TOP STORIES:

ಅನಿಶಾ ಪೂಜಾರಿ ಸಾವಿಗೆ ನ್ಯಾಯ ಒದಗಿಸಲು ಹೋರಾಟಕ್ಕೆ ಸಿದ್ದ : ಬಿಲ್ಲವ ಯುವ ವೇದಿಕೆ ಹೇಳಿಕೆ..!


ಬ್ರಹ್ಮಾವರ : ಉಡುಪಿ ಜಿಲ್ಲೆಯ ಸಾಯಿಬ್ರಕಟ್ಟೆ, ಕಾಜ್ರಳ್ಳಿ ಎಂಬಲ್ಲಿನ ನಿವಾಸಿ ಅನಿಶಾ ಜಿ ಪೂಜಾರಿ ಎಂಬ ಹುಡುಗಿಯ ಆತ್ಮಹತ್ಯೆ ಪ್ರಕರಣ ಈಗ ಅನುಮಾನಕ್ಕೆ ಕಾರಣವಾಗಿದೆ. ಹುಡುಗಿಯ ಸಾವಿನ ಪ್ರಕರಣ ಸಮಗ್ರ ತನಿಖೆಗೆ ಬಿಲ್ಲವ ಯುವ ವೇದಿಕೆ ಒತ್ತಾಯಿಸಿದೆ.ಹಾಗೂ ಪ್ರೀತಿಯ ಹೆಸರಿನಲ್ಲಿ ಮೋಸ ಮಾಡಿ ಆತ್ಮಹತ್ಯೆಗೆ ಕಾರಣವಾದ ಹುಡಗನಿಗೆ ತಕ್ಕ ಶಿಕ್ಷೆಯಾಗ‌ಬೇಕೆಂದು ಆತನ ವಿರುದ್ಧ ಬಿಲ್ಲವರ ಸಂಘ ಆಗ್ರಹಿಸಿದೆ.

ಅನಿಶಾ ಜಿ. ಪೂಜಾರಿ ಹಾಗೂ ಸ್ಥಳೀಯ ಚೇತನ್ ಶೆಟ್ಟಿಯ ಪ್ರೇಮಪ್ರಕರಣದ ಕುಮ್ಮಕ್ಕಿನಿಂದ ಮನನೊಂದು ದಿನಾಂಕ-21-08-2020 ರಂದು ಆತ್ಮಹತ್ಯೆ ಮಾಡಿಕೊಂಡಿರುವುದು ವಿಷಾದನೀಯ. ಎಂ.ಬಿ.ಎ ಪದವೀಧರೆಯಾಗಿ,ಕಂಪೆನಿಯೊಂದರಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದ ಅನಿಶಾ ಮತ್ತು ಚೇತನ್ ಶೆಟ್ಟಿಯೊಡನೆ ಪ್ರೀತಿ ಸಂಬಂಧಗಳಿದ್ದು ಇದು ಮದುವೆಯ ವಿಚಾರದವರೆಗೆ ಮುಂದುವರಿದಿತ್ತು.

ಈ ಹಂತದಲ್ಲಿ ಜಾಣತನದಿಂದ ವಿವಿಧ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಚೇತನ್ ಶೆಟ್ಟಿಯೊಡನೆ ಪರಿಪರಿಯಾಗಿ ನಿವೇದಿಸಿಕೊಂಡಿದ್ದರೂ ಆತನ ವಂಚನೆಯ ಬಲೆಗೆ ಸಿಲುಕಿ ಆತನಿಗೇ ಸಂಬಂಧಿಸಿದ ಹಾಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಚೇತನ್ ಶೆಟ್ಟಿಯ ಎಲ್ಲ ವಂಚನೆಗಳ ಬಗೆಗೆ ಸವಿವರ ಡೆತ್ ನೋಟ್‌ ಮತ್ತು ಮೊಬೈಲ್ ಸಂಭಾಷಣೆ ಸಿಕ್ಕಿದ್ದು, ಈ ಪ್ರಕರಣಕ್ಕೆ ಚೇತನ್ ಶೆಟ್ಟಿಯ ಮೋಸವೆ ಪ್ರಧಾನ ಕಾರಣವಾಗಿದೆ.

ಕೌಟುಂಬಿಕವಾಗಿ ಬಡತನದ ಹಿನ್ನೆಲೆಯಿರುವ ಅನಿಶಾ ಮನೆಯವರು ಒಂದೆಡೆ ಮನೆ ಮಗಳ ಸಾವಿನ ನೋವು ಮತ್ತೊಂದೆಡೆ ಅನ್ಯಾಯವನ್ನು ಎದುರಿಸುವುದು ಹೇಗೆಂದು ಪರಿತಪಿಸುತ್ತಿರುವ ಸಂದರ್ಭ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಮಾನ್ಯ ಪ್ರವೀಣ್ ಎಂ. ಪೂಜಾರಿ ಯವರನ್ನು ಸಂಪರ್ಕಿಸಿದ್ದಾರೆ.

ತಕ್ಷಣವೆ ಶ್ರೀಯುತರು ಮಾನವೀಯ ದೃಷ್ಟಿ ಮತ್ತು ಸಮಾಜಾಭಿಮಾನದಿಂದ ವೇದಿಕೆಯ ಸದಸ್ಯರೊಡಗೂಡಿ ಬ್ರಹ್ಮಾವರ ಪೋಲಿಸ್ ಉಪನಿರೀಕ್ಷಕರನ್ನು ಖುದ್ದು ಭೇಟಿಯಾದಾಗ, ಈಗಾಗಲೇ ಚೇತನ್ ಶೆಟ್ಟಿಯ ವಿರುದ್ಧ FIR ದಾಖಲಿಸಲಾಗಿದ್ದು, ಪ್ರಕರಣವನ್ನು ಕೂಲಂಕುಷ ವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಅನಿಶಾ ಮನೆಯವರ ಅಸಹಾಯಕತೆಯನ್ನು ಅರಿತಿರುವ ಚೇತನ್ ಶೆಟ್ಟಿ ತನ್ನ ಮುಂದಿನ ವೈಯಕ್ತಿಕ ಮತ್ತು ವೈವಾಹಿಕ ಜೀವನಕ್ಕೆ ಕುಂದು ಬರಬಾರದೆಂದು ಪ್ರಕರಣದಲ್ಲಿ ತಪ್ಪಿಸಿಕೊಳ್ಳಲು ಇನ್ನಿಲ್ಲದ ರಾಜಕೀಯ ಪ್ರಭಾವವನ್ನು ಬಳಸಿ ಕೊಂಡಿರುವುದು ಗಮನಕ್ಕೆ ಬಂದಿದೆ. ಈ ವಿಚಾರದಲ್ಲಿ ನಮ್ಮ ಬಿಲ್ಲವ ಸಮಾಜ ಅನಿಶಾ ಪೂಜಾರಿಯವರ ಪರ ನಿಲ್ಲಬೇಕಾಗಿದೆ.

ಚೇತನ್ ಶೆಟ್ಟಿಯಂತಹ ದುಷ್ಟರಿಂದ ಇನ್ನಷ್ಟು ಅಮಾಯಕ ಹೆಣ್ಣು ಮಕ್ಕಳು ಶೋಷಣೆಗೊಳಗಾಗು ವುದನ್ನು ತಪ್ಪಿಸಲು ಅತ್ಯವಶ್ಯ ಜಾಗೃತರಾಗಬೇಕಿದೆ. ಹಾಗೂ ಅಸಹಾಯಕರಾದ ಅನಿಶಾ ಪೂಜಾರಿಯ ಮನೆಯವರಿಗೆ ನ್ಯಾಯ ದೊರಕಿಸಲು ಸಮಸ್ತ ಸಮಾಜ ಸಂಘಟಿತ ಧ್ವನಿಯಾಗುವಂತೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಬಯಸುತ್ತದೆ. ಹಾಗೂ ಈ ಪ್ರಕರಣದಲ್ಲಿ ತಪ್ಪಿತಸ್ಥನಿಗೆ ಶಿಕ್ಷೆಯಾಗಲೇಬೇಕೆಂಬ ನಿಟ್ಟಿನಲ್ಲಿ ಅಗತ್ಯ ಕಾನೂನಿನ ನೆರವಿನೊಡನೆ ಅಮಾಯಕರ ಪರವಾದ ಯಾವುದೇ ಹೋರಾಟಕ್ಕೂ ಪ್ರವೀಣ್ ಪೂಜಾರಿ ಮುಂದಾಳತ್ವದ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಹಗಲಿರುಳು ಸಿದ್ಧವಿದೆ ಎಂದು ಹೇಳಿಕೆ ನೀಡಿದ್ದಾರೆ.


Related Posts

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »