TOP STORIES:

ಹಸಿದವರಿಗೆ ಅನ್ನ ನೀಡುವ ವಾರಿಯರ್‍ಸ್ ಇವರು! ಸದ್ದಿಲ್ಲದೆ ಸಾಗಿದೆ ಮಾನವೀಯ ಸೇವೆ


ಮಂಗಳೂರು: ಕೊರೋನಾ ಯಾರನ್ನು ಬಿಟ್ಟಿಲ್ಲ ಹೇಳಿ? ಮಕ್ಕಳಿಂದ ಹಿಡಿದು ಹಿರಿಯರವರೆಗೆ ಕಣ್ಣಿಗೆ ಕಾಣದ ಪುಟ್ಟ ವೈರಸ್ ಎಲ್ಲರನ್ನೂ ಕಾಡಿದೆ. ಕೊರೋನಾ ದಾಳಿಯಿಂದ ಲಕ್ಷಾಂತರ ಮಂದಿಯ ಬದುಕು ಧೂಳೀಪಟವಾಗಿರುವುದು ಅಷ್ಟೇ ಸತ್ಯ.

(Copyrights owned by: billavaswarriors.com )

ಕೊರೋನಾ ಮೊದಲ ಅಲೆ ಮುಗಿಯಿತು ಎನ್ನವಾಗಲೇ ಎರಡನೆಯ ಧಾಂಗುಡಿಯಿಟ್ಟಿತ್ತು. ಇದರ ದಾಳಿಗೆ ಸಿಲುಕಿದವರು ಅದೆಷ್ಟೋ ಮಂದಿ. ಈ ನಡುವೆ ಕರ್ಫ್ಯೂ, ಲಾಕ್‌ಡೌನ್‌ನಿಂದಾಗಿ ಬದುಕು ಕಳೆದುಕೊಂಡವರಿಗೆ ಲೆಕ್ಕವಿಲ್ಲ.

ಕಾಡಿದ ಕೊರೋನಾದಿಂದಾಗಿ ದಿನಗೂಲಿ ಕಾರ್ಮಿಕರಿಗೆ ಕೆಲಸವಿಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಬಂದೊದಗಿದೆ. ನಿರ್ಗತಿಕರು, ಭಿಕ್ಷೆ ಬೇಡಿಕೊಂಡು ದಿನ ಕಳೆಯುತ್ತಿದ್ದವರ ಸ್ಥಿತಿಯಂತೂ ಮತ್ತಷ್ಟು ಶೋಚನೀಯವಾಗಿದೆ. ಆದರೆ ಮಂಗಳೂರಿನಲ್ಲಿ ಯುವಕರ ತಂಡವೊಂದು ಇವರ ನೆರವಿಗೆ ನಿಂತಿದೆ. ಸದ್ದಿಲ್ಲದೆ ಅನ್ನದಾನದ ಕೈಂಕರ್ಯದಲ್ಲಿ ತೊಡಗಿಕೊಂಡಿರುವ ಇವರು ಕೊರೋನಾ ವಾರಿಯರ್‍ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ನಿಜವಾಗಿಯೂ ಹಸಿದವರ ಪಾಲಿನ ವಾರಿಯರ್‍ಸ್!

ಸಮಾನ ಮನಸ್ಕ ಯುವಕರ ತಂಡ

ಮಂಗಳೂರಿನ ಉರ್ವದಲ್ಲಿ ಪುಟ್ಟ ಹೋಟೆಲ್ ನಡೆಸುತ್ತಿರುವ ರಕ್ಷಿತ್ ಸಾಲಿಯಾನ್ ನೇತೃತ್ವದ ತಂಡವೇ ಕೊರೋನಾ ಅವಯಲ್ಲಿ ಹಸಿದವರ ಪಾಲಿಗೆ ಸಂಜೀವಿನಿಯಾದ ತಂಡ. ಕೊರೋನಾ ಲಾಕ್‌ಡೌನ್‌ನಿಂದಾಗಿ ಯಾರೂ ಕೂಡ ಮನೆಯಿಂದ ಹೊರಬರಲಾಗದ ಸ್ಥಿತಿಯಿದೆ. ಮನೆ ಇದ್ದವರು ಮನೆಯಲ್ಲಿ ತುತ್ತು ಅನ್ನವನ್ನಾದರೂ ತಿಂದು ದಿನ ಕಳೆಯಬಹುದು. ಆದರೆ ನಿರ್ಗತಿಕರು, ಅಂಗವಿಕಲರು, ಡೇರೆ ಹಾಕಿಕೊಂಡು ಬದುಕು ಕಟ್ಟಿಕೊಂಡವರ ಪಾಡೇನು? ಇವರ ಬಗ್ಗೆ ಯೋಚನೆ ಬಂದದ್ದೇ ತಡ ರಕ್ಷಿತ್ ಸಾಲಿಯಾನ್ ನೇತೃತ್ವದ ಸಮಾನ ಮನಸ್ಕ ಯುವಕರು ಒಂದು ತಂಡ ಕಟ್ಟಿದ್ದರು. ಈ ತಂಡದ ಶ್ರಮದಿಂದಾಗಿ ನಿತ್ಯ ಹಸಿವಿನಿಂದ ಬಳಲುತ್ತಿರುವವರ ಹಸಿವು ನೀಗುತ್ತಿದೆ.

ಯಾವುದೇ ಪ್ರಚಾರ ಬಯಸದೆ ನಿರಂತರ ನೂರಾರು ಮಂದಿಗೆ ಅನ್ನದಾನ ಮಾಡುತ್ತಿದ್ದಾರೆ. ಇವರ ಈ ರೀತಿಯ ಸೇವೆಗೆ ವ್ಯಾಪಕ ಶ್ಲಾಘನೆಯೂ ವಕ್ತವಾಗುತ್ತಿದೆ. ಸಮಾಜದಲ್ಲಿ ಯಾರೂ ಹಸಿದಿರಬಾರದು, ನಮ್ಮಿಂದಾದ ನೆರವು ನೀಡಬೇಕು ಎಂಬ ಮಾನವೀಯ ನೆಲಯಲ್ಲಿ ಯುವಕರ ತಂಡ ಕೆಲಸ ಮಾಡುತ್ತಿದೆ.

ವರುಷದಿಂದ ನಿರಂತರ ಸೇವೆ

ಕಳೆದ ವರ್ಷ ಕೊರೋನಾ ಮೊದಲ ಅಲೆಯ ಲಾಕ್‌ಡೌನ್‌ನ ಮೊದಲ ದಿನದಿಂದ ಯುವಕರ ತಂಡ ಈ ಕಾರ್ಯವನ್ನು ಪ್ರಾರಂಭಿಸಿದೆ. ಅಲ್ಲಿಂದ ಶುರುವಾದ ಈ ಕಾಯಕ ಈ ವರ್ಷ ಕೋವಿಡ್ ಎರಡನೆಯ ಅಲೆಯ ಸಂದರ್ಭದಲ್ಲಿಯೂ ಮುಂದುವರಿದಿದೆ.

(Copyrights owned by: billavaswarriors.com )

ಲಾಕ್‌ಡೌನ್‌ನಿಂದಾಗಿ ಯಾರೂ ಕೂಡ ಹಸಿವಿನಿಂದ ಕಂಗೆಡಬಾರದು. ಅದಕ್ಕಾಗಿ ನಮ್ಮಿಂದಾದ ಪ್ರಯತ್ನ ಮಾಡುತ್ತಿದ್ದೇವೆ. ಹಸಿದವರಿಗೆ ಅನ್ನ ನೀಡುವುದರಲ್ಲಿ ನಮಗೆ ಖುಷಿ ಇದೆ ಎನ್ನುತ್ತಾರೆ ತಂಡದ ಸದಸ್ಯರಲ್ಲಿ ಒಬ್ಬರಾಗಿರುವ ರಕ್ಷಿತ್ ಸಾಲಿಯಾನ್.

ಕಳೆದ ವರ್ಷ ೧೫ ಸಾವಿರಕ್ಕೂ ಅಕ ಮಂದಿಗೆ ಊಟ

ಕಳೆದ ವರ್ಷ ಲಾಕ್‌ಡೌನ್ ಅವಯಲ್ಲಿ ೧೫,೦೦೦ಕ್ಕೂ ಹೆಚ್ಚು ಆಹಾರದ ಪೊಟ್ಟಣದ ಜೊತೆಗೆ ನೀರಿನ ಬಾಟಲಿಗಳು, ೨೫೦ಕ್ಕಿಂತಲೂ ಅಕ ರೇಷನ್ ಕಿಟ್‌ಗಳನ್ನು ಹಂಚಲಾಗಿದ್ದು ಈ ಬಾರಿಯೂ ಅದೇ ರೀತಿ ಕಾರ್ಯಕ್ರಮ ರೂಪಿಸಲಾಗಿದೆ. ಪ್ರತಿದಿನ ೩೦೦ರಷ್ಟು ಮಂದಿಗೆ ಆಹಾರ ಒದಗಿಸುತ್ತಿದ್ದೇವೆ. ಆಹಾರ ಪೂರೈಕೆಯಲ್ಲೂ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಬುಧವಾರ ನೂರಾರು ಮಂದಿಗೆ ಗುಣಮಟ್ಟದ ಮಾಸ್ಕ್‌ನ್ನು ಕೂಡ ಹಂಚಿದ್ದೇವೆ. ಸ್ಟೇಟ್ ಬ್ಯಾಂಕ್ ಪರಿಸದಲ್ಲಿ ಹಲವು ಮಂದಿಗೆ ಸೊಳ್ಳೆ ಪರದೆ ವಿತರಿಸುವ ಕೆಲಸವೂ ಆಗಿದೆ ಎನ್ನತ್ತಾರೆ ರಕ್ಷಿತ್ ಸಾಲಿಯಾನ್.

ತಂಡದ ವಾರಿಯರ್‍ಸ್ ಇವರು

ನಿರ್ಗತಿಕರ ನೆರವಿಗೆ ನಿಂತಿರುವ ಸಮಾನ ಮನಸ್ಕ ಯುವಕರ ತಂಡದಲ್ಲಿ ೧೦ ಮಂದಿಯಿದ್ದು, ಪ್ರತಿಯೊಬ್ಬರೂ ಆಹಾರ ವಿತರಣೆಯ ಕಾರ್ಯದಲ್ಲಿ ಕೈ ಜೋಡಿಸುತ್ತಾರೆ. ಜೋಶುವಾ ಡಿಸೋಜಾ, ಸಂಜಯ್ ಕಾಮತ್, ಚೈತನ್ಯ, ಹರಿಪ್ರಸಾದ್, ರಾಹುಲ್ ಪೈ, ಮಹೇಶ್, ನಿತಿನ್ ಮಾಡ, ಅರುಣ್ ಪೈ, ಅಜಿತ್ ಕಾಮತ್, ಸಂದೇಶ್, ಆಯುಷ್ಮಾನ್ ಅಮೀನ್, ಪುಣಿಕ್ ಶೆಟ್ಟಿ ಮುಂತಾದವರು ತಂಡದಲ್ಲಿ ವಾರಿಯರ್‍ಸ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ.

ದಿನಕ್ಕೆ ಸುಮಾರು ೩೦೦ ಮಂದಿಗೆ ಆಹಾರ

ನಗರದ ಉರ್ವ, ಮಣ್ಣಗುಡ್ಡೆ, ಪಿವಿಎಸ್ ಸ್ಟೇಟ್‌ಬ್ಯಾಂಕ್, ಹಂಪನಕಟ್ಟೆ, ಅಳಕೆ ಹೀಗೆ ನಗರದ ವಿವಿಧೆಡೆ ಇರುವ ನಿರ್ಗತಿಕರಿಗೆ ಆಹಾರ ವಿತರಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಕೆಲವರು ಮನೆಯಲ್ಲಿ ಯಾವ ಆಹಾರ ಪದಾರ್ಥವೂ ಇಲ್ಲ ಎಂದು ಕರೆ ಮಾಡುತ್ತಾರೆ. ಅವರಿಗೂ ಅಗತ್ಯ ದಿನಸಿಗಳನ್ನು ಒದಗಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟನ್ನು ನಿತ್ಯ ಮಾಡುತ್ತಿದ್ದೇವೆ. ಈ ರೀತಿ ಕೆಲಸ ಮಾಡುವುದರಲ್ಲೂ ಒಂದು ರೀತಿಯ ಖುಷಿಯಿದೆ.

ಬರಹ – ರಕ್ಷಿತ್ ಸಾಲಿಯಾನ್.

(Copyrights owned by: billavaswarriors.com )


Related Posts

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »