ದಿನಾಂಕ 14.12.2021 ನೇ ಮಂಗಳವಾರ ನಮ್ಮ ಬಿರುವೆರ್ ಕುಡ್ಲ ಬಜಪೆ ಘಟಕದ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ಪ್ರಶಾಂತ್ಕುಮಾರ್ ಕೆಂಜಾರು ಕಾನ ಇವರ ಹುಟ್ಟು ಹಬ್ಬದ ಪ್ರಯುಕ್ತ ಸೇವಾ ಯೋಜನೆ ನೀಡಲಾಯಿತು.
ಬಜಪೆ ನಿವಾಸಿ ದಿನೇಶ್ ರವರಿಗೆ ಮಲಗಲು ನೀರಿನ ಹಾಸಿಗೆ ಹಾಗೂ ವೈದ್ಯಕೀಯ ನೆರವಿಗೆ ಸಹಾಯಧನ ನೀಡಲಾಯಿತು.
ಬಜಪೆ ನಿವಾಸಿ ದಿನೇಶ್ ರವರು ಪೈಟಿಂಗ್ ಕೆಲಸ ಮಾಡುತ್ತಿರುವಾಗ ಮೇಲಿನಿಂದ ಕೆಳಗೆ ಬಿದ್ದು ತನ್ನ ಬೆನ್ನುಮೂಳೆಮುರಿತಕ್ಕೊಳಪಟ್ಟು ನಾಲ್ಕು ವರ್ಷದಿಂದ ವೀಲ್ ಚೇರ್ ನಲ್ಲಿ ಓಡಾಡುವ ಸ್ಥಿತಿಯಲ್ಲಿ ಇದ್ದಾರೆ. ಎಷ್ಟೇ ಪ್ರಯತ್ನ ಪಟ್ಟರು ಬೆನ್ನುಮೂಳೆಸರಿಪಡಿಸಲು ಸಾಧ್ಯವಾಗಲಿಲ್ಲ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಛಲವಿದ್ದರು ಇವರ ಕುಟುಂಬದ ಆರ್ಥಿಕಪರಿಸ್ಥಿತಿ ತುಂಬಾ ಹದಗೆಟ್ಟಿರುವುದರಿಂದ ಇವರ ಜೀವನ ಸಾಗಿಸಲು ತುಂಬಾ ಕಷ್ಟ ಪಡುತ್ತಿದ್ದಾರೆ. ಮಲಗಲು ನೀರಿನ ಹಾಸಿಗೆ ಹಾಗೂವೈದ್ಯಕೀಯ ನೆರವು ಇವರಿಗೆ ಅತ್ಯವಶ್ಯಕವಾಗಿ ಬೇಕಾಗಿರುವುದರಿಂದ ದಿನೇಶ್ ರವರು ಬಿರುವೆರ್ ಕುಡ್ಲ ಬಜಪೆ ಘಟಕಕ್ಕೆಮನವಿಯನ್ನು ಮಾಡಿರುತ್ತಾರೆ. ಈ ಮನವಿಯನ್ನು ತಕ್ಷಣವೇ ಪರಿಗಣಿಸಿದ ಬಿರುವೆರ್ ಕುಡ್ಲ ಬಜಪೆ ಘಟಕದ ಸ್ಪಂದನ ತಂಡದಸದಸ್ಯರು ಇವರಿಗೆ ಮಲಗಲು ನೀರಿನ ಹಾಸಿಗೆ ಹಾಗೂ ವೈದ್ಯಕೀಯ ನೆರವಿಗಾಗಿ ಸಹಾಯಧನವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಬಿರುವೆರ್ ಕುಡ್ಲ ಬಜಪೆ ಘಟಕದ ಗೌರವಾಧ್ಯಕ್ಷರಾದ ಶ್ರೀ ಶರತ್ ಪೂಜಾರಿ ಬಜಪೆ, ಅಧ್ಯಕ್ಷರಾದ ಶ್ರೀ ಪ್ರಶಾಂತ್ಕುಮಾರ್ ಕೆಂಜಾರು ಕಾನ, ಉಪಾಧ್ಯಕ್ಷರುಗಾಳದ ಶ್ರೀ ಚಂದ್ರಶೇಖರ್ ಎಂ ಅಮೀನ್, ಚಂದ್ರಪೂಜಾರಿ ಪೆರಾರ, ದಿನೇಶ್ ಬಂಗೇರ, ಸಂಘಟನಾ ಕಾರ್ಯದರ್ಶಿಯಾದ ಶ್ರೀ ಚೇತನ್ ಬಂಗೇರ, ಪೆರ್ಮುದೆ ಸಂಚಾಲಕರಾದ ಕೀರ್ತನ್ ಅಮೀನ್, ಬ್ರಿಜೇಶ್ ಬಜಪೆ, ದೇವಿಪ್ರಸಾದ್ ಬಜಪೆ, ಕಿರಣ್ ಪೂಜಾರಿ ಎಕ್ಕಾರು, ಪ್ರಖ್ಯಾತ್ ಕೆಂಜಾರು ಕಾನ, ಸಂದೇಶ್ ಶೆಟ್ಟಿ ಜೋಕಟ್ಟೆ ಉಪಸ್ಥಿತರಿದ್ದರು.
ವಂದನೆಗಳೊಂದಿಗೆ
ಬ್ರಹ್ಮಶ್ರೀ ನಾರಾಯಣ ಗುರುವೇ ನಮಃ.
ಅಧ್ಯಕ್ಷರು ಹಾಗೂ ಸರ್ವ ಸದಸ್ಯರು.
ಬಿರುವೆರ್ ಕುಡ್ಲ ಬಜಪೆ ಘಟಕ…