TOP STORIES:

ತನ್ನ ಸೇವಾ ತಂಡವನ್ನು ಒಟ್ಟುಸೇರಿಸಿ ಪರರ ಕಷ್ಟಗಳಿಗೆ ಸ್ಪಂದಿಸುವ,ಯುವ ಮನಸ್ಸಿನ ತೆರೆಮರೆಯ ಸೇವಾ ಮಾಣಿಕ್ಯ ಸುಕೇಶ್ ಜಿ ಅಂಚನ್.


ಮೂಡಬಿದ್ರೆ ತಾಲೂಕಿನ ತೋಡಾರಿನ ಗಿರಿಯ ಸುವರ್ಣ ಮತ್ತು ಗುಲಾಬಿ ದಂಪತಿಗಳ ನಾಲ್ಕನೇ ಪುತ್ರನಾಗಿ ಜನಿಸಿದರು. ತನ್ನಪ್ರಾಥಮಿಕ ವಿದ್ಯಾಭ್ಯಾಸವನ್ನು ಹಿರಿಯ ಪ್ರಾಥಮಿಕ ಶಾಲೆ, ಬಂಗಾಬೆಟ್ಟು,ಪ್ರೌಢ ಶಿಕ್ಷಣವನ್ನು ಸರ್ಕಾರಿ ಹೈಸ್ಕೂಲ್ಬಂಗಾಬೆಟ್ಟು,ಮಿಜಾರು ಇಲ್ಲಿ ಮುಗಿಸಿದರು.

ಬಡತನದಲ್ಲಿ ಹುಟ್ಟಿದ ಇವರು ಬಡವರ ಕಷ್ಟ ಏನೆಂದು ತಿಳಿದುಕೊಂಡಿದ್ದರು.ಕಷ್ಟದಲ್ಲೆ ಜೀವನ ಸಾಗಿಸುತ್ತಿದ್ದ ಇವರಿಗೆವಿದ್ಯಾಭ್ಯಾಸವನ್ನು ಅರ್ಧದಲ್ಲೇ ನಿಲ್ಲಿಸಬೇಕಾಯಿತು ಆದರೆ, ಶಾಲೆಯ ದಿನಗಳಲ್ಲಿ ನಾಟಕ,ನೃತ್ಯ ಮತ್ತು ಇನ್ನಿತರ ಚಟುವಟಿಕೆಗಳಲ್ಲಿಭಾಗವಹಿಸುತ್ತಿದ್ದರು.

ವಿದ್ಯಾಭ್ಯಾಸವನ್ನು ಅರ್ಧದಲ್ಲೇ ನಿಲ್ಲಿಸಿ, ಕೆಲಸವನ್ನು ಹುಡುಕುತ್ತಾ ಮಹಾನಗರವಾದ ಮುಂಬೈಗೆ ಹೋಗುತ್ತಾರೆ. ಚಿಕ್ಕಂದಿನಿಂದಲೇಕಷ್ಟ, ನೋವು ಏನೆಂದು ತಿಳಿದಿದ್ದ ಇವರಿಗೆ, ಬಡವರ ಪಾಲಿಗೆ ಆಸರೆಯಾಗಬೇಕು ಎನ್ನುವ ತವಕ ಅವರಲ್ಲಿ ಆಗಲೇ ಇತ್ತು. ಹಾಗೆಯೇಮುಂಬೈನಲ್ಲಿ ಕೆಲಸ ಮಾಡುತ್ತಾಲೆ,ಅಲ್ಲಿದ್ದ ನೊಂದವರಿಗೆ ಆಸರೆಯಾದರು.ಲಾಕ್ ಡೌನ್ ಸಂದರ್ಭದಲ್ಲಿ, ಮುಂಬೈನಲ್ಲಿಗೃಹಿಣಿಯೊಬ್ಬಳು ಸಂಕಷ್ಟದಲ್ಲಿದ್ದಾಗ ಅವರನ್ನು ಸುರಕ್ಷಿತವಾಗಿ ಊರಿಗೆ ತಲುಪಿಸುವ ದೊಡ್ಡ ಕಾರ್ಯವನ್ನು ಮಾಡಿದವರು. ಅಷ್ಟಲ್ಲದೇ ಲಾಕ್ ಡೌನ್ ನಲ್ಲಿ ಹಲವು ಬಡವರಿಗೆ ತಮ್ಮ ಸ್ವಂತ ಖರ್ಚಿನಿಂದ ಕಿಟ್ ವಿತರಿಸಿ ನೊಂದವರ ಪಾಲಿಗೆ ಆಸರೆಯಾದರು.

ಮುಂದಿನ ದಿನಗಳಲ್ಲಿ ಮುಂಬೈನಿಂದ ಊರಿಗೆ ಬಂದ ಇವರು 21-05-2020 ರಂದು ಕನಸಿನ ಯೋಜನೆಯಾದ#ನವಚೇತನ_ಸೇವಾ_ಬಳಗ_(ರಿ.) ವನ್ನು ತಮ್ಮ ಆತ್ಮೀಯ ಗೆಳೆಯನಾದ ಜಯಂತ್ ಕೋಟ್ಯಾನ್ ಕುಕ್ಯಾಡಿಯವರೊಂದಿಗೆಜೊತೆಗೂಡಿ ತೋಡಾರಿನಲ್ಲಿ ಪ್ರಾರಂಭಿಸಿದರು. ಬಳಗದಲ್ಲಿ ತರುಣರನ್ನು ಒಟ್ಟುಗೂಡಿಸಿ ಸೇವಾ ಕಾರ್ಯವನ್ನು ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಒಟ್ಟು #28_ಸೇವಾ_ಕಾರ್ಯ ವನ್ನು ಮಾಡುವ ಮೂಲಕ ಬಡವರ, ಅನಾರೋಗ್ಯದಲ್ಲಿದ್ದ,ನೊಂದವರ ಕಣ್ಣೊರೆಸುವಕಾರ್ಯವನ್ನು ಮಾಡಿದರು. ಸುಮಾರು #8_ಲಕ್ಷಕ್ಕೂ_ಮಿಕ್ಕಿ_ಹಣವನ್ನು ಸಂಗ್ರಹಿಸಿ ಬಡವರ ಪಾಲಿಗೆ ಆಸರೆಯಾದ ಮಾಣಿಕ್ಯ. ದೇವಸ್ಥಾನಗಳ ಬ್ರಹ್ಮಕಳಶ, ಮಹೋತ್ಸವ ಇರಲಿ, ಜಾತ್ರೆ ಇರಲಿ ಅಥವಾ ಬೇರೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಇವರ ತಂಡವುಸೇವಾ ಕಾರ್ಯದ ನಿಮಿತ್ತ ಹಾಜರಿರುತ್ತಿದ್ದರು. #ಭವತಿ_ಭಿಕ್ಷಾಂ_ದೇಹಿ ಎಂಬ ಯೋಜನೆಯಲ್ಲಿ ಬ್ರಹ್ಮ ಬೈದರ್ಕಳ ಗರಡಿ ಮಿಜಾರುಇಲ್ಲಿಯ ವಾರ್ಷಿಕ ಉತ್ಸವದಲ್ಲಿ,ಗುರುಪುರ ಬಂಡಿ ಜಾತ್ರೆಯಲ್ಲಿ,ದುರ್ಗಾ ಪರಮೇಶ್ವರಿ ದೇವಸ್ಥಾನ, ಇರುವೈಲು ಇದರ ಜಾತ್ರೆಯಸಂದರ್ಭದಲ್ಲಿ ಸುಮಾರು #2_ಲಕ್ಷಕ್ಕೂ ಅಧಿಕ ಧನ ಸಂಗ್ರಹಿಸಿ ಬಡವರ ಪಾಲಿಗೆ ಆಸರೆಯಾಗಿದ್ದಾರೆ.

ತಂಡದಲ್ಲಿ ಸೇವಾ ಕಾರ್ಯವನ್ನು ಮಾಡುತ್ತಿರುವುದ್ದಲ್ಲದೇ, ಪರೋಕ್ಷವಾಗಿ, ತಂಡದ ಸದಸ್ಯರಿಗೆ ಹಾಗೂ ಇತರರಿಗೂ ಸಹಾಯಮಾಡುತ್ತ,ನಿಸ್ವಾರ್ಥವಾದ ಸೇವೆಯನ್ನು ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೆ ಕಲಾವಿದರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ#ನವಚೇತನ_ಕಲಾ_ವೇದಿಕೆ ಸಂಸ್ಥೆಯನ್ನು ಪ್ರಾರಂಭಿಸಿ ತೆರೆಮರೆಯಲ್ಲಿ ಇರುವ ಕಲಾವಿದರನ್ನು ಪರಿಚಯಿಸುವ ಕೆಲಸವನ್ನು ಕೂಡಮಾಡುತ್ತಿದ್ದಾರೆ.

ಸದಾ ನಿಸ್ವಾರ್ಥ ಮನೋಭಾವದ ವ್ಯಕ್ತಿಯಾದ ಇವರು ಎಲ್ಲರ ಆಪತ್ಕಾಲಕ್ಕೂ ನೆರವಾಗುತ್ತ,ತನ್ನೊಳಗೆ ನೋವು ಇದ್ದರೂ,ಬಡವರಮುಖದಲ್ಲಿ ನಗು ಕಾಣಬೇಕು ಎನ್ನುವ,ಯಾರಿಗೂ ಕೇಡನ್ನು ಬಯಸದ,ಸಹಾಯ ಹಸ್ತ ಚಾಚಿ ಬಂದವರಿಗೆ ಇಲ್ಲ ಎನ್ನದೆ ಕರ ಚಾಚಿನೀಡುವ ವ್ಯಕ್ತಿತ್ವದ, ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಳೆಸುವ ಮೇರು ವ್ಯಕ್ತಿತ್ವದ,

ಎಲ್ಲರೊಂದಿಗೆ ಆತ್ಮೀಯರಾಗಿ ಇದ್ದು ಕಷ್ಟ ಕಾಲಕ್ಕೂ ಸ್ಪಂದಿಸುವ #ಯುವ_ಚೇತನ ರಾಗಿದ್ದಾರೆ.

ನಿಸ್ವಾರ್ಥ ಮನಸ್ಸಿನ, ನೊಂದ ಜೀವಕ್ಕೆ ಆಸರೆಯಾಗುವ, ಎಲ್ಲರೊಂದಿಗೆ ಬೆರೆತು ನಾಯಕ  ಎನಿಸಿರುವ #ನವ_ಚೇತನ ಬಳಗದ#ಯುವ_ಚೇತನ ರಾದ ಸುಕೇಶ್ ಜಿ ಅಂಚನ್ ರವರು ನಮ್ಮ ಇಂದಿನ #ಪರಿಚಯ_ಸಂಚಿಕೆ ಚೇತನ ಆಗಿದ್ದಾರೆ.

ರಾಜೇಶ್ ಎಸ್ ಬಲ್ಯ


Related Posts

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »