TOP STORIES:

ತಾನು ಅಂದುಕೊಂಡ ಕನಸು ನನಸಾಗಲು ಹಗಲು ರಾತ್ರಿ ಕಷ್ಟ ಪಡುತ್ತಿರುವ ನಮ್ಮ ಹೆಮ್ಮೆಯ ತುಳುನಾಡಿನ ಅಕ್ಕಾ ಎಂದೇ ಪ್ರಸಿದ್ದಿಯಾಗಿರುವ ಗೀತಾಂಜಲಿ ಎಮ್ ಸುವರ್ಣ ಕಟಪಾಡಿ .


ಮನಸ್ಸು ಮಾಡಿದರೆ ಒಂದು ಹೆಣ್ಣು ಏನು ಬೇಕಾದರೂ ಮಾಡಬಲ್ಲಲು ಎನ್ನುದಕ್ಕೆ ಇವರೇ ಉದಾಹರಣೆ. ತಾನು ಅಂದುಕೊಂಡಕನಸು ನನಸಾಗಲು ಹಗಲು ರಾತ್ರಿ ಕಷ್ಟ ಪಡುತ್ತಿರುವ ನಮ್ಮ ಹೆಮ್ಮೆಯ ತುಳುನಾಡಿನ ಅಕ್ಕಾ ಎಂದೇ ಪ್ರಸಿದ್ದಿಯಾಗಿರುವ ಗೀತಾಂಜಲಿಎಮ್ ಸುವರ್ಣ ಕಟಪಾಡಿ .

ಬಡ ಕುಟುಂಬದಲ್ಲಿ ಹುಟ್ಟಲಿಲ್ಲ ಆದರೂ ಬಡ ಜನರ ಕಷ್ಟಕ್ಕೆ ಸದಾ ಸ್ಪಂದಿಸುವ ಮನಸು,ಬಡ ಜನರ ಸೇವೆಯಲ್ಲಿಯೇ ನೆಮ್ಮದಿಕಾಣುವ ಇವರಿಗೆ* ರಾಜಕೀಯದಲ್ಲಿ ಏನಾದರೂ

ಉನ್ನತ ಸ್ಥಾನ ಪಡೆಯಬೇಕು ನಂತರ ಜನರ ಬೇಡಿಕೆಗಳನ್ನು ಈಡೇರಿಸಿ ,ಬಡ ಜನರ ಕಷ್ಟಗಳಿಗೆ ಸ್ಪಂದಿಸಿ ಉತ್ತಮ ಜನ ನಾಯಕಿಆಗಬೇಕು ಎನ್ನುವ ಆಸೆ ಇದೆ.

ಹುಟ್ಟಿದು ಮಂಗಳೂರಿನ ಬಿಜೈ ನಲ್ಲಿ. ಇವರು ಪ್ರಾಥಮಿಕ ವಿದ್ಯಾಬ್ಯಾಸವನ್ನು ಬಿಜೈ ಲೂಡ್ಸ್ ಹಾಗೂ ಬಜ್ಪೆಯಲ್ಲಿ  ನಂತರ ತಂದೆಯಜೊತೆ ಬೆಂಗಳೂರಿನ ಮಾರುತಿ ವಿದ್ಯಾಲಯದಲ್ಲಿ ಮಾಡಿದ ಇವರು ಕಿನ್ನಿಗೋಳಿ ದಾಮಸ್ಕಟ್ಟೆ ಪೊಂಪೈ ಯಲ್ಲಿ ಪದವಿಯನ್ನು ಮಾಡಿಮುಗಿಸಿದರು, ಸಣ್ಣ ಪ್ರಾಯದಲ್ಲಿಯೇ ಸಮಾಜ ಸೇವೆ ಮಾಡುವ ಆಸಕ್ತಿ ಇದ್ದು, ಕಾಲೇಜು ದಿನಗಳಲ್ಲಿ  ಎನ್ ಸಿ ಸಿ ಕ್ಯಾಂಪಸನಲ್ಲಿಭಾಗವಹಿಸುತ್ತಿದ್ದರು ತಂದೆ ತಾಯಿಯ ಆಸೆಯಂತೆ ಇವರಿಗೆ ಪದವಿ ಮುಗಿಸಿದ ಕೂಡಲೇ ಮದುವೆಯನ್ನು ಮಾಡಿದರು ಕೈ ಹಿಡಿದಗಂಡ ಇವರ ಆಸೆಗೆ ಬೆನ್ನೆಲುಬಾಗಿ ನಿಂತರು. ಅವರ ಆಸೆಯಂತೆಯೇ  ಗಂಡ ಪ್ರೋತ್ಸಾಹ ಒಳ್ಳೆಯ ಮನೆತನ ಸಿಕ್ಕಿತ್ತು. ಇವರಕೆಲಸವನ್ನು ನೋಡಿ  ಬಿ ಜೆ ಪಿ ಪಕ್ಷದಲ್ಲಿ ರಾಜ್ಯದ ಕಾರ್ಯಕಾರಿಣಿ  ಸದ್ಯಸೆಯಾಗಿ ಹಾಗೂ ಜೊತೆ ಗೆ ಜಿಲ್ಲಾ ಪಂಚಾಯತ್ಸದ್ಯಸೆಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ ಪ್ರಸ್ತುತ ಕೆ ಎಫ್ ಡಿ ಸಿ ಡೈರೆಕ್ಟರ್ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

1991 ರಲ್ಲಿ ಕಟಪಾಡಿ ಮುದ್ದು ಸುವರ್ಣ ಇವರ ಕೊನೆಯ ಮಗನಾದ ಮಹೇಶ್ ಎಮ್  ಸುವರ್ಣ ಇವರನ್ನುಮದುವೆಯಾದರು.ಪ್ರತಿಷ್ಟಿತ ಮನೆತನ ಇವರ ಆಸೆಗೆ ಇನ್ನಷ್ಟು ಪ್ರೋತ್ಸಾಹ ಸಿಕ್ಕಿತ್ತು ಜೊತೆಗೆ ಮೂರು ಮಕ್ಕಳ ಪ್ರೋತ್ಸಾಹ ಬೆಂಬಲದೊರಕಿತು.

ವಿ ಎಸ್ ಆಚಾರ್ಯ ಇವರ ಬೆಂಬಲದಿಂದ ಇವರ ರಾಜಕೀಯ ಅಡಿಪಾಯ ಸಿಕ್ಕಿತ್ತು .

2020 ಯಲ್ಲಿ ಬಂದ ಕೊರೋಣದಿಂದ ಅನೇಕ ಜನ  ಕೆಲಸ ಇಲ್ಲದೆ ತುಂಬಾ ಕಷ್ಟದ ಪರಿಸ್ಥಿತಿಯಲ್ಲಿ ದಿನಕ್ಕೆ 300 ಜನರಿಗೆ ತಾವೇಊಟವನ್ನು ರೆಡಿ ಮಾಡಿ ಕೊಟ್ಟ ಮಹಾ ತಾಯಿ ಗೀತಾ ಅಕ್ಕಾ.

ಪಡುಬಿದ್ರೆ ಜಿಲ್ಲಾ ಪಂಚಾಯತ್ ನಲ್ಲಿ ಸೇವೆಯನ್ನು ಸಲ್ಲಿಸುತ್ತಿರುವಾಗ ಐದು ಬಡ ಕುಟುಂಬಕ್ಕೆ ಮನೆಯನ್ನು ಕಟ್ಟಿ ಕೊಟ್ಟಿದ್ದಾರೆನಂತರ ದಿನಗಳಲ್ಲಿ ಸ್ವತಃ ಕೆಲವು ಯುವ ಜನರರೊಂದಿಗೆ ಸೂರಿನ ವ್ಯವಸ್ಥೆಯನ್ನು ಮಾಡುವ  ಪ್ರಯತ್ನವನ್ನು ಮಾಡಿದ ಒಬ್ಬನಿಸ್ವಾರ್ಥ ಸೇವಾ ಮಾಣಿಕ್ಯ ಇವರು. ಪ್ರಸ್ತುತ ಆದಿ ಉಡುಪಿಯ ಉಷಾ ಪೂಜಾರಿ ಇವರಿಗೆ ಒಂದು ಸೂರಿನ ವ್ಯವಸ್ಥೆ ಮಾಡಿದರುಇದಕ್ಕೆ ದಾನಿಗಳ ಸಹಕಾರ ತುಂಬಾ ದೊರಕಿದೆ.*

*ಇವರು ಮಾಡುವ ಸಮಾಜ ಸೇವೆಗೆ ವಿವೇಕಾನಂದ ಪ್ರಶಸ್ತಿ ಮತ್ತು ಸಮಾಜ ರತ್ನ ಪ್ರಶಸ್ತಿ ಮುಡಿಗೆರಿಸಿಕೊಂಡಿದ್ದಾರೆ. ರಾಜಕೀಯಪ್ರವೇಶ ಮಾಡುವ ಮೊದಲೇ ಬಡ ಜನರಿಗೆ ಸೇವೆಯನ್ನು ಮಾಡುತ್ತಿರುವ ಇವರಿಗೆ ಯಾವುದೇ ಜಾತಿ ಭೇದ ಇಲ್ಲದೆ ಸೇವೆಯನ್ನುಮಾಡುತ್ತ ಬಂದಿದ್ದಾರೆ.ಯಾವುದೇ ಸಂದರ್ಭದಲ್ಲಿ ಎಂಥಹ ಕೆಲಸ ಇದ್ದರೂ ತುರ್ತು ಪರಿಸ್ಥಿತಿಯಲ್ಲಿ ಎಲ್ಲವನ್ನು ಬಿಟ್ಟು ಜನರ ಸೇವೆಮಾಡಿದ ನಮ್ಮ ಹೆಮ್ಮೆಯ ನಾಯಕಿ (ಅಕ್ಕ ) ಇವರು. ಇದುವರೆಗೂ 9 ಮನೆಯನ್ನು ಕಟ್ಟಿ ಕೊಟ್ಟು ಬಡ ಜನರ ಸೂರಿನ ಕನಸುನನಸು ಮಾಡಿದ್ದಾರೆ.

    

ಒಬ್ಬ ಮಹಿಳೆಗೆ ಇನ್ನೊಬ್ಬ ಮಹಿಳೆಯ ಮನಸ್ಸು ಅರ್ಥ ಮಾಡಿಕೊಳ್ಳಲು,ಕಷ್ಟ ಪಡುವ ಕಾಲದಲ್ಲಿ ಅಹಂ ಮತ್ತು ಅಹಂಕಾರ ಇಲ್ಲದಎಲ್ಲರಿಗೂ ಒಳ್ಳೆಯದನ್ನು ಬಯಸುವ ಹೂವಿನಂತ ಮನಸ್ಸು ಇರುವ ಇವರಿಗೆ ಕಟೀಲ್ ಅಮ್ಮನ ಅನುಗ್ರಹ ಸದಾ ಇರಲಿ ಇವರುಅಂದುಕೊಂಡ ಕನಸು ರಾಜಕೀಯದ ಮಾಡಬೇಕಾದ ಸಾಧನೆ ಎಲ್ಲವೂ ನನಸಾಗಲಿ ಶುಭವಾಗಲಿ ಅಕ್ಕಾ.

ಬರಹ :ಪ್ರಶಾಂತ್ ಅಂಚನ್ ಉಡುಪಿ (ಮಸ್ಕತ್ತ್ )

 


Related Posts

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »