ಬಂಟ್ವಾಳ: ಯುವವಾಹಿನಿ(ರಿ.) ಮಾಣಿ ಘಟಕದ 2025-26 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ದಿನಾಂಕ 10-03-2025 ರ ಸೋಮವಾರದಂದು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದ ನೂತನ ನಿವೇಶನದಲ್ಲಿ ಜರುಗಿತು.
ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶ್ರೀ ಗೋಕರ್ಣಾಥೇಶ್ವರ ಕ್ಷೇತ್ರ,ಕೂದ್ರೋಳಿ ಇದರ ಕೋಶಾಧಿಕಾರಿಯಾದ ಶ್ರೀಯುತ ಪದ್ಮರಾಜ್ ಆರ್ ಪೂಜಾರಿ , ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಆದರ್ಶದಂತೆ ಎಲ್ಲರ ಜೊತೆಗೂಡಿ,ಎಲ್ಲ ಸಮಾಜದವರನ್ನು ಗೌರವಿಸಿ ಒಟ್ಟುಗೂಡಿಸಿ ಮುನ್ನಡೆಯಾಗಬೇಕು.ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಸಮಾನವಾಗಿ ನಾವು ಕಾಣಬೇಕು ಎಂದು ಹೇಳುತ್ತ,ಘಟಕದ ನೂತನ ತಂಡಕ್ಕೆ ಶುಭ ಹಾರೈಸುತ್ತ,ಮುಂದಿನ ದಿನಗಳಲ್ಲಿ ಘಟಕದ ಹಿರಿಮೆಯು ಇನ್ನಷ್ಟು ಎತ್ತರಕ್ಕೆ ಬೆಳೆಯುವಂತೆ ನೀವೆಲ್ಲರೂ ಶ್ರಮಿಸಬೇಕೆಂದು ಹೇಳಿದರು.
ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಘಟಕದ ಈ ಬಾರಿಯ ಚುನಾವಣಾಧಿಕಾರಿಯಾದ ಶ್ರೀ ರವಿಚಂದ್ರ ಬಾಬಣಕಟ್ಟೆ ರವರು ಈ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಎಲ್ಲ ಪದಾಧಿಕಾರಿಗಳನ್ನು ಆಹ್ವಾನಿಸಿದರು,ತದನಂತರ ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ರವರು ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಘಟಕದ ನೂತನ ಅಧ್ಯಕ್ಷರಾಗಿ ಶಿವಾರಾಜ್ ಪಿ ಆರ್,ಉಪಾಧ್ಯಕ್ಷರಾಗಿ ಗಣೇಶ್ ಸಾಯಿ ಹಾಗೂ ಸುಜಿತ್ ಅಂಚನ್,ಕಾರ್ಯದರ್ಶಿಯಾಗಿ ದೀಪಕ್ ಪೆರಾಜೆ,ಕೋಶಾಧಿಕಾರಿಯಾಗಿ ಸಚಿನ್ ಪೆರಾಜೆ,ಜೊತೆ ಕಾರ್ಯದರ್ಶಿಯಾಗಿ ಪ್ರಜ್ಞಾ ಎಂ ಹಾಗೂ ವಿವಿಧ ನಿರ್ದೇಶಕರು,ಸಂಘಟನಾ ಕಾರ್ಯದರ್ಶಿಗಳು ಆಯ್ಕೆಯಾದರು.
ಚುನವಣಾಧಿಕಾರಿಯ ನೆಲೆಯಲ್ಲಿ ಈ ವರ್ಷಕ್ಕೆ ಉತ್ತಮ ತಂಡವನ್ನು ಆಯ್ಕೆಯನ್ನು ಮಾಡಿದ ರವಿಚಂದ್ರ ಬಾಬಣಕಟ್ಟೆ ಗೌರವಿಸಲಾಯಿತು. ಘಟಕದ ಒಂದು ವರುಷ ಕಾರ್ಯಕ್ರಮಗಳ ವರದಿಗಳನ್ನು ಒಳಗೊಂಡ ಮಾಣಿಕ್ಯ ಸಂಚಿಕೆಯನ್ನು ಬಿಡುಗಡೆಗೊಳಿಸಿದ ವಕೀಲರಾದ ರಂಜಿತ್ ಮೈರ ರವರು ಘಟಕವು ಕಳೆದ ಒಂದು ವರುಷದಲ್ಲಿ ಮಾಡಿದ ಕಾರ್ಯಕ್ರಮಗಳನ್ನು ಶ್ಲಾಘಿಸಿ,ಮುಂದಿನ ತಂಡಕ್ಕೆ ಶುಭ ಹಾರೈಸಿದರು. ಸಂಚಿಕೆಯ ಸಂಪದಕರಾದ ಪುಷ್ಪಶ್ರೀ ನಾಗೇಶ್ ರವರನ್ನು ಘಟಕದ ಅಧ್ಯಕ್ಷರು ಗೌರವಿಸಿದರು.ರಂಗಭೂಮಿ,ವೈದ್ಯಕೀಯ,ಶೈಕ್ಷಣಿಕ,ದೇಶ ಸೇವೆ,ಸಾಮಾಜಿಕ ಕ್ಷೇತ್ರ ಸಾಧನೆಗೈದ ವಿವಿಧ ಸಮಾಜದ ಬಾಂಧವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ಈ ಸಾಲಿನಲ್ಲಿ ಕರ್ನಾಟಕ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಶ್ರೀ ಲೋಕಯ್ಯ ಶೇರ ಗೌರವಿಸಲಾಯಿತು.
ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಲೋಕೇಶ್ ಕೊಟ್ಯಾನ್ ಹಾಗೂ ಮಾಜಿ ಅಧ್ಯಕ್ಷರಾದ ಹರೀಶ್ ಪೂಜಾರಿ ರವರನ್ನು ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಘಟಕದ ಸದಸ್ಯೆಯಾದ ಪದ್ಮಿನಿ ರವರಿಗೆ ವಿದ್ಯಾನಿಧಿ ಯನ್ನು ವಿತರಿಸಲಾಯಿತು ಹಾಗೂ ವಿಶ್ವನಾಥ ಪೂಜಾರಿ ಇವರಿಗೆ ಸ್ಪಂದನ ಮೂಲಕ ಸಹಾಯಧನ ನೀಡಲಾಯಿತು.ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರಾದ ನಾಗೇಶ್ ಪೂಜಾರಿ ಕೊಂಕಣಪದವು ರವರನ್ನು ಸನ್ಮಾನಿಸಲಾಯಿತು,ಕಳೆದ ಸಾಲಿನ ಪದಾಧಿಕಾರಿಗಳಿಗೆ,ಮಾಜಿ ಅಧ್ಯಕ್ಷರುಗಳಿಗೆ ಘಟಕದ ಅಧ್ಯಕ್ಷರ ವತಿಯಿಂದ ಗೌರವಿಸಿದರು. ತದನಂತರ ಕಳೆದ ಒಂದು ವರುಷದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ(ರಿ.) ಮಾಣಿ ಇದರ ಅಧ್ಯಕ್ಷರಾದ ಸುರೇಶ್ ಸೂರ್ಯ,ಪಂಚಾಯತ್ ರಾಜ್ ಇಂಜಿನೀಯರ್ ಉಪವಿಭಾಗ ಬಂಟ್ವಾಳ ಇದರ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ರಾದ ತಾರನಾಥ ಸಾಲ್ಯನ್ ಪಿ,ಕಂಪಾನಿಯೊ ನೆಮ್ಮದಿ ವೆಲ್ ನೆಸ್ ಸೆಂಟರ್ ಪುತ್ತೂರು ಇದರ ಮಾಲಕರಾದ ಕೆ. ಪ್ರಭಾಕರ ಸಾಲ್ಯನ್ ರವರು ಘಟಕದ ಮುಂದಿನ ಅಧ್ಯಕ್ಷರಿಗೆ ಮತ್ತು ತಂಡಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಸೃಜನ ಮಿತ್ತೂರು ರವರು ಪ್ರಾರ್ಥಿಸಿದರು,ಘಟಕದ ಕಾರ್ಯದರ್ಶಿಯಾದ ಶಾಲಿನಿ ಜಗದೀಶ್ ರವರು ಸ್ವಾಗತಿಸಿ,ನೂತನ ಕಾರ್ಯದರ್ಶಿಯಾದ ದೀಪಕ್ ಪೆರಾಜೆ ರವರು ವಂದಿಸಿದರು,ಸದಸ್ಯೆಯರಾದ ರೇಣುಕಾ ಕಣಿಯೂರು,ಜಯಶ್ರೀ ಪ್ರಜ್ಞಾ ಎಂ ರವರು ಕಾರ್ಯಕ್ರಮವನ್ನು ನಿರೂಪಿಸಿದರು.