TOP STORIES:

ಫ್ರೆಂಡ್ಸ್ ಬಲ್ಲಾಳ್ ಬಾಗ್ “ಬಿರುವೆರ್ ಕುಡ್ಲದ ” ಉದಯಣ್ಣ ಓರ್ವ ವ್ಯಕ್ತಿಯಲ್ಲ ಸಮಾಜದ ಶಕ್ತಿ..


ಒಂದೇ ಜಾತಿ ಒಂದೇ ಮತ ಒಂದೇ ದೇವರುಎಂಬ ನೀತಿ ಸಂದೇಶವನ್ನು ವಿಶ್ವಕ್ಕೆ ಸಾರಿದ ಜಗದ್ಗುರು ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶವನ್ನು ಪಾಲಿಸಿಕೊಂಡು ಜನ ಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಕರುಣೆ ಮಮತೆಯ ದೀವಿಗೆಯಾಗಿ ಸಮಾಜಸೇವೆಯನ್ನೇ ತನ್ನ ಉಸಿರಾಗಿಸಿಕೊಂಡು ಪರರ ನೋವು ನಲಿವುಗಳಿಗೆ ಧ್ವನಿಯಾಗಿ ಕಷ್ಟ ಎಂದು ಕಂಬನಿ ಮಿಡಿಯುವ ಮನಗಳಿಗೆಅವರ ಕಣ್ಣೀರೋರೆಸಿ ಮನ  ಮನೆಯಲ್ಲಿ ನಂದಾದೀಪ ಬೆಳಗಿಸಿದವೇ ನಮ್ಮ ಪ್ರೀತಿಯ ಬಿರುವೆರ್ ಕುಡ್ಲ ಸಂಘಟನೆಯ ರೂವಾರಿಉದಯ ಪೂಜಾರಿ ಬಲ್ಲಾಳ್ ಬಾಗ್.

ಆಡಡೆಲೆ ಮಾಡುವವನು ರೂಢಿಯೊಳಗುತ್ತಮಎನ್ನುವ ಸರ್ವಜ್ಞನ ಸಾರದಂತೆ ಯಾವುದೇ ಸದ್ದುಗದ್ದಲವಿಲ್ಲದೆ ಸಮಾಜದಸೇವೆಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟವರು. ಮಾತ್ರವಲ್ಲದೆ ಸಮಾಜ ಒದಗಿಸಿರೋ ಅವಕಾಶವನ್ನು ಸಮಾಜದ ಸೇವೆಗಾಗಿಮೀಸಲಾಗಿಟ್ಟವರು.

ಬಿರುವೆರ್ ಕುಡ್ಲ ಸ್ಥಾಪನೆಯಾಗಿ 7ವರ್ಷ ಕಳೆದಿಲ್ಲ ಆದರೆ ಕಡಿಮೆ ಅವಧಿಯಲ್ಲಿ ಮಹತ್ತರವಾದ ಸೇವೆಯ ಮುಖೇನ ಸುಮಾರು20 ಘಟಕಗಳನ್ನು ಸ್ಥಾಪಿಸಿ  ಕೋಟ್ಯಾತರ ರೂಪಾಯಿ ಮೊತ್ತದ  ಸಹಾಯಹಸ್ತವನ್ನು ಸಮಾಜದ ಬಡ ಜನರಿಗಾಗಿ ನೀಡಿರುವುದುಮಾತ್ರವಲ್ಲದೆ ಕೊರೊನಾ ಮಹಾಮಾರಿಯಿಂದ ಜನತೆ ತತ್ತರಿಸುತ್ತಿರುವ ಸಂಧರ್ಭದಲ್ಲಿ ಲಕ್ಷಾಂತರ ರೂಪಾಯಿ ಮೊತ್ತದ ಆಂಬುಲೆನ್ಸ್ನ್ನು ಜನರ ಸೇವೆಗಾಗಿ ನೀಡಿದ್ದು ಒಂದು ದಾಖಲೆಯೇ ಸರಿ. ಇಂತಹ ಸಮಾಜಮುಖಿ ಚಿಂತನೆಯ ಫ್ರೆಂಡ್ಸ್ ಬಲ್ಲಾಳ್ ಬಾಗ್ಬಿರುವೆರ್ ಕುಡ್ಲ ಸಂಘಟನೆಯ  ಕೀರ್ತಿ,  ಶ್ರೇಯಸ್ಸನ್ನು ಕಂಡು ಕೆಲವರಿಗೆ ಸಹಿಸಲಾಗಲಿಲ್ಲವೋ ಏನೋ, ಅದಕ್ಕಾಗಿಯೇ ಸಂಚುರೂಪಿಸಿ ಸಂಘಟನೆಯ ಹೆಸರಿಗೆ ಕಪ್ಪು ಚುಕ್ಕಿ ತರುವ ಪ್ರಯತ್ನ ಮಾಡುತ್ತಿರುವುದು ಅವರ ಕೀಳು ಮನಸ್ಥಿತಿಯನ್ನು ಎತ್ತಿತೋರಿಸುತ್ತದೆ.

ನಿಟ್ಟಿನಲ್ಲಿ ಶರಣ್ ಪಂಪ್ ವೆಲ್ ಅವರು ಬಿರುವೆರ್ ಕುಡ್ಲದ ಸಾಧನೆ  ಸೇವೆ ಕಣ್ಣಿಗೆ ಬಿದ್ದರೂ ಅರಗಿಸಿಕೊಳ್ಳಲಾಗಲ್ಲಿವೇನೋಅನಿಸುತ್ತಿದೆ. ಶರಣ್ ಅಣ್ಣ ನಿಮ್ಮ ಹಿಂದೂಪರ ಹೋರಾಟದ ಬಗ್ಗೆ ನಮಗೆ ತುಂಬಾ ಅಭಿಮಾನ ಹೆಮ್ಮೆ ಇತ್ತು.. ಗೌರವ ಇತ್ತು.. ಆದರೆಈಗ ನೀವು ಬಿರುವೆರ್ ಕುಡ್ಲ ಸಂಘಟನೆಯ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ ಪ್ರತಿಭಟಿಸುದನ್ನು ಕಂಡು ಅದೆಲ್ಲವನ್ನೂಕಳೆದಕೊಂಡಿರಿ..

ಒಂದು ಜಾತಿ ಧರ್ಮ, ಸಮುದಾಯವನ್ನು ಮೀರಿ ಬೆಳೆದು ನಿಂತು ಎಲ್ಲಾ ಸಮಾಜದ ಪ್ರೀತಿಗೆ ಪಾತ್ರರಾದ ಬಿರುವೆರ್ ಕುಡ್ಲಸಂಘಟನೆಯ ಬಗ್ಗೆ ಅನವಶ್ಯಕವಾಗಿ ಆರೋಪ ಮಾಡಿದ ಹಿನ್ನಲೆಯಲ್ಲಿ  ಅದರ ಹಿಂದಿರುವ ಕಾಣದ ಕೈಗಳ ಕೈವಾಡಖಂಡಿತವಾಗಿಯೂ ಒಂದಲ್ಲ ಒಂದು ದಿನ ಜನರ ಮುಂದೆ ಬರುತ್ತದೆ.

ಪಂಪ್ ವೆಲ್ ರವರೆ ಒಮ್ಮೆ ಯೋಚಿಸಿ ಶುಭ ಮಂಗಳ ಕಾರ್ಯದ ಸಮಯದಲ್ಲಿಉದಯಣ್ಣ ಸ್ಥಾನದಲ್ಲಿ ನೀವಿರುತ್ತಿದ್ದರೆಹೇಗಾಗುತ್ತಿತ್ತು!!!!!!!! ಎಂದು. ಕನಿಷ್ಠ ಮಾನವೀಯತೆಯನ್ನೂ ಮರೆತು ನೀವು ರೀತಿ ಮಾಡುತ್ತಿರುವುದು ಬಿರುವೆರ್ ಕುಡ್ಲಸಂಘಟನೆ ಮಾತ್ರವಲ್ಲ ಲಕ್ಷಾಂತರ ತುಳು ಕನ್ನಡಿಗ ಉದಯಣ್ಣನ ಅಭಿಮಾನಿ ಬಳಗಕ್ಕೆ ಅತೀವ ನೋವಾಗಿದೆ.

ಶರಣ್ ರವರೆ,…. ಹಣ ಅಧಿಕಾರ ಅಂತಸ್ತು ಯಾವುದೂ ಶಾಶ್ವತವಲ್ಲ ಆದರೇ ಎಲ್ಲಕ್ಕಿಂತ ಮಿಗಿಲಾದುದು ಮಾನವೀಯತೆ, ಮಾನವೀಯ ಮೌಲ್ಯಗಳುಅದನ್ನು ತುಳಿದು ನಡೆಯಬೇಡಿ….

ನಮ್ಮಂತಹ ನೂರಾರು ಜನರಿಗೆ ನಿಮ್ಮ ಮೇಲೆ ಗೌರವ ಅಭಿಮಾನ ವಿತ್ತು ಆದರೆ ಅರ್ಹತೆಯನ್ನು ನಿಮ್ಮ ಕೀಳುಮಟ್ಟದರಾಜಕಾರಣದಿಂದ ಮಣ್ಣುಪಾಲು ಮಾಡಿದಿರಿ.. ಎಲ್ಲದಕ್ಕೂ ಭಗವಂತ ಹಾಗೂ ತುಳುನಾಡಿನ ಸತ್ಯಗಳು ನಿಮಗೆ ಒಳ್ಳೆಯ ಬುದ್ದಿನೀಡಲಿ ಎಂದು ಆಶಿಸುತ್ತೇವೆ.

ಉದಯಣ್ಣ ಸತ್ಯಕ್ಕೆ ಜಯವಿದೆ.

ನಿಮ್ಮೊಂದಿಗೆ ನಾವಿದ್ದೇವೆ

ಪ್ರೀತಿ ಅಭಿಮಾನ ಗೌರವ ಅನವರತ….

ಜೈ ಬಿರುವೆರ್ ಕುಡ್ಲ ಜೈ ಉದಯಣ್ಣ..

✒️ಪ್ರಭಾಕರ ಬೆಳುವಾಯಿ

(ನಮನ ಫ್ರೆಂಡ್ಸ್ ಮುಂಬಯಿ)


Related Posts

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »