TOP STORIES:

ತುಳುನಾಡಿನ ಹೆಮ್ಮೆಯ ಪುತ್ರ,ಸೇವಾ ಮಾಣಿಕ್ಯ ನಿರಂಜನ್ ಕರ್ಕೇರ.


ಮಂಗಳೂರು ಬಜ್ಪೆಯ ಪೊರ್ಕೋಡಿ ದಿವಂಗತ ಶ್ರೀ ಲಕ್ಷ್ಮಣ ಮತ್ತು ಪದ್ಮಾವತಿ ದಂಪತಿಗಳ ಮುದ್ದಿನ ಎರಡನೇ ಮಗನಾಗಿಹುಟ್ಟಿದ ಇವರು ತನ್ನ ವಿದ್ಯಾಭ್ಯಾಸ ಹಿರಿಯ ಪ್ರಾಥಮಿಕ ಶಾಲೆ ಪೊರ್ಕೋಡಿ, ಕೆಂಜಾರು, ಪ್ರೌಢ ಶಿಕ್ಷಣವನ್ನು ಬಾಳ ಕಳವಾರಿನಲ್ಲಿಓದಿರುತ್ತಾರೆ.ನಂತರ ಶಿಕ್ಷಣವನ್ನು ಮೊಟಕುಗೊಳಿಸಿ ಕಷ್ಟದ ದಿವಸದಲ್ಲಿ ಜೀವನಕ್ಕಾಗಿ ಭವಾನಿ ಡೆಂಟಲ್ ಲ್ಯಾಬ್ ನಲ್ಲಿ ಕೆಲಸಕ್ಕೆಸೇರಿಕೊಂಡರು ಅದಾದ ನಂತರ ಮುಂಬೈಯಲ್ಲಿ ಎರಡು ವರ್ಷಗಳ ದುಡಿದರು ನಂತರ ಬೆಂಗಳೂರಿನಲ್ಲಿ ದುಡಿದರು. ಕೇವಲ ತನ್ನಸ್ವಾರ್ಥಕ್ಕಾಗಿ ಅಲ್ಲದೆ ಪರರ ಕಷ್ಟಗಳಿಗೆ ಸ್ಪಂದಿಸಿ ತನ್ನ ಕೈಲಾದಷ್ಟು ಯಾರಿಗೂ ತಿಳಿಯದ ರೀತಿಯಲ್ಲಿ ಸಹಾಯ ಮಾಡುತ್ತಾಬಂದಿರುವ ಇವರು ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ತನ್ನ ಮುಖಪುಟದಲ್ಲಿ ಇವರು  ಯಾರಾದರೂ ಸಮಾಜ ಸೇವೆಯಲ್ಲಿ, ಕ್ರೀಡೆಯಲ್ಲಿ , ಹಾಡುಗಾರಿಕೆ, ಸಾಹಿತ್ಯ,  ಬರಹಗಾರರು ಇದ್ದರೆ  ಅವರಿಗೆ ಸ್ಪೂರ್ತಿ ತುಂಬಿ ಅಭಿನಂದನೆ ಸಲ್ಲಿಸುತ್ತಾರೆ ಪ್ರೋತ್ಸಾಹ ನೀಡುತ್ತಾರೆ.

ತನ್ನಿಂದ ಏನಾದರೂ  ಸಮಾಜಕ್ಕೆ ಕಿಂಚಿತ್ತೂ ಒಳ್ಳೆಯ ಕೆಲಸ ಮಾಡುವುದಕ್ಕಾಗಿ ರಕ್ತದಾನ,(9ಬಾರಿ ರಕ್ತದಾನ )ಅಂಗಾಂಗ ದಾನ, ಮಾಡುವುದಾಗಿ ಮತ್ತು ಇದರ ಬಗ್ಗೆ ಜನ ಜಾಗ್ರತಿ ಮೂಡಿಸಿದ್ದಾರೆ. ಮುಗ್ದ ಮನಸ್ಸಿನ ನಿರಂಜನ್ ಇವರಿಗೆ ಬೆನ್ನೆಲುಬಾಗಿ ನಿಂತವರುಅಣ್ಣ, ಅಮ್ಮ ಹಾಗೂ ಅವರ  ಧರ್ಮ ಪತ್ನಿ.  ಹೆಮ್ಮೆಯ ವಿಷಯವೆಂದರೆ ತುಳು ಭಾಷೆಯ  ಬಗ್ಗೆ ಎಲ್ಲಿಲ್ಲದ ಒಲವು. ಇವರುನಾಗಬ್ರಹ್ಮಸ್ಥಾನ ಇದರ ಅಧ್ಯಕ್ಷರು ಹಿಂದೂ ಯುವ ಸೇನೆ ಪೇಜಾವರ ಶಾಖೆ, ಸಂಘಟನಾ ಕಾರ್ಯದರ್ಶಿ, ಜೈ ತುಳುನಾಡ್ (ರಿ.) ಸದಸ್ಯರು , ಬಿರುವೆರ್ ಕುಡ್ಲ  ಬಜ್ಪೆ ಘಟಕದ  ( ರಿ.),ಸದಸ್ಯರು   ಯಕ್ಷ ಮಿತ್ರರು ಪೊರ್ಕೋಡಿ (ರಿ )ಸದಸ್ಯರು  ಕೇಸರಿ ಯುವ ಶಕ್ತಿಬೆಂಗಳೂರು (ರಿ ) ಸದಸ್ಯರು, ಯುವವಾಹಿನಿ ಬಜ್ಪೆ ಘಟಕ ಸದಸ್ಯರು ಹೀಗೆ ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ.* *ಅನೇಕ ಕಡೆ ಸನ್ಮಾನವನ್ನು ಸ್ವೀಕರಿಸಿದ ಇವರಿಗೆ ಇನ್ನಷ್ಟು ಸನ್ಮಾನಗಳು ಇವರ ಮುಡಿಗೇರಲಿ .(ಕರ್ನಾಟಕ ತುಳು ಸಾಹಿತ್ಯಅಕಾಡಮಿ ಪುಗರ್ತೆದ ಓಲೆ,)ಮುಂದಿನ ಕನಸು  ಸಮಾಜಸೇವೆಯೇ ಮುಂದಿನ ಗುರಿ. ಇಷ್ಟು ಮಾತ್ರ ಅಲ್ಲದೆ ನಾಟಕದಲ್ಲಿಪಾತ್ರವನ್ನು ನಿರ್ವಹಿಸಿ ತನ್ನಲ್ಲು ಪ್ರತಿಭೆ ಇದೆ ಎಂದು ತೋರಿಸಿದ್ದಾರೆ.(ಬೈಲ ಕುರಲ್, ಪೊಣ್ಣು ಏರ್?, ದಾಯೆ ಪಾತೆರುಜಾ? ಗೊತಾವರೇ ಬಲ್ಲಿ, ಬಂಗಾರ್ ಬಾಬು ) ಇನ್ನೂ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಒಂದಷ್ಟು ವರ್ಷಗಳ ಕಾಲ ಆಟೋ, ಟ್ಯಾಕ್ಸಿಮಾಲಕರಾಗಿದ್ದರು. ಪ್ರಸ್ತುತ  ಮಂಗಳೂರು ಏರ್ಪೋರ್ಟ್  ಇಂಡಿಯನ್ ಆಯಿಲ್ ಸ್ಕೈ ಟ್ಯಾಂಕಿಂಗ್ ಪ್ರೈವೇಟ್ ಕಂಪನಿಯಲ್ಲಿ 7 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗೆ ತನ್ನ ಜೀವನವನ್ನು ಸಮಾಜ ಒಳಿತಿಗಾಗಿ ಮುಡಿಪಾಗಿರುವ ನಿರಂಜನ್ ಇವರಿಗೆದೇವರ ಅನುಗ್ರಹ ಸದಾ ಇರಲಿ, ಇನ್ನಷ್ಟು ಸೇವೆ ಮಾಡಲು ಅವಕಾಶ ಸಿಗಲಿ ಭಗವಂತ ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿನಿಮ್ಮ ಕನಸು ನನಸಾಗಲಿ ಶುಭವಾಗಲಿ.

ಬರಹ :✍️ ಪ್ರಶಾಂತ್ ಅಂಚನ್ ಉಡುಪಿ (ಮಸ್ಕತ್ತ್)


Related Posts

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »