ಪ್ರಾಚೀನ_ಹೋರಾಟಗಾರರ_ಕೊಲೆ_ಮಾಯಕದ_ರೂಪವೇ_!?
ಸಂದು ಹೋದ ವ್ಯಕ್ತಿ ಶಕ್ತಿಗಳನ್ನು ಮಣ್ಣು ಮರ ಕಲ್ಲುಗಳ ಸಂಕೇತದಿಂದ ಸ್ಮರಿಸಿ ಅವುಗಳನ್ನು ಮನುಷ್ಯ ಶರೀರದಲ್ಲಿ ಅವಾಹನೆಮಾಡಿಸಿ ಪೂಜಿಸುವ ಪ್ರಾಚೀನ ಪರಂಪರೆ ನಮ್ಮ ದೈವಾರಾಧನೆ. ಪೂರ್ವ ಪ್ರಾಚೀನ ಪರಂಪರೆಯಲ್ಲಿ ಈ ಆರಾಧನೆ ಖಾಸಗಿವಲಯಕ್ಕೆ ಸೀಮಿತ. ಯಾವಾಗ ಖಾಸಗಿ ವಲಯದಿಂದ ಬಯಲಿಗೆ ಕಾಲಿಟ್ಟಿತೋ ಅಂದೆ ಆ ಶಕ್ತಿಗಳನ್ನು ವಿಗ್ರಹ ಗಳಲ್ಲಿ ಆವಾಹನೆಮಾಡಿ ಅದಕ್ಕೊಂದು ಹೊಸ ಪುರಾಣಗಳನ್ನು ಸೃಷ್ಟಿಸಿ ಸಂದು ಹೋದವರ ಪ್ರಾಚೀನ ಚರಿತ್ರೆ ಮರೆಯಾಗಿ ಹೋಯಿತು. ಆ ಕಾಲದಲ್ಲಿಸರ್ವಾಧಿಕಾರಿಗಳ ದೋರಣೆಗೆ, ಜಾತಿ ಪದ್ದತಿಗೆ, ಅಸಮಾನತೆಗೆ, ಮತ್ಸರದ ಕಿಚ್ಚಿಗೆ ಬಲಿಯಾದ ಸತ್ಯ ಸಂಧರ ಕೊಲೆಗಳನ್ನು ದೈವಗಳತಲೆಗೆ ಹಚ್ಚಿ ಮಾಯಕ ದ ಹೊಸ ರೂಪ ನೀಡಿ ಸ್ವಾಭಿಮಾನದ ಚರಿತ್ರೆಗೆ ಹೊಸ ರೂಪಕ ಸೃಷ್ಟಿಸಿದರು.
ಹೀಗೆ ದೈವಗಳ ಮಾಯಕದ ರೂಪಕಕ್ಕೆ ಬಲಿಯಾದವರಲ್ಲಿ ಪ್ರಮುಖರು ಮಾಯಂದಾಲ್, ಕಿನ್ನಿಮಾನಿ, ಕೊರಗತನಿಯ, ತನ್ನಿಮಾನಿಗ, ಕೋರ್ದಬ್ಬು.ಇನ್ನೂ ಕೆಲವು ದೈವಗಳು ದೇವರ ಬೆವರಿಂದ ಹುಟ್ಟಿದ್ದು, ಶಾಪದಿಂದ ಹುಟ್ಟಿದ್ದು, ಮೊಟ್ಟೆಯಿಂದ ಹುಟ್ಟಿದ್ದೆನ್ನುವ ಕಟ್ಟುಕಥೆಗಳು ಇಂದಿಗೆ ನಂಬಿಕೆಯಾಗಿ ಉಳಿದಿದೆಯಾದರೂ ಅವುಗಳ ಹಿಂದಿರುವ ಮರ್ಮ ವಾಸ್ತವಕ್ಕೆ ಪ್ರಶ್ನೆಯಾಗಿ ಉಳಿದಿದೆ. ಇಂದುನಾವುಗಳು ನಂಬುತ್ತಿರುವ ಮನುಷ್ಯ ರೂಪಿ ಶಕ್ತಿಗಳು ಅಥವಾ ಸತ್ಯಗಳು ಒಂದಿಲ್ಲೊಂದು ಕಾಲದಲ್ಲಿ ಸಮಾಜದಲ್ಲಿನ ಅಸ್ಪೃಶ್ಯತೆ, ಅಸಮಾನತೆ,ಸರ್ವಾಧಿಕಾರಿ ದೋರಣೆಯ ವಿರುದ್ದ ಹೋರಾಡಿ ವೀರಮರಣವನ್ನಪಿದವರು.
ತುಳುನಾಡಿನ ಪ್ರಾಚೀನ ಆಚರಣೆ ನಂಬಿಕೆ ಮೇಲೆ ಕೇಂದ್ರೀಕೃತವಾಗಿದ್ದರೂ ಕೆಲವೊಂದು ಮೂಡ ನಂಬಿಕೆಗಳೂ ಕೂಡಸೇರಲ್ಪಟ್ಟಿವೆ.ಕೈ ಮುಗಿದು ಪ್ರಾರ್ಥನೆ ಮಾಡಿದ ತಕ್ಷಣ ಒಲಿಯುವ ದೈವಗಳು ಸತ್ಯ ಸಂಧರನ್ನು ಮಾಯಕ ಮಾಡುವುದೆಂದರೆನಂಬಲಸಾಧ್ಯ.ಮೂಲ ಮೈಸಂಧಾಯ ದೈವದಿಂದ ಕೊರಗ ತನಿಯ ಮಾಯಕ ಆಗುವುದು, ಜುಮಾದಿಯಿಂದ ಮಾಯಂದಾಲ್ಹಾಗೇನೆ ತಪ್ಪೇ ಮಾಡದ ಕಿನ್ನಿಮಾನಿಗೆ ಉಳ್ಳಾಕ್ಲು ಶಿಕ್ಷಿಸೋದು ಈ ವಿಷಯಗಳ ಬಗ್ಗೆ ಮನೋಧರ್ಮ ಪುಸ್ತಕದಲ್ಲಿವಿಮರ್ಶಾತ್ಮಕವಾಗಿ ಬರೆದಿದ್ದಾರೆ ರವಿ ರಾ ಅಂಚನ್..
ತುಳುವರ ಭೂತಾರಾಧನೆಯಲ್ಲಿ ಗಂಡು ಹೆಣ್ಣಿನ ಸಂಯುಕ್ತ ಆರಾಧನೆಯ ನೆಲೆಯಲ್ಲಿ ತನ್ನಿಮಾನಿಗ ಕೋರ್ದಬ್ಬು ದೈವಗಳು ವಿಶಾಲಪಸರಣೆಯನ್ನು ಪಡೆದಿದೆ. ದೈವಾರಾಧನೆಯಲ್ಲಿ ತನ್ನಿಮಾನಿಗಳ ಸೋದರನಾಗಿ ಗುರುತಿಸಲ್ಪಡುವ ಕೋರ್ದಬ್ಬು ಬಿಲ್ವಿದ್ಯೆ, ಮಂತ್ರವಿದ್ಯೆ, ತಂತ್ರ ವಿದ್ಯೆ, ವೈದ್ಯ ವಿದ್ಯೆ ಯಲ್ಲಿ ಅದ್ವಿತೀಯ ಸಾಧಕ. ಈತನ ಪ್ರತಿಭೆ ಮನೆಮಾತಾದಾಗ ಸಮಾಜದ ಮತ್ಸರ ವೈರಗಳಿಗೆಗುರಿಯಾಗಬೇಕಾಯಿತು.ಸಭ್ಯತೆಯನ್ನು ಮೀರಿದ ಅಮಾನವೀಯತೆಯ ವ್ಯವಸ್ಥೆಯಲ್ಲಿ ಸಾಧನೆಗಿಂತ ಹುಟ್ಟು ಮೇಲಾದಾಗ ಪ್ರತಿಭೆಇದ್ದರೂ ಕೋರ್ದಬ್ಬು ಅವಕಾಶ ವಂಚಿತನಾಗಿದ್ದು ಮಾತ್ರವಲ್ಲದೆ ಜೀವಿಸುವ ಹಕ್ಕನ್ನೆ ಅಂದಿನ ಸಮಾಜ ಕಸಿದು ಬಾವಿಗಿಳಿಸಿ ಅದರಮೇಲೆ ಹಾಸುಕಲ್ಲು ಮುಚ್ಚುತ್ತಾರೆ. ಅಂದಿನ ಬಹುಸಮಾಜ ಇದನ್ನು ಪ್ರತಿಭಟಿಸದೇ ಇದ್ದಾಗ ತನ್ನಿಮಾನಿಗ ದಿಟ್ಟತನದಿಂದಪ್ರತಿಭಟಿಸುತ್ತಾಳೆ.ತನ್ನಿಮಾನಿಗಳಂತೆ ಕಲ್ಲುರ್ಟಿ ಕೂಡ ತನ್ನ ಸೋದರ ಕಲ್ಕುಡನಿಗೆ ಭೈರವ ಅರಸುವಿನಿಂದಾದ ಅನ್ಯಾಯಕ್ಕೆ ಸಿಡಿದೆದ್ದಅಸಾಮಾನ್ಯ ತಂಗಿಯಾಗಿ ತುಳುನಾಡಿನ ಪ್ರಾಚೀನತೆಯಲ್ಲಿ ಮಹಿಳೆಯೊಬ್ಬಳ ಹೋರಾಟ ದ ಬದುಕನ್ನು ಚಿತ್ರಿಸುತ್ತದೆ.
ತನ್ನಿಮಾನಿಗ, ಬಬ್ಬು, ಕಲ್ಕುಡ ಕಲ್ಲುರ್ಟಿ ತಮಗಾದ ಅನ್ಯಾಯಕ್ಕೆ ಹೋರಾಡಿ ದೈವತ್ವ ಪಡೆದರೆ, ಇತ್ತ ಮಾಯಂದಾಲ್, ಕೊರಗತನಿಯ, ಕಿನ್ನಿಮಾನಿ ಸಂಘರ್ಷ ದ ಹೋರಾಟದಲ್ಲಿ ಉಳ್ಳವರ, ಮೇಲ್ವರ್ಗದ ಜನರ, ಅಧಿಕಾರಶಾಹಿತ್ವಕ್ಕೆ ಬಲಿಯಾಗಿ ದೈವಗಳಮಾಯಕ ದ ರೂಪಕಕ್ಕೆ ಕಥೆಯಾದವರು.ಜುಮಾದಿ ಗೆ ನೇಮ ನೀಡಲು ಪಾಂಗಳ ಬನ್ನಾರ ಹಾಗೂ ಆಲಿಬಾಲಿ ನಾಯಕರ ನಡುವೆನಡೆದ ವಾಗ್ವಾದಕ್ಕೆ ಜುಮಾದಿ ಕೈಯ್ಯಲ್ಲಿ ಆಲಿಬಾಲಿ ನಾಯಕನ ಸೋದರ ಸೊಸೆ ಮಾಯಂದಾಲ್ ಮಾಯಕ ಆಗುವುದರಲ್ಲಿನಿಗೂಢತೆ ಎದ್ದು ಕಾಣುತ್ತದೆ. ತಪ್ಪೇ ಮಾಡದ ಆಗ ತಾನೆ ಮಗುವಿಗೆ ಜನ್ಮ ನೀಡಿದ ಮಾಯಂದಾಲ್ ಳನ್ನು ಮಾಯಕ ಮಾಡುವಷ್ಟುಕ್ರೂರಿಯೆ ನಂಬಿದವರಿಗೆ ಇಂಬು ಕೊಡುವ ಜುಮಾದಿ. ಇಲ್ಲಿ ಬನ್ನಾರನಿಗೆ ಆಲಿಬಾಲಿ ನಾಯಕನಿಂದಾದ ಅವಮಾನಕ್ಕೆ ಬನ್ನಾರನೇಕೊಲೆ ಮಾಡಿ ತನ್ನೆಸರನ್ನು ಉಳಿಸಿಕೊಳ್ಳಲು ಜುಮಾದಿ ಯ ಮೇಲೆ ಹಾಕಿರುವ ಸಾಧ್ಯತೆಯೇ ಹೆಚ್ಚು.ಮುಂದಕ್ಕೆ ಬನ್ನಾರನ ಸೊಸೆದುಗ್ಗಮ್ಮೆ ಯ ಕೊಲೆಯನ್ನು ಮಾಯಂದಾಲ್ ಮಾಡಿದಳೆನ್ನುವ ಕಥೆ ಕೂಡ ಇದೆ. ಇಲ್ಲೂ ಕೂಡ ಅನುಮಾನದ ಹೋಗೆಖಂಡಿತವಾಗಿಯೂ ಪುನಃ ಬನ್ನಾರನ ಕಡೆಗೆ ಹೋಗುತ್ತದೆ.ಇದೆ ರೀತಿಯಲ್ಲಿ ಕುಜುಂಬ ಮುದ್ದೆರನ ಹೆಂಡತಿ ಕಾವು ಸನಿಹದಮಾಡಂದೂರಿನ ಕಿನ್ನಿಮಾನಿ ಸಹ ತನ್ನ ಗಂಡನ ಮೋಸದಾಟವನ್ನು ವಿರೋಧಿಸಿ ತವರು ಸೇರುತ್ತಾಳೆ. ಮುದ್ದೆರ ಎಷ್ಟು ಕೇಳಿದರೂಪಡುಮಲೆಗೆ ಬರಲು ಒಪ್ಪದೇ ಇದ್ದಾಗ ಊರವರ ಮುಂದೆ ತನಗೆ ಅವಮಾನವಾಯಿತು ಎಂದು ಅವಳನ್ನು ಹತ್ಯೆ ಮಾಡಿಸಿದ ಎಂಬಅನುಮಾನ ಮನೋಧರ್ಮ ಪುಸ್ತಕದಲ್ಲಿದ್ದರೆ ಸ್ಥಳೀಯವಾಗಿ ಕಥೆ ಬೇರೇನೆ ಇದೆ. ಮನೆಬಿಟ್ಟು ಹೋದ ಹೆಂಡತಿಯನ್ನು ಕರೆತರಲುಮುದ್ದೆರ ಉಳ್ಳಾಕ್ಲು ಗೆ ಹರಕೆ ಹೇಳಿ ಅವನು ಅದಕ್ಕೆ ತಪ್ಪಿದಾಗ ಉಳ್ಳಾಕ್ಲು ಮಾಯಕ ಮಾಡಿದಾಗಿ ಪಸರಣೆ ಇದೆ. ಇಲ್ಲಿರುವ ಗೊಂದಲಹರಕೆಯ ಮಾತನ್ನು ತಪ್ಪಿದ್ದು ಕುಜುಂಬ ಮುದ್ದೆರ ಆದರೆ ಶಿಕ್ಷೆ ಕಿನ್ನಿಮಾನಿಗೆ ಮತ್ತದೆ ಪ್ರಶ್ನೆ !ಉಳ್ಳಾಕ್ಲು ಎಂಬ ರಾಜನ್ ದೈವ ತಪ್ಪುಮಾಡದ ಕಿನ್ನಿಮಾನಿಗೆ ಶಿಕ್ಷಿಸಲು ಸಾಧ್ಯವೇ !?
ಕೊರಗ ತನಿಯರ ಕಥೆಯನ್ನು ಒಮ್ಮೆ ಮೆಲುಕು ಹಾಕಿದರೆ ಸಾಕು ತಾಯಿ ಮೈರಕ್ಕೆ ಬೈದ್ಯೆತಿಯ ತಿರಿಬಾಳೆಯ ಹರಕೆಯನ್ನು ಕದಿರೆಗೆಕೊಂಡೊದಾಗ ಅಲ್ಲಿನ ಬಹುಜನ ಆತನ ಪ್ರವೇಶವನ್ನು ನಿರಾಕರಿಸುತ್ತಾರೆ. ತಾನು ತಂದ ಹರಕೆ ದೇವರಿಗೆ ಆಗುವುದಾದರೆ ತಾನ್ಯಾಕೆಆಗುವುದಿಲ್ಲ ಎಂಬ ಪ್ರಶ್ನೆಯನ್ನಿಟ್ಟು ದೇವಳದ ವಠಾರದಲ್ಲಿದ್ದ ಮಾದಳ ದ ಮರ ಹತ್ತಿ ಹಣ್ಣು ಕೀಳಿದಾಗ ಈತನ ಕೊಲೆ ನಡೆಯುತ್ತದೆ. ತುಳುನಾಡಿನ ಭೂತಗಳ ಐತಿಹ್ಯದಲ್ಲಿ ಈತ ದೇವರ ಪ್ರಕೋಪಕ್ಕೆ ಬಲಿಯಾಗಿ ಮಾಯಕ ಆಗುತ್ತಾನೆ. ಇಲ್ಲಿ ದೇವರ ಪ್ರಕೋಪ ವನ್ನುಮುನ್ನೆಲೆಗೆ ತಂದು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದ ಕೊರಗ ತನಿಯ ಯ ಕೊಲೆ ಸಂರಕ್ಷಣೆ ಪಡೆದುಕೊಂಡಿತು.
ತುಳುವರ ಮೌಖಿಕ ಪರಂಪರೆಯಲ್ಲಿ ದೈವಾರಾಧನೆ ನಿಂತಿರೋದೇ ನಂಬಿಕೆಯ ಮೇಲೆ.ಇಲ್ಲಿ ಪ್ರಾಚೀನ ಕಾಲದಲ್ಲಿನಹೋರಾಟಗಾರರು ಸ್ವಸ್ಥ ಸಮಾಜಕ್ಕಾಗಿ ತಮ್ಮ ಜೀವವನ್ನು ತೆತ್ತು ನಮ್ಮ ಇಂದಿನ ಭಕ್ತಿಯ ನಂಬಿಕೆ ಗೆ ಇಂಬು ಕೊಡುತ್ತಾ ಬಂದಿದ್ದಾರೆ. ಇಲ್ಲಿ ದೈವಗಳಿಂದ ಮಾಯಕ ಆದ ಕಥೆಗಳು ಜನಜನಿತ ಆಗಿದ್ದರೂ ವಿಮರ್ಶೆಯ ದ್ರಿಷ್ಟಿ ಯಲ್ಲಿ ಅವುಗಳು ಕೊಲೆಗಳು ಎಂಬುದಾಗಿಮನವರಿಕೆಯಾದರೂ ಕೊನೆಯಲ್ಲಿ ಉಳಿಯುವುದು ನಂಬಿಕೆ ಮಾತ್ರ. ನಮ್ಮ ಧೈವಾರಾಧನೆಯ ಬುನಾದಿಯೇ ನಂಬಿಕೆ..
✍ : ತೇಜು ಬಿರ್ವ ಕೇಪುಳು
ಮಾಹಿತಿ : ಮನೋಧರ್ಮ