TOP STORIES:

“ನಿತಿನ್ “ರವರ ಕನಸಿನ ದಾರಿಗೆ “ಚರಿತ್ರೆ”ಯ ಹೊಂಬೆಳಕು..! ಚರಿತ್ರೆಯ ಬೆನ್ನೇರಿದ ಹಳ್ಳಿಹೈದನ_ಯಶೋಗಾಥೆ… ನಿತಿನ್ ಪೂಜಾರಿ


ಕಷ್ಟಗಳು ಬಂದಿವೆ ಎಂದು ಕಂಡ ಕನಸನ್ನು ಬಿಡಬಾರದು. ಇವತ್ತಿನ ದಿನ ಕಷ್ಟಕರವಾಗಿರಬಹುದು.
ನಾಳೆ ಅದಕ್ಕಿಂತ ಕೆಟ್ಟದಾಗಿರಬಹುದು.ಆದರೆ ಮುಂದೊಂದು ದಿನ ಎಲ್ಲವೂ ಸುಖಮಯವಾಗಿರುತ್ತೆ.”
ಪುಟ್ಟ ಹಕ್ಕಿಯೊಂದು ಕಂಡಿದ್ದು ಹಾರುವ ಕನಸಲ್ಲ.ತನ್ನ ಧ್ವನಿಯಲ್ಲೇ ಆಕಾಶದೆತ್ತರಕ್ಕೂ ರುಜುಮಾಡಬೇಕೆಂದು.

ಊಟಕ್ಕೂ ಹಣವಿಲ್ಲದೆ, ಹಸಿವಿನಿಂದ ಸಿಲಿಕಾನ್ ಸಿಟಿಯ ಬಸ್ಸ್ಟ್ಯಾಂಡ್ ಒಂದರಲ್ಲಿ ಕೂರುತ್ತಾನನ್ನಿಂದ ಏನೂ ಸಾಧ್ಯವಿಲ್ಲಎಂದುಕಣ್ಣೀರು ಸುರಿಸಿದ್ದಲ್ಲ. ಹೊಸಹೆಜ್ಜೆಗಳ ಸವೆಯಲು ದಾರಿ ಸೃಷ್ಟಿಸಿದ್ದು.

ಅದೆಷ್ಟು ಬಾರಿ ತನ್ನಿಷ್ಟದ ನಿರೂಪಣೆಗಾಗಿ ವೇದಿಕೆಗಾಗಿ ಪರದಾಡಿ ಎಲ್ಲರಿಂದಲೂ ತಿರಸ್ಕಾರಗೊಂಡರೂ ಕುಗ್ಗಿದ್ದಲ್ಲ.

ಅದೇ ಧ್ವನಿಗಾಗಿ ತಾನೇಚರಿತ್ರೆಎಂಬ ಅಸ್ತ್ರವನ್ನು ಜ್ಞಾನದ ಬತ್ತಳಿಕೆಯಲ್ಲಿ ಇರಿಸಿ, ಅನುದಿನ  ಪ್ರಯತ್ನವೆಂಬ ದೀಪದಿಂದಆರಾಧಿಸಿ ಸತತ ಮೂರು ವರ್ಷಗಳ ನಿರಂತರ ತಪಸ್ಸಿನ ಫಲವಾಗಿಚರಿತ್ರೆಎಂಬ ಯುಟ್ಯೂಬ್ ಚಾನೆಲ್ ಮೂಲಕ ತನ್ನಧ್ವನಿಯಿಂದಲೇ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದವರುನಿತಿನ್ ಪೂಜಾರಿ ಶಿರ್ಲಾಲ್ಇವರು.

ಶ್ರೀ ಮನೋಹರ್ ಪೂಜಾರಿ ಮತ್ತು ಪ್ರಭಾವತಿ ಇವರ ಪುತ್ರರಾಗಿ ಉಡುಪಿ ಜಿಲ್ಲೆಯ, ಕಾರ್ಕಳ ತಾಲೂಕಿನ ಶಿರ್ಲಾಲ್ ನಲ್ಲಿ ಜನಿಸಿದಇವರು  ಬಾಲ್ಯದಿಂದಲೂ ಪ್ರತಿಭಾನ್ವಿತರು.

ನಾಟಕ, ಭಾಷಣ, ಕ್ರೀಡೆ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಎತ್ತಿದ ಕೈ.

ತನ್ನ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಅಂಡಾರ್ ಹಾಗೂ ಶಿರ್ಲಾಲ್ ನಲ್ಲಿ  ಮುಗಿಸಿ, ಪದವಿಪೂರ್ವ ಶಿಕ್ಷಣವನ್ನು ಕಾರ್ಕಳದಬೋರ್ಡ್ ಹೈಸ್ಕೂಲ್ನಲ್ಲಿ ಮತ್ತು ಬಿ. ಎಸ್. ಸಿ ಪದವಿಯನ್ನು ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ ಇಲ್ಲಿ ಮುಗಿಸಿದರು.

ತನ್ನಿಷ್ಟದಪತ್ರಿಕೋದ್ಯಮವನ್ನು ಕಲಿಯಬೇಕು ಎಂಬ ಕನಸಿದ್ದರು ತಾನೇ ರಜಾದಿನಗಳಲ್ಲಿ ಹಗಲಿರುಳು ಗಾರೆಕೆಲಸ ಮಾಡಿಸಂಪಾದಿಸಿದ  ಹಣದಿಂದ ಕಾಲೇಜಿನ ಶುಲ್ಕ ತೀರಿಸಲು ಸಾಧ್ಯವಾಗದೆ ಬಿ. ಎಸ್. ಸಿ ಗೆ ಸೇರಿದರೂಗುರಿಯೊಂದೇನಿರೂಪಕನಾಗುವುದು.”

ಅಂದಿನಿಂದಲೇ ವಿಭಿನ್ನ ಶೈಲಿಯಲ್ಲಿ ತನ್ನದೇ ಸಾಲುಗಳಿಗೆ ಧ್ವನಿಯಾಗಲು ಮೊದಲ ಹೆಜ್ಜೆ ಇಟ್ಟರು.

2015-16 ರಲ್ಲಿಕರಾವಳಿ ಕನ್ನಡದಲ್ಲಿ ದುಡಿಯುತ್ತಾರೆ.

ನಂತರ ಮಂಗಳೂರಿನ “tv7” ಚಾನೆಲ್ನಲ್ಲಿ ಸಂದರ್ಶನಕ್ಕೆ ತೆರಳುತ್ತಾರೆ. ಕನ್ನಡ ಟೈಪಿಂಗ್ ಬರದ ಕಾರಣ ಅವರನ್ನು  ಮತ್ತೆನಿರಾಕರಿಸುತ್ತಾರೆ.

ಆದರೂ ಹಠಬಿಡದೆ ಧ್ವನಿ ನೀಡಲು ಅವಕಾಶ ಕೇಳಿದಾಗ ಸಿಕ್ಕ ಒಂದು ಅವಕಾಶ ಮತ್ತೆ ಅವರನ್ನು ಛಲಬಿಡದೆ ಸ್ವರಲೋಕದಲ್ಲಿಸಂಚರಿಸಲು ಸ್ಫೂರ್ತಿ ತುಂಬುತ್ತದೆ.

ತಾನು ಯಾವುದರಲ್ಲಿ ದುರ್ಬಲ ಎಂದೆನಿಸುತ್ತೋ ಎಲ್ಲವನ್ನು ಹಗಲಿರುಳೆನ್ನದೆ ವಿದ್ಯೆಯನ್ನಾಗಿ ಸ್ವೀಕರಿಸಿ ತನ್ನನ್ನು ತಾನುಹೊಸಬದುಕಿನ ಯುದ್ಧಕ್ಕೆ ಸಜ್ಜುಗೊಳಿಸುತ್ತಾರೆ.

ಹಳ್ಳಿಯ ಬದುಕನ್ನೇ ಸ್ವರ್ಗವೆನ್ನುತ್ತಾ ನೋವಲ್ಲು ನಲಿವನ್ನು ಕಾಣುತ್ತಾ,ತನ್ನವರು ತನಗಾಗಿ ಹೆಗಲುಕೊಡದಿದ್ದರೂಎಲ್ಲರೂ  ನನ್ನವರುಎಂಬ ಹೃದಯವಂತಿಕೆಯ ಹೊತ್ತು ಕನಸಿನ ಬೆನ್ನೇರಿಬೆಂಗಳೂರು ತಲುಪಿ  2017-18 ರಲ್ಲಿಸುದ್ದಿ ಟಿವಿ ಬೆಂಗಳೂರುಇಲ್ಲಿ ಜರ್ನಲಿಸ್ಟ್ ಆಗಿ ಉದ್ಯೋಗಕ್ಕೆ ಸೇರಿಕೊಳ್ಳುತ್ತಾರೆ.

ಕೈಗೆಟುಕದ ಸಂಭಾವನೆಯಿಂದ ಒಂದು ಹೊತ್ತಿನ ಊಟಕ್ಕೂ ಹಣವಿಲ್ಲದಿದ್ದಾಗ ತನ್ನ ಕಷ್ಟ ಸಹೋದ್ಯೋಗಿಗಳಿಗೆ ತಿಳಿಯಬಾರದೆಂದುಊಟದ ಸಮಯದಲ್ಲಿ ಬಸ್ಸ್ಟ್ಯಾಂಡ್ ನಲ್ಲಿ ಕುಳಿತು ಹಸಿವನ್ನು ಸಾಧನೆಯ ಬುತ್ತಿಗಾಗಿ ಕಾದಿರಿಸಿ ಮೌನವಾಗಿ ಮತ್ತೆ ಕೆಲಸಮುಂದುವರೆಸಿದ ಕ್ಷಣ ಎಂತವರನ್ನು ಒಂದು ಕ್ಷಣ ಭಾವುಕರರನ್ನಾಗಿ ಮಾಡುತ್ತದೆ.

ಸಾಧನೆ ಮಾಡಲು ಅಡಿಯಿಟ್ಟವನಿಗೆ ಬಡತನ, ಕಷ್ಟ, ಹಣ ಎಂದಿಗೂ ಅಡ್ಡಿಪಡಿಸಲಿಲ್ಲ . ಬದಲಾಗಿ ಕಠಿಣ ಶ್ರಮ, ಸತತ ಪ್ರಯತ್ನ, ನಿರಂತರ ಶ್ರದ್ಧೆಯ ಮೂಲಕವೇ ಜೀವನದಲ್ಲಿ ಯಶಸ್ಸಿನ ಬೆನ್ನತ್ತಿದರು.ಹೀಗಾಗಿ ಜೀವನದಲ್ಲಿ ಎದುರಾಗುವ ಸವಾಲು, ಸಮಸ್ಯೆಗಳನ್ನುಧೈರ‍್ಯವಾಗಿ ಎದುರಿಸಿ, ಅವುಗಳನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಸಾಧನೆಯ ಕಡೆಗೆ ಮುಖಮಾಡಿದರು ನಮ್ಮ ನಿತಿನ್ ಪೂಜಾರಿಅವರು.

ಮುಂದೆಪವರ್ ಟಿವಿಯಲ್ಲಿ  ದುಡಿಯುವ ಸಂದರ್ಭದಲ್ಲಿ ಪಬ್ಲಿಕ್ ಟಿವಿ ಯಲ್ಲಿ ಕಾರ್ಯನಿರ್ವಹಿಸುತಿದ್ದವಿನೋದ್ಅವರಪರಿಚಯವಾಗುತ್ತೆ.

ಇಬ್ಬರು ಅಕ್ಕಪಕ್ಕದ ರೂಮ್ನಲ್ಲಿ ಇದ್ದುದ್ದರಿಂದ ಒಮ್ಮೆವಿನೋದ್ರವರು ನಿತಿನ್ ಅವರ ಧ್ವನಿಯನ್ನು ಮೆಚ್ಚಿ ನಾವು ಯಾಕೆ ಒಂದುಯುಟ್ಯೂಬ್ ಚಾನೆಲ್ ಮಾಡಬಾರದು? ಎನ್ನುತ ಹೊಸಹೆಜ್ಜೆಗೆ ನಾಂದಿ ಹಾಡುತ್ತಾರೆ.

2020 ರಲ್ಲಿ ಗೆಳೆಯರಿಬ್ಬರೂ ಸೇರಿಚರಿತ್ರೆಎಂಬ ಚಾನೆಲ್ ಮಾಡಿ ಅದರ ಮೂಲಕ ಕನ್ನಡದ ಇತಿಹಾಸದಲ್ಲೇ ಮೊಟ್ಟಮೊದಲಬಾರಿಗೆ ಜಗತ್ತು ನಿಬ್ಬೆರಗಾಗುವ ಅದೆಷ್ಟೋ ವಿಚಾರಗಳನ್ನು ಪ್ರಸ್ತುತ ಪಡಿಸುತ್ತಾರೆ.

ನಿತಿನ್ ತನ್ನೆಲ್ಲ ವಿಚಾರಧಾರೆಗೆ ಅಕ್ಷರಗಳನ್ನು ಪೋಣಿಸಿ ತಾನೇ ಧ್ವನಿಯಾದರೆ ವಿನೋದ್ ರವರು ವಿಭಿನ್ನ ಶೈಲಿಯಲ್ಲಿ ಸಂಕಲನ ನೀಡಿಜೀವ ತುಂಬುತ್ತಾರೆ.

ಇವರಿಬ್ಬರ ಪರಿಶ್ರಮಕ್ಕೆ ಅದೇ ವರ್ಷದಲ್ಲಿ 2ಲಕ್ಷ ಚಂದಾದಾರರನ್ನು ಪಡೆಯುತ್ತಾರೆ.

2021 ರಲ್ಲಿಚರಿತ್ರೆಗೆ ದೇಶದ ಮೂಲೆಮೂಲೆಯಲ್ಲಿರುವ ಕನ್ನಡಿಗರು ಜಯಭೇರಿ ಕೂಗುತ್ತಾ ಆಗಲೇ ಮಿಲಿಯನ್ ಗಡಿದಾಟಿಸಿಯಶಸ್ಸುಎಂಬ ಮರೀಚಿಕೆಯನ್ನು ಕೊನೆಗೂ ಅನುಭವಿಸಲು ಅನುವುಮಾಡಿದ್ದರು.

ಅದನ್ನೇ ಉದ್ಯೋಗವನ್ನಾಗಿ ಮುಂದುವರೆಸುತ್ತ ತಮ್ಮ ಊರುಗಳಲ್ಲೆಚರಿತ್ರೆ ಕಛೇರಿಯನ್ನು ಸ್ಥಾಪಿಸಿ ಹಗಲಿರುಳೆನ್ನದೆ   ಕಾರ್ಯಪ್ರವೃತರಾದರು ಛಲಬಿಡದ ಯುವಕರು.

ಮುಂದೆ ನಿತಿನ್ ಹೊಸ ಹೊಸ ಪ್ರಯತ್ನ ಮುಂದುವರೆಸುತ್ತಇನ್ಸ್ಟಾಗ್ರಾಮ್ನಲ್ಲಿ ಕನ್ನಡ ಭಾಷೆಯಲ್ಲಿ ಮೊದಲ ಬಾರಿಗೆಸ್ಫೂರ್ತಿದಾಯಕ ನುಡಿಗಳನ್ನು ಆಡುವ ವಿಡಿಯೋ ಮಾಡಿ ಹೊಸಭಾಷ್ಯ ಬರೆಯುತ್ತಾರೆ.

ಅಲ್ಲೂ ಅವರು ತನ್ನ ಧ್ವನಿ ಜನರಿಗೆ ಇಷ್ಟವಾಗುತ್ತಿಲ್ಲವೊ ಎಂದು ಒಮ್ಮೆಯೂ ಕುಗ್ಗಲಿಲ್ಲ.ದಿನನಿತ್ಯ ತನ್ನ ಪಾಲಿನ ಕೆಲಸವನ್ನು ತೃಪ್ತಿಯಿಂದ ಮಾಡುತ್ತ ಹೋದರು.

ಅವರ ಸ್ಫೂರ್ತಿದಾಯಕ ಮಾತುಗಳಿಂದ ಬದುಕನ್ನು ಬದಲಾಯಿಸಿದವರೆಷ್ಟೋ, ಅವರನ್ನೇ ಆದರ್ಶವಾಗಿಟ್ಟುಕೊಂಡು  ತಾವೇಧ್ವನಿಯಾಗುತ್ತ ಅಂತದ್ದೇ ಚಾನೆಲ್ ಗಳನ್ನು ಆರಂಭಿಸಿ ಯಶಸ್ಸಿನ ದಾರಿಹಿಡಿದವರೆಷ್ಟೋ..!

ಏನೇ ಇರಲಿ.

ಆಕಾಶದೆಡೆಗೆ ನೋಡಿ, ಯಾರೂ ಒಂಟಿಯಾಗಿಲ್ಲ.

ಇಡೀ ವಿಶ್ವವು ನಮಗೆ ಸ್ನೇಹಪರವಾಗಿದೆ.

ಕನಸು ಕಂಡು ಕೆಲಸ ಮಾಡುವವರಿಗೆ ಬಯಸಿದ್ದೆಲ್ಲವೂ ಸಿಕ್ಕೇ ಸಿಗುತ್ತೆ  ಎಂಬುದಕ್ಕೆ ನಿತಿನ್ ಪೂಜಾರಿ ಅವರ ಯಶೋಗಾಥೆ ಸತ್ಯನಿದರ್ಶನ!

ಚರಿತ್ರೆಯೂಟ್ಯೂಬ್ನಲ್ಲಿ ಇಂದು 1.07ಮಿಲಿಯನ್ ಚಂದಾದಾರರು, ಇನ್ಸ್ಟಾಗ್ರಾಮ್ ನಲ್ಲಿ 2.23 ಲಕ್ಷ ಅಭಿಮಾನಿಗಳು, ಮೋಜ್ಆಪ್ ನಲ್ಲಿ 1.2 ಮಿಲಿಯನ್ ಅಭಿಮಾನಿಗಳಿದ್ದಾರೆ.

ಇದೆಲ್ಲವೂ ಸಾಧ್ಯವಾಗಿದ್ದುಪ್ರಯತ್ನಎಂಬಪಯಣದಿಂದ ಅಷ್ಟೇ..

ಯಾನ ಬದುಕಿನುದ್ದಕ್ಕೂ ಸಾಗಲಿ.

ಬದುಕು ಕಡಲ ನಾವೆಯಲ್ಲಿ ಸಾಯುವವರೆಗೂ ಸಾಧಿಸಬೇಕೆನ್ನುವ ಹಂಬಲದ ನಿತಿನ್ ಪೂಜಾರಿ ಇವರಿಗೆ ಇನ್ನಷ್ಟು ಯಶಸ್ಸು ಸಿಗಲಿ.

ಅದೆಷ್ಟೋ ದೊಡ್ಡ ವೇದಿಕೆಗಳು ಇವರ ಸಾಧನೆಯನ್ನು ಗೌರವಿಸಿ ಲೋಕಕ್ಕೆ ಸ್ಫೂರ್ತಿಯಾಗಲು ಅವಕಾಶ ನೀಡಲಿ.

ಬರಹಃ ಚೈತ್ರ ಕಬ್ಬಿನಾಲೆ


Related Posts

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »