ಕರುನಾಡ ಕರುಣೆಯ ಕಾಮಧೇನು ಹಾಗೂ ನನ್ನ ಆತ್ಮೀಯರಾದ ಶ್ರೀ ಗೋವಿಂದ ಬಾಬು ಪೂಜಾರಿಯವರೇ,ನಿನ್ನೆ ಮುಂಬೈ ಬಿಲ್ಲವಭವನದಲ್ಲಿ ನಿಮಗೆ ಆಯೋಜಿಸಿದ ಗೌರವ ಪೂರ್ಣ ಸನ್ಮಾನಕ್ಕೆ ನಾವೆಲ್ಲ ಸಂಭ್ರಮ ಪಟ್ಟಿದ್ದೇವೆ.
ಹೌದು,
ನಿನ್ನೆ ನಾನಲ್ಲಿರಬೇಕಿತ್ತು
ಆದರೆ ಇರಲಾಗಲಿಲ್ಲ.
ನಿಮ್ಮ ಜೊತೆಗೆ ಮಾತಾಡುವ,ನಿಮ್ಮ ಮಾತಿಗೆ ಕಿವಿಯಾಗುವ ಅವಕಾಶಕ್ಕೆ ಅನಾನುಕೂಲ ಅಡ್ಡಿ ಆಯಿತು.ಮುಂಬೈಯಿಂದ ದೂರದಗುಜರಾತ್ ಅಹಮದ್ ನಗರಕ್ಕೆ ಬಂದಿದ್ದೆ.ಇಲ್ಲಿ ಕೊರೆಯುವ ಹಿಮದ ಚಳಿ.ಅದರ ತೀವ್ರತೆಗೆ ಜ್ವರ ಬಿಟ್ಟು ಹೋಗಲಾರೆ ಅನ್ನುತ್ತಿದೆ.
ನಿಮಗೆ ಸಿಗದೆ ಇದ್ದುದಕ್ಕೆ ಬೇಸರವಿದೆ.
ಇಂತಹ ಕಾರ್ಯಕ್ರಮಗಳಿಗೆ ಕಾರಣ ಹೇಳಿ ತಪ್ಪಿಸಿಕೊಳ್ಳಬಾರದು.
ಗೋವಿಂದ್ ಅಣ್ಣ ನಿನ್ನೆ ನಿಮ್ಮ ಸನ್ಮಾನ ವಾಚನದ ವೇಳೆ ಜನರ ಕಿವಿಗಡಚಿಕ್ಕುವ ಚಪ್ಪಾಳೆಗೆ ಇಡೀಯ ಸಭಾಂಗಣ ಸಾಕ್ಷಿಆಯಿತು.ನೀವು ಬದುಕಿನ ಹಾದಿಯಲ್ಲಿ ನಡೆದು ಬಂದ ಗಳಿಗೆಗಳ ಒಂದೊಂದು ಹೆಜ್ಜೆಗಳು ಅಲ್ಲಿ ಅನಾವರಣವಾಯಿತು.
ಆ ಹೊತ್ತಿನಲ್ಲಿಯೂ
ನಿಮ್ಮ ಮುಖದಲ್ಲಿ ಇದ್ದದ್ದು ಮಂದಹಾಸ ಬಿಟ್ಟರೇ,ಅಹಂಕಾರದ ಲವಲೇಶವೂ ಇರಲಿಲ್ಲ.
ನನ್ನ ಅನೇಕ ಸ್ನೇಹಿತರು ಇವತ್ತು ಕಾಲ್ ಮಾಡಿ ನಿಮ್ಮ ಸರಳತೆಯ ಬಗ್ಗೆ ಸೌಜನ್ಯತೆಯ ಬಗ್ಗೆ ಮಾತನಾಡಿದರು.
ಬದುಕಿದರೆ ನಿಮ್ಮಂತೆ ಬದುಕಬೇಕು ಅಂದರು.ಅವರೆಲ್ಲರಿಗೂ ನೀವು ಸ್ಫೂರ್ತಿ ಆದಿರಿ.ಅನೇಕರನ್ನು ಕರೆದು ನಿಮ್ಮೊಂದಿಗೆ ನಾನಿದ್ದೇನೆಅನ್ನುವ ದೈರ್ಯದ ಮಾತುಗಳನ್ನು ಆಡಿದ್ದು ತಿಳಿಯಿತು.ಅಂತಹ ಸಾಂತ್ವನ ನಿಮ್ಮಂತವರು ಮಾತ್ರ ಕೊಡಲು ಸಾಧ್ಯ ಗೋವಿಂದ ಅಣ್ಣ.
ಹಣ ಗಳಿಸುವುದು,ಅಂತಸ್ತನ್ನು ಸಂಪಾದಿಸುವುದು ಬಂಗ್ಲೆ ಕಾರುಗಳನ್ನು ಖರೀದಿಸುವುದು ವಿಶೇಷವಲ್ಲ.ಆದರೆ ಜನರ ಪ್ರೀತಿಯನ್ನುಗಳಿಸುವುದು ಅದರಲ್ಲೂ ಅನ್ಯ ರಾಜ್ಯದಲ್ಲಿ ಇಲ್ಲಿನವರ ಅಭಿಮಾನಕ್ಕೆ ಪಾತ್ರರಾಗುವುದಿದೆಯಲ್ಲಾ ಅದು ಸರ್ವಶ್ರೇಷ್ಠ.ಮಾನವೀಯತೆಮತ್ತು ಪ್ರಾಮಾಣಿಕತೆ ನಿಮ್ಮ ಮೂಲ ಗುಣಗಳು.
ಅದನ್ನು ನಿನ್ನೆ ಮುಂಬೈಯ ಜನ ಗುರುತಿಸಿದ್ದಾರೆ.
ನಿಮ್ಮನ್ನು ಬೇಟಿಯಾಗದೆ ಇದ್ದುದಕ್ಕೆ ಕ್ಷಮೆ ಕೋರುತ್ತಾ,ನಾನಿದ್ದಲ್ಲಿಗೆ ಬಂದಾಗ ನಾನು ನಿಮಗೆ ಸಿಗಲಿಲ್ಲ.ಆದರೆ ಕೆಲವೇ ಕೆಲವುದಿನಗಳಲ್ಲಿ ನಾನು ನೀವು ಇದ್ದಲ್ಲಿಗೆ ಅಂದರೇ ಬೆಂಗಳೂರಿಗೆ ಬಂದು ನಿಮ್ಮ ಜೊತೆಗೊಂದಿಷ್ಟು ಹೊತ್ತು ಇದ್ದು ಬರಲುತೀರ್ಮಾನಿಸಿದ್ದೇನೆ….
ನಿಮ್ಮನ್ನು ಸನ್ಮಾನಿಸಿದ ಬಿಲ್ಲವರ ಅಸೋಸಿಯೇಷನ್ ನ ನನ್ನೆಲ್ಲ ಆತ್ಮೀಯ ಬಳಗಕ್ಕೆ ವಂದಿಸುತ್ತಾ,ನಿಮ್ಮ ಪ್ರೀತಿಗೆ ತಲೆಬಾಗುತ್ತಾ,
ನಿಮ್ಮ ಸಲಹೆ ಸಹಕಾರ ಯಾವತ್ತೂ ಹೀಗೆಯೇ ಇರಲಿ ಎಂದು ಆಶಿಸುವ
ಇಂತೀ ನಿಮ್ಮವ,
ಉದಯ್ ಕುಂದಾಪುರ
(ಮುಂಬೈ)