ಮಂಗಳೂರು: ಫ್ರೆಂಡ್ಸ್ ಬಲ್ಲಾಳ್‍ಭಾಗ್ ಬಿರುವೆರ್ ಕುಡ್ಲ (ರಿ) ದ ಸ್ಪಂದನ ಯೋಜನೆಯಡಿ ಅನಾರೋಗ್ಯದಿಂದ ಬಳಲುತ್ತಿರುವ ಬಡ ಕುಟುಂಬಗಳಿಗೆ ಎರಡು ಲಕ್ಷಕ್ಕೂ ಅಧಿಕ ಮೊತ್ತದ ಸಹಾಯ ಧನ ವಿತರಣಾ ಕಾರ್ಯಕ್ರಮ ಮಂಗಳೂರಿನ ಕುದ್ರೋಳಿ ಗೋಕರ್ಣಾಥ ಕ್ಷೇತ್ರದಲ್ಲಿ ನೆರವೇರಿತು.ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿ ಚಾಲನೆ ನೀಡಿ ಚೆಕ್ ಹಸ್ತಾಂತರಿಸಿದರು. ಈ ವೇಳೆ ಬೆಂಗ್ರೆ ಮೋಗವೀರ ಕುಟುಂಬದ ಭಾರತೀ ಸುವರ್ಣರ ಮಗನ ಆರೋಗ್ಯ ಚಿಕಿತ್ಸೆಗಾಗಿ 1.20 ಲಕ್ಷ ರೂಪಾಯಿ, ಬೊಂದೇಲ್ ರಾಜೇಶ್ ಕುಲಾಲ್ ಅವರಿಗೆ 40 ಸಾವಿರ, ಕೋಡಿಕಲ್ ಲಕ್ಷ್ಮೀಕಾಂತ್ ನಾಯಕ್ ಅವರ ಕಿಡ್ನಿ ಚಿಕಿತ್ಸೆಗಾಗಿ 40 ಸಾವಿರ ರೂಪಾಯಿ ಚೆಕ್ ವಿತರಿಸಲಾಯಿತು.
ಈ ವೇಳೆ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್, ಫ್ರೆಂಡ್ಸ್ ಬಲ್ಲಾಳ್‍ಭಾಗ್ ಬಿರುವೆರ್ ಕುಡ್ಲ ದ ಸ್ಥಾಪಕ ಅಧ್ಯಕ್ಷ ಉದಯ್ ಪೂಜಾರಿ, ಕುದ್ರೋಳಿ ಗೋಕರ್ಣಥ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಎಚ್ ಎಸ್ ಸಾಯಿರಾಮ್, ದ.ಕ ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ್ ರಣದೀಪ್ ಕಾಂಚಣ್, ಹಿಂದುಳಿದ ಆಯೋಗದ ಅಧ್ಯಕ್ಷ ಕೆ.ಟಿ ಸುವರ್ಣ, ಕ್ಷೇತ್ರದ ಆಡಳಿತ ಮಂಡಳಿಯ ಕಾರ್ಯದರ್ಶಿ ಮಾಧವ ಸುವರ್ಣ, ರಾಕೇಶ್ ಸಾಲಿಯಾನ್, ವಸಂತ ಪೂಜಾರಿ, ಲತೀಶ್ ಪೂಜಾರಿ, ಕಿಶೋರ್ ಬಾಬು, ಲೋಹಿತ್ ಗಟ್ಟಿ, ಲಕ್ಷ್ಮೀಶ್ ಸುವರ್ಣ, ಗಿರೀಶ್ ಬತ್ತೇರಿ, ಮನೋಜ್ ಶೆಟ್ಟಿ, ರೋಶನ್ ಪೂಜಾರಿ, ಗೌತಮ್ ಶೆಟ್ಟಿ ಕಾವೂರು, ರೂಪಕ್ ಶೆಟ್ಟಿ, ರಿನಿತ್ ಪೂಜಾರಿ, ಡೆರಿಲ್ ಡಿಸೋಜ, ಗೌತಮ್ ಬತ್ತೇರಿ, ಚೇತನ್ ಗೌಡ ಮತ್ತಿತರರು ಉಪಸ್ಥಿತರಿದ್ದರು.