ಸರ್ವಸಮಾನತೆಯ ಧಾರ್ಮಿಕ ತೆಯನ್ನು ಸಾಮಾಜಿಕ ನ್ಯಾಯದ ಪಥದಲ್ಲಿ ಮುನ್ನಡೆಸುವಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಿದವರು ಜನಾರ್ಧನ ಪೂಜಾರಿ ಹಾಗೂ ಅವರ ಜೊತೆ ಗಟ್ಟಿಯಾಗಿ ನಿಂತವರು ಪದ್ಮರಾಜ್ ಆರ್
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಬ್ರಹ್ಮ ಶ್ರೀ ನಾರಾಯಣ ಗುರುಗಳಿಂದ ಸ್ಥಾಪಿತವಾದ ಕರ್ನಾಟಕದ ಏಕೈಕ ಕ್ಷೇತ್ರ..ಸರ್ವ ಸಮಾನತೆಯ ಆಧ್ಯಾತ್ಮಿಕ ತೆಯ ಅರಿವು ಮೂಡಿಸುವ ಶ್ರೀ ಕ್ಷೇತ್ರವು ಗುರುದೇವರ ಸಾಮಾಜಿಕ ನ್ಯಾಯದಿಂದ ಕೂಡಿದ ಪರಿವರ್ತನೆಯ ಪಥದಲ್ಲಿ ಜನ ಸಮುದಾಯವನ್ನು ಮುನ್ನಡೆಸುವಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದವರು ಶ್ರೀ ಬಿ ಜನಾರ್ಧನ ಪೂಜಾರಿ, ಪೂಜಾರಿಯವರ ಆಶಯವನ್ನು ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಸುವ ಜವಾಬ್ದಾರಿ ನಮ್ಮೆಲರ ಮುಂದಿದೆ. ಜನಾರ್ಧನ ಪೂಜಾರಿ ಯವರ ಜೊತೆ ಗಟ್ಟಿಯಾಗಿ ನಿಂತಿರುವ ಪದ್ಮರಾಜ್ ಆರ್ ಭರವಸೆಯ ಜನ ನಾಯಕನಾಗಿ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.