TOP STORIES:

ಬಿಲ್ಲವ, ಈಡಿಗ, ನಾಮಧಾರಿ, ನಾಯ್ಕ ಸೇರಿದಂತೆ ಸುಮಾರು 26 ಪಂಗಡಗಳಿಗೆ ರಾಜ್ಯ ಸರ್ಕಾರ ಎಂದು ಭಾವಿಸಿದೆ: ಬಿಲ್ಲವ ಮುಖಂಡ ಪದ್ಮರಾಜ್ ಆರ್‌‌.


ಬಿಲ್ಲವ, ಈಡಿಗ, ನಾಮಧಾರಿ, ನಾಯ್ಕ ಸೇರಿದಂತೆ ಸುಮಾರು 26 ಪಂಗಡಗಳಿಗೆ ರಾಜ್ಯ ಸರ್ಕಾರ ಹೊಸತಾಗಿ ಸ್ಥಾಪಿಸಲು ಆದೇಶನೀಡಿರುವ, ‘ಬ್ರಹ್ಮಶ್ರೀ ನಾರಾಯಣಗುರು ಕೋಶವನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಅವರು ವಿರೋಧಿಸಿದ್ದು,‘ರಾಜ್ಯದ ಬಿಜೆಪಿ ಸರ್ಕಾರ ಬಿಲ್ಲವ ಸಮುದಾಯವನ್ನು ಮೂರ್ಖರು ಎಂದು ಭಾವಿಸಿದಂತಿದೆಎಂದುಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಅವರು, “ರಾಜ್ಯದ ನಾಲ್ಕನೇ ಅತೀ ದೊಡ್ಡ ಸಮುದಾಯವಾದ, ಸುಮಾರು 70 ಲಕ್ಷಜನಸಂಖ್ಯೆ ಇರುವ ಬಿಲ್ಲವಈಡಿಗ ಸಮುದಾಯಕ್ಕೆ ಒಂದು ನಿಗಮ ಸ್ಥಾಪಿಸಲು ಸರ್ಕಾರಕ್ಕೆ ಇರುವ ಸಮಸ್ಯೆ ಏನು? ಇದು ಸರ್ಕಾರಕ್ಕೆಬಿಲ್ಲವ ಸಮುದಾಯದ ಮೇಲೆ ಇರುವ ತಾತ್ಸಾರ ಭಾವನೆ ಅಲ್ಲದೆ ಮತ್ತೇನು?” ಎಂದು ಕೇಳಿದರು.

ಬಿಲ್ಲವ ಸಮುದಾಯಕ್ಕೆ ನಿಗಮ ಸ್ಥಾಪಿಸಬೇಕು ಎಂದು ಆರು ವರ್ಷದಿಂದ ಹೋರಟ ಮಾಡುತ್ತಿದ್ದೇವೆ. ತೀರಾ ಕಡಿಮೆ ಜನಸಂಖ್ಯೆಇರುವ ಹಲವು ಹಿಂದುಳಿದ ಸಮುದಾಯಕ್ಕೆ ನಿಗಮಗಳನ್ನು ಸ್ಥಾಪಿಸಲಾಗಿದೆ, ಬಗ್ಗೆ ನಮಗೆ ತಕರಾರು ಏನಿಲ್ಲ. ಅದರ ಜೊತೆಗೆಆರ್ಥಿಕವಾಗಿ ಬಲಿಷ್ಠರಾಗಿರುವ ಒಕ್ಕಲಿಗ, ಬ್ರಾಹ್ಮಣ ಮತ್ತು ಮರಾಠ ಸಮುದಾಯಗಳಿಗೆ ನಿಗಮಗಳಿವೆ. ಆದರೆ ಬಿಲ್ಲವಈಡಿಗಸಮುದಾಯಕ್ಕೆ ಒಂದು ನಿಗಮ ಸ್ಥಾಪಿಸಲು ಸರ್ಕಾರಕ್ಕೆ ಸಮಸ್ಯೆಯೇನಿದೆಎಂದು ಪ್ರಶ್ನಿಸಿದರು.

ಸರ್ಕಾರ ಹೊಸದಾಗಿ ನೀಡಿರುವಕೋಶವನ್ನು ಸ್ಥಾಪನೆ ಮಾಡದೆ ಇದ್ದರೆ ಒಳ್ಳೆಯದಿತ್ತು. ‘ಕೋಶಸ್ಥಾಪನೆ ಎಂಬುವುದು ಚುನಾವಣೆಹತ್ತಿರ ಇರಬೇಕಾದರೆ ಜನರನ್ನು ದಾರಿ ತಪ್ಪಿಸುವ ಒಂದು ದಾರಿಯಷ್ಟೆ. ನಿಗಮಕ್ಕೂ ಕೋಶಕ್ಕು ಬಹಳಷ್ಟು ವ್ಯತ್ಯಾಸವಿದೆ, ಇದರಿಂದಸಮುದಾಯಕ್ಕೆ ಒಂದಿಷ್ಟು ಲಾಭವಿಲ್ಲ ಎಂದು ಪದ್ಮರಾಜ್ ಹೇಳಿದರು.

ನಿಗಮ ಎಂದರೆ ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ಅದಕ್ಕೆ ಒಂದು ಸ್ವಾಯತ್ತತೆ ಇರುತ್ತದೆ. ಅದಕ್ಕೆ ತನ್ನದೇ ಆದ ಕಾನೂನು, ಸಂವಿಧಾನ ಇರುತ್ತದೆ. ನಿಗಮಕ್ಕೆ ಒಬ್ಬ ಅಧ್ಯಕ್ಷರು ಇರುತ್ತಾರೆ, ಸದಸ್ಯರು ಇರುತ್ತಾರೆ, ನಿದೇಶಕರು ಇರುತ್ತಾರೆ. ಇಲ್ಲೆಲ್ಲಾ ಸಮುದಾಯದಪ್ರತಿನಿಧಿಗಳಿದ್ದು, ಇವರೆಲ್ಲಾ ತಮ್ಮ ಪರಿಧಿಯಲ್ಲಿ ಸಮುದಾಯದ ಅಭಿವೃದ್ಧಿಗಾಗಿ ಕೆಲಸ ಮಾಡುವ ಅಧಿಕಾರ ಇರುತ್ತದೆ. ಕೋಶಎಂದರೆ, ನಿರ್ದೇಶನಾಲಯ ಅಡಿಯಲ್ಲಿ ಬರುವ ಒಂದು ಸಣ್ಣ ಅಂಗ ಸಂಸ್ಥೆ ಮಾತ್ರವಾಗಿದೆಎಂದು ಅವರು ತಿಳಿಸಿದರು.

ಕೋಶಕ್ಕೆ ಸರ್ಕಾರದ ಕಡೆಯಿಂದ ಒಬ್ಬ ಅಧಿಕಾರಿ ಇರುತ್ತಾರೆ ಎಂಬುವುದನ್ನು ಬಿಟ್ಟು, ಅಧಿಕಾರಿಗೆ ಕೂಡಾ ಯಾವುದೇ ಅಧಿಕಾರಇರುವುದಿಲ್ಲ. ಎಲ್ಲವನ್ನೂ ತನ್ನ ಮೇಲಾಧಿಕಾರಿಯ ಅಡಿಯಲ್ಲೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸಮುದಾಯವನ್ನುಪ್ರತಿನಿಧಿಸುವ ಒಬ್ಬನೇ ಒಬ್ಬ ಸದಸ್ಯ ಕೋಶದಲ್ಲಿ ಇರುವುದಿಲ್ಲ. ಇದೊಂದು ಹಲ್ಲಿಲ್ಲದ ಹಾವು ಎಂದೇ ಹೇಳಬಹುದುಎಂದುಅವರು ಅಭಿಪ್ರಾಯಪಟ್ಟರು.

ಚುನಾವಣೆ ಹೊತ್ತಿಗೆ ನಾವು ಹಿಂದುಳಿದ ವರ್ಗಗಳಿಗೆಏನೋನೀಡಿದ್ದೇವೆ ಎಂದು ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಕೇವಲ ಬಿಲ್ಲವಸಮಾಜಕ್ಕೆ ಮಾತ್ರವಲ್ಲ, ಸಮಸ್ತ ಹಿಂದುಳಿದ ವರ್ಗಗಳನ್ನು ಮತ್ತೇ ಹಿಂದುಳಿಯುವಂತೆ ಮಾಡುವ ಎಲ್ಲಾ ಪ್ರಯತ್ನಗಳು ನಡೆಯುತ್ತಲೆಇವೆ. ಸರ್ಕಾರ ಹೊಸದಾಗಿ ರಚಿಸಲಿರುವ ಕೋಶವು ನಿಗಮಗಳು ಮಾಡುವ 2% ಕೆಲಸಗಳನ್ನು ಮಾಡುವುದಿಲ್ಲಎಂದು ಅವರುಅಸಮಾಧಾನ ವ್ಯಕ್ತಪಡಿಸಿದರು.

ಕೋಶಕ್ಕೆ ಅನುದಾನ ನೀಡುತ್ತೇವೆ ಎಂದು ಸರ್ಕಾರ ಹೇಳಿದೆ, ಆದರೆ ಎಷ್ಟು ನೀಡುತ್ತೇವೆ ಎಂದು ಇನ್ನೂ ಹೇಳಿಲ್ಲ ಎಂದು ಹೇಳಿದಪದ್ಮರಾಜ್, “ನನ್ನ ಪ್ರಕಾರ ಹೆಚ್ಚೆಂದರೆ 10 ರಿಂದ 15 ಕೋಟಿ ನೀಡಬಹುದು. ಆದರೆ ನಿಗಮಗಳಿಗೆ ಕಡಿಮೆಯೆಂದರೂ 100-200 ಕೋಟಿ ನೀಡಬೇಕಾಗುತ್ತದೆ. ಒಂದು ವೇಳೆ ಕೋಶಕ್ಕೆ 100 ಕೋಟಿ ಕೊಡುತ್ತೇವೆ ಎಂದರೂ ಅದನ್ನು ಸಮುದಾಯದ ಅಭಿವೃದ್ಧಿಗೆಸುಲಭದಲ್ಲಿ ಖರ್ಚು ಮಾಡಲು ಸಾಧ್ಯವಿಲ್ಲ

ಹಿಂದೆ ಶೇಂದಿ ಇಳಿಸುವವರಿಗೆ ಪರ್ಯಾಯ ಉದ್ಯೋಗಕ್ಕೆ ಸಹಾಯ ಎಂದು ಸಿದ್ದರಾಮಯ್ಯ ಸರ್ಕಾರ 12 ಕೋಟಿ ರೂ. ಅನುದಾನ ಮೀಸಲು ಇಡಲಾಗಿತ್ತು. ಆದರೆ ಅದರಲ್ಲಿ ಖರ್ಚಾಗಿದ್ದು, 2-3 ಕೋಟಿ ಮಾತ್ರ. ಉಳಿದ ಹಣ ಈಗಲೂ ಇದೆ. ಇದೇ ರೀತಿಕೋಶದಲ್ಲೂ ನಡೆಯುತ್ತದೆಎಂದು ತಿಳಿಸಿದರು.

ಒಂದು ವೇಳೆ ಹತ್ತು ಕೋಟಿ ನೀಡುತ್ತೇವೆ ಎಂದು ಹೇಳಿದರೂ, ಕೋಶದಲ್ಲಿ ಸಮುದಾಯದ ಯಾವೊಬ್ಬ ಪ್ರತಿನಿಧಿಯು ಇರದೆಇದ್ದುದರಿಂದ ಅದನ್ನು ಕೂಡಾ ಹಲವು ಕಾರಣಗಳನ್ನು ನೀಡಿ ಹಾಗೆಯೆ ಇಡುತ್ತಾರೆಯೆ ಹೊರತು ಬಳಸುವುದಿಲ್ಲ. ಬ್ರಾಹ್ಮಣ ಮತ್ತುಲಿಂಗಾಯತ ನಿಗಮವನ್ನು ನೀಡಿದ್ದು ತೀರಾ ಇತ್ತೀಚೆಗೆ ಹೀಗಿರುವಾಗ ಬಿಲ್ಲವರಿಗೆ ನಿಮಗವನ್ನು ಯಾಕೆ ನೀಡಬಾರದುಎಂದುಪದ್ಮರಾಜ್ ಆರ್‌‌. ಹೇಳಿದರು.


Related Posts

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »