TOP STORIES:

ರಂಗಭೂಮಿಯ ನಾಡಿಮಿಡಿತ, ಸಂಘಟಕ ‘ಮಧು ಬಂಗೇರ ಕಲ್ಲಡ್ಕ’


ಮಂಗಳೂರು ಎಂಬ ಕಡಲತಡಿಯ, ತೆಂಗು-ಕಂಗು, ಬಾಳೆಡೆಯ, ತುಳುವರ ನಾಡಿನ ಬೆಳವಣಿಗೆಯಲ್ಲೂ ಹಾಗೆಯೇ ಹತ್ತು-ಹಲವು ಮಹನೀಯರ ಮಹಾತ್ಯಾಗದ ಅಡಿಪಾಯವಿದೆ, ದಣಿವರಿಯದ ಪರಿಶ್ರಮದ ಹಿನ್ನಲೆಯಿದೆ. ಅದರಲ್ಲೂ ತುಳುವನಾಡು ಎಂದಾಗ ಥಟ್ಟನೆ ನೆನಪಾಗುವುದು ರಂಗಭೂಮಿ ಮತ್ತು ತಮ್ಮ ನೋವಿನ ಮೇಲೆ ಬಣ್ಣಗಳನ್ನು ಹಚ್ಚಿ ಮತ್ತೊಬ್ಬರ ಖುಷಿಗೆ ಸದಾ ತಮ್ಮನ್ನು ಮುಡಿಪಾಗಿಟ್ಟವರು. ಹೌದು. ಒಬ್ಬ ಕಲಾವಿದನಾಗಿ ಇನ್ನೊಬ್ಬ ಕಲಾವಿದನನ್ನು ಮೇಲೆತ್ತಿ ನಾಟಕರಂಗದಲ್ಲಿ ಉಜ್ವಲಿಸುವ ಪ್ರತಿಭೆಗಳಿಗೆ ಸದಾ ದಾರಿದೀಪವಾಗಿ, ಕಷ್ಟ ಎಂದು ಚಾಚಿದ ಕೈಗಳಿಗೆ ಸಹಾಯಮುನಿಯಾಗಿ, ಭೂಮಿತಾಯಿಯಷ್ಟೇ ತಾಳ್ಮೆಯನ್ನು ತನ್ನದಾಗಿಸಿಕೊಂಡವರಿವರು. ಮಾತಿನ ಸೊಗಸು, ಅಭಿನಯ ಚತುರತೆ , ವಿಭಿನ್ನ ರೀತಿಯಲ್ಲಿ ನಾಟಕ ರಚನೆಗಾರನಾಗಿ, ನಟನಾಸ್ತಕರನ್ನು ಪಳಗಿಸುವ ನಿರ್ದೇಶಕನಾಗಿ, ನಾಟಕಗಳಿಗೆ ಸಾಹಿತ್ಯದ ಸೊಬಗನ್ನು ತುಂಬುವ ಬರಹಗಾರನಾಗಿ ಹೀಗೆ ಬಹುಮುಖ ವ್ಯಕ್ತಿತ್ವವನ್ನು ಹೊಂದಿರುವವರು ‘ಮಧು ಬಂಗೇರ ಕಲ್ಲಡ್ಕ’.ಮಧು ಬಂಗೇರರು 1981 ರಲ್ಲಿ ಶೀನಪ್ಪ ಪೂಜಾರಿ ಮತ್ತು ವಿಶಾಲಾಕ್ಷಿ ದಂಪತಿಗಳಿಗೆ ಮೊದಲನೆಯ ಪುತ್ರನಾಗಿ ಚಂದಳಿಕೆಯ ನಿಡ್ಯ ಎಂಬ ಊರಿನಲ್ಲಿ ಜನಿಸಿದರು. ನಂತರ ಚಂದಳಿಕೆಯಲ್ಲಿ ಪ್ರಾಥಮಿಕ ಪ್ರೌಢ ಶಿಕ್ಷಣ ಪಡೆದು, ಸರಕಾರಿ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಮುಗಿಸಿ, ಪುತ್ತೂರಿನ ಕೊಂಬೆಟ್ಟು ಮಹಾಲಿಂಗೇಶ್ವರದಲ್ಲಿ ಐಟಿಐ ಪದವೀಧರನಾಗಿರುವ ಇವರು ಪ್ರಸ್ತುತ ಸುರತ್ಕಲ್ ನಲ್ಲಿ ‘ಶ್ರೀ ದುರ್ಗಾ ಎಲೆಕ್ಟ್ರಾನಿಕ್ಸ್ ‘ ಎಂಬ ಸ್ವಂತ ಎಲೆಕ್ಟ್ರಾನಿಕ್ಸ್ ಸಂಸ್ಥೆ ನಡೆಸುತ್ತಿದ್ದಾರೆ.

ಗಂಡಾಗಿ ಹುಟ್ಟಿ ಹೆಣ್ಣಾಗಿ ಬಣ್ಣದ ಲೋಕಕ್ಕೆ ಪಾದಾರ್ಪಣೆ:

1994 ರಲ್ಲಿ ಚಂದಳಿಕೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಿರುವಾಗ ಗುರುಗಳಾದ ಗಿರಿಯಪ್ಪ ಗೌಡ ಕಾಯರ್ ಮಾರ್ ಮತ್ತು ವಿಠಲ ನಾಯಕರ ಒತ್ತಾಯದ ಮೇರೆಗೆ ‘ಚೇರ್ ಮೇನ್ ಕಿಟ್ಟಣ್ಣೆ’ ಎಂಬ ನಾಟಕದಲ್ಲಿ ಕಿಟ್ಟಣ್ಣನ ಪತ್ನಿ ಸೀತಕ್ಕ ಎಂಬ ಸ್ತ್ರೀ ಪಾತ್ರದ ಮೂಲಕ ಇವರು ಮೊದಲನೇ ಬಾರಿಗೆ ಬಣ್ಣ ಹಚ್ಚಿದರು. ಹೀಗೆ ರಂಗಭೂಮಿಯತ್ತ ಆಸಕ್ತಿಯನ್ನು ಬೆಳೆಸಿಕೊಂಡ ಇವರು 2001 ರಲ್ಲಿ ಐಟಿಐ ಶಿಕ್ಷಣದ ಸಮಯದಲ್ಲಿ ಸ್ವತಃ ತಾನೇ ಕಥೆ, ನಿರ್ದೇಶನ ಮತ್ತು ನಟನೆ ಮಾಡಿದ ‘ಮನಸ್ಸ್ ಎಡ್ಡೆ ಇಪ್ಪಡ್’ ಎಂಬ ನಾಟಕದ ಮೂಲಕ ನಿರ್ದೇಶಕ ಮತ್ತು ನಾಟಕ ರಚನಗಾರನಾದೆ ಎಂದೆನ್ನುತ್ತಾರೆ ಮಧು ಬಂಗೇರ.

(Copyrights owned by: billavaswarriors.com )

ಹೀಗೆ ನಾಟಕ ಪ್ರೇಮಿಯಾದ ಇವರು ‘ಚೇರ್ ಮೇನ್ ಕಿಟ್ಟಣ್ಣೆ’,’ಅಪ್ಪೆನ ನಿರೆಲ್’,’ವೈಶಾಲಿ’,’ಪ್ರೀತಿಡೊಂಜಿ ತ್ಯಾಗ’, ‘ಮನಸ್ಸ್ ಎಡ್ಡೆ ಇಪ್ಪಡ್’, (ಶಾಂತರಾಂ ಕಲ್ಲಡ್ಕ ನಿರ್ದೇಶನದ)’ಎನ್ನಿನೊಂಜಿ ಆಯಿನೊಂಜಿ’, ‘ಆಯಿಲೆಕ್ಕಾಪುಂಡು’, ‘ಕೊಪ್ಪರಿಗೆ’ – ಇವರು ಅಭಿನಯಿಸಿದ ನಾಟಕಗಳಾದರೆ ,’ಪ್ರೀತಿಡೊಂಜಿ ತ್ಯಾಗ’, ‘ಮನಸ್ಸ್ ಎಡ್ಡೆ ಇಪ್ಪಡ್’,’ಇನಿ ಅತ್ತ್ಂಡ ಎಲ್ಲೆ’ ,’ಅಪ್ಪೆನ ನಿರೆಲ್’, ‘ಪರಕೆದ ಪೂಸೀರೆ’, ‘ನೆತ್ತೆರ್ ದ ಬಿಂದ್’ ‘ಏರಾ ಉಲ್ಲೆರ್ ಈ ಇಲ್ಲಡ್’, ‘ಕೊಪ್ಪರಿಗೆ’ – ಇವು ಮಧು ಬಂಗೇರರು ಬರೆದು ನಿರ್ದೇಶಿಸಿದ ನಾಟಕಗಳು.

ನಾಟಕಪ್ರೇಮಿಯ ಮನದ ಮಾತು:

“ಕಲಾವಿದನ ಬದುಕು ಕೇವಲ ಪ್ರದರ್ಶನಕ್ಕೆ ಸೀಮಿತವಾಗದೆ ಸಮಾಜಕ್ಕೆ ಮಾದರಿಯಾಗಿ , ಸಂಸಾರಕ್ಕೆ ಹೊರೆಯಾಗದೆ, ನೆಮ್ಮದಿಯ ಬದುಕನ್ನು ಬದುಕುವ ಕಲೆಯನ್ನು ರೂಢಿಸಿಕೊಂಡರೆ ಮಾತ್ರ ಕಲಾವಿದನೊಂದಿಗೆ ಕಲೆಯೂ ಬದುಕುಳಿಯಬಲ್ಲದು. ಶ್ರೀಯುತ ಗಿರಿಯಪ್ಪ ಗೌಡ ಮತ್ತು ವಿಠಲ ನಾಯ್ಕ ಇವರಿಬ್ಬರು ನನ್ನ ಮೊದಲನೆಯ ನಾಟಕದ ಗುರುಗಳು. ತದನಂತರ ನಾರಾಯಣ ಶೆಟ್ಟಿ ನಿಡ್ಯ ಇವರು ರಂಗಭೂಮಿಯಲ್ಲಿ ನೆಲೆನಿಲ್ಲಲು ಸಹಕಾರ ಕೊಟ್ಟರೆ , ವೃತ್ತಿಪರ ತಂಡ ಕಟ್ಟುವಾಗ ಸುಮಾರು ವಿಷಯಗಳನ್ನು ತನಗೆ ಕಲಿಸಿದ್ದು ತುಳು ರಂಗಭೂಮಿಯ ದಕ್ಷ ನಿರ್ದೇಶಕರಾದ ಜಗದೀಶ್ ಶೆಟ್ಟಿ ಕೆಂಚನಕೆರೆ ಸರ್. ಇವರೆಲ್ಲರೂ ನನ್ನ ಗುರುಗಳು. ಹಾಗೇ‌ ತನ್ನ ರಂಗಚಟುವಟಿಕೆಯಲ್ಲಿ ನಿರಂತರ ಪ್ರೋತ್ಸಾಹ ಕೊಟ್ಟು ನಮ್ಮ ತಂಡದ ಸಮಗ್ರ ನಿರ್ವಹಣೆ ಮಾಡುತ್ತಿರುವವರು ನನ್ನ ಧರ್ಮಪತ್ನಿ ಶ್ರೀಮತಿ ಬೇಬಿ.ಎಂ.ಕೆ. ಇದರ ಜೊತೆಗೆ ನನ್ನ ಮಗ ಹೃತಿಕ್ ರಂಗ ವಿನ್ಯಾಸದ ಜವಾಬ್ದಾರಿಯನ್ನು ಕೈಗೊಳ್ಳುವ ಮೂಲಕ ನನ್ನ ಇಡೀ ಕುಟುಂಬ ರಂಗ ಚಟುವಟಿಕೆಯಲ್ಲಿ ಸೇರಿಕೊಂಡಿದೆ ಎಂಬುದೇ ಒಂದು ಖುಷಿ” ಎಂದು ತನ್ನ ಹರುಷವನ್ನು ವ್ಯಕ್ತಪಡಿಸುತ್ತಾರೆ ಮಧು ಬಂಗೇರ ಕಲ್ಲಡ್ಕ.

