ಬಂಟ್ವಾಳದವರಾಗಿರುವ ಉಮೇಶ್ ಬಂಟ್ವಾಳ್ ಅವರು ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ಪದವಿಯನ್ನು ಪಡೆದಿದ್ದಾರೆ.
ಮಸ್ಕತ್ ನ ಒಮಾನ್ ದೇಶದಲ್ಲಿ ಸುಮಾರು 36 ವರ್ಷದಿಂದ ಅಲ್ ರವಾಸ್ ಹೋಲ್ಡಿಂಗ್ ಬಿಸಿನೆಸ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಾ ಜೊತೆಗೆ ಸಾಮಾಜ ಸೇವಕರಾಗಿ ತುಳುಕೂಟ ಮಸ್ಕತ್, ಸುಮಾರು 25 ವರ್ಷದಿಂದ ಮಸ್ಕತ್ ಗಣೇಶ ಫೆಸ್ಟಿವಲ್ ಕಮಿಟಿಯ ಸಕ್ರೀಯ ಸದಸ್ಯರಾಗಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಯುತರು 2009 ರಿಂದ ಒಮಾನ್ ಬಿಲ್ಲವಾಸ್ ಕೂಟದ ಸ್ಥಾಪಕ ಸದಸ್ಯರಾಗಿ (ಫೌಂಡಿಂಗ್ ಮೆಂಬರ್) ಕಾರ್ಯ ನಿರ್ವಹಿಸುತ್ತಿದ್ದರು.
ಪ್ರಸ್ತುತ ಒಮಾನ್ ಬಿಲ್ಲವಾಸ್ ಕೂಟದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಯುತ ಉಮೇಶ್ ಬಂಟ್ವಾಳ್ ಅವರಿಗೆ ಬಿಲ್ಲವ ವಾರಿಯರ್ಸ್ ತಂಡದ ಪರವಾಗಿ ಅಭಿನಂದನೆಗಳು.
ಮುಂದಿನ ಎರಡು ವರ್ಷದ (2025 ಮತ್ತು 2026) ಅವಧಿಯಲ್ಲಿ ತಮ್ಮ ಮುಂದಾಳತ್ವದಲ್ಲಿ ಒಮಾನ್ ಬಿಲ್ಲವಾಸ್ ಕೂಟದ ವತಿಯಿಂದ ಉತ್ತಮ ಕೆಲಸ ಕಾರ್ಯಗಳು ನೆರವೇರಲಿ ಎಂದು ಕ್ಷೇತ್ರದ ಸರ್ವ ಶಕ್ತಿಗಳಲ್ಲಿ ಪ್ರಾರ್ಥಿಸುವ.