ಮನೆಯಲ್ಲಿ ಮೊಟ್ಟೆ ಇದ್ದರೆ ಸಾಕು, ಸುಲಭವಾಗಿ ಹೊಟ್ಟೆ ತುಂಬಿಸಿಕೊಳ್ಳಬಹುದು ಅನ್ನೋದು ತುಂಬಾ ಜನರ ಮಾತು. ಆದರೆ, ಸುಲಭವಾಗಿ ರುಚಿಕರವಾದ ಆಮ್ಲೆಟ್ ಮಾಡುವ ವಿಧಾನಗಳು ಇಲ್ಲಿವೆ.
ಆಮ್ಲೆಟ್ ಬೆಳಗಿನ ಉತ್ತಮ ಉಪಾಹಾರ. ವೇಗವಾಗಿ ಮಾಡುವ ಆರೋಗ್ಯಯುತ ತಿಂಡಿ. ಆದರೆ , ಇದನ್ನು ಮಾಡುವುದು ಕೂಡ ಒಂದು ಕಲೆ. ಮನಸ್ಸೋಇಚ್ಛೆ ಮಾಡಿದರೆ ಇದು ಹಾಳಾಗುವುದು ಖಂಡಿತ. ಕೆಲವರು ಎರಡು ಮೊಟ್ಟೆ ಒಡೆದು ಹಾಕಿ ಆಮ್ಲೆಟ್ ಮಾಡಿ ಆಯ್ತು ಎನ್ನುತ್ತಾರೆ. ಆದರೆ, ಸರಿಯಾದ ಮೊಟ್ಟೆಗಳನ್ನು ಆಯ್ಕೆ ಮಾಡುವುದರಿಂದ ಹಿಡಿದು, ಸೂಕ್ತವಾದ ಪ್ಯಾನ್ ಆಯ್ಕೆ ಮಾಡುವವರೆಗೂ ಇದರ ಪ್ರಕ್ರಿಯೆ ಇರುತ್ತದೆ. ಹಾಗಾದರೆ ಆಮ್ಲೆಟ್ ಮಾಡುವ ಕಲೆಯನ್ನು ಕರಗತ ಮಾಡಿಕೊಳ್ಳಿ. ಜೊತೆಗೆ ರುಚಿಕಟ್ಟಾದ ಆಮ್ಲೆಟ್ ಮಾಡಿ ಸವಿಯಿರಿ.
ಮನೆಯಲ್ಲಿ ಮೊಟ್ಟೆ ಇದ್ದರೆ ಸಾಕು ಸುಲಭವಾಗಿ ಹೊಟ್ಟೆ ತುಂಬಿಸಿಕೊಳ್ಳಬಹುದು ಅನ್ನೋದು ತುಂಬಾ ಜನರ ಮಾತು. ಆದರೆ, ಸುಲಭವಾಗಿ ರುಚಿಕರವಾದ ಆಮ್ಲೆಟ್ ಮಾಡುವ ವಿಧಾನಗಳು ಇಲ್ಲಿವೆ.
ಮೊಟ್ಟೆ ಆಯ್ಕೆ
ಬೆಳಿಗ್ಗೆ ಏಳುವುದು, ರೆಫ್ರಿಜರೇಟರ್‌ನಲ್ಲಿನ ಮೊಟ್ಟೆ ತೆಗೆದುಕೊಳ್ಳುವುದು. ಒಲೆಯ ಮೇಲಿನ ತವಾದ ಮೇಲೆ ಒಡೆದು ಹಾಕುತ್ತೇವೆ. ನಂತರ ಆಮ್ಲೆಟ್ ರುಚಿಯಾಗಿ ಆಗಿಲ್ಲ ಎಂದು ಎಸೆಯುತ್ತೇವೆ. ಆಮ್ಲೆಟ್ ಮಾಡಲು ಮೊದಲು ಮೊಟ್ಟೆಯನ್ನು ಕೋಣೆಯ ಉಷ್ಣಾಂಶಕ್ಕೆ ತಕ್ಕದಾಗಿ ಇರುವಂತೆ ನೋಡಿಕೊಳ್ಳಬೇಕು. ರೆಫ್ರಿಜರೇಟರ್ ಬಳಸುತ್ತಿದ್ದರೆ, ಸ್ವಲ್ಪ ಸಮಯದವರೆಗೆ ಮೊಟ್ಟೆಗಳನ್ನು ಹೊರಗಿಟ್ಟು ನಂತರ ಬಳಸಬೇಕು.
ಸರಿಯಾಗಿ ಮಿಶ್ರಣ ಮಾಡಿ
ನಯವಾದ ಆಮ್ಲೆಟ್ ತಯಾರಿಸಲು ಉತ್ತಮ ವಿಧಾನವೆಂದರೆ ಮಿಶ್ರಣ ಮಾಡುವಾಗ ಹಾಲು ಅಥವಾ ಕೆನೆ ಸೇರಿಸುವುದು. ಇದರ ಜೊತೆಯಲ್ಲಿ, ಮೊಟೆಗಳನ್ನು ಒಡೆಯುವಾಗ ಯಾವುದೇ ಬಿಳಿ ಅಂಶ ಬೀಳದಂತೆ ನೊಡಿಕೊಂಡು ಚೆನ್ನಾಗಿ ಮಿಶ್ರಣ ಮಾಡಬೇಕು. ಮಿಶ್ರಣವು ನೊರೆ ಮತ್ತು ಮೃದುವಾಗುವಂತೆ ಆಗುವಂತೆ ನೋಡಿಕೊಳ್ಳಿ.
ಇದನ್ನೂ ಓದಿ: ದಿನಕ್ಕೊಂದು ಮೊಟ್ಟೆ ತಿಂದರೆ, ಆರೋಗ್ಯಕ್ಕೆ ಹತ್ತಾರು ಲಾಭ..!
ತವಾ ಉತ್ತಮವಾಗಿರಲಿ
ಅಡುಗೆಗೆ ಬಂದಾಗ, ತವಾಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಮತ್ತು ನಿರ್ದಿಷ್ಟವಾಗಿ ಆಮ್ಲೆಟ್‍ಗಳಿಗೆ. ಇದಕ್ಕೆ ನಾನ್-ಸ್ಟಿಕ್ ಪ್ಯಾನ್‍ಗಳು ಉತ್ತಮ. ಉತ್ತಮ, ರುಚಿಯಾಗಬೇಕಾದರೆ ಆಮ್ಲೆಟ್ ಅನ್ನು ಮಧ್ಯಮ ಉರಿಯಲ್ಲಿ ಬೇಯಿಸಬೇಕು ಮತ್ತು ಮಧ್ಯಮ ಗಾತ್ರದ ಪ್ಯಾನ್ ಬಳಸಿ. ಇದರಿಂದ ಶಾಖವು ಮಧ್ಯದಲ್ಲಿ ಕೇಂದ್ರೀಕೃತವಾಗಿರುತ್ತದೆ ಮತ್ತು ಆಮ್ಲೆಟ್ ಅನ್ನು ಸಮವಾಗಿ ಬೇಯಿಸಬಹುದು. ಮಧ್ಯಮ ಗಾತ್ರದ ಪ್ಯಾನ್‍ನಲ್ಲಿ ಎರಡು ಮೊಟ್ಟೆಗಳಿಗಿಂತ ಹೆಚ್ಚಿನ ಆಮ್ಲೆಟ್ ಬಳಸಬೇಡಿ.
ತವಾದ ಮೇಲೆ ಮಿಶ್ರಣ ಸುರಿಯುವುದು
ಮೊದಲನೆಯದಾಗಿ, ಮಿಶ್ರಣವನ್ನು ತವಾದ ಮೇಲೆ ಸುರಿಯುವ ಮೊದಲು ಬೆಣ್ಣೆಯನ್ನು ತವಾದ ಮೇಲೆ ಹಾಕಿ ಕರಗಿಸಿ. ಬೆಣ್ಣೆಯನ್ನು ಚೆನ್ನಾಗಿ ಬಿಸಿಯಾದಾಗ ಗುಳ್ಳೆಗಳು ಕಾಣುತ್ತದೆ. ನಂತರ ಮೊಟ್ಟೆಯ ಮಿಶ್ರಣ ಸುರಿಯಿರಿ ಮತ್ತು ಏಕಕಾಲದಲ್ಲಿ ಪ್ಯಾನ್ ಅನ್ನು ಒಂದು ಪರಿಪೂರ್ಣ ವೃತ್ತವನ್ನು ಮಾಡಿ.
ಬಣ್ಣದ ಮೇಲೆ ಗಮನವಿರಲಿ
ಪರಿಪೂರ್ಣವಾದ ಆಮ್ಲೆಟ್ ಕಂದು ಬಣ್ಣದ್ದಾಗಿರಬೇಕು. ಆದರೆ ಕೆಳಭಾಗವು ತಿಳಿ ಹಳದಿ ಅಥವಾ ಕೆನೆ ಬಣ್ಣದ್ದಾಗಿರಬೇಕು. ನೀವು ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ಬಣ್ಣ ಗುರುತಿಸಬಹುದು ಎಂದು ಅಡುಗೆ ತಜ್ಞರು ಸೂಚಿಸುತ್ತಾರೆ.
ಮೇಲೋಗರಗಳು (ಟಾಪಿಂಗ್ಸ್)
ಮೇಲೋಗರಗಳನ್ನು ಹಾಕುವ ವೇಳೆ ಆತುರಬೇಡ. ಆಮ್ಲೆಟ್ ಮಡಚುವ ಪ್ರಕ್ರಿಯೆಗೆ ತೊಂದರೆಯಾಗದಂತೆ ನೀವು ಅವುಗಳನ್ನು ಸಣ್ಣಗೆ ಕತ್ತರಿಸಬೇಕು. ಮೊಟ್ಟೆಯು ಚೆನ್ನಾಗಿ ಬೆಂದ ನಂತರ ಮೇಲೋಗರಗಳನ್ನು ಸೇರಿಸಬೇಕು.
ಮುರಿಯದೆ ತಟ್ಟೆಯ ಮೇಲೆ ಹಾಕಿ
ಆಮ್ಲೆಟ್ ಅನ್ನು ಮುರಿಯದೆ ಸರಿಯಾಗಿ ಇಡುವುದು ಕೂಡ ಒಂದು ಕಲೆ. ಇದಕ್ಕೆ ಉತ್ತಮ ಮಾರ್ಗವೆಂದರೆ ಪ್ಯಾನ್ ಅನ್ನು ನಿಧಾನವಾಗಿ ಅಲ್ಲಾಡಿಸಿ. ಇದರಿಂದ ಅದು ಪ್ಯಾನ್‍ನ ತಳವನ್ನು ಬಿಟ್ಟು ತಟ್ಟೆಯಲ್ಲಿ ಸುಲಭವಾಗಿ ಜಾರುತ್ತದೆ.
Food: ಸುಲಭವಾಗಿ ರುಚಿಕರವಾದ ಆಮ್ಲೆಟ್ ಮಾಡಲು ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ..!