ಗಣರಾಜ್ಯೋತ್ಸವ ಪರೇಡ್ ಸಂಧರ್ಭದಲ್ಲಿ ಕೇರಳ ಕಳಿಸಿದ್ದ ಬ್ರಹ್ಮ ಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಕೇಂದ್ರ ಸರಕಾರವುತಿರಸ್ಕರಿಸಿದ್ದನ್ನು ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ತೀವ್ರವಾಗಿ ಖಂಡಿಸುತ್ತದೆ. ಬ್ರಹ್ಮ ಶ್ರೀ ನಾರಾಯಣ ಗುರುಗಳು ಮೇಲು ಕೀಳುಎನ್ನುವ ಜಾತಿ ಭೇಧ ಹಾಗೂ ಮತ ದ್ವೇಷ ಇರುವ ಸಮಾಜದಲ್ಲಿ ಸರ್ವ ಸಮಾನತೆಯ ಜ್ಞಾನದ ಬೆಳಕಾಗಿ ಅವತರಿಸಿ ಒಂದೇ ಜಾತಿಒಂದೇಧರ್ಮ ಒಂದೇ ದೇವರು ಎನ್ನುವ ತತ್ವವನ್ನು ಜಗಕ್ಕೆ ಸಾರಿದ ಪರಮ ಗುರುಗಳು.
ಕೋಟ್ಯಾಂತರ ಗುರುದೇವರಅನುಯಾಯಿಗಳ ಭಕ್ತಿ ಮತ್ತು ಭಾವನೆಗಳಿಗೆ ಅಗೌರವ ತೋರಿಸಿರುವುದು ವಿಷಾದನೀಯ ಕೇಂದ್ರ ಸರಕಾರವು ಈ ಬಗ್ಗೆಪುನರ್ಪರಿಶೀಲನೆ ಮಾಡಿ ಗುರುದೇವರ ಸ್ತಬ್ಧಚಿತ್ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಇರುವಂತೆ ಸೂಕ್ತ ಕ್ರಮಕೈಗೊಳ್ಳ ಬೇಕೆಂದುರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಒತ್ತಾಯಿಸುತ್ತದೆ.
ಡಾ. ರಾಜಶೇಖರ್ ಕೋಟ್ಯಾನ್
ಅಧ್ಯಕ್ಷರು
ರಾಷ್ಟ್ರೀಯ ಬಿಲ್ಲವರ ಮಹಾಮಂಡಲ