TOP STORIES:

ಹೆಣ್ಣು ಕೂಡ ಒಂದು ಜೀವಿ ಎಂಬುವುದನ್ನು ಇಂದಿನ ಸಮಾಜ ಮರೆತಿದೆಯೇ ?


ಹೆಣ್ಣು
“ಯತ್ರ ನಾರ್ಯಸ್ತು ಪೂಜೆಯಂತೇ ತತ್ರ ದೇವತಾ”: ಅಂದರೆ “ಎಲ್ಲಿ ಹೆಣ್ಣನ್ನು ಪೂಜೆಸುತ್ತಾರೋ ಅಲ್ಲಿ ಸಕಲ ದೇವತೆಗಳು ನೆಲೆಸುತ್ತಾರೆ” ಆದರೆ ಬೇಸರದ ಸಂಗತಿಯೆಂದರೆ ಈ ೨೧ನೆಯ ಶತಮಾನದಲ್ಲಿ ಈ ಅರ್ಥ ಅಕ್ಷರಶ: ಸುಳ್ಳುಯೆನಿಸುತ್ತಿದೆ.

ಹೆಣ್ಣನ್ನು ಪೂಜೆಮಾಡುವುದು ಬೇಡ ಕನಿಷ್ಟ ಪಕ್ಷ ಅವಳು ಒಂದು ಜೀವಿ ,ಅವಳಿಗೂ ಈ ಭೂಮಿಯಲ್ಲಿ ಅವಳ ಇಚ್ಛೆಯಂತೇ ಬದುಕಲು ಬಿಟ್ಟರೆ ಸಾಕು..

‘ಹೆಣ್ಣು ‘ಒಬ್ಬಳು ಗಂಡಿನಂತೆ ಒಂದು ಜೀವಿ ,ಅವಳಿಗೂ ಮನಸ್ಸು ,ಭಾವನೆಗಳಿವೆ,ಅವಳು ಕೇವಲ ಉಸಿರಾಡುವ ಬೊಂಬೆಯಲ್ಲ ,ಅವಳಿಗೂ ಗಂಡಿನಂತೆ ಜೀವವಿದೆ . ಇದೆನ್ನೆಲ್ಲ ಮರೆತಂತಿದೆ ಗಂಡುಕುಲ . ‘ಹೆಣ್ಣು ‘ಅಂದರೆ ಕೇವಲ ನಿಮ್ಮ ಕಾಮದ ಬಯಕೆಗಳನ್ನ ತೀರಿಸುವ ಒಂದು ಯಂತ್ರವಾಗಿ ಕಾಣುತ್ತಾಳ ? ಮತ್ತೇಕೆ..ಅವಳ ಮೇಲಿನ ದೌರ್ಜನ್ಯ ,ಅತ್ಯಾಚಾರ, ಹಿಂಸೆ ಇನ್ನು ನಿಂತಿಲ್ಲ ..ಹೆಣ್ಣನ್ನು ಅಪಹರಿಸಿದಕ್ಕೆ ,ಹೆಣ್ಣಿನ ಮಾನಭಂಗ ಮಾಡಿದ್ದಕ್ಕೆ ರಾಮಾಯಣ ,ಮಹಾಭಾರತ ಎನ್ನುವ ಮಹಾಸಂಗ್ರಾಮವೇ ನಡೆದುಹೋಯಿತು. ಆದರೆ ಇಂದು ಹೆಣ್ಣಿನ ಮೇಲೆ ಅದೆಷ್ಟೋ ದೌರ್ಜನ್ಯ, ಅತ್ಯಾಚಾರಗಳು ನಡಿದಿದೆ ನಡೆಯುತ್ತಿದೆ . ಯಾಕಂದ್ರೆ ಅವಳು ‘ಹೆಣ್ಣು’ ಎನ್ನುವ ಕಾರಣವೆ??

   (Copyrights owned by: billavaswarriors.com )

ಒಂದೇ ರಾತ್ರಿಯಲ್ಲಿ ನೋಟ್ ಬ್ಯಾನ್ ಆಗುತ್ತೆ , ಒಂದೇ ರಾತ್ರಿಯಲ್ಲಿ ಸರಕಾರ ಬದಲಾಗುತ್ತೆ ,ಒಂದೇ ದಿನದಲ್ಲಿ ಎಲ್ಲ ಚೈನೀಸ್ ಆಪ್ ಟಿವಿ ಚಾನೆಲ್ ಬ್ಯಾನ್ ಆಗುತ್ತೆ ,ಆದರೆ ಯಾಕೆ ??ವ್ಯಾಘ್ರ ಕಾಮುಕರಿಗೆ ಶಿಕ್ಷೆ ಆಗುದಿಲ್ಲ. ಯಾಕಂದ್ರೆ ಒಂದೇ ಉತ್ತರ ಅವಳು ‘ಹೆಣ್ಣು’ ಅಲ್ಲವೇ.?

ಇಂದು ಮನುಷ್ಯ ಕಾಲಿಡದ ಕ್ಷೇತ್ರವಿಲ್ಲ . ಭೂಮಿಯಲ್ಲಿ ಮಾತ್ರವಲ್ಲದೆ ಹೊಸಜಗತ್ತನ್ನು ಹುಡುಕುತ್ತ ಆಕಾಶಕ್ಕೆ ಹಾರಿದ್ದಾನೆ . ಹಲವಾರು ಅಮೋಘ ಸಾಧನೆ ಮಾಡಿದ್ದಾನೆ. ಆದರೆ ಹೆಣ್ಣಿನ ಮೇಲಿನ ಅತ್ಯಾಚಾರಗಳು ನಡೆಯುತ್ತಲೇ ಇದೆ ಕಾರಣ ಅವಳು ‘ಹೆಣ್ಣು’…

ಗಂಡುಜಾತಿಯ ರಣಹೇಡಿಗಳೇ, ವ್ಯಾಘ್ರಕಾಮುಕರೇ ..ಯಾಕೆ ನಿಮಗೆ ಇನ್ನು ಅರ್ಥವಾಗುತ್ತಿಲ್ಲ ನಿಮಗೆ ಪ್ರೀತಿ ಕೊಟ್ಟು ನಿಮ್ಮನ್ನು ಒಂಭತ್ತು ತಿಂಗಳು ಸಾಕಿ ಸಲುಹಿದ ಆ ನಿಮ್ಮ ತಾಯಿಯು ಒಬ್ಬಳು ಹೆಣ್ಣಲ್ಲವೇ . ಅವಳು (ಹೆಣ್ಣು ) ಹುಟ್ಟುವಾಗ ಅಣ್ಣ- ತಮ್ಮ ಎನ್ನುವ ಪಟ್ಟಕಟ್ಟಿ ನಿಮಗೆ ಪ್ರೀತಿ ,ಸಂತೋಷ ನೀಡುವ ಅಕ್ಕ -ತಂಗಿ ಸ್ವರೂಪವಲ್ಲವೇ ಹೆಣ್ಣು ..

ಕೊನೆ ಪಕ್ಷ ನಿಮಗೆ ಹೆಣ್ಣಿಗೆ ತಾಯಿ ,ಅಕ್ಕ ,ತಂಗಿ ಸ್ಥಾನ ನೀಡಲು ಕಷ್ಟವಾದರೇ ಬಿಡಿ..ಕನಿಷ್ಟ ಪಕ್ಷ ಅವಳು ನಿಮ್ಮಂತೆಹೇ ಮನುಷ್ಯಳು ಅವಳಿಗೂ ಒಂದು ಜೀವವಿದೆ, ಜೀವನವಿದೆ..ಸಾವಿರಾರು ಬಣ್ಣ- ಬಣ್ಣದ ಕನಸುಗಳಿವೆ ,ಆ ಕನಸುಗಳಿಗೆ ಬಣ್ಣ ಹಚ್ಚುವ ಕೆಲಸಮಾಡದಿದ್ದರು ಪರವಾಗಿಲ್ಲ ಅವಳ ರೆಕ್ಕೆ ಕತ್ತರಿಸುವ ಕೆಲಸಮಾಡದಿರು ಮನುಜ…

ಒಮ್ಮೆ ಮನುಜನಾಗು ..ಹೆಣ್ಣನ್ನು ಕೆಟ್ಟ ದ್ರಷ್ಟಿಯಿಂದ ನೋಡುವುದನ್ನು ನಿಲ್ಲಿಸು ..ಈ ಮನುಷ್ಯ ಜನುಮದಲ್ಲಿ ಮಾನವನಾಗಿ ಬಾಳು .

“ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾಂಧಿ “ಈ ರೀತಿ ಹೇಳಿದ್ದಾರೆ “ಮಧ್ಯರಾತ್ರಿ ೧೨ಗಂಟೆಗೆ ಹೆಣ್ಣು ಹೊರಗಡೆ ಹೋಗಿ ಮನೆಗೆ ಸುರಕ್ಷಿತವಾಗಿ ಹಿಂತಿರುಗಿ ಬಂದರೆ ಆ ದಿನ ನಮಗೆ ಸ್ವಾತಂತ್ರಾ ಸಿಕ್ಕಿದೆ ಎಂದರ್ಥ”.ಒಮ್ಮೆ ಈ ಪ್ರಶ್ನೆಯನ್ನು ಮನದಲ್ಲಿ ಕೇಳಿ ನೋಡಿ ಉತ್ತರ ಪ್ರಶ್ನೆಯಾಗಿಯೇ ಉಳಿದುಬಿಡುತ್ತೆ
ಅಲ್ಲವೇ.. ಸಾಧ್ಯವಾದರೆ ಮಾತ್ರ ಮಾತ್ರ .. ಹೆಣ್ಣಿಗೆ ನಿಮ್ಮ ಬೆಂಬಲ ಸಹಾಯ ನೀಡಿ ಅದು ಬಿಟ್ಟು ಅವಳ ಮಾನಹರಣ ಮಾಡದಿರಿ ಅವಳ ಮೇಲಿನ ಅತ್ಯಾಚಾರ ನಿಲ್ಲುವ ನಿಟ್ಟಿಗೆ ಒಂದು ಪ್ರಯತ್ನ ಮಾಡಿ..ಅದು ಬಿಟ್ಟು ಅವಳ ದೌರ್ಜನ್ಯ ಮಾಡದಿರು, ಇಲ್ಲದಿದ್ದರೆ ಕೇಳು ಮನುಜ ಕಾಲ ಪಾಠ ಕಲಿಸಲು ಒಂದೊಂದು ಹೆಜ್ಜೆ ಮುಂದೆ ಇಟ್ಟಿದೆ ಪ್ರವಾಹ ,ಕರೋನ ಭೂಕಂಪ, ಪ್ರಕೃತಿ ವಿಕೋಪಗಳಿಂದ ಪಾಠ ಕಲಿಯದೇ ನೀ ಗೆದ್ದೇ ಎಂದು ಬೀಗಬೇಡ
ಮನುಜ…ಬೀಗಬೇಡ..ಕಾಲದಯೆದುರು ನೀ ತೃಣ ಸಮಾನವೆಂದು ನೆನಪಿಟ್ಟುಕೋ. ಇನ್ನಾದರೂ ಎಚ್ಚೆತ್ತಿಕೊ ಇಲ್ಲವಾದ್ರೆ ಕಾಲದ ಉಗ್ರರೂಪವ ಸಹಿಸುವ ಶಕ್ತಿ ನಿನ್ನಲ್ಲಿ ಇನ್ನು ಉಳಿದಿಲ್ಲ ಮನುಜ …ನೀ ಬದಲಾಗು ..ನೀ ಮನುಷ್ಯನಾಗಿ ಬದಲಾಗು..ಇನ್ನು ಬದಲಾಗದಿದ್ದರೆ ಕಾಲದ ಎದುರು ಸುಟ್ಟು ಭಸ್ಮವಾಗಿಬಿಡುತ್ತೀಯ.ಕಾಲ ತನ್ನ ಉಗ್ರರೂಪ ತೋರಿಸುವ ಸಮಯ ಬಹಳ ಹತ್ತಿರದಲ್ಲಿದೆ .

ರಮ್ಯಾ ಸಾಲಿಯಾನ್
ಬೋರುಗುಡ್ಡೆ, ಮೂಡಬಿದ್ರೆ

   (Copyrights owned by: billavaswarriors.com )


Related Posts

ಬಿಲ್ಲವಾಸ್ ಕತಾರ್ ನ ಸ್ವರ ಲಹರಿಗೆ ಸ್ವರ ಸೇರಿಸಿ ಕುಣಿದು ಕುಪ್ಪಳಿಸಿದ ಜನಸ್ತೋಮ


Share        ಬಿಲ್ಲವಾಸ್ ಕತಾರ್  ಆಯೋಜಿಸಿದ  ಸ್ವರ ಲಹರಿ, ಸಂಗೀತ ಸಂಜೆ ಕಾರ್ಯಕ್ರಮ  ದಿನಾಂಕ  ಮೇ 30, 2025 ರಂದು ಡಿ.ಪಿ.ಎಸ್. ಎಂ.ಐ.ಎಸ್ ಅಲ್ ವಕ್ರ   ಸಭಾಂಗಣದಲ್ಲಿ ನವ ಇತಿಹಾಸವನ್ನು ಸೃಷ್ಟಿಸಿತು.  ಅದ್ಭುತ ಸಂಗೀತ


Read More »

ಬಿಕ್ಕಳಿಕೆ ಬಂದಾಗ ಈ ಸರಳ ಟೆಕ್ನಿಕ್ ಟ್ರೈ ಮಾಡಿ ನೋಡಿ, ತಕ್ಷಣ ಕಡಿಮೆಯಾಗುತ್ತೆ


Share        ಬಿಕ್ಕಳಿಕೆ ಯಾರಿಗೆ ಬರಲ್ಲ ಹೇಳಿ? ಅದರಲ್ಲಿಯೂ ಈ ಬಿಕ್ಕಳಿಕೆ ಯಾರನ್ನೂ ಹೇಳಿ, ಕೇಳಿ ಬರುವಂತದ್ದಲ್ಲ. ಆದರೆ ಅವು ಬಂದಾಗ ಎಲ್ಲರ ಮುಂದೆ ಮುಜುಗರ ಆಗುವುದು ಮಾತ್ರ ತಪ್ಪುವುದಿಲ್ಲ. ಏಕೆಂದರೆ ಇದು ಯಾವಾಗ ಬೇಕಾದರೂ


Read More »

ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಗೆಜೆಟೆಡ್ ಅಧಿಕಾರಿಯಾಗಿ ಆಯ್ಕೆಯಾದ ಸುದೀಪ್ ರಾಜ್ ಮನೆಗೆ ಸೌದಿ ಬಿಲ್ಲಾವಾಸ್ ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಭೇಟಿ


Share        ಮಂಗಳೂರು: ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸಲಾದ ಪರೀಕ್ಷೆಯಲ್ಲಿ ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಆಯ್ಕೆಯಾದ ಮಂಗಳೂರಿನ ಚಿಲಿಂಬಿ ಆದರ್ಶನಗರದ ಸುದೀಪ್ ರಾಜ್ ಅವರ ಮನೆಗೆ ತೆರಳಿ ಸೌದಿ ಬಿಲ್ಲಾವಾಸ್


Read More »

UPSC ನಡೆಸಲಾದ ಪರೀಕ್ಷೆಯಲ್ಲಿ. ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಸುದೀಪ್ ರಾಜ್ ಆಯ್ಕೆ


Share        ಕೇಂದ್ರ ಲೋಕಸೇವಾ ಆಯೋಗ (UPSC), ಮೇ 23, 2025 ರಂದು ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ (CDS) ಪರೀಕ್ಷೆ (II), 2024 ರ ಅಂತಿಮ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಅದರಲ್ಲಿ ನಮ್ಮ ಬಿಲ್ಲವ


Read More »

ಮೊಂಟೆಪದವು ಕೋಡಿಯಲ್ಲಿ ಗುಡ್ಡ ಕುಸಿತ; ಪದ್ಮರಾಜ್ ಆರ್.ಪೂಜಾರಿ ಭೇಟಿ ಮಾಡಿ ಸಾಂತ್ವನ


Share        ಮಂಗಳೂರು: ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಒಬ್ಬ ಮಹಿಳೆ ಮತ್ತು ಆಕೆಯ ಮಗುವನ್ನು ಅವಶೇಷಗಳಿಂದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ


Read More »

ಶಾಸಕ ಸುನಿಲ್ ಕುಮಾರ್ ಸಹೋದರ ಸುಜಿತ್‌ ಕುಮಾರ್‌ ನಿಧನ


Share        ಕಾರ್ಕಳ: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಹೋದರ ಸುಜಿತ್ ಕುಮಾರ್ (53) ಶುಕ್ರವಾರ (ಮೇ 23) ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಅಂತಿಮ ವಿಧಿ ವಿಧಾನವು ಇಂದು ಶುಕ್ರವಾರ ನೆಕ್ಲಾಜೆ ಮನೆಯಲ್ಲಿ ಸಂಜೆ 6


Read More »