ಹಲವಾರು ಸಂಘ ಸಂಸ್ಥೆಗಳಿಗೆ ಅಡಿಪಾಯವಿಟ್ಟ ಬಂಗೇರರು:
ತನ್ನ ಬಾಲ್ಯದಲ್ಲಿ ಮನೆಯ ಸಮೀಪದಲ್ಲೇ ನಡೆಯುಯುತ್ತಿದ್ದ ಜಿ.ಯನ್ ಬಂಗೇರರ ನಾಟಕಗಳೇ ತನಗೆ ಸ್ಫೂರ್ತಿ ಎಂದೆನ್ನುವ ಮಧು ಬಂಗೇರರು ‘ತುಳುವೆರೆ ತುಡರ್’ ಎಂಬ ಕಲಾತಂಡವನ್ನು ಕಟ್ಟಿ ಹತ್ತು ವರುಷಗಳು ಕಳೆಯಿತು. ಹಾಗೇ ‘ತುಡರ್ ಕ್ರಿಯೇಷನ್ಸ್’ ಎಂಬ ಯೂಟ್ಯೂಬ್ ಚಾನಲ್ ನಲ್ಲಿ ‘ರಂಗಪಯಣ’ದ ಮೂಲಕ ಹಲವಾರು ಸಾಧಕರ ಪರಿಚಯವನ್ನು ಸಮಾಜಕ್ಕೆ ಪರಿಚಯಿಸುವ ಒಂದು ನಿಸ್ವಾರ್ಥ ಸೇವೆಯನ್ನು ಕೂಡ ಬೆಳಕಿಗೆ ತಂದವರಿವರು. ಇದರ ಜೊತೆಗೆ ಬೆಂಗಳೂರಿನ ಯುವಜನರನ್ನು ಒಟ್ಟುಗೂಡಿಸಿ ಬೆಂಗಳೂರು ಯುವವಾಹಿನಿಗೆ ಅಡಪಾಯಿ ಕೊಟ್ಟಂತ ವ್ಯಕ್ತಿ ಇವರು. ಹಾಗೇ ತುಳು ನಾಟಕ ಕಲಾವಿದರ ಒಕ್ಕೂಟ(ರಿ.) ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿಯಾಗಿ , ಕೋಸ್ಟಲ್ ನಾಟಕ ಸಂಗೀತ ನಿರ್ದೇಶಕರ ಒಕ್ಕೂಟದ (ದ.ಕ. , ಉಡುಪಿ ಮತ್ತು ಕೊಡಗು) ಕಾರ್ಯದರ್ಶಿಯಾಗಿ , ಯುವವಾಹಿನಿ(ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿಯಾಗಿ , ಮಹಾಲಿಂಗೇಶ್ವರ ತೆಲಿಕೆದ ಕಲಾವಿದೆರ್ ಬಾಜಾವು ಎಂಬ ಹೊಸ ತಂಡಕ್ಕೆ ನಿರ್ದೇಶಕನಾಗಿ ಹೀಗೆ ಹಲವಾರು ಸಂಘ ಸಂಸ್ಥೆಗಳಿಗೆ ಹೊಸ ರೂಪವೊಂದನ್ನು ಕೊಟ್ಟ ಇವರು ಬಲೆ ತೆಲಿಪಾಲೆ, ಕಾಮಿಡಿ ಪ್ರೀಮಿಯರ್ ಲೀಗ್ ಹಾಸ್ಯ ಕಾರ್ಯಕ್ರಮದಲ್ಲಿ ‘ತುಳುವೆರೆ ತುಡರ್’ ತಂಡಕ್ಕೆ ಹಿನ್ನಲೆ ಸಂಗೀತ ನಿರ್ದೇಶನ ಸಹ ನೀಡಿದ್ದಾರೆ.

(Copyrights owned by: billavaswarriors.com )

ಸಂದ ಸನ್ಮಾನ ಪುರಸ್ಕಾರಗಳು :
ತನ್ನ ಕಲಾಜೀವನದಲ್ಲಿ ಅಸಂಖ್ಯಾತ ಪ್ರತಿಭೆಗಳಿಗೆ ಅವಕಾಶವನ್ನೊದಗಿಸಿ ತನ್ನ ತಂಡವೇ ತನಗೊಂದು ಕುಟುಂಬವಿದ್ದಂತೆ ಎಂಬ ಅಭಿಪ್ರಾಯವನ್ನು ಹೊಂದಿದ ಇವರಿಗೆ ಹಲವಾರು ಸಂಘ ಸಂಸ್ಥೆಗಳು ಪುರಸ್ಕರಿಸಿವೆ. ಜೆ.ಸಿ.ಐ ಮಡಂತ್ಯಾರ್ ನ ಬಲೆ ತೆಲಿಪಾಲೆ ಹಾಸ್ಯ ಕಾರ್ಯಕ್ರಮದಲ್ಲಿ ಸ್ವತಃ ತಾವೇ ಸಂಗೀತ ಮತ್ತು ನಿರ್ದೇಶನ ಮಾಡಿದ ತಂಡಕ್ಕೆ ಎರಡನೇ ಸ್ಥಾನದ ಇನಾಮು, ಜಿಲ್ಲಾ ಮಟ್ಟದ ನಾಟಕ ಪಂಥದಲ್ಲಿ ಇವರು ಬರೆದು ನಿರ್ದೇಶಿಸಿದ ನಾಟಕಕ್ಕೆ ಮೂರನೇ ಸ್ಥಾನ, ‘ಕೊಪ್ಪರಿಗೆ’ ಎಂಬ ನಾಟಕ ರಚನೆಗಾಗಿ ಬೊಂಬಾಯಿಯ ರಂಗ ತುಡರ್ ಬಿವುಂಡಿ ತಂಡದಿಂದ ಗೌರವ ಸನ್ಮಾನ, ಕಲಾ ಸಾಧನೆಗಾಗಿ ಬೆಂಗಳೂರು ಯುವವಾಹಿನಿ ರಿ. ಬೆಂಗಳೂರು ಘಟಕ ಹಾಗೇ ಯುವವಾಹಿನಿ ರಿ. ಸಸಿಹಿತ್ಲು ಘಟಕ ಮತ್ತು ಹಳೆವಿದ್ಯಾರ್ಥಿ ಸಂಘ ಚಂದಳಿಕೆ ಶಾಲೆಯ ಆಶ್ರಯದಲ್ಲಿ ನಡೆದ ಸನ್ಮಾನಗಳು ಮರೆಯಲಾಗದ ನೆನಪು ಎಂದೆನ್ನುತ್ತಾರೆ ಮಧು ಬಂಗೇರ ಕಲ್ಲಡ್ಕ.

ಈಜಿದಷ್ಟು ಸಾಗರ ಸೇರದು ಎನ್ನುವಂತೆ ಇವರ ಸಾಧನೆಯ ಹಾದಿಯನ್ನು ಬರೆದಷ್ಟು ಮುಗಿಯದು. ಇಂತಹ ನಾಟಕಪ್ರೇಮಿಯನ್ನು ಪಡೆದ ನಮ್ಮೀ ಸಮಾಜ ಭಾಗ್ಯಶಾಲಿ ಎಂದು ಹೇಳಿದರೆ ತಪ್ಪಾಗಲಾರದು. ತನ್ನ ವಿಭಿನ್ನ ನಾಟಕ ಬರಹದೊಂದಿಗೆ 27 ವರುಷಗಳ ಅನುಭವವನ್ನು ಹೊಂದಿರುವ ಇವರು ತನ್ನದೇ ಕಥೆ, ಚಿತ್ರಕಥೆ, ನಿರ್ದೇಶನದ ‘ಕಾಯರ್ ಮಾರ್’ ಎಂಬ ಸಸ್ಪೆನ್ಸ್ ಹಾರರ್ ಥ್ರಿಲ್ಲರ್ ಕಿರುಚಿತ್ರ ಬೇಗನೆ ಬಿಡುಗಡೆಗೊಳ್ಳಲಿದೆ. ನಿಮ್ಮ ಈ ನಾಟಕಪ್ರೇಮ ಶಾಶ್ವತವಾಗಿದ್ದು ಇನ್ನಷ್ಟು ಪ್ರತಿಭೆಗಳು ನಿಮ್ಮ ಮೂಲಕ ಬೆಳಕಿಗೆ ಬರಲಿ ಎಂದು ಆಶಿಸುತ್ತಾ ಶ್ರೀ ನಾರಾಯಣ ಗುರುಗಳ ಆಶೀರ್ವಾದ ಕೋಟಿಚೆನ್ನಯರ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ ಎಂದು ಬಿಲ್ಲವ ವಾರಿಯರ್ಸ್ ಸಂಸ್ಥೆಯ ವತಿಯಿಂದ ಹಾರೈಸುತ್ತೇನೆ.

ಬರಹ: ಯಕ್ಷಿತಾ ಆರ್, ಮೂಡುಕೊಣಾಜೆ
(Copyrights owned by: billavaswarriors.com )


Related Posts

ಬಿಲ್ಲವರ ಉನ್ನತಿಯಲ್ಲಿ ನಾರಾಯಣ ಗುರುಗಳ ಪಾತ್ರ ಗುರುತರವಾದುದು ಡಾ.ಮುಕೇಶ್ ಕುಮಾರ್


Share        ಮುಂಬಯಿ ಒಂದು ಕಾಲದಲ್ಲಿ ಮೇಲ್ವರ್ಗದವರಿಂದ ಅಸ್ಪ್ರಶ್ಯರೆನಿಸಿಕೊಂಡು ಸಮಾಜದಿಂದ ಬಹಿಷ್ಕೃತರಾದ ಬಿಲ್ಲವರು ಶ್ರೀಮಂತವಾದ ಸಂಸ್ಕೃತಿಯ ಹಿನ್ನೆಲೆಯಿಂದ ಬಂದವರು. ದಾರ್ಶನಿಕ ನಾರಾಯಣ ಗುರುಗಳ ಮಾರ್ಗದರ್ಶನವನ್ನೇ ಸ್ಫೂರ್ತಿಯಾಗಿಸಿಕೊಂಡು ಹಲವಾರು ಸಂಘರ್ಷಗಳನ್ನು ಎದುರಿಸಿಯೂ ಬಿಲ್ಲರು ಉನ್ನತ ಸ್ಥಾನಮಾನವನ್ನು ಗಳಿಸಿಕೊಂಡರು.


Read More »

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »