ಬಿಲ್ಲವ ಬ್ರಿಗೇಡ್ (ರಿ) ಕೇಂದ್ರೀಯ ಮಂಡಳಿ , ಮಂಗಳೂರು ವಿಮಾನ ನಿಲ್ದಾಣಕ್ಕೆ ನಮ್ಮ ನಾಡಿನ ಪ್ರಸಿದ್ಧ ಇತಿಹಾಸ ಪುರುಷರಾದ ಕೋಟಿ- ಚೆನ್ನಯ್ಯ ರ ಹೆಸರನ್ನು ಇಡಬೇಕೆಂದು ಆಗ್ರಹಿಸಿ ಈಗಾಗಲೇ ನಾವು ಸ್ಟಿಕ್ಕರ್ ಅಭಿಯಾನ ಆರಂಭಿಸಿರುತ್ತೇವೆ.
ಇದರ ಅಂಗವಾಗಿ ನಿನ್ನೆ ಮಂಗಳವಾರದಂದು ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕಂಕನಾಡಿಯ “ಗರೋಡಿ ಜಾತ್ರೆ” ಯ ಶುಭ ಸಂಧರ್ಭದಲ್ಲಿ ನಮ್ಮ ಅಭಿಯಾನದ ಬಗೆಗಿನ “ಸ್ಟಿಕ್ಕರ್ ಹಾಗೂ ಭಿತ್ತಿಪತ್ರಗಳ ವಿತರಣೆ” ಗಣ್ಯರ ಸಮ್ಮುಖದಲ್ಲಿ ನೆರವೇರಿತು. ಈ ಅಭಿಯಾನದಲ್ಲಿ ಗಣ್ಯರು, ಸಮಸ್ತ ಭಕ್ತಾದಿಗಳು ಮೊಬೈಲ್ ಕವರ್‌ಗೆ ಸ್ಟಿಕ್ಕರನ್ನು ಅಳವಡಿಸಿ ಅಭಿಯಾನಕ್ಕೆ ಬೆಂಬಲಿಸಿ ಶುಭ ಹಾರೈಸಿದರು. ಅದೇ ರೀತಿ ಆಗಮಿಸಿದ ಸಮಸ್ತರಿಗೆ ಮನೆಗೆ ಹಾಗೂ ವಾಹನಗಳಿಗೆ ಅಳವಡಿಸುವಂತಹ ಅಭಿಯಾನದ ಸ್ಟಿಕ್ಕರನ್ನು ನೀಡಿ ಬೆಂಬಲಿಸುವಂತೆ ವಿನಂತಿಸಲಾಯಿತು.
ಮುಂದಿನ ಹಂತವಾಗಿ ಈ ತುಳುನಾಡಿನಾದ್ಯಂತ ಅಭಿಯಾನವನ್ನು ಮುಂದುವರಿಸಲಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಅಂತೆಯೇ ಮನೆ ಮನೆಗಳಲ್ಲಿ ತೆರಳಿ, ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯ ರ ಹೆಸರಿಡುವ ಬಗೆಗಿನ ಜಾಗೃತಿ ಮೂಡಿಸುವ ಸಲುವಾಗಿ ಸ್ಟಿಕ್ಕರ್ ಅಭಿಯಾನ ನಡೆಯಲಿದೆ.