ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಪಚ್ಚಿನಡ್ಕ ಶ್ರೀ ಸೇಸಪ್ಪ ಕೋಟ್ಯಾನ್ ರವರು ದಾಖಲೆಯ 25ನೇ ವರ್ಷ ಪುನರಾಯ್ಕೆ ಹೊಂದಿದ್ದಾರೆ. ಶ್ರೀ ಸೇಸಪ್ಪ ಕೋಟ್ಯಾನ್ ರವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆಯು ನಡೆದು, ದಿನಾಂಕ 7.11.2021 ರಂದು ನಡೆದ ಪದಾಧಿಕಾರಿಗಳ ಆಯ್ಕೆಯಲ್ಲಿ ಉಪಾಧ್ಯಕ್ಷರಾಗಿ ಮಹಾಬಲ ಬಂಗೇರ ಬಂಟ್ವಾಳ, ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್ ತುಂಬೆ, ಕೋಶಾಧಿಕಾರಿಯಾಗಿ ಉಮೇಶ್ ಸುವರ್ಣ, ಜತೆ ಕಾರ್ಯದರ್ಶಿಯಾಗಿ ಆನಂದ ಸಾಲ್ಯಾನ್ ಶಂಭೂರು, ಲೆಕ್ಕ ಪರಿಶೋಧಕರಾಗಿ ಸತೀಶ್ ಬಿ.ಮಿತ್ತಬೈಲು ಆಯ್ಕೆ ಹೊಂದಿರುತ್ತಾರೆ.
ಪದಾಧಿಕಾರಿಗಳ ಆಯ್ಕೆ ಸಂದರ್ಭದಲ್ಲಿ ಬಿಲ್ಲವ ಸಂಘದ ಮಾಜಿ ಅಧ್ಯಕ್ಷರುಗಳಾದ ಶ್ರೀ ಹರಿಕೃಷ್ಣ ಬಂಟ್ವಾಳ್ ಕಿಯೋನಿಕ್ಸ್ ಚೇರ್ಮನ್, ಚಂದ್ರಶೇಖರ ಪೂಜಾರಿ ವಕೀಲರು ಹಾಗೂ ನೋಟರಿ ಉಪಸ್ಥಿತರಿದ್ದರು.
ಹೊಸ ಕಾರ್ಯಕಾರಿ ಸಮಿತಿ ಹಾಗೂ ಪದಾಧಿಕಾರಿಗಳ ಆಯ್ಕೆಯಲ್ಲಿ ಶ್ರೀ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಇವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.