ಬಂಟ್ವಾಳ: ಕೋವಿಡ್ ನಿಯಂತ್ರಣ ಸಾಧಿಸಲು ಕೋವಿಡ್ ಲಸಿಕೆಯೊಂದೇ ರಾಮಬಾಣವಾಗಿದ್ದು ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಪಡೆಯುವುದೇ ಅಂತಿಮ ಪರಿಹಾರವಾಗಿದೆ.
ಈ ನಿಟ್ಟಿನಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯದಲ್ಲಿವ ಸರಕಾರದ ಜೊತೆ ಸಂಘ ಸಂಸ್ಥೆಗಳು ಕೈಜೋಡಿಸಿದೆ. ಆದರೆ ಇಲ್ಲೊಬ್ಬರು ನನ್ನ ಗ್ರಾಮ ಕೊರೊನಾ ಮುಕ್ತವಾಗಬೇಕು ಪ್ರತಿಯೊಬ್ಬ ರೂ ಲಸಿಕೆ ಪಡೆಯ ಬೇಕು ಎಂಬ ಆಶಯದಿಂದ ಲಸಿಕೆ ಪಡೆಯಲು ಹೋಗುವವರಿಗೆ ಉಚಿತವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಕೆಲಸದಲ್ಲಿ ತೊಡಗಿದ್ದಾರೆ.
ವೃತ್ತಿಯಲ್ಲಿ ಸಾಮಾನ್ಯ ರಂತೆ ಓರ್ವ ರಿಕ್ಷಾ ಚಾಲಕ, ಮಾಣಿ ರಿಕ್ಷಾ ಪಾರ್ಕ್ ನಲ್ಲಿ ದುಡಿಯುವ ಪೆರಾಜೆ ಗ್ರಾಮದ ಅಣ್ಣಿ ಪೂಜಾರಿ ಅವರದ್ದು ಲಾಕ್ ಡೌನ್ ಅವಧಿಯಲ್ಲಿ ವಿಶೇಷ ಸೇವೆ. ಪೆರಾಜೆ ಗ್ರಾಮದಿಂದ ಲಸಿಕೆ ಪಡೆಯಲು ಆಸ್ಪತ್ರೆಗೆ ತೆರಳುವವರು ಇವರ ಮೊಬೈಲ್ ಗೆ ಒಂದು ಕಾಲ್ ಮಾಡಿದರೆ ಸಾಕು ಅವರು ಹೇಳಿದ ವಿಳಾಸಕ್ಕೆ ಪಟ್ಟಂತೆ ಹಾಜರಾಗುತ್ತಾರೆ.
ಅಲ್ಲಿಂದ ಅವರು ಹೇಳಿದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಲಸಿಕೆ ಪಡೆದು ಹಿಂತಿರುಗಿ ಮನೆಗೆ ಸೇಫ್ ಆಗಿ ತಲುಪಿಸುವ ಕೆಲಸ ಕಳೆದ ಕೆಲ ದಿನದಿಂದ ಮಾಡುತ್ತಿದ್ದ ಇವರ ಕಾರ್ಯ ವೈಖರಿ ಗೆ ಪೆರಾಜೆ ಗ್ರಾಮಸ್ಥರು ಹ್ಯಾಟ್ಸ್ ಆಫ್ ಎಂದು ಅಭಿನಂದಿಸಿದ್ದಾರೆ.
ಅಂದಾ ಹಾಗೆ ಇವರು ಕೇವಲ ಲಸಿಕೆ ಪಡೆಯಲು ಮಾತ್ರವಲ್ಲದೆ ತುರ್ತು ಸ್ಥಿತಿಯಲ್ಲಿರು ಅನಾರೋಗ್ಯ ಪೀಡಿತ ರನ್ನು ಉಚಿತವಾಗಿ ಆಸ್ಪತ್ರೆಗೆ ದಾಖಲಿಸುವ ಕೆಲಸ ನಿರಂತರವಾಗಿ ಇವರು ಮಾಡುತ್ತಿದ್ದಾರೆ. ಇಂತಹ ರಿಕ್ಷಾ ಚಾಲಕರ ಸೇವೆ ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ.
ವ್ಯಾಟ್ಸ್ ಆಪ್ ಗ್ರೂಪ್ ನಲ್ಲಿ ಪ್ರಚಾರ
ಪ್ರಸ್ತುತ ಲಾಕ್ ಡೌನ್ ಅವಧಿಯಾಗಿದ್ದು ಲಸಿಕೆ ಪಡೆಯಲು
ನಮ್ಮ ಪೆರಾಜೆ ಗ್ರಾಮದ ಬಡಜನರಿಗಾಗಿ ವ್ಯಾಕ್ಸಿನ್ ಮತ್ತು ತುರ್ತು ಚಿಕಿಸ್ಥೆಗೆ ಉಚಿತವಾಗಿ ರಿಕ್ಷಾ ಸೇವೆಯನ್ನು ನೀಡಲಿದ್ದಾರೆ (ಪೆರಾಜೆಯಿಂದ ಮಾಣಿ ಅರೋಗ್ಯ ಕೇಂದ್ರ)
ಅಣ್ಣಿ ಪೂಜಾರಿ : 9880264457
ಈ ರೀತಿಯಲ್ಲಿ ಪೆರಾಜೆ ಗ್ರಾಮದ ಯುವಕರು ಇವರ ಸೇವೆಯ ಬಗ್ಗೆ ಜನರಿಗೆ ಬೇರೆ ಬೇರೆ ಸ್ಥಳೀಯ ವ್ಯಾಟ್ಸ್ ಆಫ್ ಗ್ರೂಪ್ ಗಳ ಮೂಲಕ ತಿಳಿಯಪಡಿಸಿದ್ದಾರೆ.