TOP STORIES:

FOLLOW US

ಭಾರತ ಭೂಪಟದಲ್ಲಿ ಪಾಕಿಸ್ತಾನ, ಚೀನಾ ಕಾಣಿಸುವುದಿಲ್ಲ, ಆದರೆ ಶ್ರೀಲಂಕಾ ಏಕೆ ಕಾಣಿಸುತ್ತದೆ?


ನವದೆಹಲಿ: ಭಾರತದ ಭೂಪಟ ನೋಡಿದಾಗ ಶ್ರೀಲಂಕಾ ಅದರಲ್ಲಿ ಕಾಣಿಸುತ್ತದೆ. ಆದರೆ, ಯಾವುದೇ ನೆರೆ ಹೊರೆಯ ದೇಶಗಳು ಕಾಣಿಸುವುದಿಲ್ಲ. ಹಾಗೆಂದ ಮಾತ್ರಕ್ಕೆ ಶ್ರೀಲಂಕಾದೊಂದಿಗೆ ನಾವು ಉತ್ತಮ ಬಾಂಧವ್ಯ ಹೊಂದಿದ್ದೇವೆ ಎಂದುಕೊಂಡರೆ ತಪ್ಪಾಗುತ್ತದೆ.

ಇದರ ಹಿಂದೆ ಪ್ರಮುಖ ಕಾರಣವಿದೆ.

ಭಾರತ ಭೂಪಟದಲ್ಲಿ ಶ್ರೀಲಂಕಾ ಕಾಣಿಸಿಕೊಂಡಿರುವುದರ ಹಿಂದೆ ಕಡಲ ಕಾನೂನು ಕಾರಣವಾಗಿದೆ. ಇದನ್ನು ಸಾಗರ ಕಾನೂನು ಎಂದು ಕರೆಯಲಾಗುತ್ತದೆ. ವಿಶ್ವಸಂಸ್ಥೆ ಸ್ಥಾಪನೆ ನಂತರ ಈ ಕಾನೂನು ಅಸ್ತಿತ್ವಕ್ಕೆ ಬಂದಿದೆ. ಈ ಕಾಯ್ದೆ ಜಾರಿಗೆ ತರಲು ಸಾಗರ ಕಾನೂನಿನ ಮೇಲಿನ ವಿಶ್ವಸಂಸ್ಥೆ ಸಮಾವೇಶವನ್ನು (UNCLOC-1) ಮೊದಲ ಬಾರಿಗೆ 1956ರಲ್ಲಿ ನಡೆಸಲಾಯಿತು. 1958 ರಿಂದ ಈ ಕಾನೂನು ಜಾರಿಯಲ್ಲಿದೆ.

UNCLOC-1ರಲ್ಲಿ ಕಡಲಿಗೆ ಸಂಬಂಧಿಸಿದ ಗಡಿಗಳು, ಒಪ್ಪಂದಗಳಿಗೆ ಸಂಬಂಧಿಸಿದಂತೆ ಒಮ್ಮತಕ್ಕೆ ಬರಲಾಗಿದೆ. ನಂತರ 1982 ರವರೆಗೆ ಮೂರು ಸಮ್ಮೇಳನಗಳು ನಡೆದಿವೆ. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮುದ್ರಕ್ಕೆ ಸಂಬಂಧಿಸಿದ ಕಾಯ್ದೆಗಳನ್ನು ಗುರುತಿಸುವ ಪ್ರಕ್ರಿಯೆ ನಡೆದಿದೆ.

ಸಾಗರ ಕಾನೂನು ಎಂದರೆ ಏನು?

ಈ ಕಾಯ್ದೆಯನ್ನು ಜಾರಿಗೆ ತಂದಾಗ, ಭಾರತದ ನಕ್ಷೆಯಲ್ಲಿ ಬೇಸ್ ಲೈನ್ ನಿಂದ 200 ನಾಟಿಕಲ್ ಮೈಲಿ ದೂರದಲ್ಲಿರುವ ಪ್ರದೇಶವನ್ನು ಅಂದರೆ, ಆ ದೇಶದ ಬೇಸ್ ಲೈನ್ ತೋರಿಸುವುದು ಕಡ್ಡಾಯವೆಂದು ನಿರ್ಧರಿಸಲಾಗಿದೆ. ಅಂದರೆ ಒಂದು ದೇಶ ಕರಾವಳಿಯಲ್ಲಿದ್ದರೆ ಅಥವಾ ಅದರ ಭಾಗ ಸಮುದ್ರಕ್ಕೆ ಸಂಪರ್ಕ ಹೊಂದಿದ್ದರೆ, ಆ ದೇಶದ ಗಡಿ ಸುತ್ತಲಿನ ಪ್ರದೇಶವನ್ನು ಸಹ ಆ ದೇಶದ ನಕ್ಷೆಯಲ್ಲಿ ತೋರಿಸಲಾಗುತ್ತದೆ. ಭಾರತದ ಭೂಪಟದಲ್ಲಿ ಶ್ರೀಲಂಕಾವನ್ನು ತೋರಿಸಲು ಇದೇ ಕಾರಣ. ಏಕೆಂದರೆ ಶ್ರೀಲಂಕಾ ಭಾರತದಿಂದ 200 ನಾಟಿಕಲ್ ಮೈಲುಗಳ ಅಂತರದಲ್ಲಿದೆ. ಭಾರತದ ಗಡಿಯ 200 ನಾಟಿಕಲ್ ಮೈಲುಗಳೊಳಗಿನ ದೂರದಲ್ಲಿದೆ. ಅದಕ್ಕಾಗಿಯೇ ಶ್ರೀಲಂಕಾ ಭಾರತದ ಭೂಪಟದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ.


Share:

More Posts

Category

Send Us A Message

Related Posts

ಮಾರ್ಚ್ 10ರಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಪೂರ್ವಭಾವಿ ಸಭೆಯು


Share       ಮಾರ್ಚ್ 10ರಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಪೂರ್ವಭಾವಿ ಸಭೆಯು ಉಡುಪಿ ಜಿಲ್ಲೆಯ ಅಂಬಲಪಾಡಿ ವಿಠೋಬ ರುಕುಮಾಯಿ ಮತ್ತು ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದಲ್ಲಿ ಅಧ್ಯಕ್ಷರಾದ ಶಿವಕುಮಾರ್ ಪೂಜಾರಿಯವರ ನೇತೃತ್ವದಲ್ಲಿ ಫೆಬ್ರವರಿ


Read More »

ಯುವ ವಾಹಿನಿಯ ಸಮಾಜಮುಖಿ ಕಾರ್ಯಕ್ಕೆ ಶಕ್ತಿ ತುಂಬುವ ಕೆಲಸ ಶ್ಲಾಘನೀಯ : ಮಹೇಶ್ ಕುಮಾರ್


Share       ಯುವವಾಹಿನಿ( ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ನಾಟಕ ಪ್ರದರ್ಶನ ಯುವ ವಾಹಿನಿಯ ಸಮಾಜಮುಖಿ ಕಾರ್ಯಕ್ಕೆ ಶಕ್ತಿ ತುಂಬುವ ಕೆಲಸ ಶ್ಲಾಘನೀಯ : ಮಹೇಶ್ ಕುಮಾರ್ ಮಂಗಳೂರು : ಯುವವಾಹಿನಿ ಮಂಗಳೂರು ಮಹಿಳಾ ಘಟಕದ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ಸಂಘಟನೆಯ ವತಿಯಿಂದ 7ನೇ ವರ್ಷದ ಸಂಭ್ರಮಾಚರಣೆ


Share       ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂಬ ದೇಯವಾಕ್ಯದೊಂದಿಗೆ ಹುಟ್ಟಿಕೊಂಡ ಸಂಸ್ಥೆ ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯು ಹಲವಾರು ಕುಟುಂಬಗಳಿಗೆ ನೆರಳಾಗಿ ಸಾಮಾಜಿಕ ಜೀವನದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಎಲ್ಲರ ಪ್ರೀತಿಪಾತ್ರವಾದ


Read More »

ಸೌದಿ ಅರೇಬಿಯಾದಲ್ಲಿ ನಡೆದ 17ನೇ ಸಂಸ್ಕೃತಿ ಸಮ್ಮೇಳನದಲ್ಲಿ ಶಿವಾನಂದ ಕೋಟ್ಯಾನ್ ರಿಗೆ “ವಿಶ್ವಮಾನ್ಯ ಪ್ರಶಸ್ತಿ” ಪ್ರಧಾನ


Share       ಶಿವಾನಂದ ಕೋಟ್ಯಾನ್ ರಿಗೆ  “ವಿಶ್ವಮಾನ್ಯ ಪ್ರಶಸ್ತಿ” ಪ್ರಧಾನ ಕಟಪಾಡಿ  ಶಿವಾನಂದ ಕೋಟ್ಯನ್ ಎರಡು ದಶಕಗಳ ಕಾಲ ಅನಿವಾಸಿ ಭಾರತೀಯನಾಗಿ ಸಮಾಜಿಕ ಸ್ಪಂದನ ಕಾರ್ಯ, ಹಾಗೂ ನಾಡಿನ ಸಾಂಸ್ಕೃತಿಕ, ಸಾಹಿತ್ಯ ,ನಾಟಕ, ಸಿನೆಮಾ ಅಯೂಜನೆ ಹೀಗೆ


Read More »

ವಿಶ್ವ ಮಾನ್ಯ” ಪ್ರಶಸ್ತಿ 2024 ಭಾಜನರಾದ ಉದ್ಯಮಿ ಹಾಗು ಸಮಾಜ ಸೇವಕ ಸತೀಶ್ ಕುಮಾರ್ ಅಂಚನ್ ಬಜಾಲ್


Share       ಸೌದಿ ಅರಬಿಯಾ: ಉದ್ಯಮಿ ಹಾಗು ಸಮಾಜ ಸೇವಕ ಸತೀಶ್ ಕುಮಾರ್ ಅಂಚನ್ ಬಜಾಲ್ ವಿಶ್ವ ಮಾನ್ಯ” ಪ್ರಶಸ್ತಿ 2024 ನೀಡಿ  ಗೌರವಿಸಲಾಯಿತು. 17 ನೇ ವಿಶ್ವ ಕನ್ನಡ ಸಮ್ಮೇಳನವು ಫೆಬ್ರವರಿ 8 ರಂದು ಸೌದಿ


Read More »

ಪ್ರೀತಿಯಿಂದ ಕುಡ್ಲದ ಜನತೆ ಮನಗೆದ್ದೆ ಭಾವುಕರಾಗಿ ನುಡಿದ ಎಸಿಪಿ ಮಹೇಶ್‌ಕುಮಾರ್ ಮಂಗಳೂರು ನಾಗರಿಕ ಸಮಿತಿಯಿಂದ ಬೀಳ್ಕೊಡುಗೆ


Share       ಮಂಗಳೂರು: ಮಂಗಳೂರು ಜನರನ್ನು ಕಾನೂನು ಮತ್ತು ಪ್ರೀತಿಯಿಂದ ಮಾತ್ರ ಗೆಲ್ಲಲು ಸಾಧ್ಯ. ಕರಾವಳಿ ಜನತೆಗೆ ಪ್ರೀತಿ ಕೊಟ್ಟರೆ ಅವರು ನೂರುಪಟ್ಟು ಪ್ರೀತಿ ತೋರಿಸುತ್ತಾರೆ. ಭಾವುಕರಾಗಿ ನುಡಿದವರು ಮಂಗಳೂರು ಸೆಂಟ್ರಲ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ


Read More »