TOP STORIES:

ಸಮಾಜದ ಸಮಸ್ಯೆಗಳ ಧ್ವನಿಯಾಗುವ ಪೊಲೀಸ್ ಅಧಿಕಾರಿ ಶ್ರೀಮತಿ ರೀನಾ ಸುವರ್ಣ ACP


ನೊಂದವರ ಕಣ್ಣೀರು ಒರೆಸಿ, ಸ್ನೇಹಭಾವದ ಬೀಜವನ್ನು ಬಿತ್ತಿ, ಹಿಂಸಾಚಾರ ತಡೆಯುವಲ್ಲಿ ರಕ್ಷಾಕವಚವಾಗಿ, ನ್ಯಾಯ ನೀತಿ ಧರ್ಮವನ್ನು ಪೋಷಿಸಿ, ಅನ್ಯಾಯವನ್ನು ಮೆಟ್ಟಿ, ಸಮಸ್ಯೆಗಳನ್ನು ಸಹನೆ ತಾಳ್ಮೆಯಿಂದ ಸ್ವೀಕರಿಸಿ ಜನರ ಸೇವೆಗೈವ ನಿಷ್ಠಾವಂತ ಪೊಲೀಸ್ ಅಧಿಕಾರಿಣಿ ಯೇ ನಮ್ಮ “ಶ್ರೀಮತಿ ರೀನಾ ಸುವರ್ಣ. ಎನ್. ”

ವಿಶ್ವ ಕಂಡ ಮಹಾನ್ ಸಾಹಿತಿ ಲಿಯೋ ಟಾಲಸ್ಟಾಯ್ ಹೇಳುತ್ತಾರೆ. “ಜೀವನದಲ್ಲಿ ಅತ್ಯಂತ ಶ್ರೇಯಸ್ಕರವಾದುದು ಎಂದರೆ ಮನುಕುಲದ ಒಳಿತಿಗಾಗಿ ಶ್ರಮಿಸುವುದು. “ಎಂದು. ಜನರ ಸೇವೆಯ ಜೊತೆಗೆ ಸಮಾಜದ ಕೆಲವು ಸಮಸ್ಯೆಗಳಿಗೆ ಧ್ವನಿಯಾಗಿ ಪರಿಹರಿಸಲು “ಅಧಿಕಾರ ” ಮತ್ತು “ಜವಾಬ್ದಾರಿ ” ಇರಲೇಬೇಕು. ಎಂಬ ನಿಲುವಲ್ಲಿ ಇವರು ಪೊಲೀಸ್ ಅಧಿಕಾರಿಯಾಗಿದ್ದು ಹೆಮ್ಮೆಯ ವಿಚಾರ.

ಶ್ರೀಮತಿ. ರೀನಾ ಸುವರ್ಣ.ಎನ್. ಡಿವೈ ಎಸ್ ಪಿ, ಸಿಐಡಿ ಬೆಂಗಳೂರು, ಕರ್ನಾಟಕ ರಾಜ್ಯ ಪೊಲೀಸ್ ಸೇವೆ. ಇವರು ವಿದ್ಯಾರ್ಥಿ ಜೀವನದಲ್ಲಿಯೇ ಪ್ರತಿಭಾನ್ವಿತೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಎಮ್. ಎ. ಪದವಿಯಲ್ಲಿ, “ಚಿನ್ನದ ಪದಕ” ಗಳಿಸಿದ ಇವರು, ಮೌಂಟ್ ಕಾರ್ಮೆಟ್ ಕಾಲೇಜಿನಲ್ಲಿ ಬಿ.ಎ ಯಲ್ಲಿ “ಕಾಲೇಜಿನ ಅತ್ಯುತ್ತಮ ಹೊರಹೋಗುವ ವಿದ್ಯಾರ್ಥಿನಿ “ಎಂಬ ಪ್ರಶಸ್ತಿಗೆ ಭಾಜನರು.

ಬಾಲ್ಯದಿಂದಲೂ ಪುಸ್ತಕಗಳಲ್ಲಿದ್ದ ಅಪಾರ ಪ್ರೇಮ, ಓದುವ ಛಲವೇ ಇವರನ್ನು ಇಂದು ಅತ್ಯಂತ ಶ್ರೇಷ್ಠ ಸಾಧಕರ ಸಾಲಿನಲ್ಲಿ ನಿಲ್ಲುವಂತೆ ಮಾಡಿದ್ದು ಎಂದರೆ ತಪ್ಪಲ್ಲ..

“ಹಗಲೆನ್ನದೆ ಇರುಳೆನ್ನದೆ, ಉಪಚಾರಗಳ ಹಂಗಿಲ್ಲದೆ ಜನರಿಗಾಗಿ ದುಡಿವ ಮಹಿಳಾ ಪೊಲೀಸ್ ಅಧಿಕಾರಿ ಎಲ್ಲರಿಗೂ ಸ್ಪೂರ್ತಿಯ ಸೆಲೆ. “ಇವರ ಕಾರ್ಯವೈಖರಿ ಅದ್ಭುತವೇ ಸರಿ.

2014 ರಲ್ಲಿ ಡಿವೈಎಸ್ಸ್ಪಿ ಯಾಗಿ ಕರ್ತವ್ಯಕ್ಕೆ ಸೇರಿದ ಇವರು ” ಬೆಂಗಳೂರು ಗ್ರಾಮೀಣ ಪ್ರೊಬೆಷನರಿ ಐಜಿ ದಕ್ಷಿಣ ಶ್ರೇಣಿ “ಯಿಂದ ಮೂರು ಮೆಚ್ಚುಗೆ ಪತ್ರಗಳನ್ನು ಗಳಿಸಿರುತ್ತಾರೆ.

ಹೊಸಕೋಟೆ ಪೊಲೀಸ್ ಠಾಣೆಯ ಉಸ್ತುವಾರಿ ವಹಿಸಿಕೊಂಡ ಸಮಯದಲ್ಲಿ ಕೇವಲ ಎರಡೇ ತಿಂಗಳಲ್ಲಿ 11 ಕಾಣೆಯಾದ ಪ್ರಕರಣಗಳನ್ನು ಪತ್ತೆ ಮಾಡಿರುತ್ತಾರೆ. ಅನೇಕಲ್ ಅಟ್ಟಿಬೆಲೆಯಲ್ಲಿ 280 ಕಿ.ಗ್ರಾ ಗಾಂಜಾವನ್ನು ವಶಪಡಿಸಿಕೊಂಡಿದ್ದೂ ನಮ್ಮ ಮಹಿಳಾ ಸಾಧಕಿ “ಶ್ರೀಮತಿ.ರೀನಾ ಸುವರ್ಣ” ರವರೆ. ತಾನು ಉರಿದು ಸೇವೆಯೇ ಸರ್ವಸ್ವವೆಂದು ಕರ್ತವ್ಯ ನಿರ್ವಹಿಸುವ ಇವರು ಸಮಾಜಘಾತುಕ ಶಕ್ತಿಗಳನ್ನು ಹಿಮ್ಮೆಟ್ಟಿಸುವಲ್ಲಿ ಬಹಳ ಶ್ರಮ ಪಟ್ಟಿರುತ್ತಾರೆ..

ಜಿಗಾನಿಯಲ್ಲಿ ಅರ್ಧ ದಿನದಲ್ಲಿ ಗುರುತಿಸಲೂ ಆಗದ ಮೃತದೇಹವನ್ನು ಯಶಸ್ವಿಯಾಗಿ ಪತ್ತೆಹಚ್ಚಿ ಅಂದಿನ ಉಡುಪಿ ಎಸ್.ಪಿ ಲಕ್ಷ್ಮಣ ನಿಂಬರ್ಗಿ ಯವರಿಂದ ಮೆಚ್ಚುಗೆ ಪಡೆದವರು ನಮ್ಮ ಶ್ರೀಮತಿ. ರೀನಾ ಸುವರ್ಣ ರವರು.

ಇದಲ್ಲದೆ ಹೊಸ್ಕೊಟ್ ನಲ್ಲಿ 6 ಗಂಟೆಯ ಒಳಗೆ “ಪೊಕ್ಸೋ ” ಪ್ರಕರಣವನ್ನು ಪತ್ತೆಹಚ್ಚಿದ ಅದ್ಭುತ ಪತ್ತೇದಾರಿ ಪೊಲೀಸ್ ಇವರು.
“ಆರಕ್ಷಕರಿಲ್ಲದ ಸಮಾಜವನ್ನು ಊಹಿಸಲು ಸಾಧ್ಯವೇ ಹೇಳಿ???. ಸೇವೆಯುದ್ದಕ್ಕೂ ಸವಾಲುಗಳೇ, ಸಾವಿನಂಚಿಗೂ ತಲುಪುವ ಕ್ಲಿಷ್ಟ ಕಠಿಣ ಪ್ರಕರಣಗಳೇ, ದುರ್ವಿಧಿಯ ಸನ್ನಿವೇಶಗಳೇ.. ”

ಹೆಣ್ಣು ಬಲಹೀನ, ದುರ್ಬಲಳು, ಅವಲಂಬಕಿ ಎನ್ನುವ ಈ ಸಮಾಜಕ್ಕೆ ತಕ್ಕ ಪ್ರತಿ ಉತ್ತರವೇ ಡಿವೈ ಎಸ್ ಪಿ,ಶ್ರೀಮತಿ ರೀನಾ ಸುವರ್ಣ, ಎನ್.

ನಗರಸಭೆಯ ಬೆಂಬಲದೊಂದಿಗೆ ಹೊಸ್ಕೊಟ್ ನ ಪ್ರಮುಖ ಜಂಕ್ಷನ್ ಗಳಲ್ಲಿ ಸಿ.ಸಿ. ಟಿ. ವಿ. ಯನ್ನು ಅಳವಡಿಸಿ ಅನ್ಯಾಯಕ್ಕೆ ಪ್ರತಿಧ್ವನಿಯಾದವರು ಇವರು. ಅದಷ್ಟೇ ಅಲ್ಲದೇ, ಡ್ರಗ್ಸ್ ಮಾಫಿಯಾ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮತ್ತು ಮಾನವ ಕಳ್ಳ ಸಾಗಣೆ ವಿರುದ್ಧ ಛಲಬಿಡದೆ ಹೋರಾಡುವ ಧೀಮಂತ ಪೊಲೀಸ್ ನಮ್ಮ ರೀನಾ ಸುವರ್ಣ.

ಒತ್ತಡಗಳನ್ನು, ಸವಾಲುಗಳನ್ನು ತನಗಿರುವ ಅವಕಾಶಗಳೆಂದು ಸ್ವೀಕರಿಸಿ ದುಡಿಯುವ ಇವರು ಪ್ರಸ್ತುತ ಎಸಿಪಿ ಯಾಗಿ ಜೆಸಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

“ಆಡಿಕೊಳ್ಳುವವರ ಮುಂದೆ ಜಾರಿ ಬೀಳದೆ ತಲೆಯೆತ್ತಿ ನಡೆದು ಕೆಚ್ಚೆದೆಯಿಂದ ನಡೆಯುತ, ಜೀವನದಲ್ಲಿ ಮಹತ್ತರವಾದುದನ್ನು ಸಾಧಿಸಿ ಬದುಕಿಗೊಂದು ಸಾರ್ಥಕತೆ ಒದಗಿಸಿಕೊಡಬೇಕು. ಆಗಲೇ ಬದುಕಿಗೊಂದು ಬೆಲೆಯೂ, ನೆಲೆಯೂ… ”

“ಪೊಲೀಸ್ ಸ್ವಸ್ಥ ಸಮಾಜದ ಭದ್ರತೆ ವಹಿಸಿ ಹಗಲಲ್ಲಿ ಸೂರ್ಯನಂತೆ, ರಾತ್ರಿ ಚಂದ್ರನಂತೆ ಸಮಾಜಕ್ಕಾಗಿ ದುಡಿಯುವ ಏಕೈಕ ಸರ್ಕಾರಿ ನೌಕರ.. ”
.
ಎಲ್ಲಾ ನಿಷ್ಠಾವಂತ ಪೊಲೀಸ್ ರಿಗೆ, ಮುಂದೆ “ಪೊಲೀಸ್ ಅಧಿಕಾರಿಣಿ ” ಯಾಗುವ ಛಲತೊಟ್ಟ ಹುಡುಗಿಯಿಂದ ಈ ಬರಹ ಅರ್ಪಣೆ..

Credits: ಚೈತ್ರ ಕಬ್ಬಿನಾಲೆ

Email us: billavaswarriors@gmail.com

www.billavaswarriors.com


Related Posts

ರಾಜ್ಯದಲ್ಲಿ ರಚನೆಯಾಗಲಿರುವ ನೂತನ ಸಚಿವ ಸಂಪುಟ ಸಚಿವ ಸಂಪುಟದಲ್ಲಿ ಬಿಲ್ಲವ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು


Share         ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಬೇಕು ಬಿಲ್ಲವ ಸಮಾಜಕ್ಕೆ ನ್ಯಾಯಯುತ ಪ್ರಾತಿನಿಧ್ಯ ಒದಗಿಸಬೇಕು ಸೋಲೂರು ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಗ್ರಹ ರಾಜ್ಯದಲ್ಲಿ ರಚನೆಯಾಗಲಿರುವ


Read More »

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಅಶೋಕ್ ಪೂಜಾರಿ ಪುನಾರಾಯ್ಕೆ


Share         ಕುಂದಾಪುರ, ಮೇ 24: ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ರವಿವಾರ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಜರಗಿತು. ಕುಂದಾಪುರ ಬಿಲ್ಲವ ಸಮಾಜ ಸೇವಾ


Read More »

ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಮ್ಮ ಸಮಾಜದ ಹೆಮ್ಮೆ ಎಸಿಪಿ ಶ್ರೀ ಎಸ್. ಮಹೇಶ್ ಕುಮಾರ್


Share         ಶ್ರೀ ಎಸ್. ಮಹೇಶ್ ಕುಮಾರ್ ಅವರು ಕಳೆದ 25 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಅವರ ಕರ್ತವ್ಯನಿಷ್ಠೆ ಮತ್ತು ಮಾನವೀಯತೆಯ ಪ್ರತೀಕವಾಗಿದೆ. 2012ರಲ್ಲಿ


Read More »

10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ ಲೀಡಿಂಗ್ ಬ್ಯಾಂಕ್ ಅವಾರ್ಡ್.


Share         ಪುಣೆಯ ಕೊರೆಗಾಂವ್ ಪಾರ್ಕ್‌ನ ಹೋಟೆಲ್ ವೆಸ್ಟಿನ್‌ನಲ್ಲಿ ನಡೆದ 10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ “ಲೀಡಿಂಗ್ ಬ್ಯಾಂಕ್ ಅವಾರ್ಡ್” (Leading Bank Award) ನೀಡಿ ಗೌರವಿಸಲಾಯಿತು.


Read More »

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »