ಬದುಕು ಅಂದಮೇಲೆ ಕೇವಲ ಜೀವನ ಸಾಗಿದರೆ ಸಾಕು ಎಂಬುದು ಸಾಧನೆ ಅಲ್ಲ. ಜೀವನ ಸಾಗಿಸೋಕೆ ಏನೆಲ್ಲಾಮಾಡುತ್ತೇವೆ ಅನ್ನೋದರ ಮೇಲೆ ಸಾಧನೆ ನಿಂತಿರುತ್ತದೆ. ಅಂತಹ ಒಂದು ಆಯಾಮವನ್ನು ಇಟ್ಟುಕೊಂಡು ಸಾಧಿಸುವ ಛಲ ಬಿಡದಪುಟ್ಟ ಸಾಧನೆಯ ಸಾಧಕ ಗಗನ್ ಅಂಚನ್ ಇವರ ಸಾಧನೆಯ ಕಥೆ
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕಂಕನಾಡಿ ಗ್ರಾಮವು ಶ್ರೀ ಬ್ರಹ್ಮ ಬೈದರ್ಕಳ ಗರಡಿ, ಶ್ರೀ ಮಹಾಲಿಂಗೇಶ್ವರದೇವಸ್ಥಾನ, ಶ್ರೀ ಮಾಂಕಾಳಿ ಹಾಗೂ ಹಲವಾರು ದೈವ ದೇವಸ್ಥಾನಗಳು, ಶಿಕ್ಷಣ ಸಂಸ್ಥೆಗಳು, ಸಾಂಸ್ಕೃತಿಕ ಸಂಘಗಳಿರುವ ಪ್ರಸಿದ್ಧಸ್ಥಳವಾಗಿದೆ. ಈ ಗ್ರಾಮದ ಶ್ರೀಮತಿ ಗಾಯತ್ರಿ ಮತ್ತು ಶ್ರೀ ನಿರಂಜನ ದಂಪತಿಯವರ ಇಬ್ಬರು ಮಕ್ಕಳಲ್ಲಿ ಗಗನ್ ಅಂಚನ್ ಅವರುಎರಡನೆಯವರು.
(Copyrights owned by: billavaswarriors.com )
ಇವರು ತನ್ನ ಎಲ್ ಕೆ ಜಿ ಮತ್ತು ಯುಕೆಜಿ ವಿದ್ಯಾಭ್ಯಾಸವನ್ನು ಕಪಿತಾನಿಯೋ ಶಾಲೆ ಕಂಕನಾಡಿಯಲ್ಲಿ, ಪ್ರಾಥಮಿಕವಿದ್ಯಾಭ್ಯಾಸವನ್ನು ಮಂಗಳೂರಿನ ಮಿಲಾಗ್ರಿಸ್ ಶಾಲೆಯಲ್ಲಿ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಮಂಗಳೂರಿನ
ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮುಗಿಸಿದರು. ಪ್ರಸ್ತುತ ಉನ್ನತ ಶಿಕ್ಷಣವನ್ನು ನಿಟ್ಟೆ ವಿದ್ಯಾ ಸಂಸ್ಥೆ ಸರೋಶ್ ಕಾಲೇಜ್ ಆಫ್ಹೋಟೇಲ್ ಮ್ಯಾನೇಜ್ಮೆಂಟನ್ನು ಪಡೀಲ್ ಇಲ್ಲಿ ಕಲಿಯುತ್ತಿದ್ದಾರೆ.
ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ಇವರ ತಂದೆ ತಾಯಿ ಇಬ್ಬರೂ ಖಾಸಗಿ ಉದ್ಯೋಗಿಗಳು. ಬಾಲ್ಯದಲ್ಲಿಯೇಕಲೆ,
ಸಂಸ್ಕೃತಿಯಲ್ಲಿ ಆಸಕ್ತಿ ತೋರಿಸುತ್ತಿದ್ದ ಇವರು ಓದುವುದರಲ್ಲೂ ಮುಂದಿದ್ದರು. ತನಗೆ ಸಮಯ ಇದ್ದಾಗ ಚಿತ್ರ ಬಿಡಿಸುವುದು, ಹಾಡುವುದು ಇವರ ಪ್ರಿಯವಾದ ಹವ್ಯಾಸವಾಗಿತ್ತು. ಕಲೆ ಮತ್ತು ಆಸಕ್ತಿ ಎಲ್ಲರಲ್ಲೂ ಹುಟ್ಟಿಕೊಳ್ಳುವುದು ಸಹಜ. ಆದರೆ, ಗಗನ್ಅವರ ಆಸೆ ಆಕಾಂಕ್ಷೆಗಳಂತೆ ಉನ್ನತ ರೀತಿಯಲ್ಲಿ ತರಬೇತಿ ಪಡೆದುಕೊಂಡು ಮತ್ತು ಬೇಕಾದ ಪರಿಕರಗಳನ್ನು ಉಪಯೋಗಿಸಿಕೊಂಡುಕಲಿಯುವುದು ಅಸಾಧ್ಯವಾದ ಮಾತಾಗಿತ್ತು. ಯಾಕೆಂದರೆ, ಆರ್ಥಿಕವಾಗಿ ಹಿಂದುಳಿದಿರುವುದರಿಂದ ತನಗೆ ಬೇಕಾದಂತೆ ತರಬೇತಿಪಡೆಯಲು ಮತ್ತು ಉಪಕರಣಗಳನ್ನು ಖರೀದಿಸಲು ಹಿಂದೆ ಸರಿಯಬೇಕಾಯಿತು. ಆದರೂ, ಇವರು ಇವರ ಛಲವನ್ನು ಬಿಡದೆ. ಸಾಧಿಸಿಯೇ ಸಾಧಿಸುತ್ತೇನೆ ಎಂಬ ಪಣತೊಟ್ಟು ಕ್ಯಾಸೆಟ್ ಹಾಡು ಕೇಳಿ, ತನ್ನ ಕಲ್ಪನೆಯ ಕನಸುಗಳಿಗೆ ಬಣ್ಣ ಮೆತ್ತಿ ಕಲೆಯೆಂಬುದನ್ನುತನ್ನೊಳಗೆ ಲೀನವಾಗಿಸಿಕೊಂಡು ಸತತ ಪ್ರಯತ್ನಗಳ ಬೆನ್ನು ಬಿಡದೆ ತನ್ನ ತಂದೆ ತಾಯಿ ಮತ್ತು ಮಾವ ಪ್ರಾಸದ್ ಅಂಚನ್ ಇವರೆಲ್ಲರಪ್ರೋತ್ಸಾಹ ಮತ್ತು ಸಲಹೆಗಳಂತೆ ಬೆಳೆದು ನಿಲ್ಲುತ್ತಾರೆ.
ನಂತರ ಇವರು ಸಂಗೀತವನ್ನು ಜೂನಿಯರ್ ಶ್ರೀಮತಿ ಜಯಲಕ್ಷ್ಮಿ ಭಟ್ ಇವರಿಂದ ಕಲಿತು ಈಗ ಸೀನಿಯರ್ ವಿದೂಷಿಅರುಣಾ ಸರಸ್ವತಿಯವರಿಂದ ಕಲಿಯುತ್ತಿದ್ದಾರೆ ಮತ್ತು ಯಕ್ಷಗಾನವನ್ನು ಅಶೋಕ್ ಬೋಳೂರು ಇವರಿಂದ ಕಲಿತು ಈಗ ಸುನಿಲ್ಪಲ್ಲಮಜಲು ಇವರಿಂದ ಕಲಿಯುತ್ತಿದ್ದಾರೆ.
(Copyrights owned by: billavaswarriors.com )
ಇವರಿಗೆ ಕೇವಲ ಮನೆಯವರು ಪ್ರೋತ್ಸಾಹವಲ್ಲದೆ ತನಗೆ ಬೋಧಿಸುವ ಅಧ್ಯಾಪಕರು ಮತ್ತು ಆತ್ಮೀಯ ಗೆಳೆಯರೆಲ್ಲರಪ್ರೋತ್ಸಾಹವೂ ಅಮೂಲ್ಯವಾಗಿ ದೊರಕಿತು. ಹೀಗೆ ಮುಂದುವರೆದ ಇವರ ಕಲೆ ಕಂಕನಾಡಿ ಗಣೇಶಪುರದಲ್ಲಿ ವರ್ಷಂಪ್ರತಿ ಜರಗುತ್ತಿದ್ದಗಣೇಶೋತ್ಸವದಲ್ಲಿ ಚಿತ್ರಕಲಾ ಸ್ಪರ್ಧೆಗಳಲ್ಲಿ ಮತ್ತು ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗುವುದರ ಮೂಲಕ ಮತ್ತಷ್ಟುಹೆಸರನ್ನು ಊರಿನಲ್ಲಿ ಗಳಿಸುತ್ತಾರೆ. ಅಷ್ಟೇ ಅಲ್ಲದೆ ಕಂಕನಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ತುಳುನಾಡ್ ಫ್ರೆಂಡ್ಸ್ ಕ್ಲಬ್‌ನವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಯಕ್ಷಗಾನ ಮತ್ತು ನೃತ್ಯರೂಪಕಗಳನ್ನು ಪ್ರಸ್ತುತಪಡಿಸಿ ಪ್ರೇಕ್ಷಕರನ್ನು ರಂಜಿಸಿಕಲಾಸಕ್ತರ ಪ್ರೀತಿಗೆ ಪಾತ್ರರಾಗುತ್ತಾರೆ.
2014 ರಲ್ಲಿ ಮಿಲಾಗ್ರಿಸ್ ಶಾಲೆಯಲ್ಲಿ ಏರ್ಪಡಿಸಿದ್ದ ಛದ್ಮವೇಶ ಸ್ಪರ್ಧೆಯಲ್ಲಿ ಇವರು ದ್ವಿತೀಯ ಸ್ಥಾನ ಪಡೆದಿದ್ದಾರೆ.
2015 ರಲ್ಲಿ ಸರಕಾರಿ ಶಾಲೆಯವರು ನಡೆಸಿದ ನೃತ್ಯ ಸ್ಪರ್ಧೆಯಲ್ಲಿ ಇವರ ತಂಡ ಪ್ರಥಮ ಸ್ಥಾನ ಪಡೆದಿದ್ದಾರೆ.
2016 ರಲ್ಲಿ ಕಪಿತಾನಿಯೋ ಶಾಲೆಯವರು ಏರ್ಪಡಿಸಿದ ಹೈಸ್ಕೂಲ್ ಮಟ್ಟದ ಜಿಲ್ಲಾ ವಿಜ್ಞಾನ ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆದು, ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
2017ರಲ್ಲಿ ಮಂಗಳೂರಿನ ಸರಕಾರಿ ಶಾಲೆಯಲ್ಲಿ ಜರಗಿದ ಜಿಲ್ಲಾ ಮಟ್ಟದ ಅಂತರ್ ಶಾಲಾ ಸಂಗೀತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಪಡೆದಿದ್ದಾರೆ.
ಇವರ ಕನಸ್ಸು ಅಪಾರ ಬೆಳೆಯುವ ಮನಸ್ಸು ಸುಂದರ. ಇವರು ಇವರ ಸಾಧನೆಗೆ ತಕ್ಕ ಹಲವಾರು ಫೇಸ್ಬುಕ್ ಲೈವ್ಕಾರ್ಯಕ್ರಮಗಳನ್ನು ಕೂಡಾ ನೀಡಿದ್ದಾರೆ. ಪುಟ್ಟದಾಗಿ ಚಿಗುರೊಡೆಯುತ್ತಿರುವ ಇವರ ಕಲಾ ಕುರುಹು ಇನ್ನಷ್ಟು ಎತ್ತರಕ್ಕೆ ಬೆಳೆದುಸಮಾಜಕ್ಕೆ ಮಾದರಿಯಾಗಲಿ ಎಂಬುದು ನಮ್ಮ ಕನಸು.
(Copyrights owned by: billavaswarriors.com )
✍️ ಸಾಯಿ ದೀಕ್ಷಿತ್ ಪುತ್ತೂರು
ಬಿಲ್ಲವ ವಾರ್ಯರ್ಸ್