TOP STORIES:

ಜನರಿಗೆ ಕಷ್ಟ ಎಂದು ಬಂದರೆ ಮೊದಲಿಗೆ ನೆನಪಾಗುವ ಸಂಸ್ಥೆ “ಬಿರುವೆರ್ ಕುಡ್ಲ”


ಬರಹ: ಪುಷ್ಪರಾಜ್ ಪೂಜಾರಿ

 

ಜನರ ಕಷ್ಟಗಳಿಗೆ ಸದಾ ಸ್ಪಂದನೆ ನೀಡುತ್ತಾ, ಯುವಕರಿಗೆ ಉದ್ಯೋಗ ನೀಡುತ್ತಾ, ಸದಾ ಬಡ ಜನರ ಸೇವೆಗೆ ಮುಡಿಪಾಗಿರುವ ಈ ಸಂಘ, ಶ್ರೀ ನಾರಾಯಣ ಗುರುಗಳ ತತ್ವವನ್ನು ಪರಿ ಪಾಲನೆ ಮಾಡುತ್ತ ನಡೆಸುತ್ತಾ ಬಂದಿರುವ “ಬಿರುವೆರ್ ಕುಡ್ಲ” – ಯಾವುದೆ ಜಾತಿ – ಮತ – ಭೇದವಿಲ್ಲದೆ, ಜನರಿಗೆ ಕಷ್ಟ ಎಂದು ಬಂದರೆ ಮೊದಲಿಗೆ ನೆನಪಾಗುವ ಸಂಸ್ಥೆಯಾಗಿದೆ.

ಇನ್ನೋಂದು ರೀತಿಯಲ್ಲಿ ಈ ಸಂಸ್ಥೆ ನಮ್ಮ ಸಮಾಜದ ಯುವಕರು ದಾರಿ ತಪ್ಪುವ ಸಮಯದಲ್ಲಿ ಯುವಕರಿಗೆ ಸಮಾಜದಲ್ಲಿ ಒಳ್ಳೆಯ ಕೆಲಸಗಳಿಗೆ ತೋಡಗಿಸಿ ಯುವಕರನ್ನು ಒಗ್ಗೂಡಿಸಿ ಸಮಾಜ ಸೇವೆಗೆ ಉತ್ತೇಜನ ನೀಡುತ್ತಿರುವ ಸಂಸ್ಥೆಯು ಆಗಿದೆ.

ಬಿಲ್ಲವರನ್ನು ಸಮಾಜದಲ್ಲಿ ಗುರುತಿಸಿ ನಾಯಕತ್ವದ ಬೆಲೆಯನ್ನು ತೋರಿಸಿಕೊಂಡು ಬಂದಿರುವ ಶ್ರಿ ಜನಾರ್ಧನ ಪೂಜಾರಿಯವರ ಸ್ಫೂರ್ತಿ ಪಡೆದು , ಶ್ರೀ ನಾರಾಯಣ ಗುರುಗಳ ತತ್ವದಂತೆ ಸ್ಥಾಪಿಸಿದ ಈ ಸಂಸ್ಥೆಯ ನಾಯಕ ಉದಯ್ ಪೂಜಾರಿಯವರು ಬಿಲ್ಲವ ವಾರಿಯರ್ಸ್ ಗೆ ಮಾತಿಗೆ ಸಿಕ್ಕಾಗ…

ಕೆಲವು ಪ್ರಶ್ನೆಗಳನ್ನು ಮುಂದಿಡುತ್ತಾ…

-. ಈ ಬಿರುವೆರ್ ಕುಡ್ಲ ಸಂಸ್ಥೆಯ ಉದ್ದೇಶ ವೇನು?

ಮೊದಲನೆದಾಗಿ ಯಾವುದೆ ಜಾತಿ – ಮತ – ಭೇದವಿಲ್ಲದೆ ನಡೆಯುಂತ ಸಂಸ್ಥೆಯಾಗಿರುವುದರಿಂದ, ಸಮಾಜದಲ್ಲಿ ಒಗ್ಗಟ್ಟಾಗಿ ಇರಬೇಕು ಹಾಗೂ ಬಡ- ಜನರಿಗೆ ಸಹಾಯವಾಗುವ ದ್ರಷ್ಟಿಯಲ್ಲಿ ಈ ಸಂಸ್ಥೆ ಸ್ಥಾಪಿತವಾಗಿದೆ. ಬಿಲ್ಲವ ಯುವಕರಿ ನಾಯಕತ್ವವನ್ನು ನೀಡಿ ಸಮಾಜದ ಜನರಿಗೆ ಸಹಾಯವಾಗುವ ರೀತಿಯಲ್ಲಿ ನಡೆಯಬೇಕು. ಯುವಕರು ಸಮಾಜದಲ್ಲಿ ಗಲಭೆಗಳಿಗೆ ಪಾಲ್ಗೋಳ್ಳದಂತೆ ಸಮಾಜ ಸೇವೆಗೆ ಮುಡಿಪಾಗಬೇಕು, ನಾಲ್ಕು ಜನರಿಗೆ ಸಹಾಯವಾಗಲಿ ಎನ್ನುವುದು ಉದ್ದೇಶವಾಗಿದೆ.

– ಈ ಸಂಘಟನೆ ಆದ ನಂತರದ ಬೆಂಬಲ ಹೇಗಿತ್ತು?

– ಎಲ್ಲಾ ವರ್ಗದ ಜನರಿಂದಲು, ಯಾವುದೆ ಜಾತಿ – ಭೇದ ನೋಡದೆ, ಸಂಘಟನೆ ಪರವಾಗಿ ನಿಂತಿದ್ದಾರೆ. ಈ ಸಂಸ್ಥೆ ಟ್ರೇಂಡ್ ಆಗಿದೆ, ಯಾಗೆಂದರೆ ಪಿಲಿ ನಲಿಕೆ ಯಲ್ಲು ಚಿಕ್ಕ- ಮಕ್ಕಳ ಹಿಡಿದು , ದೊಡ್ಡವರಿಗೂ ಬಿರುವೆರ್ ಕುಡ್ಲ ಬ್ರಾಂಡ್ ಆಯಿತು. ಕೇವಲ ಒಂದೇ ಜಾತಿಯವರಲ್ಲ ಎಲ್ಲಾ ಜಾತಿಯಿಂದಲು ಬೆಂಬಲ ದೊರಕಿದೆ.

– ಜನರ ಬಳಿ ಬಿರುವೆರ್ ಕುಡ್ಲ ಎಂದರೆ, ಮುಖದಲ್ಲಿ ಆನಂದದಿಂದ ಉತ್ತರಿಸುತ್ತಾರೆ ಅಂತಹ ಕೆಲಸ ಈ ಸಂಸ್ಥೆಯಿಂದ ಏನಾಗಿದೆ.?

ಬಡ ಜನರ ಕಷ್ಟಗಳಿಗೆ ಕೈಯಲ್ಲಾಗುವಷ್ಟು ಸಹಕರಿಸಿದೆ, ಯುವಕರಿಗೆ ಉದ್ಯೋಗ, ಬಡ ಜನರ ಸಮಸ್ಯೆ ಎಲ್ಲಾದಕ್ಕೂ ಸ್ಪಂದಿಸುತ್ತಿದೆ. ನ್ಯಾಯ ವದಗಿಸುವ ಕಾರ್ಯವನ್ನು ನಡೆಸುತ್ತಿದೆ. ಜನರಿಗೆ ತುಂಬ ಇಷ್ಟವಾಗಿದೆ. ಜನರ ಸಮಸ್ಯೆಗೆ ನಮ್ಮ ಈ ”ಬಿರುವೆರ್ ಕುಡ್ಲ” ಸದಾ ಇರುತ್ತದೆ. ಕೇವಲ ಮಂಗಳೂರಿನಲ್ಲಿ ಸೀಮಿತವಾಗಿರದೆ, ವೀದೆಶದಲ್ಲೂ ಘಟಕ ಮಾಡಿದ್ದಾರೆ. ಆರು ವರ್ಷಗಳಲ್ಲಿ ಸುಮಾರು ಒಂದುವರೆ ಕೋಟಿ ರೂಪಾಯಿಗಳ ಸಹಾಯ ನೀಡಿದ್ದೆವೆ,

– ಕಾಲು ಏಳೆಯಿವ ಪ್ರಯತ್ನ ಎಲ್ಲಾ ಜಾತಿಯಲ್ಲು ನಡೆಯುತ್ತದೆ. ನಿಮಗೂ ಅನುಭವ ಆಗಿದೆಯ?

ಎಲ್ಲಾ ಸಂಘಟನೆ ಹಾಗೂ ಎಲ್ಲಾ ಜಾತಿಯಲ್ಲು ಇದೆ, ಒಬ್ಬ ವ್ಯಕ್ತಿ ಸಮಾಜದಲ್ಲಿ ಎತ್ತರಕ್ಕೆ ಬೆಳೆಯುತ್ತಿದ್ದಾನೆ ಎಂದು ಗೊತ್ತಾಗೊದು ಕಾಲು ಏಳೆಯುವಾಗ. ಯುವಕರು ನೆನಪಿಟ್ಟುಕೋಳ್ಳಿ ನೀವು ಬೇಳೆಯುತ್ತಿದ್ದೀರಿ ಅನ್ನೋದು ಗೊತ್ತಾಗೊದು ನಿಮ್ಮನ್ನು ಹಿಂದೆಯಿಂದ ಜನ ಮಾತಾಡುವಾಗ ಹಾಗೂ ಕಾಲು ಏಳೆಯುವಾಗ. ಒಳ್ಳೆಯ ಮನಸ್ಸಿನಿಂದ ಸಮಾಜ ಒಪ್ಪುವ ಕೆಲಸ ಮಾಡಿ.

ಹೀಗೆ ಸಮಾಜ ಸೇವೆ ಮುಂದುವರಿಯಲಿ.. ದೀನ ದಲಿತರ ಸೇವೆಗೆ ಬಿರುವೆರ್ ಕುಡ್ಲ ಸಂಘಟನೆಯ ಸದಾ ಮುಡಿಪಾಗಿರಲಿ, ಸಂಘಟನೆಯ ಎಲ್ಲಾ ಕಾರ್ಯಕರ್ತರು ಹೀಗೆ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾ, ಸಮಾಜದ ಏಳಿಗೆಗೆ ಶ್ರಮಿಸುಂತಾಗಳಿ. ಸಮಾಜದಲ್ಲಿ ಓಗ್ಗೂಡಿ ಕಾರ್ಯನಿರ್ವಹಿಸುವಂತಾಗಳಿ ಎಂದು ಆಶಿಸೋಣ…

ಬರಹ: ಪುಷ್ಪರಾಜ್ ಪೂಜಾರಿ

 


Related Posts

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »