TOP STORIES:

ಸಿಐಎಸ್‌ಎನಲ್ಲಿ ವಿಶ್ವಕ್ಕೆ ಅಗ್ರಸ್ಥಾನಿ ಗ್ರಾಮೀಣ ಪ್ರತಿಭೆ ಹೆಬ್ರಿ ಸಪ್ನಾ ಪೂಜಾರಿ ಸಾಧನೆ ಯುವ ಸಮುದಾಯಕ್ಕೆ ಮಾದರಿ


ಸಿಐಎಸ್‌ಎನಲ್ಲಿ ವಿಶ್ವಕ್ಕೆ ಅಗ್ರಸ್ಥಾನಿ

ಗ್ರಾಮೀಣ ಪ್ರತಿಭೆ ಹೆಬ್ರಿ ಸಪ್ನಾ ಪೂಜಾರಿ ಸಾಧನೆ | ಯುವ ಸಮುದಾಯಕ್ಕೆ ಮಾದರಿ

ಬದುಕಿನಲ್ಲಿ ಆಶಾವಾದವೇ ಛಲಕ್ಕೆ ಮೂಲ ಕಾರಣ. ಛಲವುಳ್ಳ ಬದುಕು ಸಾಧನೆಯ ಮೊದಲ ಹೆಜ್ಜೆ. ಅಂತಹ ಸಾಧನೆಯನ್ನು ಬೆನ್ನತ್ತಿಯಶಸ್ವಿಯಾದವರು ಹೆಬ್ರಿಯ ಸಪ್ನಾ ಪೂಜಾರಿ.

ಹೆಬ್ರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತ ವಿದ್ಯಾರ್ಥಿನಿಯೊಬ್ಬಳು ಅಂತಾರಾಷ್ಟಿçà ಸಂಸ್ಥೆಯಾದ ಐಸಾಕನಡೆಸಿದ 2022ನೇ ಸಾಲಿನಲ್ಲಿ ಸರ್ಟಿಫೈಡ್ ಇನ್ ಫಾರ್ಮೇಶನ್ ಸಿಸ್ಟಮ್ ಅಡಿಟರ್ (ಸಿಐಎಸ್‌ಎ) ಪರೀಕ್ಷೆಯಲ್ಲಿ ವಿಶ್ವಕ್ಕೆ ಟಾಪರ್ಆಗಿ ಹೊರಹೊಮ್ಮಿದ್ದಾರೆ. ಇಂತಹ ಸಾಧನೆ ಮಾಡಿದ ಪ್ರಥಮ ಭಾರತೀಯ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಅಮೆರಿಕಾದಬೋಸ್ಟನ್‌ನಲ್ಲಿ ಇತ್ತೀಚೆಗೆ ನಡೆದ ಡಿಜಿಟಲ್ ಟ್ರಸ್ಟ್ ವರ್ಲ್ಡ್ ಕಾನ್ಪರೆನ್ಸ್ ನಲ್ಲಿ ಇವರ ಸಾಧನೆಗೆ ಗೌರವ ಸನ್ಮಾನ ಲಭಿಸಿದೆ.

ಉಡುಪಿ ಜಿಲ್ಲೆ ಹೆಬ್ರಿಯ ಲೀಲಾವತಿ ಮತ್ತು ಭೋಜ ಪೂಜಾರಿ ದಂಪತಿಗಳ ಪುತ್ರಿಯಾದ ಸಪ್ನಾ ಅವರ ಹುಟ್ಟೂರು ಪೆರ್ಡೂರಿನಬೆಳ್ಳರ್ಪಾಡಿಯಲ್ಲಿ ಹಾಗೂ ಬೆಳೆದದ್ದು ಹೆಬ್ರಿ ಜರ್ವತ್ತಿನ ಕೂಡು ಕುಟುಂಬದಲ್ಲಿ. ಆರಂಭಿಕ ಪ್ರಾಥಮಿಕ ಶಿಕ್ಷಣವನ್ನು ಊರಿನ ಸರಕಾರಿಶಾಲೆಯಲ್ಲಿ ಪಡೆದರು. ಬಳಿಕ ಮುದ್ರಾಡಿಯ ಎಂಎನ್‌ಡಿಎಸ್‌ಎAನಲ್ಲಿ ಹೈಸ್ಕೂಲ್, ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿಪದವಿಪೂರ್ವ ಶಿಕ್ಷಣ, ಬೆಂಗಳೂರಿನ ಪೆಸಿಟ್‌ನಲ್ಲಿ ಬಿಇ ಶಿಕ್ಷಣ ಮುಗಿಸಿದರು. ಇವರ ಶಿಕ್ಷಣಕ್ಕೆ ಇಡೀ ಕುಟುಂಬ ಸಾಥ್ ನೀಡಿತ್ತು. ಬೆಂಗಳೂರಿಗೆ ತೆರಳಿದ ಸಂದರ್ಭ ಅಮ್ಮ ಕೂಡಾ ಜತೆಯಲ್ಲೇ ವಾಸ್ತವ್ಯ ಹೂಡಿ ಮಗಳ ವಿದ್ಯಾಭ್ಯಾಸಕ್ಕೆ ಬೆನ್ನಲುಬಾಗಿ ನಿಂತಿದ್ದರು. ಸಹೋದರ ಪ್ರಸನ್ನ ಕುಮಾರ್ ಅವರ ಮಾರ್ಗದರ್ಶನದಂತೆ ಶಿಕ್ಷಣದ ಬಳಿಕ ವೃತ್ತಿ ಜೀವನಕ್ಕೆ ಆಯ್ಕೆ ಮಾಡಿಕೊಂಡಿರುವುದು ಐಟಿಕಂಪನಿ.

ಮತ್ತಷ್ಟು ಸಾಧನೆ ತವಕ: ನಾರಾವಿ ತಿರ್ತೊಟ್ಟು ದಿ. ಬಾಬು ಪೂಜಾರಿ ಅವರ ಮೊಮ್ಮಗ ಪ್ರವೀಣ್ ಪೂಜಾರಿ ಅವರನ್ನು ಸಪ್ನಾವಿವಾಹವಾದರು. ಸಾಮಾನ್ಯವಾಗಿ ಉದ್ಯೋಗ ಸಿಕ್ಕ ಬಳಿಕ ಬಹುತೇಕ ಮಂದಿ ನಿರಾಳರಾಗುತ್ತಾರೆ. ಅದರಲ್ಲೂ ಮದುವೆಯಾದಬಳಿಕ ಸಾಕು ಎಂಬ ಭಾವನೆ ಮೂಡುತ್ತದೆ. ಆದರೆ ಸಪ್ನಾ ಅವರಿಗೆ ಮತ್ತಷ್ಟು ಕಲಿಯಬೇಕು, ಹೊಸತನಕ್ಕೆ ತೆರೆದುಕೊಳ್ಳಬೇಕು, ಸಾಧನೆಯ ಮತ್ತೊಂದು ಮಗ್ಗುಲು ಮುಟ್ಟಬೇಕು ಎಂಬ ಕನಸು ಮತ್ತಷ್ಟು ಚಿಗುರೊಡೆಯಿತು. ಇದಕ್ಕೆ ತಂದೆ, ತಾಯಿ, ಗಂಡ, ಅತ್ತೆ, ಮಾವ ಸೇರಿದಂತೆ ಸಂಪೂರ್ಣ ಕುಟುಂಬ ಬೆನ್ನೆಲುಬಾಗಿ ನಿಂತಿತು. ಇದಕ್ಕೆ ಪೂರಕವಾಗಿ ಉದ್ಯೋಗ ಮಾಡುತ್ತಿದ್ದ ಐಟಿ ಅಡಿಟಿಂಗ್ಕ್ಷೇತ್ರದಲ್ಲೇ ಮತ್ತಷ್ಟು ಅಧ್ಯಯನಕ್ಕೆ ಅವಕಾಶ ಸಿಕ್ಕಿತು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಸಪ್ನಾ, ಅಧ್ಯಯನದಲ್ಲಿತೊಡಗಿಸಿಕೊಂಡರು. ಸರ್ಟಿಫೈಡ್ ಇನ್ ಫಾರ್ಮೇಶನ್ ಸಿಸ್ಟಮ್ ಅಡಿಟರ್ (ಸಿಐಎಸ್‌ಎ) ಪರೀಕ್ಷೆಗೆ ಸಿದ್ಧತೆ ನಡೆಸಿದರು. ಪರೀಕ್ಷೆಯು ಕಠಿಣ ಹಾಗೂ ಕ್ಲಿಷ್ಟಕರವಾಗಿರುವುದರಿಂದ ವಿಶ್ವದಲ್ಲಿ ಕೆಲವೇ ಕೆಲವು ಮಂದಿ ಬರೆಯುತ್ತಾರೆ. ಪರೀಕ್ಷೆಯಲ್ಲಿ ಸಪ್ನಾಅವರು ವಿಶ್ವಕ್ಕೆ ಟಾಪರ್ ಆಗಿ ಸಾಧನೆ ಮಾಡಿದ ಪ್ರಥಮ ಭಾರತೀಯ ಮಹಿಳೆ. 2022ರಲ್ಲಿ ಇವರ ಜತೆ ಜರ್ಮನಿಯ ಯುವಕನೊಬ್ಬಟಾಪರ್ ಸ್ಥಾನ ಹಂಚಿಕೊAಡಿದ್ದಾರೆ.

ಯುವ ಸಮುದಾಯಕ್ಕೆ ಮಾದರಿ: ಸಪ್ನಾ ಅವರು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಪರೀಕ್ಷೆಯ ಬಗ್ಗೆ ಮಾಹಿತಿಕಲೆಹಾಕಿ, ಬಿಡುವಿನ ಸಮಯದಲ್ಲಿ ತಜ್ಞರಿಂದ ಮಾರ್ಗದರ್ಶನ ಪಡೆದರು. ಒಂದೆಡೆ ಗಂಡ, ಮಕ್ಕಳನ್ನೊಳಗೊಂಡ ಕುಟುಂಬ, ಇನ್ನೊಂದೆಡೆ ಉದ್ಯೋಗ. ಇವೆರಡರ ಮಧ್ಯೆ ಉನ್ನತ ಶಿಕ್ಷಣವನ್ನು ಮುಂದುವರಿಸಿ ಯಶಸ್ಸು ಕಂಡ ಅವರ ಸಾಧನೆ ಯುವ ಸಮಾಜಕ್ಕೆಮಾದರಿಯಾಗಿದೆ.

ನನಗೆ ಬಾಲ್ಯದಿಂದಲೂ ಒಳ್ಳೆಯದಾಗಿ ಕಲಿತು ಸಾಧನೆ ಮಾಡಬೇಕೆಂಬ ಹಂಬಲ ಇತ್ತು. ಅದಕ್ಕೆ ಸರಿಯಾಗಿ ಪ್ರಾಥಮಿಕ ಮತ್ತುಪ್ರೌಢಶಿಕ್ಷಣ ಭದ್ರ ಅಡಿಪಾಯ ಒದಗಿಸಿತು. ಐಟಿ ಕ್ಷೇತ್ರಕ್ಕೆ ಹೋದ ಬಳಿಕ ಸಿಐಎಸ್‌ಎ ಪರೀಕ್ಷೆ ಬಗ್ಗೆ ಆಸಕ್ತಿ ಹುಟ್ಟಿತು. ಕುಟುಂಬ, ಮನೆಯವರ ಪ್ರೋತ್ಸಾಹದಿಂದ ಸಾಧನೆ ಸಾಧ್ಯವಾಗಿದೆ. ಇಂದಿನ ಯುವ ಸಮಾಜಕ್ಕೂ ನನ್ನ ಸಲಹೆ ಅವಕಾಶಗಳನ್ನುಬಳಸಿಕೊಂಡು ಸಾಧನೆ ಮಾಡೋಣ. ಸಾಮಾಜಿಕ ಜಾಲತಾಣದಲ್ಲಿ ಸಮಯ ವ್ಯರ್ಥ ಮಾಡುವ ಬದಲು ಅದರಲ್ಲಿ ಒಳ್ಳೆಯ ಅಂಶಸ್ವೀಕರಿಸಿದಾಗ ಯಾವುದೇ ಕ್ಷೇತ್ರದಲ್ಲಿ ಮುನ್ನಡೆದಾಗ ಯಶಸ್ಸು ನಿಶ್ಚಿತ.

ಸಪ್ನಾ ಪೂಜಾರಿ ಹೆಬ್ರಿ, ಸಿಐಎಸ್‌ಎ ಟಾಪರ್


Related Posts

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »