ಮಂತ್ರಾಕ್ಷತೆ ಸಿಕ್ಕಿದ ಬಳಿಕ ಅದನ್ನು ಏನು ಮಾಡಬೇಕು?
ನಮಗೆಲ್ಲಾ ತಿಳಿದಿರುವ ಹಾಗೆ ಅಯೋಧ್ಯೆಯ ರಾಮಮಂದಿರದ ಮಂತ್ರಾಕ್ಷತೆ ದೇಶದ ಪ್ರತಿಯೊಂದು ಹಿಂದೂವಿನ ಮನೆ ತಲುಪಿದೆ ಇನ್ನು ಕೆಲವು ಮನೆಗೆ ತಲುಪಬೇಕಿದೆ. ಮಂತ್ರಾಕ್ಷತೆ ಸಿಕ್ಕಿದ ಬಳಿಕ ಅದನ್ನು ನಾವು ಈಗಲೇ ಉಪಯೋಗ ಮಾಡುವಂತಿಲ್ಲ. ಜನವರಿ 22ನೇ ತಾರಿಕಿನ ವರೆಗೆ ತಮ್ಮತಮ್ಮ ದೇವರ ಸ್ಟಾಂಡ್ ಲ್ಲಿ ಅಥವಾ ದೇವರಕೋಣೆಯಲ್ಲಿ ಇಡಬೇಕು. ದಿನನಿತ್ಯ ದೇವರಿಗೆ ಪೂಜೆ ಮಾಡುವಾಗ ಆ ಮಂತ್ರಾಕ್ಷತೆಗೂ ಪೂಜೆ ಸಲ್ಲಿಸಬೇಕು.
ಇದೇ ಜನವರಿ 22 ಸೋಮವಾರ ಮಧ್ಯಾಹ್ನ 12 ಘಂಟೆ 29 ನಿಮಿಷ 08 ಸೆಕೆಂಡು, ಮೇಷಲಗ್ನದಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿ ನಮ್ಮೆಲ್ಲರ ಆರಾಧ್ಯಮೂರ್ತಿ ಶ್ರೀ ರಾಮಚಂದ್ರನ ಭವ್ಯ ಮೂರ್ತಿಯ ಪ್ರಾಣಪ್ರತಿಷ್ಠೆ ನಡೆಯುತ್ತದೆ. ಆ ಬಳಿಕ ಆ ಮಂತ್ರಾಕ್ಷತೆಗೆ ದಿವ್ಯ ಶಕ್ತಿ ಪ್ರಾಪ್ತವಾಗುತ್ತದೆ. ಆ ಬಳಿಕ
1. ಬೆಯ್ಯುತ್ತಿರುವ ಅಕ್ಕಿಯೊಡನೆ ಈ ಮಂತ್ರಾಕ್ಷತೆಯನ್ನು ಹಾಕಿ ಅದನ್ನು ಅನ್ನವಾಗಿ ಪರಿವರ್ತಿಸಿ ಸೇವಿಸಬಹುದು..
2 ಮಂತ್ರಾಕ್ಷತೆಯನ್ನು ಮನೆಯವರೆಲ್ಲಾ ಹಂಚಿಕೊಂಡು ಶ್ರದ್ಧೆಯಿಂದ ತಲೆಗೆ ಹಾಕಿಕೊಳ್ಳಬಹುದು..
3. ಪಾಯಸ ಮಾಡಿ ಸೇವಿಸಬಹುದು..
4. ನಮ್ಮ ಹಣ, ಚಿನ್ನ ಇಡುವ ಡ್ರಾಯರಲ್ಲಿ ಅಥವಾ ಕಾಪಾಟಿನಲ್ಲಿ ಅದನ್ನು ಭದ್ರವಾಗಿ ಇಡಬಹುದು..
5. ಮನೆಯ ಎದುರಿನ ಬಾಗಿಲಿನ ಮೇಲೆ ಬಟ್ಟೆಯಲ್ಲಿ ಸುತ್ತಿ ಅತ್ಯಂತ ಭದ್ರವಾಗಿ ಕಟ್ಟಿ ಇಡಬಹುದು..
6. ದೇವರ ಕೋಣೆಯಲ್ಲಿ ಕೂಡ ಭದ್ರವಾಗಿ ಶ್ರದ್ಧೆಯಿಂದ ಇಟ್ಟುಕೊಳ್ಳಬಹುದು…