TOP STORIES:

ಸಂಘಟನೆಗಾಗಿ ಜೀವನವನ್ನೇ ಮುಡಿಪಾಗಿಟ್ಟವರು ಸತ್ಯಜಿತ್‌ ಸುರತ್ಕಲ್. ಸಂಪೂರ್ಣ ಕಥೆ


ಕಟ್ಟರ್ ಹಿಂದೂ ಹೋರಾಟಗಾರ, ಸಂಘಟನೆಯೇ ಕುಟುಂಬ ಎಂದು ಸಂಘಟನೆಗಾಗಿ ಜೀವನವನ್ನೇ ಮುಡಿಪಾಗಿಟ್ಟವರು ಸತ್ಯಜಿತ್‌ ಸುರತ್ಕಲ್.

ಹಿಂದೂ ಧರ್ಮಕ್ಕಾಗಿ ಹೋರಾಟ ನಡೆಸುತ್ತ ಬಂದಿರುವ ಸತ್ಯಜಿತ್‌ ಸುರತ್ಕಲ್ ಅವರ ಸೇವಾ ಮನೋಭಾವ, ಕಾರ್ಯವೈಖರಿ ಬಗ್ಗೆ ಹೇಳೋದಾದ್ರೆ ಅವರೊಬ್ಬ ನಿಷ್ಠಾವಂತ ಪ್ರಾಮಾಣಿಕ ಜನ ನಾಯಕ ಎಂದರೆ ಅತಿಶಯೋಕ್ತಿ ಖಂಡಿತ ಆಗಲಾರದು.

ತನ್ನ 15-16ನೇ ವಯಸ್ಸಿನಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ತನ್ನ ಅಣ್ಣನ ಮೂಲಕ ಕಾಲಿಟ್ಟ ಸತ್ಯಜಿತ್‌ ಸುರತ್ಕಲ್, ನಿರಂತರವಾಗಿ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಿದವರು. ತನ್ನ ಕಾಲೇಜು ಶಿಕ್ಷಣದ ಜೊತೆಗೆ ಸಂಘದ ಜವಾಬ್ದಾರಿ ವಹಿಸಿಕೊಂಡ ಇವರು ಸುರತ್ಕಲ್ ನಗರದ ಪ್ರವಾಸಿ ಕಾರ್ಯಕರ್ತನಾಗಿ ಆಯ್ಕೆ ಆದರು. ಅದೇ ರೀತಿ ಎಬಿವಿಪಿ ಸಂಘಟನೆಯಲ್ಲಿ ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾದ ಇವರು, ಅನೇಕ ವಿದ್ಯಾರ್ಥಿ ಪರ ಹೋರಾಟದಲ್ಲಿ ನಾಯಕತ್ವ ವಹಿಸಿಕೊಂಡವರು.

ಸತ್ಯಜಿತ್‌ ಸುರತ್ಕಲ್ ಅವರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಹೋರಾಟ ಎಂದಿಗೂ ಮರೆಯಲು ಸಾಧ್ಯವಿಲ್ಲ. 1993ರಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಸಂದರ್ಭದಲ್ಲಿ ಸತ್ಯಜಿತ್‌ ಸುರತ್ಕಲ್ ಅವರಿಗೆ ವಯಸ್ಸು ಕೇವಲ 24 ಮಾತ್ರ. ಗೆಳೆಯರ ಜೊತೆ ಸೇರಿ ಮೋಜು ಮಸ್ತಿ ಮಾಡುವ ವಯಸ್ಸಿನಲ್ಲಿ ಸತ್ಯಜಿತ್‌ ಸುರತ್ಕಲ್ ದೇಶಪ್ರೇಮವನ್ನು ಮೈಗೂಡಿಸಿಕೊಂಡು ರಾಷ್ಟ್ರ ನಾಯಕರ ಜೊತೆ ಗುರುತಿಸಿಕೊಂಡು ಪೊಲೀಸರ ಸರ್ಪಗಾವಲನ್ನೂ ದಾಟಿ ಎಲ್ಲಾ ವಿರೋಧವನ್ನು ಮೆಟ್ಟಿ ನಿಂತು ರಾಷ್ಟ್ರ ಧ್ವಜವನ್ನು ಹಾರಿಸಿಬಿಟ್ಟಿದ್ದರು. ಈದ್ಗಾ ಮೈದಾನಕ್ಕೆ ತೆರಳಿದ ಮಂಗಳೂರಿನ ತಂಡದಲ್ಲಿ ಸತ್ಯಜಿತ್‌ ಸುರತ್ಕಲ್ ಕೂಡ ಒಬ್ಬರು. ಈ‌ ಘಟನೆಗೂ ಮೊದಲು ಹುಬ್ಬಳ್ಳಿಗೆ ತೆರಳಿದ ಸ್ವಯಂ ಸೇವಕರಿಗೆ ಯಾವ ರೀತಿಯ ತರಬೇತಿ ನೀಡಲಾಗಿತ್ತು ಎಂದರೆ ಸಾಮಾನ್ಯವಾಗಿ ಊಹಿಸಲು ಸಾಧ್ಯವಿಲ್ಲ. ‌ಎರಡು ದಿನಗಳ ಕಾಲ ನಿಗೂಢ ಸ್ಥಳದಲ್ಲಿ ವಾಸ್ತವವಿದ್ದ ಸ್ವಯಂ ಸೇವಕರಿಗೆ ಬ್ರೆಡ್ ಮತ್ತು ಸಕ್ಕರೆಯೇ ಆಹಾರವಾಗಿತ್ತು. ಯಾಕೆಂದರೆ ತಾವಿದ್ದ ಸ್ಥಳದಿಂದ ಹೊರ ಹೋದರೆ ಪೊಲೀಸರ ಗುಂಡಿಗೆ ಬಲಿಯಾಗಬೇಕಿತ್ತು, ಮಲ-ಮೂತ್ರ ಮಾಡುವುದಕ್ಕೂ ಹೊರಗಡೆ ಹೋಗುವಂತಿಲ್ಲ, ಅದೇ ಕಾರಣಕ್ಕೆ ಬ್ರೆಡ್ ಮತ್ತು ಸಕ್ಕರೆ ಮಾತ್ರ ತಿನ್ನಲು ನೀಡುತ್ತಿದ್ದರು. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಇವರು ಅಂಜಿದವರಲ್ಲ. ತಾವು ಬಂದ ಉದ್ದೇಶ ಈಡೇರುವವರೆಗೂ ಹಿಂದೆ ಹೆಜ್ಜೆ ಇಡುವ ಮಾತೇ ಇಲ್ಲ ಎಂದು ಪಣತೊಟ್ಟಿದ್ದ ಇವರು ಕೊನೆಗೂ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಒಂದು ಇತಿಹಾಸವನ್ನೇ ನಿರ್ಮಿಸಿದರು.‌ ಅನಂತ್ ಕುಮಾರ್ ಹೆಗ್ಡೆಯಂತಹ ಹಿಂದೂ ನಾಯಕರ ಜೊತೆ ಪೊಲೀಸರ ಎಲ್ಲಾ ಕೋಟೆಯನ್ನೂ ದಾಟಿ ಒಳನುಗ್ಗಿದ 4-5 ಜನ ಸ್ವಯಂ ಸೇವಕರಲ್ಲಿ ಸತ್ಯಜಿತ್‌ ಕೂಡ ಒಬ್ಬರು ಎಂಬುವುದು ಗಮನಿಸಬೇಕಾದ ಅಂಶ. ಹುಬ್ಬಳ್ಳಿಗೆ ತೆರಳಿದ ಕಾರ್ಯಕರ್ತರ ನೇತೃತ್ವ ವಹಿಸಿದವರು ಕಲ್ಲಡ್ಕ ಪ್ರಭಾಕರ್ ಭಟ್, ಇವರ ಮಾರ್ಗದರ್ಶನದಂತೆ ಸ್ವಯಂ ಸೇವಕರು ತಮ್ಮ ಕಾರ್ಯ ಯೋಜನೆ ಮಾಡಿಕೊಳ್ಳಬೇಕಾಗಿತ್ತು. ಇದಾದ ನಂತರ ಸತ್ಯಜಿತ್‌ ಸುರತ್ಕಲ್ ಎಂದರೆ ರಾಜ್ಯಾದ್ಯಂತ ಮನೆ – ಮನಗಳ ಮಾತಾಗಿ ಹೋದರು.

ಈ ಘಟನೆ ನಡೆದ ನಂತರ ಉಡುಪಿಯಲ್ಲಿ ಸತ್ಯಜಿತ್‌ ಸುರತ್ಕಲ್ ಅವರಿಗೆ ಒಂದು ಅದ್ಧೂರಿ ಸ್ವಾಗತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಕೂಡ ಭಾಗವಹಿಸಿದ್ದರು. ‌ಈದ್ಗಾ ಮೈದಾನದಲ್ಲಿ ನಡೆದ ಈ ಘಟನೆ ಕರ್ನಾಟಕದಲ್ಲಿ ಬಿಜೆಪಿ ಭದ್ರವಾಗಿ ನೆಲೆಯೂರಲು ಸಹಾಯಕವಾಯಿತು ಎಂದರೂ ತಪ್ಪಾಗದು. ‌ಯಾಕೆಂದರೆ ಇತ್ತೀಚೆಗೆ ಹುಬ್ಬಳ್ಳಿಗೆ ಬಂದ‌ ಪ್ರಧಾನಿ ನರೇಂದ್ರ ಮೋದಿಯವರು ಕೂಡ “ಇದು ತಿರಂಗ ಹಾರಿಸಿದ ನೆಲ” ಎಂದು ಒತ್ತಿ ಒತ್ತಿ ಹೇಳುದ್ದರು. ಇದಾದ ನಂತರ ಸತ್ಯಜಿತ್‌ ಸುರತ್ಕಲ್ ಅವರು ಹಿಂದೂ ಜಾಗರಣ ವೇದಿಕೆ ಎಂಬ ಸಂಘಟನೆ ಮೂಲಕ ಸಂಘಟನೆ ಕಟ್ಟಲು ಪ್ರಾರಂಬಿಸಿದರು. ಹಿಂದೂ ಧರ್ಮದ ಮೇಲಾಗುತ್ತಿದ್ದ ಶೋಷಣೆಯ ವಿರುದ್ಧ ಧ್ವನಿ ಎತ್ತಿದರು.‌ ಧರ್ಮ ರಕ್ಷಣೆಗೆ ಸಿದ್ಧರಿದ್ದ ಯುವಕರನ್ನು ಒಗ್ಗೂಡಿಸಿ, ಗೋಹತ್ಯೆ, ಲವ್ ಜಿಹಾದ್, ಮತಾಂತರದ ವಿರುದ್ಧ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದರು ಮಾತ್ರವಲ್ಲದೆ ಈ ವಿಚಾರದಲ್ಲಿ ಅನೇಕ ಪೊಲೀಸ್ ಕೇಸ್‌ಗಳನ್ನು ತನ್ನ ಮೈಮೇಲೆ ಹಾಕಿಕೊಂಡರು.

1993ರಲ್ಲಿ ನಡೆದ ಒಂದು ಲವ್ ಜಿಹಾದ್ ಪ್ರಕರಣ ಇಡೀ ಕರಾವಳಿಯನ್ನೇ ತಲೆ ತಗ್ಗಿಸುವಂತೆ ಮಾಡಿತ್ತು. ಆದರೆ ಇದರ ವಿರುದ್ಧ ಹೋರಾಟ ನಡೆಸಿದ ನಾಯಕ ಎಂದರೆ ಅದು ಸತ್ಯಜಿತ್‌ ಸುರತ್ಕಲ್ ಮಾತ್ರ, ಕೇವಲ ಹೋರಾಟ ನಡೆಸಿದ್ದು ಮಾತ್ರವಲ್ಲದೆ ಯಶಸ್ಸು ಕೂಡ ಕಂಡರು. ಅನೇಕ ಬೆದರಿಕೆಗಳನ್ನು ಎದುರಿಸಿದರೂ ಯಾವುದನ್ನು ಕ್ಯಾರೇ ಅನ್ನದೆ ಧರ್ಮ ರಕ್ಷಣೆಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. 1995ರಲ್ಲಿ ಪ್ರವಾಸಿ ಕಾರ್ಯಕರ್ತನಾಗಿ ಬೆಂಗಳೂರು ನಗರದಲ್ಲಿ ಹಿಂದೂ ಜಾಗರಣ ವೇದಿಕೆಯನ್ನು ಸಂಘಟಿಸಿ ಸಂಘಟನೆಯನ್ನು ಬಲಪಡಿಸಿದರು. 1996ರಲ್ಲಿ ಭಟ್ಕಳ ಹೋರಾಟದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಯುವ ಶಕ್ತಿಯನ್ನು ಹಿಂದೂ ಯುವಕರನ್ನು ಧರ್ಮ ಜಾಗೃತಿಗಾಗಿ ಸಂಘಟಿಸಿದರು. ಮಂಗಳೂರು ಎಂಆರ್‌ಪಿಎಲ್ ಪೈಪ್ ಲೈನ್ ವಿರುದ್ಧದ ಹೋರಾಟದಲ್ಲೂ ಮೊಗವೀರ ಸಮುದಾಯದ ಜನರ ಜೊತೆ ಕೈಜೋಡಿಸಿದರು. ಕೊಡಗು, ಚಿಕ್ಕಮಗಳೂರು, ಶೃಂಗೇರಿ ಸೇರಿದಂತೆ ಮತಾಂತರದ ವಿರುದ್ಧ ನಡೆದ ಪ್ರತಿಭಟನೆಯ ನಾಯಕತ್ವ ವಹಿಸಿಕೊಂಡು ಸಂಘದ ಹಿರಿಯರು ವಹಿಸಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದವರು.

ದಿನದ 24 ಗಂಟೆಯೂ ಸಂಘಟನೆಗಾಗಿ ಕಾರ್ಯಕರ್ತರಿಗಾಗಿ ಶ್ರಮಿಸುತ್ತಿದ್ದ ಸತ್ಯಜಿತ್‌ ಸುರತ್ಕಲ್ ಅವರಿಗೆ 1994ರಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಆಹ್ವಾನ ಕೂಡ ಬಂದಿತ್ತು. ಆದರೆ ರಾಜಕೀಯದಿಂದ ದೂರ ಉಳಿದ ಇವರು, ಸಂಘಟನೆಗಾಗಿಯೇ ಜೀವ ಮೀಸಲಿಟ್ಟಿದ್ದೇನೆ ಎನ್ನುತ್ತಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿ ಬಿಟ್ಟರು.

 

 ಸಂಘಟನೆಯಲ್ಲಿ ಹೆಚ್ಚು ಗುರುತಿಸಿಕೊಂಡ ಕಾರಣ ವಿರೋಧಿಗಳು ಹೆಚ್ಚಾದರು, ಬೆದರಿಕೆ ಕರೆಗಳು ಬರತೊಡಗಿದವು. ಇದನ್ನು ಗಂಭೀರವಾಗಿ ಪರಿಗಣಿಸಿ ಸ್ವತಃ ಗುಪ್ತಚರ ಇಲಾಖೆಯ ಆದೇಶದಂತೆ ಸತ್ಯಜಿತ್‌ ಸುರತ್ಕಲ್ ಅವರಿಗೆ ಗನ್ ಮ್ಯಾನ್ ಕೂಡ ಒದಗಿಸಿದರು. 

ಮದುವೆ ಆದ ಹೆಂಡತಿಗಿಂತ ನನಗೆ ನನ್ನ ಸಂಘಟನೆಯೇ ಮುಖ್ಯ ಎಂದು ಬಹಿರಂಗವಾಗಿ ಹೇಳಿಕೊಂಡ‌ ಸತ್ಯಜಿತ್‌ ಸುರತ್ಕಲ್, ಕಾರ್ಯಕರ್ತರಿಗೆ ಯಾವುದೇ ರೀತಿಯ ತೊಂದರೆಯಾದರೂ ಅವರ ಜೊತೆಗೆ ಕಾರ್ಯಕರ್ತನ ಕುಟುಂಬದ ಜೊತೆ ಬೆಂಗಾವಲಾಗಿ ನಿಲ್ಲುತ್ತಾರೆ. ಅದೆಷ್ಟೋ ಕಾರ್ಯಕರ್ತರು ಸಂಘಪರಿವಾರಗಳಲ್ಲಿ ತೊಡಗಿಸಿಕೊಂಡು ಕೇಸ್ ಹಾಕಿಸಿಕೊಂಡು ಜೈಲು ಸೇರಿದ ಸಂದರ್ಭದಲ್ಲೂ ಕಾರ್ಯಕರ್ತರ ಕುಟುಂಬದ ಮಗನಾಗಿ ಆರ್ಥಿಕ ಸಹಾಯ ಕೂಡ ಮಾಡಿದ ವ್ಯಕ್ತಿ ಸತ್ಯಜಿತ್‌ ಸುರತ್ಕಲ್. ‌

ಅನ್ಯ ಧರ್ಮೀಯರಿಂದ‌ ನಿರಂತರ ಒಂದಲ್ಲ ಒಂದು ರೀತಿಯಲ್ಲಿ ದಾಳಿಗೊಳಗಾಗುತ್ತಿದ್ದ ಹಿಂದೂ ಸಮಾಜದ ಪರವಾಗಿ ರಾಜಕೀಯ ನಾಯಕರ ನೇತೃತ್ವದಲ್ಲಿ ಸತ್ಯಜಿತ್‌ ಸುರತ್ಕಲ್ ಅವರ ನಾಯಕತ್ವದಲ್ಲಿ ಸುರತ್ಕಲ್ ನಗರದಲ್ಲಿ ಬೃಹತ್ ಹೋರಾಟ ಒಂದು ನಡೆಯುತ್ತದೆ, ಈ ಹೋರಾಟದಲ್ಲಿ ನಾಯಕತ್ವ ವಹಿಸಿಕೊಂಡ‌ ಸತ್ಯಜಿತ್‌ ಹಿಂದೂ ವಿರೋಧಿಗಳಿಗೆ ಸ್ಪಷ್ಟ ಸಂದೇಶ ರವಾನೆ ಮಾಡುತ್ತಾರೆ. ಯಾರೇ ಆಗಲಿ ಹಿಂದೂ ಹೆಣ್ಣು ಮಕ್ಕಳ ಅಥವಾ ಹಿಂದೂ ಕಾರ್ಯಕರ್ತರ ವಿಚಾರದಲ್ಲಿ ಉಪಟಳ ನೀಡಿದರೆ ಅಂತವರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ ಮತ್ತು ಹಿಂದೂ ಸಮಾಜ ಎಲ್ಲಾ ಹೋರಾಟಕ್ಕೂ ಸಿದ್ಧವಾಗಿದೆ ಎಂಬ ಎಚ್ಚರಿಕೆಯನ್ನು ಕೂಡ ನೀಡುತ್ತಾರೆ.‌ ಈ ಹೋರಾಟದಲ್ಲಿ ಹಿಂದೂ ಕಾರ್ಯಕರ್ತರು ಬಂಧನಕ್ಕೊಳಗಾಗುತ್ತಾರೆ, ಆದರೆ ಕಾರ್ಯಕರ್ತರ ಸಹಾಯಕ್ಕೆ ನಿಂತ ಸತ್ಯಜಿತ್‌, ಪ್ರತಿಯೊಂದು ಹಂತದಲ್ಲೂ ಕಾರ್ಯಕರ್ತರ ಬೆಂಗಾವಲಾಗಿ ನಿಂತಿದ್ದರು.

ಹಿಂದೂ ಕಾರ್ಯಕರ್ತ ಪೊಳಲಿ ಅನಂತು ಅವರ ಹತ್ಯೆ ಇಡೀ ಕರಾವಳಿಯನ್ನು ಬೆಚ್ಚಿ ಬೀಳಿಸುವಂತಹ ಘಟನೆ, ಇಡೀ ಕರಾವಳಿಯೇ ಬೂದಿ ಮುಚ್ಚಿದ ಕೆಂಡದಂತಾಗಿತ್ತು. ಹತ್ಯೆಯಾದ ಅನಂತು ಅವರ ಪಾರ್ಥಿವ ಶರೀರವನ್ನು ಮನೆಗೆ ಕೊಂಡೊಯ್ಯುವ ಸಂದರ್ಭದಲ್ಲಿ ದಾರಿಯಲ್ಲಿ ಮತ್ತೆ ವಿರೋಧಿಗಳಿಂದ ದಾಳಿ ಆಗುತ್ತದೆ, ಈ‌ ಸಂದರ್ಭದಲ್ಲಿ ಸೇರಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸುತ್ತಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಪಾರ್ಥಿವ ಶರೀರವನ್ನು ಮನೆಗೆ ಸುರಕ್ಷಿತವಾಗಿ ಸಾಗಿಸುವಲ್ಲಿ ಸತ್ಯಜಿತ್‌ ಸುರತ್ಕಲ್ ಯಶಸ್ವಿಯಾಗುತ್ತಾರೆ.‌ 

 

 

ಅಷ್ಟೇ ಅಲ್ಲದೆ ಅನಂತು ಅವರ ಸಹೋದರಿಯ ಮದುವೆಗೆ ಆರ್ಥಿಕ‌ ಸಹಾಯದ ಜೊತೆಗೆ ಸಂಪೂರ್ಣ ಮನೆಯವರ ಬೆಂಬಲಕ್ಕೆ ನಿಂತು ಹಿಂದೂ ಜಾಗರಣ ವೇದಿಕೆಯ ಮೂಲಕ ಒಂದು ಮನೆಯನ್ನೂ ಕಟ್ಟಿಸಿ ಕೊಡುತ್ತಾರೆ. ಇವಿಷ್ಟು ಸತ್ಯಜಿತ್‌ ಸುರತ್ಕಲ್ ಎಂಬ ನಾಯಕನ ಮಾನವೀಯ ಗುಣ. ಮಾನವೀಯ ಗುಣ ಮಾನವೀಯ ಗುಣ ಎಂದು ಒತ್ತಿ ಒತ್ತಿ ಹೇಳುವವರು ಇದನ್ನೆಲ್ಲಾ ಯೋಚಿಸಬೇಕು. ಸತ್ಯಜಿತ್ ರವರು ಇದ್ಯಾವುದನ್ನೂ ಪ್ರಚಾರಕಗರಾಗಿ ಮಾಡಲಿಲ್ಲ.ಆಗಿನ ಕಾಲದಲ್ಲಿ ಸಾಮಾಜಿಕ ಜಾಲತಾಣವೂ ಇರಲಿಲ್ಲ. ಮೂವತೈದು ವರ್ಷ ಸೇವೆಗೋಸ್ಕರ ಜೀವನ ಮುಡಿಪಾಗಿಟ್ಟವರು.

ಇತ್ತೀಚಿಗೆ ಸ್ವಜಾತಿಪ್ರೇಮದ ಕಾರಣ ಸಮರ್ಥನೆಗೋಸ್ಕರ ಇನ್ನೂರು ಮನ್ನೂರು ಜನರನ್ನು ಸಾವಿರ ಜನ ಸೇರಿದ್ದರು ಎಂಬ ಕಾರಣ ನೀಡಿ ಲಾ ಎಂಡ್ ಆರ್ಡರ್ ಸುವ್ಯವಸ್ಥೆ ಕಾರಣ ನೀಡಿ ಪಾರಾಗಲು ನೆಪ ನೀಡಿದ್ದರು.ನಿಮಗೆ ನೆನಪಿದ್ದರೆ ಅದಕ್ಕಿಂತ ಕಠಿಣ ಕೆಲವು ಘಟನೆಗಳನ್ನು ನೆನಪಿಸಿಕೊಂಡು ನೋಡಿ, ಬಂಟ್ವಾಳದಲ್ಲಿ ಶರತ್ ಮಡಿವಾಳ ಎಂಬ ಕಾರ್ಯಕರ್ತನ ಹತ್ಯೆಯಾದ ಸಂದರ್ಭದಲ್ಲೂ ಪಾರ್ಥಿವ ಶರೀರರ ಮೆರವಣಿಗೆ ಸಮಯದಲ್ಲಿ ಮಸೀದಿಯ ಬಳಿ ಕಲ್ಲೂ ತೂರಾಟ ನಡೆಯುತ್ತದೆ.ಈ‌ ಸಂದರ್ಭದಲ್ಲಿ ಪೊಲೀಸರು ಕೂಡ ಲಾಠಿಚಾರ್ಜ್ ನಡೆಸುತ್ತಾರೆ, ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗ್ತದೆ. ಇವಾಗ ಶಾಸಕರಾಗಿರುವ ಒಬ್ಬ ವ್ಯಕ್ತಿ ಕಾರು ಹತ್ತಿ ಮಂಗಳೂರು ಕಡೆ ವಾಪಾಸಾಗಿರ್ತಾರೆ. ವಜ್ರದೇಹಿ ಸ್ವಾಮೀಜಿಯವರೂ ಕಾರಿಂದ ಇಳಿಯುತ್ತಾರೆ.ಆದರೆ ಜಾಗರಣದ ಕಾರ್ಯಕರ್ತರು ಅವರನ್ನು ನೀವು ಹೋಗಿ ಸ್ವಾಮೀಜಿಗಳೇ, ನಾವು, ಸತ್ಯಣ್ಣ ಇದ್ದೇವೆ ಎಂದು ಅವರನ್ನು ಕಳುಹಿಸಿಕೊಡುತ್ತಾರೆ. ಪಾರ್ಥಿವ ಶರೀರವನ್ನು ಮನೆಗೆ ತಲುಪಿಸಿ ಎಲ್ಲಾ ಕಾರ್ಯಕರ್ತರು ಸ್ಥಳದಿಂದ ಹೋದ ನಂತರ ಸತ್ಯಜಿತ್‌ ಅಲ್ಲಿಂದ ಹೋಗಿದ್ದರು.‌ಯಾವೊಬ್ಬ ಕಾರ್ಯಕರ್ತನಿಗೂ ತೊಂದರೆಯಾಗದಂತೆ ನೋಡಿಕೊಂಡು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಆದರೆ ಅದನ್ನು ಪ್ರಚಾರ ಮಾಡಲು ಸತ್ಯಣ್ಣನ ಅಭಿಮಾನಿಗಳಿಗೆ ಬರುವುದಿಲ್ಲ ನೋಡಿ ಹಾಗಾಗಿ ಸತ್ಯಣ್ಣನ ಕೆಲಸಗಳು ಬರಿಯ ಕಾರ್ಯಕರ್ತರಿಗಷ್ಟೇ ಗೊತ್ತು. 

