ಬೆಳ್ತಂಗಡಿ: ಇಲ್ಲಿನ ಸುವರ್ಣ ಪ್ರಿಂಟರ್ಸ್ ಮಾಲಕ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಗಣೇಶ್ ಸುವರ್ಣ(55ವ.) ಅವರು ಹೃದಯಾಘಾತದಿಂದ ಸೋಮವಾರ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇಂದು ಬೆಳಿಗ್ಗೆ ಕಚೇರಿಗೆ ಬಂದಿದ್ದ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿತು.
ತಕ್ಷಣ ಅವರಿಗೆ ಗುರುವಾಯನಕೆರೆ ಅಭಯಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದರು.
ಮೃತರು ಪ್ರಸ್ತುತ ಪಣಕಜೆ ಬಳಿ ನೆಲೆಸಿದ್ದಾರೆ. ಮೃತರ ಪತ್ನಿ, ಬೆಳ್ತಂಗಡಿ ನ್ಯಾಯಾಲಯದ ಉದ್ಯೋಗಿಯಾಗಿದ್ದವರು ಅನಾರೋಗ್ಯಕ್ಕೊಳಗಾಗಿ ಕೆಲ ತಿಂಗಳ ಹಿಂದಷ್ಟೇ ಮೃತರಾಗಿದ್ದರು. ಮೃತರು ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.