TOP STORIES:

FOLLOW US

ಸಂಘಟನೆಗಳು ಸಾಕಷ್ಟಿವೆ, ಅನ್ಯಾಯವಾದಾಗ ಹೋರಾಟ ಮಾಡಿದವುಗಳೆಷ್ಟು ?


ನಮ್ಮ ರಾಜ್ಯದಲ್ಲಿ ಇತ್ತೀಚೆಗೆ ಬಹಳವಾಗಿ ತಮ್ಮ ಜಾತಿಯ ಬೇಡಿಕೆಗಳನ್ನು ನೇರವಾಗಿ ಮುಖ್ಯಮಂತ್ರಿಗಳ ಬಳಿಕೊಂಡೊಯ್ಯುವವರೆಂದರೆ  ಸ್ವಾಮೀಜಿಗಳು. ಅದು ತಮ್ಮ ಜಾತಿಯ ನಾಯಕನನ್ನು ಹೈಕಮಾಂಡ್ ಕೆಳಗಿಳಿಸುವುದನ್ನು ತಡೆಯಲುಆಗಿರಬಹುದು ಅಥವಾ ತಮ್ಮ ಜಾತಿಯ ನಾಯಕರಿಗೆ ಮಂತ್ರಿ ಪದವಿಯನ್ನು ನೀಡುವುದಾಗಿ ರಬಹುದು ಸ್ವಾಮೀಜಿಗಳ  ಮುತುವರ್ಜಿಗೆ ಮೆಚ್ಚಬೇಕಾಗಿದೆ.

ನಮ್ಮಲ್ಲಿ ಎಲ್ಲರಿಗೂ ಅನಿಸುವುದುಂಟು ಅರೇ, ಸ್ವಾಮೀಜಿಗಳಿಗೆ ಯಾಕೆ ಬೇಕಿತ್ತು ಎಂದು. ಹೌದು, ಅವರು ಅಲ್ಲಿ ರಾಜಕೀಯದವಿಷಯಕ್ಕೆ ಹೋಗದಿದ್ದರೂ ಅವರ ಮಠ, ಮಾನ್ಯತೆಗೆ ಯಾವುದೇ ಕುಂದು ಕೊರತೆ ಇಲ್ಲ. ಆದರೆ ಅವರಿಗೆ ತಾನು ಹುಟ್ಟಿದ ಜಾತಿಯಅಭಿಮಾನ, ತನ್ನವರು ಎಂಬ ಪ್ರೇಮದಿಂದ ಜಾತಿಗೆ ಸಂಬಂಧಿತ ಯಾವುದೇ ಹೋರಾಟಕ್ಕೂ ಅವರು ಬದ್ಧರಾಗಿ, ಸಿದ್ಧರಾಗಿರುತ್ತಾರೆ.

ನಮ್ಮಲ್ಲಿಯೂ ಮಠಗಳಿವೆ, ಮಠಾಧಿಪತಿಗಳಿದ್ದಾರೆ. ಅವರಿಗೆ ಬಹುಷ: ಸರ್ವ ಜಾತಿಯವರನ್ನು ಸಮಾನವಾಗಿ ನೋಡಬೇಕೆನ್ನುವಹಂಬಲವೋ, ನಮ್ಮನ್ನು ಜಾತಿ ನಾಯಕರು ಮಾನ್ಯತೆ ನೀಡುತ್ತಿಲ್ಲ ಎಂಬ ಬೇಸರವೋ, ಜಾತಿಗಲ್ಲ  ಭಾಷಣಗಳಿಗೆ ಸೀಮಿತವೋ, ಅವರವರ ಮಹದಾಸೆಗಳಿಂದ ಜಾತಿ ಅವರಿಗೆ ಕಾಣುತ್ತಿಲ್ಲವೋ ಎಂಬ ಪ್ರಶ್ನೆ ಮೂಡುವುದು‌ ಸಹಜ. ನಮ್ಮ  ಜಾತಿಗೆಅವಮಾನವಾದಾಗ, ರಾಜಕೀಯ ಕ್ಷೇತ್ರದಲ್ಲಿ ಅನ್ಯಾಯವಾದಾಗ ಖಂಡನೆ, ಹೋರಾಟ, ಉಪವಾಸ ಇತ್ಯಾದಿ ನಮ್ಮಸ್ವಾಮೀಜಿಗಳಿಂದ  ನಡೆದಿವೆಯೇ ಎನ್ನುವುದು ಹಿರಿಯರ, ಕಿರಿಯರ ಪ್ರಶ್ನೆ.

ಇವರದ್ದು ದಾರಿಯಾದರೆ ನಮ್ಮ ಸಂಘಟನೆಗಳ ಬಗ್ಗೆ ನೋಡೋಣ. ನಮ್ಮ ಸಮಾಜದ ಸಂಘಟನೆಗಳ ಹಲವಾರುಕಾರ್ಯಕ್ರಮಗಳಿಗೆ ಭಾಗವಹಿಸಿದಾಗ ಕಂಡ ಒಳ್ಳೆಯ ಅಂಶಗಳೆಂದರೆ ಯುವ ಪ್ರತಿಭೆಗಳನ್ನು, ಸಾಧಕರನ್ನು ಗುರುತಿಸುವುದು, ವಿದ್ಯಾರ್ಥಿವೇತನ, ಆರ್ಥಿಕವಾಗಿ ಹಿಂದುಳಿದವರಿಗೆ ಧನಸಹಾಯ ನೀಡುವುದು ಶ್ಲಾಘನೀಯ. ಆದರೆ ನಮ್ಮ ಸಮಾಜದ ಕೆಲವುನಾಯಕರೆನಿಸಿಕೊಂಡವರ ಜಾತಿ ಪ್ರೇಮದ ನಾಟಕ ಗಮನಿಸಿದಾಗ ಆಕ್ರೋಶದ ಜೊತೆಗೆ ಬೇಸರ ಮೂಡುವುದು ಸಹಜ. ಇದುಹಲವಾರು ಯುವಕರ, ಹಿರಿಯರ ಅಭಿಪ್ರಾಯ. ಇದಕ್ಕೊಂದು ಉದಾಹರಣೆಯೆಂಬಂತೆ  ಕುರ್ಚಿಗಾಗಿ ಹಪಹಪಿಸುವ ನಾಯಕರುನಮ್ಮಲ್ಲಿ ಕಾಣಸಿಗುತ್ತಾರೆ. ನಮ್ಮವರ ಬ್ಯಾಂಕಲ್ಲಿ ಉದ್ಯೋಗ ಕೇಳಿದರೆ  ಎಷ್ಟು ಕೋಟಿ ಇಡುತ್ತಿಯ ಇಂತಹ ದರ್ಪದ ಮಾತು. ಕೋಟಿಇದ್ದರೆ ಪಾಪದವ ಇವರ ಬ್ಯಾಂಕಿಗೆ ಉದ್ಯೋಗಕ್ಕಾಗಿ ಹೋಗುತ್ತಾನೆಯೇ?….ಇದು‌ ನಮ್ಮಲ್ಲಿ ಅದೆಷ್ಟೋ ಜನರಿಗೆ ಆದ ಪ್ರಸಂಗಗಳು.

ವೇದಿಕೆಯಲ್ಲಿ ಮೈಕ್ ಸಿಕ್ಕೊಡನೆ ಉಕ್ಕಿ ಹರಿವ ಜಾತಿಪ್ರೇಮ ವೇದಿಕೆಯಿಂದ ಇಳಿದಂತೆ ಇತರ ಜಾತಿಗಳ ಮೇಲೆ ವ್ಯಾಮೋಹಉಂಟಾಗಿ ನಮ್ಮವರನ್ನೇ ಮರೆಯುವ ಜಾಯಮಾನದ ನಾಯಕರಿದ್ದಾರೆ. ನುಡಿದಂತೆ ನಡೆ ಎಂಬ ವಾಕ್ಯ ಪಕ್ಕಕ್ಕಿರಿಸಿ ನಾ ಆಕಡೆ ನೀಈಕಡೆ ಎಂಬಂತಾಗಿದೆ. ಇದಕ್ಕೆ ಕಾರಣವೂ ಇದೆ. ನಮ್ಮ ಸಂಘಸಂಸ್ಥೆಗಳ ಬಹುಪಾಲು ನಾಯಕರುಗಳು ಕೆಲವು ಪಕ್ಷದಲ್ಲಿಯೂಕರ್ತವ್ಯ ನಿರ್ವಹಿಸುವುದರಿಂದ ಅದೂ ಇರಬಹುದು ಎಂಬ ಅನುಮಾನ ಸಹಜ. ಜಾತಿ ಸಂಘಸಂಸ್ಥೆಗಳಲ್ಲಿ ನಾನು ಜಾತಿಯಪರವಾಗಿ ನನ್ನ ಪಕ್ಷ ನಂತರ ಎಂಬ ನಾಯಕರುಗಳು ಇರಬಹುದು ಇಲ್ಲವೆಂದಲ್ಲ. ಆದರೆ ಪಕ್ಷಕ್ಕಾಗಿ ತಾನು ಜಾತಿಯನ್ನು ತಯಾರುಮಾಡುವಂತಿರಬಾರದು. ಇದಕ್ಕೆ ಒಳ್ಳೆಯ ಪರಿಹಾರ ಜಾತಿ ನಾಯಕರುಗಳು ರಾಜಕೀಯ ಪಕ್ಷ ತೊರೆದು ನಾಯಕರಾಗಬೇಕು. ಆಗಮಾತ್ರ ಜನರಿಗೆ ನಂಬಿಕೆ ಬರಬಹುದು. ರಾಜಕೀಯ ರಹಿತ ವ್ಯಕ್ತಿಯಿದ್ದಾಗ ಸಂಘಸಂಸ್ಥೆಗಳಿಗೆ ಸರಕಾರದ ನೆರವು, ಬೇಡಿಕೆಯನ್ನುಸುಲಭವಾಗಿ ಸಲ್ಲಿಸಬಹುದು.

ನಮ್ಮ ಆರಾಧ್ಯ ಶಕ್ತಿಗಳ ಬಗ್ಗೆ ಕೆಲವು ರಾಜಕೀಯ ಪುಡಾರಿಗಳು ಮಾತನಾಡುವಾಗ ನಮ್ಮವರೇ ಸುಮ್ಮನಿದ್ದರು. ಅವರಹೇಳಿಕೆಯನ್ನು ಖಂಡಿಸುವ, ದೂರು ನೀಡುವ ಕೆಲಸ ಮಾಡಲಿಲ್ಲ. ನಮ್ಮ ಬೇರೆ ಸಂಘಟನೆಗಳು ನೋಡಿಕೊಳ್ಳಲಿ ಅಥವಾ ಅವರಿಗೆಯಾಕೆ ಶತ್ರುಗಳಾಗಬೇಕು ಎಂಬ ಹೇಡಿತನವೇ ಗೊತ್ತಾಗದು. ಜಾತಿಗೆ ಅವಮಾನವಾದಾಗ ನಮ್ಮ ಸಮಾಜದ ಯಾರಾದರೊಬ್ಬ ವ್ಯಕ್ತಿವೈಯಕ್ತಿಕವಾಗಿ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿದರೆ ವ್ಯಕ್ತಿಯ ಪರವಾಗಿ ನಿಲ್ಲದೆ ಆತನನ್ನು ನಮ್ಮವರೇಟೀಕಿಸುವ, ಆತನ ವಿರುದ್ಧ ಅಪಪ್ರಚಾರದ ಷಡ್ಯಂತ್ರ ಮಾಡುವ ಶಕುನಿ ಬುದ್ಧಿಯು ನಮ್ಮಲ್ಲಿದೆ. ಇದನ್ನು ಮೊದಲು ಸಂಘಟನೆಯನಾಯಕ ಮಹನೀಯರು ಗಮನಿಸಿ ತಾವೇ ಸ್ವತಃ ಬೀದಿಗಿಳಿಯಬೇಕು ಇಲ್ಲವೇ ಕುಕೃತ್ಯ ಎಸಗುವವರನ್ನು ತಡೆಯಬೇಕಾಗಿದೆ.

ಇನ್ನು ಮಾತೆತ್ತಿದರೆ ನಾವು ಜಾತಿಗಾಗಿ ನಮ್ಮಲ್ಲಿ ಸಣ್ಣ ಸಮಸ್ಯೆಯಾದರೂ ನಾವು ಬರಲು ಸಿದ್ಧ ಎಂದು ಬೊಬ್ಬಿಡುವ ನಾಯಕರುಇದ್ದಾರೆ. ಯಾರು ಮೊದಲು ಧ್ವನಿಯೆತ್ತುತ್ತಾರೆ ನೋಡುವ, ನಮಗ್ಯಾಕೆ ಅವರ ಉಸಾಬರಿ, ಒಂದು ಅರ್ಜಿ ಕೊಡಿ, ನೋಡುವ, ಇತ್ಯಾದಿ ಸಬೂಬು ಹೇಳುವ  ಸಂಘಟನೆಗಳಿಗೆ ಕೊರತೆಯಿಲ್ಲ.  ಕೆಲವೊಂದು ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಗುಣ ನಮ್ಮಸಂಘಟನೆಗಳಿಗೆ ಇನ್ನೂ ಬಂದಿಲ್ಲ.

ಯಾವಾಗ ತನ್ನ ಜಾತಿಯ ಸಾಮಾನ್ಯನಿಗೂ ಅನ್ಯಾಯವಾದಾಗ ಅವರಿಗೆ ಬಲವನ್ನು ತುಂಬುವ ಶಕ್ತಿ ನಮ್ಮ ಜಾತಿ ಸಂಘಟನೆಗಳಿಗೆಬರುತ್ತದೋ ಆವಾಗ ಯಾವೊಬ್ಬ ಯುವಕ ಜಾತಿರಹಿತ ಬೇರೆಬೇರೆ ಸಂಘಟನೆಗಳಿಗೆ ಆಕರ್ಷಿತನಾಗಲಾರ. ಬಿಳಿ ಅಂಗಿಧರಿಸಿದವರಿಗೆ ಮಾತ್ರ ನಾಯಕನಾಗದೆ ಯಾವಾಗ ನಮ್ಮ ಜಾತಿಯ ಆರ್ಥಿಕ ಹಿಂದುಳಿದವರಿಗೂ ಕಾಣಸಿಕ್ಕಿ ಅವರ ಸಮಸ್ಯೆಪರಿಹರಿಸುತ್ತಾನೋ ಆತ ನಿಜವಾದ ನಾಯಕ.

ಜನಾರ್ದನ ಪೂಜಾರಿಯಂತೆ ಸಣ್ಣ ಪ್ರಾಯದಿಂದ ವಯೋವೃದ್ಧರನ್ನೂ  ಮಾತನಾಡಿಸುವ ಗುಣ ನಮ್ಮ ನಾಯಕರಿಗೆ ಬರಬೇಕಾಗಿದೆ. ಅವರನ್ನು  ರಾಜಕೀಯವಾಗಿ ಸೋಲಿಸಲು ನಮ್ಮವರೇ ಕಾರಣ ಎಂದರೆ ತಪ್ಪಾಗಲಾರದು. ಅಂದು ಅವರ ಬಗ್ಗೆ  ಏಕವಚನದಲ್ಲಿಮಾತನಾಡುತ್ತಿದ್ದವರು ಇಂದು ಅವರ ಆಶೀರ್ವಾದಕ್ಕಾಗಿ ಅವರ ಕಾಲಿಗೆರಗುವುದು  ಪ್ರಾಯಶ್ಚಿತ್ತವೇನೋ ಎನ್ನುವಂತಿದೆ.

ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಕೇವಲ ಎರಡು ದಿನದ ಹೋರಾಟವಾಗಬಾರದು. ಯಾವುದೇ ವಿಷಯದ ಬಗ್ಗೆ ಒಂದುಸಂಘಟನೆ ಅದರ ನೇತೃತ್ವ ವಹಿಸಿಕೊಂಡ ಮೇಲೆ ಉಳಿದ ನಮ್ಮ ಸಂಘಟನೆಗಳು ಅವರಿಗೆ ಬೆನ್ನೆಲುಬಾಗಿ ನಿಂತಾಗ ನಮ್ಮವರಿಗೂನಮ್ಮ ಸಂಘಟನೆಗಳ ಬಗ್ಗೆ ಹೆಮ್ಮೆ ಜೊತೆಗೆ ಇತರರಿಗೂ ನಮ್ಮ ಸಂಘಟನೆಗಳ ಸಾಮರ್ಥ್ಯ ತಿಳಿಯುವುದು.

ನಮ್ಮಲ್ಲಿ ಸಂಘಟನೆಗಳು ಸಾಕಷ್ಟಿವೆ. ಆದರೆ ನಮ್ಮವರಿಗೆ ಅನ್ಯಾಯವಾದಾಗ ಹೋರಾಟ ಮಾಡಿದ ಹೋರಾಟ ಮಾಡಿದವುಗಳೆಷ್ಟು  ಎಂಬುದನ್ನು ಅಲ್ಲಿಯ ನಾಯಕರುಗಳೇ ತಮಗೆ ಪ್ರಶ್ನಿಸಬೇಕಾಗಿದೆ. ಇತ್ತೀಚಿಗೆ ಸಾಮಾಜಿಕ ವಿಷಯವೊಂದರ ಬಗ್ಗೆ ನಾನು ಬರೆದಾಗಅದರ ಪರವಾದ ಕ್ಷುಲ್ಲಕ ಮನಸ್ಥಿತಿಯವರು ಪ್ರಶ್ನಿಸಿದಾಗ ನಮ್ಮ ಜಾತಿಯ ಸುರತ್ಕಲ್ನ ಸಂಘಟನೆಯೊಂದರ ಸದಸ್ಯ ನನಗೆ ಫೋನ್ಮಾಡಿ ನಿಮಗೆ ಏನಾದರೂ ತೊಂದರೆಯಾದರೆ ನಾವಿದ್ದೇವೆ ಎನ್ನುವ ಭರವಸೆ, ಧೈರ್ಯದ ಮಾತು ನಿಜವಾಗಿಯೂ ನಮ್ಮಲ್ಲಿಯೂಇಂತಹ ಸಂಘಟನೆ  ಇದೆಯಲ್ಲಾ ಎನ್ನುವ ಹೆಮ್ಮೆ ಮೂಡಿತು. ಉಳಿದಂತೆ ನಾನು ಸಂಘಟನೆಗಳ ಬಗ್ಗೆ ಬರೆದರೆ ಯಾವ ಸಂಘಟನೆ, ಎಲ್ಲಿ, ಯಾರು ಎಂದು ಕೇಳುವ ನಮ್ಮ ಸಂಘಟನೆಯ ಪ್ರಮುಖರೂ ಇದ್ದಾರೆ. ಅವರಿಗೆ ತಪ್ಪನ್ನು ತಪ್ಪೆಂದು ಹೇಳಬಾರದು.

ಇತ್ತೀಚಿಗೆ ಒಂದು ಕೈಗಾರಿಕೆಯ ಕೆಲಸದ ಹೊತ್ತಿನಲ್ಲಿ ಬೇರೆ ರಾಜ್ಯದ ವ್ಯಕ್ತಿ  ಓರ್ವನ ಜಾತಿಯ ಕುರಿತಂತೆ ಅವಹೇಳನ ಮಾಡಿದ್ದಕ್ಕೆ ಆತತನ್ನವರಿಗೆ ತಿಳಿಸಿ, ಸಂಘಟನೆಗೆ ದೂರು ನೀಡಿದ ಕೆಲವೇ ಗಂಟೆಯಲ್ಲಿ ವ್ಯಕ್ತಿಯ ವಿರುದ್ಧ ಕ್ರಮವಹಿಸಿದರು. ಇದೇ ಸ್ಥಿತಿನಮ್ಮವರಿಗಾದರೆ ನಿನಗ್ಯಾಕೆ ಬೇಕು, ಅವನೇ ತಪ್ಪು ಮಾಡಿರಬೇಕು ಇತ್ಯಾದಿ ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ಹಲವಾರುವರ್ಷಗಳ ಹಿಂದೆ ನಮ್ಮ ಜಾತಿಯ ಅಸಂಖ್ಯಾತ ಮಂದಿ ಮತಾಂತರ ಹೊಂದಿದ್ದಾರೆ. ಈಗಲೂ ಹೊಂದುತ್ತಿದ್ದಾರೆ. ಅಲ್ಲಿ ನಮ್ಮವರಿದ್ದರೆತಕ್ಷಣ ಅದರ ಬಗ್ಗೆ ನಿಗಾವಹಿಸುವ ಕ್ರಮ ನಮ್ಮ ಸಂಘಟನೆಗಳಿಗಿವೆ. ನಮ್ಮ ಸಂಘಟನೆಗಳ ನಾಯಕರು ನಮ್ಮ ಸಂಘಟನೆ ಸೇರಿಎಂದು ಬೇರೆಯವರಿಗೆ ಉಪದೇಶ ಮಾಡುವುದಲ್ಲ ಬದಲಾಗಿ ತನ್ನ ಕುಟುಂಬ ವರ್ಗವನ್ನೇ ಅದರಲ್ಲಿ ಪಾಲ್ಗೊಳ್ಳುವಂತೆ ಮಾಡಿದಾಗಎಲ್ಲರಿಗೂ ಮಾದರಿಯಾಗುವರು.

ಮೊದಲು ನಮ್ಮವರು ಎಂದರೆ ನಮ್ಮ ಜಾತಿ, ನಮ್ಮ ಗುರುಗಳು, ನಮ್ಮ ಆರಾಧ್ಯ ಶಕ್ತಿಗಳು, ನಮ್ಮವರ ವ್ಯಾಪಾರ,  ನಮ್ಮವರಪತ್ರಿಕೆಗಳು, ನಮ್ಮವರ ಬ್ಯಾಂಕ್, ನಮ್ಮ ಸಂಘಸಂಸ್ಥೆಗಳು ಇತ್ಯಾದಿಗಳಲ್ಲಿ ಜಾತಿಪ್ರೇಮ ಮೂಡಬೇಕು.

ನಮ್ಮಲ್ಲಿ ಹಲವಾರು ಸಂಘಟನೆಗಳಿದ್ದರೂ ಎಲ್ಲರನ್ನು  ಒಂದೆಡೆ ಸೇರಿಸಬೇಕಾಗಿದೆ. ಯಾವುದೇ ಸಮಸ್ಯೆಯನ್ನು ಒಗ್ಗಟ್ಟಾಗಿ ಬಗ್ಗೆಹರಿಸಿದಾಗ ಮಾತ್ರ ಬಿಲ್ಲವರು ಬಲ್ಲವರಾಗಲು ಸಾಧ್ಯ. ನಾಯಕರುಗಳು ವೇದಿಕೆಗೆ ಸೀಮಿತವಾಗದೆ ಜನಸಾಮಾನ್ಯರೊಂದಿಗೆಬೆರೆತಾಗ ಮಾತ್ರ ಅಭಿವೃದ್ಧಿ ಸಾಧ್ಯ.

 

✍ ದೀಪಕ್ ಬೀರ

       ಪಡುಬಿದ್ರಿ


Share:

More Posts

Category

Send Us A Message

Related Posts

ಆಯತಪ್ಪಿ ಕಂದಕಕ್ಕೆ ಬಿದ್ದ ಸೇನೆಯ ಟ್ರಕ್; ಉಡುಪಿ ಜಿಲ್ಲೆ ಕುಂದಾಪುರ ಬೀಜಾಡಿ ಮೂಲದ ಸೈನಿಕ ಅನೂಪ್ ಪೂಜಾರಿ ಹುತಾತ್ಮ


Share       ಕುಂದಾಪುರ: ಸೇನಾ ಟ್ರಕ್ ರಸ್ತೆಯಿಂದ ಸ್ಕಿಡ್ ಆಗಿ ಕಂದಕಕ್ಕೆ ಬಿದ್ದ ಘಟನೆ ಪೂಂಚ್ ಜಿಲ್ಲೆಯ ಮೆಂಧರ್ ಪ್ರದೇಶದ ಬಲ್ನೋಯಿ ಪ್ರದೇಶದಲ್ಲಿ ನಡೆದಿದ್ದು ಈ ಟ್ರಕ್ನಲ್ಲಿ ಚಲಿಸುತ್ತಿದ್ದ ದೇಶ ಕಾಯುವ ಯೋಧರು ಪ್ರಯಾಣಿಸುತ್ತಿದ್ದು, ಇದರಲ್ಲಿ


Read More »

ಗೆಜ್ಜೆಗಿರಿ ನೂತನ ಪಧಾಧಿಕಾರಿಗಳ ಪದಗ್ರಹಣ


Share       ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿಯ ನೂತನ ಅಧ್ಯಕ್ಷರಾದ ರವಿ ಪೂಜಾರಿ ಚಿಲಿಂಬಿ ಇವರ ನೇತೃತ್ವದ ಪಧಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಇಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಜರಗಿತು. ನೂತನ ಪಧಾಧಿಕಾರಿಗಳನ್ನು


Read More »

ನಾರಾಯಣ ಗುರುಗಳ ಗುಣಗಾನ ಮಾಡಿದ ಪೋಪ್! ವ್ಯಾಟಿಕನ್ ಸಿಟಿಯಲ್ಲಿ ಕ್ರೈಸ್ತ ಪರಮೋಚ್ಛ ಗುರುವಿನಿಂದಲೇ ‘ಬ್ರಹ್ಮಶ್ರೀ’ಗೆ’ನಮನ!


Share       బ్ర ಹ್ಮ ಶ್ರೀ ನಾರಾಯಣ ಗುರುಗಳ (Brahma Shree Narayana Guru) ಪ್ರಸ್ತುತ ಜಗತ್ತಿನಲ್ಲಿ ಬಹಳ ಪ್ರಸ್ತುತವಾಗಿವೆ ಎಂದು ಪೋಪ್‌ ಫ್ರಾನ್ಸಿಸ್ (Pope Francis) ಹೇಳಿದರು. ಪ್ರತಿಯೊಬ್ಬ ಮಾನವರೂ ಒಂದೇ ಕುಟುಂಬ ಎಂದು


Read More »

ನಗರ ಪಾಲಿಕೆ ಪ್ರತಿಪಕ್ಷದ ನಾಯಕರಾಗಿ ಅನಿಲ್ ಕುಮಾರ್ ಆಯ್ಕೆ


Share       ಮಂಗಳೂರು ಮಹಾನಗರ ಪಾಲಿಕೆಯ ಪ್ರತಿಪಕ್ಷದ ನಾಯಕರಾಗಿ ನೂತನವಾಗಿ ಆಯ್ಕೆಯಾದ ಜನಪರ ನಿಲುವಿನ ರಾಜಕೀಯ ನಾಯಕ, ಬ್ರಹ್ಮ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನೆಯ ಪ್ರತಿಪಾದಕ, ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ


Read More »

ವಿಟ್ಲ :ಯುವವಾಹಿನಿ (ರಿ.)ವಿಟ್ಲ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ :ಅಧ್ಯಕ್ಷರಾಗಿ ಹರೀಶ್ ಪೂಜಾರಿ ಮರುವಾಳ


Share       ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಯುವವಾಹಿನಿ (ರಿ.) ವಿಟ್ಲ ಘಟಕದ 2024 /25 ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆಯು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ವಿಟ್ಲದಲ್ಲಿ ನಡೆಯಿತು. ಅಧ್ಯಕ್ಷರಾಗಿ ಹರೀಶ್ ಪೂಜಾರಿ


Read More »

ಕೇರಳದ ಕಾಸರಗೋಡಿನ ಬಿರುವೆರ್ ಕುಡ್ಲ (ರಿ)ಮಂಜೇಶ್ವರ ತಾಲೂಕು ತಂಡದ ವತಿಯಿಂದ 6 ನೆಯ ಸೇವಾಯೋಜನೆ


Share       ತುಳುನಾಡಿನ ಹಲವಾರು ಬಡಕುಟುಂಬಗಳ ಕಣ್ಣೀರೊರಸಿ ಅವರ ನೇರವಿಗೆ ಕಾರಣವಾದ ಬಲಿಷ್ಠ ಹಾಗೂ ಪ್ರಸಿದ್ದಿ ಪಡೆದ ಸಂಘಟನೆ ಫ್ರೆಂಡ್ಸ್ ಬಲ್ಲಾಳ್ಬಾಗ್  ಬಿರುವೆರ್ ಕುಡ್ಲ ಇದರ ಸ್ಥಾಪಕಾಧ್ಯಕ್ಷರಾದ  ಶ್ರೀಯುತ ಉದಯ ಪೂಜಾರಿಯವರ ವ್ಯಕ್ತಿತ್ವ, ಮನುಷ್ಯತ್ವ ಹಾಗೂ


Read More »