ಭಾರತೀಯ ಸೈನಿಕರ ಮೇಲಿರುವ ಗೌರವಕ್ಕಾಗಿ “ರಾಷ್ಟ್ರ ಭಕ್ತ ನಾಗರಿಕ ವೇದಿಕೆ” ಎಂಬ ಒಂದು ತಂಡ ರಚಿಸಿ ಪ್ರತೀವರ್ಷ ಸೈನಿಕರನ್ನು ಗುರುತಿಸಿ ವಿಶೇಷ ಕಾರ್ಯಕ್ರಮ ನಡೆಸಿಕೊಂಡು ಬಂದಿರುವ ಇವರು , ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ.ಅಂಗವೈಕಲ್ಯ ಅಥವಾ ಯಾವುದೇ ರೀತಿಯ ತೊಂದರೆ ಉಂಟಾಗಿರುವ ಸೈನಿಕರ ಕುಟುಂಬಕ್ಕೆ ಧನಸಹಾಯ ನೀಡುವ ಮೂಲಕ ಗೌರವಿಸುತ್ತಾ ಬಂದಿರುತ್ತಾರೆ.

ಈವರೆಗೆ ಅದೆಷ್ಟೋ ಧನಸಹಾಯ ಮಾಡುತ್ತಾ ಬಂದಿರುವ ಸತ್ಯಜಿತ್ ರವರು ಯಾವ ವೇದಿಕೆಯಲ್ಲೂ ತಾನು ಮಾಡಿದ ಧನಸಹಾಯದ ಬಗ್ಗೆ ಹೇಳಿಲ್ಲ. ಪ್ರಚಾರಕ್ಕಾಗಿ ಯಾವುದನ್ನೂ ಮಾಡುವ ಜಾಯಮಾನ ಇವರಿಗಿಲ್ಲ. ತಮ್ಮ ಬೆಂಬಲಿಗರಿಂದ ವೀಡಿಯೋ ಮಾಡಿ ಹೇಳಿಸಿಲ್ಲ.

ಅವರು ದುಡಿದದ್ದು ಹಿಂದೂ ಸಮಾಜಕ್ಕಾಗಿ. ಅವರಿಗೂ ರಾಜಕೀಯದ ಆಸೆ ಇರಲಿಲ್ಲ. ಪಕ್ಷ ತನ್ನ ಸೇವೆ ಗಮನಿಸಿ ತನಗೆ ಟಿಕೆಟ್ ನೀಡಲಿ ಎಂದು ಸುಮ್ಮನಿದ್ದರು. ಆದರೆ ಹಣಬಲ ಮತ್ತು ಜಾತಿ ಬಲದ ನಡುವೆ ಸೇವೆ, ತ್ಯಾಗ ಬದಿಗೆ ಸರಿಯಿತು. ಲೋಕಸಭೆ ಚುಣಾವಣೆಯಲ್ಲಿ ಸತ್ಯಣ್ಣನ ಅಭಿಮಾನಿಗಳು ಎಂಬತ್ತಕ್ಕೂ ಹೆಚ್ಚು ಕಡೆ ಸ್ವಯಂ ಪ್ರೇರಿತವಾಗಿ ಸತ್ಯಜಿತ್ ರವರೇ ಅಭ್ಯರ್ಥಿಯಾಗಲಿ ಎಂಬ ಫ್ಲೆಕ್ಸ್ ಬೋರ್ಡ್ ಹಾಕಲಾಯಿತು. ಯಡಿಯೂರಪ್ಪನವರ ವಿನಂತಿಮೇರೆಗೆ ಅದನ್ನು ಸತ್ಯಣ್ಣನವರೇ ತೆಗೆಯುವಂತೆ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದರು.. ಎಂದು ಹಿಂದೂ ಕಾರ್ಯಕರ್ತರು ತಿಳಿಸಿದ್ದಾರೆ


Related Posts

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »