ಮನಸ್ಸಿನ ಭಾವನೆಗಳಿಗೆ ಬಣ್ಣ ತುಂಬಿ ಜೀವ ತುಂಬಾವ ಶಕ್ತಿ ಎಲ್ಲರಲ್ಲಿಯೂ ಇರುವುದಿಲ್ಲ ಇಲ್ಲೊಬಳು ತನ್ನ ಭಾವನೆಗಳಿಗೆ ಬಣ್ಣ ತುಂಬಿ ತನ್ನ ಪ್ರತಿಬೇನ ಜಗತ್ತಿಗೆ ತೋರಿಸುತ್ತಿದ್ದಾರೆ ಅವರೇ ರಕ್ಷಾ ಪೂಜಾರಿ.
ರಮೇಶ್ ಪೂಜಾರಿ ಮತ್ತು ಶಶಿಕಲಾ ಕೋಟ್ಯಾನ್ ದಂಪತಿಗಳ ಇಬ್ಬರು ಮಕ್ಕಳಲ್ಲಿ ಮುದ್ದಿನ ಮಗಳು ರಕ್ಷಾ ಬಡತನ ಇದ್ದರು ತನ್ನ ಪ್ರತಿಭೆಗೆ ಬಡತನ ಇರಲಿಲ್ಲ. ಪ್ರಸ್ತುತ ಬಾಡಿಗೆ ಮನೆಯಲ್ಲಿ ವಾಸಿಸುವ ರಕ್ಷಾರ ತಂದೆ ಅಂಗವಿಕಲತೆಯಿಂದ ಮನೆಯಲಿಯೇ ತಾಯಿಯ ದುಡಿಮೆಯಿಂದ ಜೀವನ ಸಾಗಿಸುವ ಬಡ ಕುಟುಂಬ, ತಮ್ಮ ಪಿ ಯು ಸಿ ಕಲಿಯುತ್ತಿದ್ದಾರೆ. ಇವರು ಪ್ರಾಥಮಿಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಪು ಪಡು, ಪ್ರೌಢ ಶಿಕ್ಷಣ ಮಹಾದೇವಿ ಪ್ರೌಢ ಶಾಲೆ ಕಾಪು,ಪಿ ಯು ಸಿ ಮತ್ತು ಕಾಲೇಜ್ ಶಿಕ್ಷಣವನ್ನು ದಂಡತೀರ್ಥ ಉಳಿಯರ ಗೋಳಿ ಯಲ್ಲಿ ಪೂರ್ಣಗೊಳಿಸಿದ ರಕ್ಷಾ ಚಿತ್ರ ಕಲೆಯಲ್ಲಿ ದೊಡ್ಡ ಸಾಧನೆ ಮಾಡಬೇಕು ಎನ್ನುವ ಉದ್ದೇಶದಿಂದ ವಿಶುವಲ್ ಆರ್ಟ್ಸ್ ಕಲಿಯಲು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಗೆ ಸೇರಿದರು.
ವಾರ್ಲಿ ಆರ್ಟ್ಸ್, ವಾರ್ಲಿ ವಾಲ್ ಪೈಂಟಿಂಗ್, ಟ್ರೇಡಿಷನಲ್ ಪೈಟಿಂಗ್, ಪಾಟ್ ಪೈಟಿಂಗ್, ಪಾಟ್ರೈಟ್ ಪೈಟಿಂಗ್, ಪಾಟ್ರೈಟ್ ಸ್ಕೆಚ್, ಮತ್ತು ಆಯಿಲ್ ಕಲರ್ ಪೈಟಿಂಗ್ ಮತ್ತು ಎಲ್ಲಾ ತರಹದ ಕ್ಯಾನವಸ್ ಪೈಟಿಂಗ್ ಮಾಡಿ ತನ್ನ ಅದ್ಭುತ ಪ್ರತಿಭೇನ ಜಗತ್ತಿಗೆ ತೋರಿಸಿದ್ದಾರೆ.
ಹಾಗೆಯೇ ಉಡುಪಿಯಲ್ಲಿ ನಡೆದ ಪವರ್ ಪರ್ಬ ಎನ್ನುವ ಎಕ್ಸಿಬಿಷನ್ನಲ್ಲಿ ಪಾಲ್ಗೊಂಡಿದ್ದಾರೆ ಮತ್ತು ಅನೇಕ ಕ್ಯಾಂಪ್ ಗಳಲ್ಲಿ ಹಾಜರಾಗಿದ್ದಾರೆ ಮತ್ತು ಮುಕ್ತ ಟಿವಿ ಯ ಅನ್ವೇಷಣೆ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದಾರೆ
ಇವರ ಈ ಸಾಧನೆಗೆ ಮನೋಜ್ ಶೆಟ್ಟಿ ಮತ್ತು ಅಸ್ವಿನಿ ಶೆಟ್ಟಿ ,ಅಶೋಕ್ ದೇವಾಡಿಗ, ಮತ್ತು ಡಾ ಸುರೇಶ ಹಾಗೆಯೇ ಇವರು ಇರುವ ಬಾಡಿಗೆ ಮನೆಯ ಯಜಮಾನರ ಮಗ ಹೀಗೆ ಇವರ ಸಂಪೂರ್ಣ ಪ್ರೋತ್ಸಾಹ ಇದೆ ಇವರಿಗೆ
ಇವರ ಈ ಸಾಧನೆಗೆ ರಾಜ್ಯ ಮಟ್ಟದ ಪ್ರಶಸ್ತಿಕೂಡ ಇವರ ಮುಡಿಗೇರಿದೆ, ಫೆಬ್ರವರಿ 23ರಂದು ಕಲಾಬ್ದಿ ಎನ್ನುವ ರಾಷ್ಟ್ರ ಮಟ್ಟದ ಪೈಟಿಂಗ್ ಸ್ಪರ್ಧೆ ಗೆ ಆಯ್ಕೆ ಯಾಗಿರುವುದು ನಮ್ಮ ತುಳುನಾಡಿಗೆ ಹೆಮ್ಮೆಯ ವಿಷಯ ಇವರು ಈ ಸ್ಪರ್ಧೆಯಲ್ಲಿ ಗೆದ್ದು ಬರಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಅವಕಾಶ ಸಿಗಲಿ.
ಇವರ ಕನಸು ರಕ್ಷಾ ಆರ್ಟ್ ಎಂಬ ಆರ್ಟ್ ಗ್ಯಾಲರಿ ಮಾಡಿ ಸಣ್ಣ ಸಣ್ಣ ಕ್ಯಾಂಪ್ ಮಾಡಿ ಮಕ್ಕಳಿಗೆ ಆರ್ಟ್ ಕಲಿಸುವ ಇವರ ಕನಸು ನನಸಾಗಲಿ ಇನ್ನಷ್ಟು ಸಾಧನೆ ಮಾಡುವಂತಾಗಲಿ ತುಳುನಾಡ ದೈವ ದೇವರುಗಳ ಅನುಗ್ರಹ ಸದಾ ಇರಲಿ ಒಳ್ಳೆಯದಾಗಲಿ ಎಂದು ಹಾರೈಸುವ
ಬರಹ : ✍️ ಪ್ರಶಾಂತ್ ಅಂಚನ್ ಮಸ್ಕತ್ತ್