ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತ ಬೆಂಬಲಿಸಿ ಬಜಪೆಯಲ್ಲಿ Sticker ಅಭಿಯಾನ
27.09.2020ನೇ ಭಾನುವಾರ ಬೆಳಿಗ್ಗೆ 10 ಗಂಟೆಗೆ ಬಜಪೆ ಪರಿಸರದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ವೃತ್ತ ಬೆಂಬಲಿಸಿ ಅಭಿಯಾನ ನಡೆಯಿತು. ಬಸ್ಸು, ಕಾರು, ರಿಕ್ಷಾ ಇತ್ಯಾದಿ ವಾಹನಗಳಿಗೆ Sticker ಹಚ್ಚುವ ಮುಖಾಂತರ ಅಭಿಯಾನವನ್ನು ಬೆಂಬಲಿಸಲಾಯಿತು. ಇದಕ್ಕೆ ಬಸ್ಸು ಚಾಲಕ-ಮಾಲಕರು, ರಿಕ್ಷಾ ಚಾಲಕ-ಮಾಲಕರ ಸಂಘ, ಟ್ಯಾಕ್ಸಿ ಚಾಲಕ-ಮಾಲಕರ ಸಂಘ ಬಜಪೆ ಬೆಂಬಲವನ್ನು ಸೂಚಿಸಿದರು.
ಈ ಸಂದರ್ಭದಲ್ಲಿ ಬಿರುವೆರ್ ಕುಡ್ಲ ಬಜಪೆ ಘಟಕದ ಅಧ್ಯಕ್ಷರು ಶ್ರೀ ಪ್ರಶಾಂತ್ ಕುಮಾರ್ ಕೆಂಜಾರು-ಕಾನ, ಬಿರುವೆರ್ ಕುಡ್ಲ ಸಂಘಟನೆ ಸಂಘಟನಾ ಅಧ್ಯಕ್ಷರು ಹಾಗೂ ಘಟಕದ ಉಪಾಧ್ಯಕ್ಷರು ಶ್ರೀ ಚಂದ್ರಶೇಖರ್ ಅಮೀನ್, ಕಾರ್ಯಾಧ್ಯಕ್ಷರು ಶ್ರೀ ಗಣೇಶ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಸೂರಜ್ ಪೂಜಾರಿ ಎಕ್ಕಾರು, ಎಲ್ಲಾ ವಲಯದ ಸಂಚಾಲಕರು ಹಾಗೂ ಪದಾಧಿಕಾರಿಗಳು ಹಾಗು ಸದಸ್ಯರು ಉಪಸ್ಥಿತರಿದ್ದರು.