. ಹಿಂದೆ ಕೃಷಿಯೇ ಪ್ರಧಾನವಾಗಿದ್ದಾಗ ಬೆನ್ನಿ ಎಂದರೆ ಕೃಷಿಯೇ ಎಂಬ ಅರ್ಥ ಹುಟ್ಟಿರಬಹುದು. ಹಾಗೆಂದು ಇವತ್ತು ಯಾರಾದರೂ ಸಾಹಿತ್ಯಕೃಷಿ ಮಾಡುತ್ತಿದ್ದಾರೆ ಅಂದರೆ ನೇಗಿಲು ಕಟ್ಟಿ ಉಳುತ್ತಿದ್ದಾರೆ ಎಂದರ್ಥವೇ? ಯಾವುದೇ ಕ್ಷೇತ್ರವಿರಲಿ ತನಗೆ ನಿಗದಿಯಾದ ಕೆಲಸವನ್ನು ನಿಷ್ಠೆಯಿಂದ ಮಾಡಿಮುಗಿಸುವುದೇ ಬೆನ್ನಿ ಯಾ ಕೃಷಿ.
ಹಾಗಿದ್ದಲ್ಲಿ ಪಂಜುರ್ಲಿ ಹಾಳು‌ ಮಾಡಿದ್ದು ಯಾವ ಕೃಷಿಯನ್ನು? ರೋಗಿಗೆ ಚಿಕಿತ್ಸೆ ನೀಡುತ್ತಿರುವ ತಜ್ಞ ವೈದ್ಯನೊಬ್ಬನಿಗೆ ವೈದ್ಯಕೀಯ ಕ್ಷೇತ್ರದ ಗಂಧಗಾಳಿಯೂ ಇಲ್ಲದವನೊಬ್ಬ ಹಾಗೆ ಮಾಡು ಹೀಗೆ ಮಾಡು ಎಂದು ಸಲಹೆ ನೀಡಿದರೆ ಏನಾಗಬಹುದು? ವೈದ್ಯ ಕೋಪಗೊಳ್ಳದಿರುವನೇ? ವೈದ್ಯನ ಜಾಗದಲ್ಲಿ ಪೋಲೀಸ್ ಅಧಿಕಾರಿಯೊಬ್ಬನನ್ನು ಊಹಿಸಿಕೊಳ್ಳಿ. ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಕಾರಣಕ್ಕಾಗಿ ಬಂಧನಕ್ಕೂ ಒಳಗಾಗಬಹುದಲ್ಲವೇ? ಹಾಗೆಯೇ ಇಲ್ಲಿ ಬೆನ್ನಿ (ಕೆಲಸ) ಮಾಡುತ್ತಿರುವವನೂ ಸಾಮಾನ್ಯನಲ್ಲ, ಮಾಡುತ್ತಿರುವ ಕೆಲಸವೂ ಸಾಮಾನ್ಯವಲ್ಲ. ಹಾಗೆಂದು ಅಡ್ಡಿಪಡಿಸಿದವನೂ ಸಾಮಾನ್ಯ ಹಂದಿಯಲ್ಲ ಎಂಬುದನ್ನು ಈ ಹಿಂದೆಯೇ ಮಾತನಾಡಿದ್ದೇವೆ. ಹಾಗಿರುವಾಗ ಇಸರ ದೇವರು ತೋರಿಸಿದ ಪ್ರೀತಿಯ ಸಲಿಗೆಯಿಂದ ಆತನ ಕೆಲಸಕ್ಕೆ ಹಂದಿಮರಿ ಅಡ್ಡಿಪಡಿಸಿರಬೇಕೇ ಹೊರತು ಇಸರ ದೇವರ ಗದ್ದೆಯನ್ನೋ ತೋಟವನ್ನೋ ಹಾಳುಮಾಡಿದ್ದಲ್ಲ.
ಇದಕ್ಕೆ ಪೂರಕವಾಗಿ ಇನ್ನೊಂದು ಅಂತಹುದೇ ಸಣ್ಣ ಅಂಶವನ್ನು ನೋಡಿ. ಇಸರ ದೇವರು ಹಂದಿಮರಿಯನ್ನು ಸಂಕಲೆಯಿಂದ ಕಟ್ಟಿರುತ್ತಾರೆ. ಹಂದಿಮರಿ ಸಂಕಲೆಯನ್ನು ತುಂಡರಿಸಿ ಕೃಷಿ ಯಾ ತೋಟವನ್ನು ಹಾಳುಮಾಡುತ್ತದೆ ಎನ್ನಲಾಗುತ್ತದೆ. ಹಂದಿಮರಿಯನ್ನು ಕೊಂದು ಮತ್ತೆ ಬದುಕಿಸಬಲ್ಲ ದೇವರಿಗೆ ಅದನ್ನು ಸಂಕಲೆ ಹಾಕಿ ಬಂಧಿಸುವ ಅಗತ್ಯವಿದೆಯೇ? ಹಾಗಿದ್ದರೆ ಸಂಕಲೆ ಎಂದರೆ ಏನು? ಇಲ್ಲಿ ಸಂಕಲೆಯಿಂದ ಬಂಧಿಸಿರುವುದು ದೇವರು ಅದಕ್ಕೆ ಕೊಟ್ಟ ಕಾರ್ಯವ್ಯಾಪ್ತಿಯನ್ನು ಸೂಚಿಸುತ್ತದೆ. ಸಂಕಲೆಯನ್ನು ತುಂಡರಿಸುವುದು ತನ್ನ ವ್ಯಾಪ್ತಿಯನ್ನು ಮೀರಿ ಕಾರ್ಯವೆಸಗಿದುದರ ಸಂಕೇತ. ತನ್ನ ನಿಗದಿತ ವ್ಯಾಪ್ತಿಯನ್ನು ಮೀರಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿಯಲ್ಲವೇ? “ಗಡು ಕಡತ್ಂಡ ದೇವೆರೆಗ್ ಬುಡ್ತಿನ ಬೋರಿನ್ಲ ಪಿಲಿ ಪತ್ತುಂಡು” ಅನ್ನುವ ವಾಕ್ಯ ನೆನಪಿದೆಯಲ್ಲ? ಪುರಾಣಗಳಲ್ಲಿ ಹೇಗೆ ಕೆಲವೊಂದು ಘಟನೆಗಳನ್ನು ಗುಹ್ಯಭಾಷೆಯಲ್ಲಿ ಹೇಳಲಾಗಿದೆಯೋ ಅದೇ ರೀತಿ ಇಲ್ಲಿ ಕೂಡಾ ಅಂತಹದೇ ಭಾಷೆಯ ಪ್ರಯೋಗಿಸಲಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಹಾಗಾಗಿ ಕೃಷಿಕ, ತೋಟ, ಸಂಕಲೆ ಇವುಗಳೆಲ್ಲ ಏನನ್ನು ಪ್ರತಿಪಾದಿಸುತ್ತಿವೆ ಎಂದು ನೋಡಬೇಕೇ ಹೊರತು ಶಬ್ದಾರ್ಥವನ್ನು ಹಿಡಿದುಕೊಂಡು ಭಾಷಣ ಬಿಗಿಯುವುದಲ್ಲ. ಹಾಗೆ ಮಾಡಿದರೆ ಒಂದೆರಡು ಬಾರಿ ಚಪ್ಪಾಳೆ ಗಿಟ್ಟಿಸಬಹುದು. ಮುಂದಕ್ಕೆ ಯಾರಾದರೂ ಅದನ್ನು ಪ್ರಶ್ನಿಸಿದಾಗ ಮಾತ್ರ ನಗೆಪಾಟಲಿಗೆ ಈಡಾಗುವುದು ಶತಸಿದ್ದ.
ನಾವೇನೋ ಇಷ್ಟು ಹೇಳಿ ಸುಮ್ಮನಾಗಬಹುದು. ಆದರೆ ನಿಮ್ಮಲ್ಲಿ ಕೆಲವರಾದರೂ ಇದು ಕಟ್ಟುಕಥೆ ಎನ್ನಬಹುದೆಂಬ ಅರಿವು ಖಂಡಿತಾ ಇದೆ. ಹಾಗಾಗಿ ತಮಗೆ ಒಂದು ಪ್ರಮಾಣವನ್ನು ತೋರಿಸಿದಲ್ಲಿ ನಂಬಿಕೆ ಬರಬಹುದು. ‘ವ್ಯವಸಾಯ’ ( ಕನ್ನಡದಲ್ಲಿ ಬೇಸಾಯ – ತುಳುವಲ್ಲಿ ಬೆನ್ನಿ ಬೇಸಾಯ) ಎಂಬುದೂ ಭಗವಂತನದೇ ಹೆಸರು. ಸಂಶಯವಿದ್ದಲ್ಲಿ ಭಗವಂತನ ಅತ್ಯುತ್ಕೃಷ್ಟವಾದ ಸಾವಿರ ಹೆಸರುಗಳುಳ್ಳ ವಿಷ್ಣುಸಹಸ್ರನಾಮವನ್ನು ಒಮ್ಮೆ ತಿರುವಿ ನೋಡಿ. ಅಲ್ಲಿ ದೇವರನ್ನು ವ್ಯವಸಾಯ ಎಂದು ಕರೆಯಲಾಗಿದೆ. ಈ ಸಂಪೂರ್ಣ ಸೃಷ್ಟಿಯನ್ನು ಸೃಷ್ಟಿಸಿದವನೂ ಅವನೇ, ನಿಯಾಮಿಸುವವನೂ ಅವನೇ, ಸಮಯ ಬಂದಾಗ ಎಲ್ಲವನ್ನೂ ಪ್ರಳಯರುದ್ರನಾಗಿ ಆಪೋಶನಗೈವವನೂ ಅವನೇ. ಪ್ರತಿಯೊಂದು ಜೀವಿಯ ಪ್ರತಿಕ್ಷಣದ ಬದುಕನ್ನು ನಿಗದಿಯಾದಂತೆ ನಡೆಸುವವನೂ ಅವನೇ. ಹಾಗಾಗಿ ಈ ಸೃಷ್ಟಿಯ ಎಲ್ಲಾ ವ್ಯವಸಾಯಗಳನ್ನು ನೋಡಿಕೊಳ್ಳುವ ವಿಶ್ವದ ಅತಿದೊಡ್ಡ ಕೃಷಿಕನೆಂದರೆ ಆ ಭಗವಂತನೇ. ಹಾಗಾಗಿ ಆತನಿಗೆ ವ್ಯವಸಾಯ ಎನ್ನುವ ಹೆಸರು. ತುಳುವರ ಇಸರ ದೇವರು ಕೃಷಿಕನಾದದ್ದು ಹೇಗೆಂದು ಈಗ ಅರಿವಾಯಿತೇ? ದೈವಾರಾಧನೆಯನ್ನು ಆರಾಧನಾ ದೃಷ್ಟಿಯಿಂದ ನೋಡಬಯಸುವವರು ಬಹುಶ ವಿಷ್ಣುಸಹಸ್ರನಾಮದ ಅಧ್ಯಯನ ಮಾಡಿದಲ್ಲಿ ಬಹಳಷ್ಟು ವಿಷಯಗಳು ಅರ್ಥವಾಗಲಾರಂಭಿಸಬಹುದು. ಈವರೆಗೆ ನಮಗೆ ಸಿಕ್ಕ ಒಂದೆರಡು ವಿಷಯಗಳನ್ನು ಈಗಾಗಲೇ ತಮ್ಮೊಂದಿಗೆ ಹಂಚಿಕೊಂಡಿದ್ದೇವೆ. ತಿಳಿದಿರುವ ಇನ್ನೂ ಕೆಲವು ವಿಷಯಗಳನ್ನು ಮುಂದಕ್ಕೆ ಹಂಚಿಕೊಳ್ಳುವ ಚಿಂತನೆಯಿದೆ. ಅಂದಹಾಗೆ ತುಳುವ ದೈವಾರಾಧಕರು ಸಹಸ್ರನಾಮ ಜಪ ಆರಂಭಿಸಿದರೆ ನಮ್ಮನ್ನು ದೂರದಿರಿ. ನಮಸ್ಕಾರಗಳು.    ©https://prajnaanambrahmah.wordpress.com

ವ್ಯವಸಾಯೋ ವ್ಯವಸ್ಥಾನಃ ಸಂಸ್ಥಾನಃ ಸ್ಥಾನದೋ ಧ್ರುವಃ | ಪರರ್ಧ್ಧಿಃ ಪರಮ ಸ್ಪಷ್ಟಸ್ತುಷ್ಟಃ ಪುಷ್ಟಃ ಶುಭೇಕ್ಷಣಃ ||
– ಶ್ಲೋಕ ೪೨, ವಿಷ್ಣು ಸಹಸ್ರನಾಮ ಸ್ತೋತ್ರ

Post Credit https://prajnaanambrahmah.wordpress.com/

Author Venkatesh Karkera


Related Posts

ನಿರೂಪಣಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಉದಯೋನ್ಮುಖ ಪ್ರತಿಭೆ – ಕೃತಿ ಪೂಜಾರಿ ಮೂಡುಬೆಟ್ಟು


Share           ಸಾಧನೆಯೆಂಬುದು ಯಾರೊಬ್ಬನ ಸೊತ್ತೂ ಅಲ್ಲ, ಅದು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಮುನ್ನಡೆಯುವ ಮನಸು ಮತ್ತು ವ್ಯಕ್ತಿಗಳ ಪಾಲಿನ ವರದಾನ. ಸಾಧನೆಯ ಮನಸ್ಸೆಂಬ ಸಸಿಗೆ ಸತತ ನೀರೆರೆದು ಪೋಷಿಸಿ, ಶ್ರಮವನ್ನು


Read More »

ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ


Share         ಸುರತ್ಕಲ್: ರಂಗಚಾವಡಿ ಮಂಗಳೂರು ಸಾಂಸ್ಕೃತಿಕ ಸಾಂಸ್ಕೃತಿಕ ಸಂಘಟನೆ ಮತ್ತು ಸುಭಾಷಿತನಗರ  ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ನಡೆದ ರಂಗಚಾವಡಿ ರಜತ ಸಂಭ್ರಮ ಮತ್ತು ರಂಗುರಂಗಿನ ರಂಗೋತ್ಸವ ಕಾರ್ಯಕ್ರಮ


Read More »

ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ


Share         ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ   ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ   ಸುರತ್ಕಲ್: ರಂಗಚಾವಡಿ ಮಂಗಳೂರು ಸಾಂಸ್ಕೃತಿಕ ಸಾಂಸ್ಕೃತಿಕ ಸಂಘಟನೆ ಮತ್ತು ಸುಭಾಷಿತನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್


Read More »

ಸ್ವಾಮಿಗಳ ಚಿತ್ರ ಮತ್ತು ಪ್ರತಿಮೆಯ ಮುಂದೆ ರಾಜ್ಯಪಾಲರೊಂದಿಗೆ ಇರುವ ಚಿತ್ರ


Share         ಶಿವಗಿರಿ: ರಾಜ್ಯಪಾಲ ಆರ್.ವಿ. ಅರ್ಲೆಕ್ಕರ್ ಅವರು ರಾಜಭವನದ ಅತಿಥಿ ಕೊಠಡಿಯಲ್ಲಿ ಶ್ರೀ ನಾರಾಯಣ ಗುರುಗಳ ಚಿತ್ರ ಮತ್ತು ಕಂಚಿನ ಪ್ರತಿಮೆಯನ್ನು ಸ್ವಾಮಿಗಳಿಗೆ ತೋರಿಸಿದರು. ಅತಿಥಿ ಕೊಠಡಿಯನ್ನು ಪ್ರವೇಶಿಸುವಾಗ ಮೊದಲು ನೋಡುವುದು ಗುರುಗಳ ಚಿತ್ರ.


Read More »

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಬಿಡುಗಡೆ


Share         ಅ.26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಹಿತ್ಯ ಚರ್ಚೆ ಮುಂಬಯಿ, ಅ.23-  ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ


Read More »

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ


Share         ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ “A study on N-Covering


Read More »