TOP STORIES:

ಶ್ರೀ ಗೆಜ್ಜೆಗಿರಿ ಮೇಳದ ಮುಂಬೈಯ ವ್ಯವಸ್ಥಾಪಕರಾಗಿ ಶ್ರೀ ನವೀನ್ ಪೂಜಾರಿ ಪಡು ಇನ್ನಾ, ಮುಂಬೈ


ಮಾಯಾನಗರಿ ಮುಂಬೈಯಲ್ಲಿ ಚತುರ ಸಂಘಟಕನಾಗಿ, ನಾಟಕ, ಯಕ್ಷಗಾನ ಮತ್ತು ಚಲನ ಚಿತ್ರ ಸಂಚಾಲಕರಾಗಿ  ಮಿನುಗುತ್ತಿರುವಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ, ಕಮಲ ಕಲಾ ವೇದಿಕೆ ಮುಂಬಯಿಯ ರೂವಾರಿ  ನಮ್ಮ ತುಳುನಾಡ ಪ್ರತಿಭೆ, ಕ್ಯಾಂಟಿನ್ ಉದ್ಯಮಿ ಶ್ರೀ ನವೀನ್ ಪಡು ಇನ್ನಾ, ಮುಂಬೈ ಅವರು ಮೂಲತ ದಕ್ಷಿಣ ಕನ್ನಡ ಜಿಲ್ಲೆಯ ಪಡು ಇನ್ನಾ ಗ್ರಾಮದವರು ತನ್ನಭವಿಷ್ಯದ ಹೊಂಗನಸನ್ನು ಸಾಕಾರಗೊಳಿಸಲು ಮಾಯಾನಗರಿ ಮುಂಬೈಗೆ ಆಗಮಿಸಿ ಫೋರ್ಟ್ ನಲ್ಲಿರುವ ಕನ್ನಡ ಭವನಜ್ಯೂನಿಯರ್ ಕಾಲೇಜಿನಲ್ಲಿ ವಿಧ್ಯಾಭ್ಯಾಸವನ್ನು ಮಾಡುತ್ತಾ ಕ್ಯಾಂಟೀನ್ ಕಾರ್ಮಿಕನಾಗಿ ದುಡಿದು ಮಾಲೀಕರ ಪ್ರೀತಿ ವಿಶ್ವಾಸವನ್ನುಗಳಿಸಿ ನಂತರ ಎಲ್ಲರೊಂದಿಗೆ ಆತ್ಮೀಯತೆಯ ಒಡನಾಟ ಮತ್ತು  ಸಹಕಾರವನ್ನು ಸೂಕ್ತವಾಗಿ ಬಳಸಿಕೊಂಡು ನಗರದಲ್ಲಿ ಯುವಕ್ಯಾಂಟೀನ್ ಉದ್ಯಮಿಯಾಗಿ ತನನ್ನು ಪರಿಚಯಿಸಿಕೊಂಡರು.  ಶ್ರೀ ನವೀನ್ ರವರು ದೈವ ದೇವರ ಧಾರ್ಮಿಕ ಕಾರ್ಯಗಳಲ್ಲೂಕೂಡಾ ತುಂಬಾ ಆಸಕ್ತಿಯನ್ನು ಹೊಂದಿ ತನ್ನ ಶಾಲಾ ದಿನಗಳಿಂದಲೇ ಸಂಘಟನಾ ಚಾತುರ್ಯ ಹಾಗೂ ಕ್ರೀಡಾ ನಾಯಕತ್ವದಗುಣಗಳಿಂದ ಮಾಯಾನಗರಿ  ಮುಂಬಯಿಯಲ್ಲಿ ನವೀನ್ ಪಡು ಇನ್ನಾ ಎಂದೇ ಪರಿಚಿತರಾಗಿ, ಕಲಾಪ್ರೇಮಿ ಯಾಗಿ ಕಳೆದ ಹತ್ತುವರ್ಷಗಳಿಂದ ತನ್ನ ಅಜ್ಜಿಯ ಹೆಸರಲ್ಲಿ ಕಮಲ ಕಲಾ ವೇದಿಕೆ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿ ಸಂಚಾಲಕತ್ವ ವನ್ನು ವಹಿಸಿ ಸಾಂಸ್ಕ್ರತಿಕಕಾರ್ಯಕ್ರಮಗಳ ಮುಖೇನ ನಾಟಕದ ಪ್ರದರ್ಶನಗಳನ್ನು ಯಶಸ್ವಿಯಾಗಿಆಯೋಜಿಸಿಕೊಂಡು *ತವರೂರ ಹಾಗೂ ನಗರದಸುಮಾರು 50 ಕ್ಕೂ ಹೆಚ್ಚಿನ ಕಲಾವಿದರನ್ನು, ಸಮಾಜ ಸೇವಕರನ್ನು  ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಸನ್ಮಾನಿಸಿದಹೆಗ್ಗಳಿಕೆಗೆ ಪಾತ್ರರಾಗಿದ್ದಾರೆಇವರ ಸಾಮಾಜಿಕ ಸಾಧನೆಯನ್ನು ಗುರುತಿಸಿ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯು ಆರ್ಯಭಟಅಂತರಾಷ್ಟ್ರೀಯ ಪ್ರಶಸ್ತಿ -2017 ನ್ನು ನೀಡಿ ಗೌರವಿಸಿದೆಇಷ್ಟು ಮಾತ್ರವಲ್ಲದೆ ರಾಷ್ಟ್ರ ಪ್ರಶಸ್ತಿ ವಿಜೇತ “ಮದಿಪು” ತುಳುಚಿತ್ರವನ್ನು ತನ್ನ ಚೊಚ್ಚಲ ಸಂಚಾಲಕತ್ವದಲ್ಲಿ  ಮಹಾರಾಷ್ಟ್ರದಾದ್ಯಂತ ಬಿಡುಗಡೆ ಗೊಳಿಸಿ ಸುಮಾರು 20 ಕ್ಕೂ ಮಿಕ್ಕಿದಪ್ರದರ್ಶನಗಳ್ಳನ್ನು ನೀಡಿದ ಕೀರ್ತಿಯನ್ನೂ ಗಳಿಸಿದ್ದಾರೆ.

ಬಾಲ್ಯದಿಂದಲೇ ಪ್ರತಿಭಾವಂತರಾದ ಇವರಿಗೆ ಎಮ್. ವಿ. ಶಾಸ್ತ್ರಿ ಆಯುರ್ವೇದ ಭೂಷಣ ಹೈಸ್ಕೂಲ್ ಇನ್ನಾ ವು ಯುವರತ್ನ ಬಿರುದು, ತುಳುನಾಡ ಸೇವಾ ಸಮಾಜ ಮೀರಾಭಾಯಂದರ್ ರಿಂದ  ಚತುರ ಸಂಘಟಕ‘, ಸಮಾಜಪರಕಲಾ ಸೇವೆಗಾಗಿ ನಮನ ಫ್ರೆಂಡ್ಸ್ ಮುಂಬಯಿ, ಬಿಲ್ಲವರ ಎಸೋಸಿಯೇಶನ್ ಅಂಧೇರಿ ಸ್ಥಳೀಯ ಕಛೇರಿ, ಫ್ರೆಂಡ್ಸ್ ಸರ್ಕಲ್ ಕಣಂಜಾರು  ಮುಂಬಯಿ, ನಮ್ಮ ಕಲಾವಿದೆರ್ ಬೆದ್ರ  ತಂಡದವರಿಂದ ‘ಉತ್ತಮ ಸಂಘಟಕ‘ ಬಿರುದನ್ನು ನೀಡಿರುತ್ತಾರೆ.  ಸಮಾಜದಲ್ಲಿಎಲ್ಲರೊಂದಿಗೂ ಬೆರೆಯುವ ಸ್ವಭಾವದೊಂದಿಗೆ ಹಲವು ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಇವರು ಶ್ರೀ ವಿಠಲಪ್ರತಿಷ್ಠಾಪನೆ ಮುಂಬಯಿ ಇದರ ಯುವ ವಿಭಾಗದ ಸಂಚಾಲಕ ರಾಗಿ, ಶಿವಾಯ್ ಫೌಂಡೇಶನ್ ಮುಂಬಯಿ ಮತ್ತು ರಂಗಮಿಲನ ಮುಂಬಯಿ   ಉಪಾಧ್ಯಕ್ಷ ರಾಗಿ, ಶ್ರೀ ಬ್ರಹ್ಮಶ್ರೀ ಗುರುನಾರಾಯಣ ಭಕ್ತವ್ರಂದ ಇದರ ಗೌ. ಕೋಶಾಧಿಕಾರಿ ಯಾಗಿ, ಇನ್ನಾ ಹಿತವರ್ಧಕ ಸಂಘ ಮುಂಬಯಿ  ಜೊತೆ ಕೋಶಾಧಿಕಾರಿ ಯಾಗಿ, ಯಂಗ್ ಫ್ರೆಂಡ್ಸ್ ಮುಂಬಯಿ ಯ ಸ್ಥಾಪಕ ರಾಗಿ, ಉಮೇಶ್ ಮಿಜಾರ್ ರವರ ನಮ್ಮ ಕಲಾವಿದೆರ್ ಬೆದ್ರ  ಹಾಗೂ ತುಳುವೆರ್ ಉಡಲ್ ಜೋಡುಕಲ್ಲು ನಾಟಕತಂಡಗಳ ಮುಂಬಯಿ ಸಂಚಾಲಕ ರಾಗಿ, ಶ್ರೀ ಸದ್ಗುರು ನಿತ್ಯಾನಂದ ಸೇವಾ ಸಂಘ ಬೇಲಾಪುರ್ ಹಾಗೂ ಸಪ್ತಸ್ವರ ಕಲ್ಚರಲ್ಎಸೋಸಿಯೇಶನ್(ರಿಇದರ ಸಕ್ರಿಯ ಕಾರ್ಯಕರ್ತ  ನಾಗಿ ಕಾರ್ಯ ನಿರ್ವಹಿಸುತ್ತಿರುವುದು ಅತ್ಯಂತ ಶ್ಲಾಘನೀಯವಾದದ್ದು. ಕೋರೋನಾ  ಮಹಾಮಾರಿಯ ಸಂಕಟದ ಪರಿಸ್ಥಿತಿಯಲ್ಲಿ ತಮ್ಮ  ಸಂಸ್ಥೆ ಕಮಲಾ ಕಲಾ ವೇದಿಕೆ  ಆಶ್ರಯದಲ್ಲಿ ದಾನಿಗಳಸಹಾಯದಿಂದ ಸುಮಾರು 200 ಕ್ಕೂ  ಹೆಚ್ಚಿನ ಬಡ ಕುಟುಂಬಗಳಿಗೆ ಸಹಾಯ ಮಾಡಿರುವುದು ನಿಜವಾಗಲೂ ವಂದನೀಯ.

ನವೀನ್ ಪಡು ಇನ್ನಾ ರವರು ತನ್ನ ಬಾಳ ಸಂಗಾತಿ ಜ್ಯೋತಿ ಯವರೊಂದಿಗೆ ದಿನಾಂಕ 29/11/2017 ರಂದು ಸಪ್ತಪದಿ ತುಳಿದುಇದೀಗ ಮುದ್ದು ಕಂದ ಅಧ್ವಿಕ್  ನೊಂದಿಗೆ ಸುಖ ಜೀವನವನ್ನು ನಡೆಸುತ್ತಿದ್ದಾರೆ.

ಇದೀಗ ತೆಂಕುತಿಟ್ಟಿನ ನೂತನ ಮೇಳ ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಇದರ ಶ್ರೀಗೆಜ್ಜೆಗಿರಿ ಯಕ್ಷಗಾನ ಮೇಳದ ಮುಂಬೈಯ ವ್ಯವಸ್ಥಾಪಕರಾಗಿ ಆಯ್ಕೆಯಾಗಿರುವ ಶ್ರೀಯುತ ಶ್ರೀ ನವೀನ್ ಪೂಜಾರಿ ಪಡು ಇನ್ನಾ ಅವರಿಗೆ ಕ್ಷೇತ್ರದ ವತಿಯಿಂದ ಅಭಿನಂದನೆಗಳೊಂದಿಗೆ ತಮ್ಮ ಮುಂಬೈಯ ವ್ಯವಸ್ಥಾಪಕತ್ವದಲ್ಲಿ ಮಾಯಾನಗರಿ ಮುಂಬೈನಲ್ಲಿ ಶ್ರೀಗೆಜ್ಜೆಗಿರಿ ಮೇಳದ ಗೆಜ್ಜೆಸೇವೆಯ ಹೆಚ್ಚಿನ ಯಕ್ಷಗಾನವನ್ನು ಪ್ರದರ್ಶಿಸುವಂತಾಗಲಿ.  ಶ್ರೀ ಕ್ಷೇತ್ರದ ಸರ್ವ ಶಕ್ತಿಗಳು ಉತ್ತಮ ಆರೋಗ್ಯಭಾಗ್ಯವನ್ನು ಕರುಣಿಸಿ ನಿಮ್ಮ ಎಲ್ಲಾ ಇಷ್ಟಾರ್ಥ ನೆರವೇರಿಸಲಿ ಎಂದು ಪ್ರಾರ್ಥಿಸುತ್ತೇವೆ.

ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ(ರಿ) ಮತ್ತು ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ


Related Posts

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »