ಮುದ್ರಾಡಿಯ ಕೂಲಿ ಕಾರ್ಮಿಕರಾದ ಸುಕೇಶ್ ರವರಿಗೆ ಸಕ್ಕರೆಕಾಯಿಲೆಯಿಂದಾಗಿ ಗಾಯವಾಗಿ ಕಾಲು ಕೊಳೆತ ಸ್ಥಿತಿಗೆ ತಲುಪಿದ್ದು ಅವರ ಎಡಕಾಲನ್ನು ತೆಗೆಯಲಾಗಿದೆ ಇವರ ಶಸ್ತ್ರ ಚಿಕಿತ್ಸೆಗಾಗಿ ಸರಿ ಸುಮಾರು 4 ಲಕ್ಷದವರಗೆ ಹಣದ ಅವಶ್ಯಕತೆ ಇ ಬಡ ಕುಟುಂಬಕ್ಕಿದ್ದು ಅವರ ಧರ್ಮಪತ್ಮಿಯವರು ನಮ್ಮ ಬಳಿ ಸಹಾಯಧನಕ್ಕಾಗಿ ಮನವಿಯನ್ನು ನಮ್ಮ ಪ್ರಮುಖರ ಬಳಿ ನೀಡಿದ್ದು ನಮ್ಮ ಪ್ರಮುಖರು ತಮ್ಮಿಂದಾದ ಸಹಾಯವನ್ನು ನೀಡುವುದಾಗಿ ಭರವಸೆಯನ್ನು ನೀಡುರುತ್ತಾರೆ.
ಇ ಬಗ್ಗೆ ಕೂಡಲೆ ಚರ್ಚಿಸಿದ ಟೀಮ್ ತುಳುನಾಡ ಬಿರುವೆರ್ ತಂಡದ ಪ್ರಮುಖರು ಕೂಡಲೆ ಧನಸಹಾಯವನ್ನು ವಿತರಿಸುವ ವ್ಯವಸ್ಥೆಯನ್ನು ಮಾತ್ರ್ ಸಂಸ್ಥೆಯಾದ ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್® ಸಂಘಟನೆಯ ಸಹಯೋಗದೊಂದಿಗೆ ನೀರೆ ಬೈಲೂರು ಕೋಡಮಣಿತ್ತಾಯ ಬ್ರಹ್ಮ ಭೈದರ್ಕಳ ಗರಡಿಯಲ್ಲಿ ಗುರು ಹಿರಿಯರ ಮತ್ತು ಸಂಘಟನೆಯ ಪ್ರಮುಖರ ಮುಖಾಂತರ ದೊಡ್ದ ಮೊತ್ತವನ್ನು ಕುಟುಂಬದವರಿಗೆ ಹಸ್ತಂತರಿಸಲಾಯಿತು.
ಇ ಸಂದರ್ಬ ನಮ್ಮ ಜೊತೆಯಲ್ಲಿ ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸ್ಥಾಪಕ ಅದ್ಯಕ್ಷರಾದ ಲೋಕೆಶ್ ಕೋಡಿಕೆರೆ, ಅದ್ಯಕ್ಷರಾದ ವಿಶ್ವನಾಥ್ ಕೋಡಿಕೆರೆ, ಉಡುಪಿ ಜಿಲ್ಲಾ ಪ್ರಮುಖರಾದ ರಾಕೇಶ್ ಕಲ್ಯಾಣಪುರ, ಮಹೇಶ್ ಬೈಲೂರು, ರಾಜೇಶ್ ಉಚ್ಚಿಲ ಕೀರ್ತಿಕ್ ಮಣಿಪಾಲ, ಶರತ್ ತೊಕೂರು, ಪುಷ್ಫರಾಜ್ ಕುಳಾಯಿ, ಸಚಿನ್ ಕುಳಾಯಿ ,ಕಿಶನ್ ಕೋಡಿಕೆರೆ ಅಮರ್ ಮದ್ಯ ಸುಜಿತ್ ಕುಳಾಯಿ ಮತ್ತು ಸದಸ್ಯರು ಮತ್ತು ಪದಾದಿಕಾರಿಗಳು ಉಪಸ್ಥಿತಿಯಿದ್ದರು.
ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್®