TOP STORIES:

FOLLOW US

ಗರ್ಭಿಣಿ ಹೊಟ್ಟೆ ಆಕಾರ ನೋಡಿದ್ರೆ ಮಗು ಗಂಡೋ, ಹೆಣ್ಣೋ ಅಂತ ತಿಳಿಯತ್ತಾ?; ಪ್ರೆಗ್ನೆಸಿಯ ಸತ್ಯ ಮಿಥ್ಯಗಳು ಇಲ್ಲಿವೆ


ನವಜಾತ ಶಿಶು ಅಥವಾ ಜನಿಸಲಿರುವ ಶಿಶುವಿನ ಕುರಿತು ನೀಡುವ ಕೆಲವು ತಪ್ಪು ಮಾಹಿತಿಗಳು ಮತ್ತು ಆ ಕುರಿತ ವಾಸ್ತವ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ನವಜಾತ ಶಿಶುಗಳು ಅಥವಾ ಹುಟ್ಟಲಿರುವ ಶಿಶು ಯಾವುದು ಎಂಬ ಕುತೂಹಲ ಸಾಮಾನ್ಯ. ಅನೇಕರು ಗರ್ಭಿಣಿಯರ ಹೊಟ್ಟೆಯ ಆಕಾರ ನೋಡಿ ಅನೇಕರು ಹುಟ್ಟುವ ಮಗು ಗಂಡೋ ಅಥವಾ ಹೆಣ್ಣೋ ಎಂದು ಅಂದಾಜು ಮಾಡುತ್ತಾರೆ. ಅಲ್ಲದೇ ಅನೇಕ ಗರ್ಭಿಣಿಯರು ಕೂಡ ಈ ಕುರಿತು ವಿಚಾರವನ್ನು ಅಂತರ್ಜಾಲದಲ್ಲಿ ಹುಡುಕುತ್ತಾರೆ.  ಅಷ್ಟೇ ಅಲ್ಲದೇ ಗರ್ಭಾವಸ್ಥೆಯಲ್ಲಿನ ಅನೇಕ ವಿಚಾರಗಳ ಕುರಿತು ನಮ್ಮ ಸುತ್ತ ಮುತ್ತಲಿನವರು ಅನೇಕ ಸಲಹೆ ನೀಡುತ್ತಲೇ ಇರುತ್ತಾರೆ. ಆದರೆ ಅವೆಲ್ಲವೂ ಸತ್ಯವಾಗಿರುವುದಿಲ್ಲ, ಅವುಗಳಲ್ಲಿ ಸತ್ಯಕ್ಕೆ ದೂರವಾದ ಮತ್ತು ಅವೈಜ್ಞಾನಿಕವಾದ ಮಾಹಿತಿಗಳು ಬಹಳಷ್ಟಿರುತ್ತವೆ. ನವಜಾತ ಶಿಶುವಿನ ತಾಯಂದಿರು ಅಥವಾ ಸದ್ಯದಲ್ಲಿಯೇ ಶಿಶುವಿಗೆ ಜನ್ಮ ನೀಡಲಿರುವ ಭಾವಿ ಅಮ್ಮಂದಿರ ಸುತ್ತಮುತ್ತ ತರಾವರಿ ಸಲಹೆಗಳನ್ನು ನೀಡುವ ಅಥವಾ ಊಹೆಗಳನ್ನು ಮಾಡುವ ಜನರ ದಂಡೇ ಇರುತ್ತದೆ ಎಂಬುವುದು ಸರ್ವಕಾಲಿಕ ಸತ್ಯ.

 

ಒಂದು ನವಜಾತ ಶಿಶುವಿನ ತಾಯಿ ಅಥವಾ ಸದ್ಯದಲ್ಲಿಯೇ ಶಿಶುವಿಗೆ ಜನ್ಮ ನೀಡಲಿರುವ ಮಹಿಳೆ ಆದಾಗಲೇ ದುರ್ಬಲಳಾಗಿರಬಹುದು ಅಥವಾ ಹೊಸ ಅನುಭವದ ಒತ್ತಡದ ಮನಸ್ಥಿತಿಯಲ್ಲಿ ಇರಬಹುದು, ಅಂತಹ ಸಂದರ್ಭದಲ್ಲಿ ಆಧಾರವಿಲ್ಲದ ಸಲಹೆಗಳಿಗೆ ಕಿವಿ ಕೊಡದೆ, ತಜ್ಞರು ನೀಡುವ ಮಾಹಿತಿಗಳನ್ನು ನಂಬುವುದು ಬಹಳ ಅಗತ್ಯ. ನವಜಾತ ಶಿಶು ಅಥವಾ ಜನಿಸಲಿರುವ ಶಿಶುವಿನ ಕುರಿತು ನೀಡುವ ಕೆಲವು ತಪ್ಪು ಮಾಹಿತಿಗಳು ಮತ್ತು ಆ ಕುರಿತ ವಾಸ್ತವ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

 

 

ಮಿಥ್ಯ 1: ಗರ್ಭಿಣಿಯ ಹೊಟ್ಟೆ ಎಷ್ಟು ಉಬ್ಬಿದೆ ಎಂಬುದನ್ನು ಆಧರಿಸಿ ಅದರ ಲಿಂಗವನ್ನು ನಿರ್ಧರಿಸಲಾಗುತ್ತದೆ. ಗರ್ಭಿಣಿಯ ಹೊಟ್ಟೆ ಕಡಿಮೆ ಉಬ್ಬಿದ್ದರೆ ಒಳಗಿರುವುದು ಗಂಡು ಮಗು. ಹೊಟ್ಟೆ ದೊಡ್ಡದಿದ್ದರೆ ಅದು ಹೆಣ್ಣು ಮಗು.
ಸತ್ಯ: ರಾಷ್ಟ್ರೀಯ ಆರೋಗ್ಯ ಸೇವೆಯ (ಎನ್‍ಹೆಚ್‍ಎಸ್) ಪ್ರಕಾರ, ಈ ಊಹೆಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಮತ್ತು ಹೊಟ್ಟೆಯ ಗಾತ್ರಕ್ಕೂ ಮಗುವಿನ ಲಿಂಗಕ್ಕೂ ಯಾವುದೇ ಸಂಬಂಧವಿಲ್ಲ. ಗರ್ಭಿಣಿಯ ಹೊಟ್ಟೆಯ ಗಾತ್ರ ಮತ್ತು ಆಕಾರವು ಆಕೆಯ ಸ್ನಾಯುವಿನ ಗಾತ್ರ, ರಚನೆ, ಭಂಗಿ ಮತ್ತು ಆಕೆಯ ಹೊಟ್ಟೆಯ ಸುತ್ತಲೂ ಸಂಗ್ರಹವಾಗಿರುವ ಕೊಬ್ಬನ್ನು ಅವಲಂಬಿಸಿದೆ.

ಮಿಥ್ಯ 2 : ಕೊಲಸ್ಟ್ರಮ್ ಅಥವಾ ತಾಯಿಯ ಆರಂಭದ ಎದೆಹಾಲನ್ನು ಮಗುವಿಗೆ ಕುಡಿಸಬಾರದು. ಅದು ಅಶುದ್ಧವಾಗಿರುತ್ತದೆ.

ಸತ್ಯ : ಕೊಲಸ್ಟ್ರಮ್ ಎಂದರೆ ಹಳದಿ ಬಣ್ಣವುಳ್ಳ , ತಾಯಿಯ ಪ್ರಪ್ರಥಮ ಎದೆ ಹಾಲು. ಅತ್ಯಧಿಕ ಪ್ರೊಟೀನ್ ಹೊಂದಿರುವ ಆ ಹಾಲು ಸೋಂಕು ನಿರೋಧಕ ಗುಣಗಳನ್ನು ಹೊಂದಿದೆ. ಆದ್ದರಿಂದ ಮಗುವಿಗೆ ಇದನ್ನು ಕುಡಿಸಲು ಸೂಚಿಸಲಾಗುತ್ತದೆ. ಆದರೆ, ಭಾರತದಲ್ಲಿ ಕೆಲವು ಮಹಿಳೆಯರು ಇದನ್ನು ಇಂದಿಗೂ ಅಶುದ್ಧವೆಂದು ಭಾವಿಸಿದ್ದು, ಮಗುವಿಗೆ ಕುಡಿಸಲು ನಿರಾಕರಿಸುತ್ತಾರೆ.

ಮಿಥ್ಯ 3: ನವಜಾತ ಶಿಶುವಿನ ಜೀವನ ಸಿಹಿಯಾಗಿರಬೇಕು ಎಂಬುದರ ಸಂಕೇತವಾಗಿ, ಅದಕ್ಕೆ ಪ್ರಥಮವಾಗಿ ಜೇನು ತುಪ್ಪವನ್ನು ನೆಕ್ಕಿಸುವುದು ಅತ್ಯಂತ ಪುರಾತನ ಸಂಪ್ರದಾಯ.

ಸತ್ಯ: ನವಜಾತ ಶಿಶುವಿನ ಪ್ರತಿರಕ್ಷಣಾ ವ್ಯವಸ್ಥೆ ತುಂಬಾ ನಾಜೂಕಾಗಿ ಇರುತ್ತದೆ. ಮಗುವಿಗೆ ಅದರ ಮೊದಲ ಹುಟ್ಟುಹಬ್ಬಕ್ಕಿಂತ ಮೊದಲು ಜೇನು ತುಪ್ಪವನ್ನು ನೀಡುವುದು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಕಾರಣವೇನೆಂದರೆ, ಅದು ನವಜಾತ ಶಿಶುವಿನ ಅಪಕ್ವ ವ್ಯವಸ್ಥೆಯಲ್ಲಿ ಸೇರಿಕೊಳ್ಳಬಲ್ಲ ಬ್ಯಾಕ್ಟೀರಿಯಾವಾದ ಕ್ಲೋಸ್ಟ್ರಿಡಿಯಂ ಬೊಟುಲಿನಮ್ ಬೀಜಕಗಳನ್ನು ಹೊಂದಿರುತ್ತದೆ, ಮತ್ತು ಆ ಬ್ಯಾಕ್ಟೀರಿಯಾ ಶಿಶುವಿಗೆ ಮಾರಕ ರೋಗವನ್ನು ಉಂಟು ಮಾಡಬಹುದು.

ಮಿಥ್ಯ 4: ನವಜಾತ ಶಿಶುವಿನ ಆಹಾರ ಕ್ರಮದಲ್ಲಿ ಜ್ಯೂಸ್‍ಗಳನ್ನು ಕೂಡ ಸೇರಿಸಬೇಕು.
ಸತ್ಯ : ಹಣ್ಣಿನ ರಸದಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದು ಮಗುವಿನ ಕರುಳಿನ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಬಹುದು . ಏಕೆಂದರೆ ಆರಂಭದಲ್ಲಿ , ಅದರಲ್ಲೂ ಮುಖ್ಯವಾಗಿ ಜನಿಸಿದ ಒಂದು ವರ್ಷದವರೆಗೆ ಅವುಗಳಲ್ಲಿ ಹಣ್ಣಿನ ರಸವನ್ನು ಜೀರ್ಣ ಮಾಡಿಕೊಳ್ಳಬಲ್ಲ ಸಾಮರ್ಥ್ಯ ಇರುವುದಿಲ್ಲ.

 

ಮಿಥ್ಯ 5 : ಎರಡನೇ ಮತ್ತು ಮೂರನೆಯ ಶಿಶುಗಳಿಗೆ ಹೋಲಿಸಿದರೆ, ಮೊದಲ ಮಗು ತಡವಾಗಿ ಹೊರ ಬರುತ್ತದೆ ಎಂಬ ನಂಬಿಕೆ ಕೂಡ ಜನರಲ್ಲಿದೆ.

ಸತ್ಯ : ವಾಸ್ತವ ಏನೆಂದರೆ, ನಿಮ್ಮ ಋತುಚಕ್ರದ ಅವಧಿಯ ಉದ್ದವು ನಿಮ್ಮ ಮಗುವಿನ ಆಗಮನವನ್ನು ನಿರ್ಧರಿಸುತ್ತದೆ. ನಿಮ್ಮ ಋತುಚಕ್ರದ ಅವಧಿ ಕಡಿಮೆ ಇದ್ದರೆ ಹೆರಿಗೆ ಬೇಗ ಆಗಬಹುದು, ಉದ್ದನೆಯ ಋತುಚಕ್ರದ ಅವಧಿ ಇದ್ದಲ್ಲಿ ಹೆರಿಗೆ ಕೂಡ ತಡ ಆಗಬಹುದು.ಆದರೂ ಋತುಚಕ್ರದ ಅವಧಿ 28 ದಿನಗಳದ್ದಾಗಿದ್ದರೆ, ನಿಮಗೆ ಹೆರಿಗೆಗೆ ನಿಗದಿ ಪಡಿಸಿದ ದಿನಾಂಕದ ಹತ್ತಿರದ ತಾರೀಖಿನಲ್ಲೇ ಹೆರಿಗೆ ಆಗುವ ಸಾಧ್ಯತೆ ಇರುತ್ತದೆ.


Share:

More Posts

Category

Send Us A Message

Related Posts

ACP ರೀನಾ ಸುವರ್ಣಗೆ ಜೀ ಕನ್ನಡ ನ್ಯೂಸ್‌ ಅಚೀವರ್ಸ್‌ ಅವಾರ್ಡ್ಸ್‌- 2025


Share       3ನೇ ವಾರ್ಷಿಕೋತ್ಸವದ ಅಂಗವಾಗಿ ಜೀ ಕನ್ನಡ ನ್ಯೂಸ್‌ ವತಿಯಿಂದ, Zee Achievers Awards ಕಾರ್ಯಕ್ರಮವನ್ನು ದಿ ರಿಟ್ಸ್‌ ಕಾರ್ಲ್‌ಟರ್ನ್‌ನಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯಾತಿಗಣ್ಯರನ್ನು ಗುರುತಿಸಿ ಜೀ ಕನ್ನಡ


Read More »

ಮುಂಬಯಿ ಎನ್‌ಸಿಪಿ (ಎಸ್‌ಪಿ) ಈಶಾನ್ಯ ಜಿಲ್ಲಾ ನಿರೀಕ್ಷಕರಾಗಿ ಲಕ್ಷ್ಮಣ್ ಸಿ. ಪೂಜಾರಿ ಚಿತ್ರಾಪು ಆಯ್ಕೆ


Share       ಮುಂಬಯಿ, ಮಾ. 21: ಎನ್‌ಸಿಪಿ (ಎಸ್‌ಪಿ) ಈಶಾನ್ಯ (ಉತ್ತರ ಮುಂಬಯಿ) ಜಿಲ್ಲಾ ನಿರೀಕ್ಷಕರಾಗಿ ತುಳು-ಕನ್ನಡಿಗಲಕ್ಷ್ಮಣ್ ಸಿ. ಪೂಜಾರಿ ಚಿತ್ರಾಪು ಅವರನ್ನು ಪಕ್ಷದ ಅಧ್ಯಕ್ಷೆ ರಾಖಿ ಜಾಧವ್ ಅವರು ನೇಮಕ ಮಾಡಿದ್ದಾರೆ. ಮಂಗಳೂರು ಚಿತ್ರಾಪು


Read More »

ಬಿಲ್ಲವಾಸ್ ಫ್ಯಾಮಿಲಿ ದುಬೈ ಸಂಘಟನೆ ; ಉಪ ಪೊಲೀಸ್ ಅಧಿಕ್ಷಕರಾದ ಎಸ್ ಮಹೇಶ್ ಕುಮಾರ್ ರವರ ಮನದಾಳದ ಮಾತು


Share       ಬಿಲ್ಲವಾಸ್ ಫ್ಯಾಮಿಲಿ ದುಬೈ, ಸಮುದಾಯದ ಸಾಮಾಜಿಕ ಚಟುವಟಿಕೆಗಳಲ್ಲಿ ಮಂಚೂಣಿ ಯಲ್ಲಿರುವ ಸಂಘಟನೆ. ಇತ್ತೀಚೆಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ದುಬೈಗೆ ಪ್ರಯಾಣ ಬೆಳೆಸಿದಾಗ ಈ ಸಂಘಟನೆಯ ಕಾರ್ಯವೈಖರಿ ಯನ್ನು ಕಣ್ಣಾರೆ ನೋಡುವ ಅವಕಾಶ ಒದಗಿ


Read More »

ನಾರಾಯಣ ಗುರುಗಳ ತತ್ವದಂತೆ ಎಲ್ಲರೂ ಜೊತೆಗೂಡಿ ಮುನ್ನೆಡೆಯಬೇಕು : ಪದ್ಮರಾಜ್ ಆರ್ ಪೂಜಾರಿ


Share       ಬಂಟ್ವಾಳ: ಯುವವಾಹಿನಿ(ರಿ.) ಮಾಣಿ ಘಟಕದ 2025-26 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ದಿನಾಂಕ 10-03-2025 ರ ಸೋಮವಾರದಂದು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದ ನೂತನ ನಿವೇಶನದಲ್ಲಿ ಜರುಗಿತು. ಪದಗ್ರಹಣ


Read More »

ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ಕತಾರ್ ಬಿಲ್ಲವಸ್ ಸಂಘದ ಮೊಟ್ಟ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಅಪರ್ಣ ಶರತ್


Share       ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ನಮ್ಮ ತುಳುವರು ಹಲವಾರು ವರ್ಷಗಳಿಂದ ವಾಸವಿದ್ದಿದ್ದು, ಇಂದಿಗೂ ತುಳುವ ಮಣ್ಣಿನ ಪ್ರೀತಿಯನ್ನು ಮರೆತಿಲ್ಲ. ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಮರೆಯದೆ ಇಂದಿಗೂ ತಾವು ನೆಲೆ ನಿಂತ ಮಣ್ಣಿನಲ್ಲಿ ಸಂಭ್ರಮಿಸುತ್ತಾರೆ


Read More »

ದಮ್ಮಾಮ್: ಸೌದಿ ಬಿಲ್ಲವಾಸ್ ದಮ್ಮಾಮ್ ಸಂಘದ ಮಹಾಸಭೆ


Share       ದಮ್ಮಾಮ್: ಶ್ರೀ ನಾರಾಯಣ ಗುರು ಅವರ ತತ್ವ ಸಂದೇಶಗಳನ್ನು ಅಳವಡಿಸಿಕೊಂಡು ದಮ್ಮಾಮ್ ಬಿಲ್ಲವಾಸ್ ಸೌದಿ ಅರೇಬಿಯ ಸಂಘವನ್ನು ಮುನ್ನಡೆಸಬೇಕೆಂದು ಹಾಗು ಸಮಾಜದಲ್ಲಿರುವ ಶೋಷಿತರ , ಅಸಹಾಯಕರ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಾಗು


Read More »